ಪುಟ:ಭಾರತ ದರ್ಶನ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ವಿರೋಧಿಸಿದವರೆಲ್ಲರೂ ದೈವನಿಯಾಮಕವನ್ನು ನಿರಾಕರಿಸಿ ವಿಶ್ವದ ನೈತಿಕ ತಳಹದಿಯನ್ನೇ ನಾಶ ಮಾಡುವ ಪರಮ ಪಾತಕಿಗಳಾದರು. ಬ್ರಿಟಿಷರ ಆಳ್ವಿಕೆಯ ಈ ತಾತ್ತಿಕಭಾವನೆಯು ಮೂಲತಃ ಇನ್ನೂ ವ್ಯತ್ಯಾಸಗೊಂಡಿಲ್ಲ. ಅದಕ್ಕೆ ಬೇರೊಂದು ಬಣ್ಣ ಕೊಟ್ಟಿದ್ದಾರೆ. ಮೊದಲಿನ ಗುತ್ತಿಗೆಯ ಸುಲಿಗೆಯು ಬೇರೊಂದು ಸೋಗಿನಲ್ಲಿ ವಸೂಲಾಗುತ್ತಿದೆ. ಜಮೀನುದಾರನಿಗೆ ರೈತನ ಮೇಲೆ ಕರುಣೆ ಇರಬೇಕೆಂದೂ ಆತನ ಹಿತರಕ್ಷಣೆ ಮಾಡಬೇಕೆಂದೂ ಒಪ್ಪಿದ್ದಾನೆ. ಪರಮಭಕ್ತರು ಮತ್ತು ನಂಬಿಕಸ್ಥರೂ ಆದ ಕೆಲವರಿಗೆ ಮಾತ್ರ ಈ ಜಮೀನುದಾರಿ ಆಡಳಿತ ಕಚೇರಿಯಲ್ಲಿ, ನಿರ್ವಹಣೆಯಲ್ಲಿ ಸ್ವಲ್ಪ ಅವಕಾಶ. ಆದರೆ ತಮ್ಮ ಜಮೀನುದಾರಿ ಪದ್ಧತಿಯನ್ನು ಮಾತ್ರ ಯಾರೂ ವಿರೋಧಿಸಬಾರದು. ಕೈ ಬದಲಾಯಿಸಿ ದರೂ ಜಮೀನುದಾರಿಯಾಗಿಯೇ ಉಳಿಯಬೇಕು. ಕೆಲವು ಬದಲಾವಣೆಗಳು ಅನಿವಾರ್ಯ ವಾದಾಗ ಈ ಆಡಳಿತ ವರ್ಗದ ನಂಬಿಕಸ್ಥ ನೌಕರರು ಯಾರಿಗೂ ತೊಂದರೆಯಾಗದೆ ಮುಂದೆಯೂ ಅವರು ಇರಬೇಕು, ಅವರ ಹೊಸ ಮತ್ತು ಹಳೆಯ ಸ್ನೇಹಿತರು, ಆಡಳಿತಗಾರರ ಅನುಯಾಯಿಗಳು, ಅವಲಂಬಿಗಳೆಲ್ಲರಿಗೂ ಜೀವನಕ್ಕೆ ಅನುಕೂಲಮಾಡಿಕೊಡಬೇಕು, ನಿವೃತ್ತರಿಗೆ ವಿರಾಮ ವೇತನ ಕಡಮೆಯಾಗಬಾರದು. ಹಳೆಯ ಆಡಳಿತಗಾರನೇ ಆಸ್ತಿಯ ಪೋಷಕನಾಗಿ, ಸಲಹೆಗಾರನಾಗಿ ಉಳಿಯಬೇಕು ಎಂಬ ಅಷ್ಟದಿಗ್ಧಂಧನಗಳಾದವು ; ಏವಂಚ ತಮ್ಮ ಸ್ವಾಮ್ಯಕ್ಕೆ ಕೊಂಚವೂ ಊನ ಬರಬಾರದು, ಯಾವ ಮುಖ್ಯ ವ್ಯತ್ಯಾಸವೂ ಆಗಬಾರದು. ಉನ್ನತ ಆಡಳಿತವರ್ಗದ ಭಾವನೆಯು ಬ್ರಿಟಿಷರೇ ಇದ್ದ ಭಾರತವು ತಮ್ಮ ಸ್ವತ್ತೆಂದು ಇತ್ತು. ಕೊನೆಕೊನೆಗೆ ಈ ಭಾವನೆಯು ಭದ್ರವೂ ಸುವ್ಯವಸ್ಥಿತವೂ ಆದ ಇಂಡಿರ್ಯ ಸಿವಿಲ್ ಸರ್ವಿಸ್ ಸಂಘ ದಲ್ಲಿ ಸಹ ಬೇರೂರಿತು. ಒಬ್ಬ ಇಂಗ್ಲಿಷ್ ಲೇಖಕ ಇಂಡಿರ್ಯ ಸಿವಿಲ್ ಸರ್ವಿಸ್ 'ನ್ನು ಈ ಪ್ರಪಂಚದಲ್ಲೆಲ್ಲ ಅತಿ ಕಟ್ಟು ನಿಟ್ಟಾದ ವರ್ತಕ ಸಂಘ” ಎಂದಿದ್ದಾನೆ. ಭಾರತವನ್ನು ಆಳಿದವರು, ತಾವೇ ಭಾರತ ಎಂದು ಭಾವಿಸಿದರು ; ತಮ್ಮ ಹಿತಕ್ಕೆ ವಿರೋಧವಾದುದೆಲ್ಲ ಭಾರತಕ್ಕೂ ವಿರೋಧ ವಿರಲೇ ಬೇಕೆಂದರು, ತಾವೇ ಬರೆದ ಇತಿಹಾಸ, ಈಚಿನ ಘಟನೆಗಳ ದಾಖಲೆಗಳು ಮತ್ತು ಸಿವಿಲ್ ಸರ್ವಿಸ್‌ ಅಧಿಕಾರಿಗಳು ಇವುಗಳ ಪ್ರಚಾರದಿಂದ ಬ್ರಿಟಿಷ್ ಜನಾಂಗದ ವಿವಿಧ ಪಂಗಡಗಳಲ್ಲಿ ಸಹ ವಿವಿಧ ರೀತಿಯಾಗಿ ಇದೇ ಭಾವನೆಯೇ ಹರಡಿತು. ಆಡಳಿತವರ್ಗದ ಭಾವನೆಯಂತೂ ಸಂಪೂರ್ಣ ಇದೇ ಆಗಿತ್ತು. ತನ್ನ ದೇಶದಲ್ಲಿ ಹೀನಸ್ಥಿತಿಯಲ್ಲಿದ್ದರೂ ಇಂಗ್ಲೆಂಡಿನ ಪ್ರತಿಯೊಬ್ಬ ಶ್ರಮಜೀವಿಯ ರೈತನೂ ತನಗೂ ಒಂದು ಸಾಮ್ರಾಜ್ಯವಿದೆ ಎಂದು ಹೆಮ್ಮೆಪಡುವಂತಾದನು. ಅದೇ ಕೂಲಿಗಾರ ಅಥವ ರೈತನು ಭಾರತಕ್ಕೆ ಬಂದೊಡನೆ ಇಲ್ಲಿನ ಅಧಿಕಾರಿವರ್ಗಕ್ಕೆ ಸೇರಿಬಿಡುತ್ತಿದ್ದನು. ಭಾರತೀಯ ಸಂಸ್ಕೃತಿ ಅಥವ ಇತಿಹಾಸದ ಅರಿವು ಅವನಿಗೆ ಲೇಶವೂ ಇರುತ್ತಿರಲಿಲ್ಲ. ಅವನ ನಿರ್ಧಾರ ಅಥವ ಪ್ರಯೋಗಕ್ಕೆ ಬೇರೆ ಯಾವ ಅಳತೆಗೋಲೂ ಇಲ್ಲದೆ ಇಲ್ಲಿನ ಬ್ರಿಟಿಷ್ ಅಧಿಕಾರಿವರ್ಗದ ಅಭಿ ಪ್ರಾಯವೇ ಆತನ ಅಳತೆಗೋಲಾಯಿತು, ಹೆಚ್ಚೆಂದರೆ ಸ್ವಲ್ಪ ಉದಾರಭಾವನೆ ತೋರುತ್ತಿದ್ದ. ಆದರೆ ಅದೂ ಈ ಚೌಕಟ್ಟಿನ ಪರಿಮಿತಿಯಲ್ಲಿ ಮಾತ್ರ. ಸುಮಾರು ಒಂದುನೂರು ವರ್ಷಗಳ ಕಾಲ ಎಲ್ಲ ಬ್ರಿಟಿಷರ ಮನೋಭಾವನೆಯೂ ಇದೇ ಆಗಿ ಭಾರತದ ಮೇಲಿನ ಅವರ ದೃಷ್ಟಿಕೋಣದ ನಿರ್ಧಾರ ಮಾತ್ರವಲ್ಲದೆ, ತಮ್ಮ ಒಳಾಡಳಿತ ದೃಷ್ಟಿಯನ್ನೂ ಮಾರ್ಪಡಿಸಿದ ಒಂದು ನಿಶ್ಚಲ ನಿರ್ದಿಷ್ಟ ಭಾವನೆಯಾಗಿ ಬ್ರಿಟಿಷ್ ಜನಾಂಗದ ವೈಶಿಷ್ಟವಾಯಿತು. ಯಾವ ಒಂದು ಖಚಿತ ಅಭಿಪ್ರಾಯ, ನಿರ್ದಿಷ್ಟ ನೀತಿ ಅಥವ ಹೆಚ್ಚಿನ ಪ್ರಪಂಚ ಪರಿಚಯ ಇಲ್ಲದ ಬ್ರಿಟಿಷ್ ಕೂಲಿಗಾರ ಪಕ್ಷದ ನಾಯ ಕರು ಸಹ-ಭಾರತದಲ್ಲಿನ ಬ್ರಿಟಿಷ್‌ ನೀತಿಯನ್ನು ಸಮರ್ಥನೆ ಮಾಡುವುದನ್ನು ನಾವೇ ಕಣ್ಣಾರ ನೋಡುತ್ತಿದ್ದೇವೆ. ಒಂದೊಂದು ಬಾರಿ ತಮ್ಮ ಒಳಾಡಳಿತ ನೀತಿಗೂ ತಮ್ಮ ಸಾಮ್ರಾಜ್ಯ ನೀತಿಗೂ, ಮತ್ತು ತಾವು ಬೋಧೆಮಾಡುವ ತತ್ವಕ್ಕೂ ತಮ್ಮ ಕಾರ್ಯನೀತಿಗೂ ಇರುವ ಅಂತರವನ್ನು ನೋಡಿ ಅವರಿಗೇ ಮನಸ್ಸು ಅಳುಕುತ್ತದೆ. ಆದರೆ ವ್ಯವಹಾರ ದೃಷ್ಟಿಯ ಬುದ್ದಿವಂತಿಕೆಯ ಲಕ್ಷಣವೆಂದು