ಪುಟ:ಭಾರತ ದರ್ಶನ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ತಮ್ಮ ಮನಸ್ಸಿನ ಎದೆಗುದಿಯನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಅದುಮಿದ್ದಾರೆ. ವ್ಯವಹಾರ ಕುಶಲರು ಇಂದಿನ ಪರಿಸ್ಥಿತಿ ಹಿಂದಿನ ಅನುಭವಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅರಿತು ನುರಿತ ಜಾಡಿನಲ್ಲಿ ಹೋಗಬೇಕೇ ಹೊರತು, ಕೇವಲ ತಾತ್ವಿಕ ದೃಷ್ಟಿಯಿಂದ ಕಣ್ಣು ಕಟ್ಟಿಕೊಂಡು ಬಾವಿ ಹಾರುವುದು ಯುಕ್ತವಲ್ಲವೆಂದು ಅವರ ಅಭಿಪ್ರಾಯ. ಭಾರತಕ್ಕೆ ಇಂಗ್ಲೆಂಡಿನಿಂದ ನೇರವಾಗಿ ಬಂದ ವೈಸರಾಯರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಚೌಕಟ್ಟಿನೊಳಗೆ ಹೊಂದಿಕೊಂಡು ಅದನ್ನು ನಂಬಿ ನಡೆಯಬೇಕು. ಅವರೆಲ್ಲರೂ ಇಂಗ್ಲೆಂಡಿನ ಹೊಟ್ಟೆ ತುಂಬಿದ ಶ್ರೀಮಂತ ವರ್ಗದವರಾದ್ದರಿಂದ ಐ.ಸಿ.ಎಸ್. ದೃಷ್ಟಿಗೆ ಹೊಂದಿಕೊಳ್ಳುವದು ಅವರಿಗೆ ಕಷ್ಟವಾಗುತ್ತಿರಲಿಲ್ಲ ; ಮತ್ತು ಇಲ್ಲಿ ಅವರಿಗೆ ಇನ್ನೆಲ್ಲ ದೊರೆಯದ ಸರ್ವಾಧಿಕಾರದ ಅಲಭ್ಯ ಲಾಭ ದೊರೆಯುತ್ತಿದ್ದ ಕಾರಣ ಅವರ ನಡೆನುಡಿಗಳೆಲ್ಲ ವಿಚಿತ್ರವಾಗಿ ಮಾರ್ಪಾಟಾಗು ತಿದ್ದಿ ತು ಅಧಿಕಾರದ ಹಿಂದೆಯೇ ಅನೀತಿ ತಲೆಯೆತ್ತುತ್ತದೆ, ನಿರಂಕುಶಾಧಿಕಾರವಾದರಂತೂ ಅದರ ಹಿಂದಿರುವ ಅನೀತಿಗೆ ಮೇರೆಯೇ ಇಲ್ಲವಾಗುತ್ತದೆ. ಭಾರತದ ಕೋಟ್ಯಂತರ ಜನರ ಮೇಲೆ ಭಾರತದಲ್ಲಿ ಬ್ರಿಟಿಷ್ ವೈಸರಾಯ್ ನಡೆಸುತ್ತಿರುವ ನಿರಂಕುಶ ಅಧಿಕಾರವು ಪ್ರಪಂಚದಲ್ಲಿ ಬೇರೆ ಎಲ್ಲಿಯೂ ಯಾವ ಅಧಿಕಾರಿಗೂ ಇರುವುದಿಲ್ಲ. ವೈಸರಾಯ್ ಮಾತನಾಡುವ ರೀತಿಯಲ್ಲಿ ಇಂಗ್ಲೆಂಡಿನ ಮುಖ್ಯಮಂತ್ರಿಯಾಗಲಿ, ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷನಾಗಲಿ ಎಂದೂ ಮಾತನಾಡಲಾರ. ಇರುವ ಒಂದೇ ಸಾಮ್ಯವೆಂದರೆ ಹಿಟ್ಲರ್ ಮಾತ್ರ. ಈ ದರ್ಪ ತೋರಿಸುವವನು ವೈಸ್ರಾಯ್ ಮಾತ್ರವಲ್ಲ, ಆತನ ಮಂತ್ರಾಲೋಚನಾ ಸಭೆಯ ಸದಸ್ಯರು, ಗವರ ರುಗಳು, ಇಲಾಖೆಗಳ ಕಾರ್ಯದರ್ಶಿಗಳು ನ್ಯಾಯಾಧೀಶರು ಮುಂತಾದ ಪುಡಿಗಣಗಳು ಸಹ ತೋರಿಸು ತ್ತಾರೆ. ಇತರ ಕಳಪೆ ಜನರ ಭಾವನೆಗಳು ಏನೇ ಇರಲಿ, ಅಧಿಕಾರ ಮತ್ತು ಕೀರ್ತಿ ತಮ್ಮದಾದ್ದ ರಿಂದ ತಾವು ಹೇಳುವುದೆಲ್ಲ ವೇದವಾಕ್ಯ, ಅದೇ ಸರಿ, ಎಲ್ಲರೂ ಒಪ್ಪಲೇ ಬೇಕು ಎಂಬ ಮದಾಂಧತೆ ಯಿಂದ ಶ್ರೀಮದ್ದಾ೦ಭೀರದಿಂದ, ಔದ್ಧತ್ಯದಿಂದ ಮಾತನಾಡುತ್ತಾರೆ. ವೈಸರಾಯನ ಮಂತ್ರಾಲೋಚನಾ ಸಭೆಯ ಕೆಲವು ಸದಸ್ಯರು ನೇರವಾಗಿ ಇಂಗ್ಲೆಂಡಿನಿಂದ ಬಂದವರು; ಇನ್ನು ಕೆಲವರು, ಇಂಡಿಯನ್ ಸಿವಿಲ್ ಸರ್ವಿಸ್‌ಗೆ ಸೇರಿದವರು. ಇವರ ರೀತಿನೀತಿಗೂ ಮಾತಿಗೂ, ಸಿವಿಲ್ ಸರ್ವಿಸ್ ಅಧಿಕಾರಿಗಳ ನಡೆನುಡಿಗೂ ಎಷ್ಟೋ ವ್ಯತ್ಯಾಸವಿದೆ. ಅದೇ ಚೌಕಟ್ಟಿ ನೋಳಗೇ ಕೆಲಸಮಾಡಿದರೂ ಆ ಅಧಿಕಾರದರ್ಪ, ಸ್ವಪ್ರತಿಷ್ಟೆ, ಅಹಂಕಾರ ಅಷ್ಟು ಸುಲಭವಾಗಿ ಬರುವುದಿಲ್ಲ. ಇದೇ ರೀತಿ ಅವರ ಸಂಖ್ಯೆಯೂ ಮತ್ತು ಬುದ್ಧಿ ಶಕ್ತಿಯ ಎಷ್ಟೇ ಕಡಮೆ ಇರಲಿ ಈಚೆಗೆ ಮಂತ್ರಿ ಮಂಡಲವನ್ನು ಸೇರಿರುವ ಭಾರತೀಯ ಸದಸ್ಯರಲ್ಲಿ ಸಹ ಈ ಭಾವನೆ ಹುಟ್ಟುವುದು ಸುಲಭವಲ್ಲ. ಅಧಿಕಾರದ ಏಣಿಯಲ್ಲಿ ಭಾರತೀಯರ ಸ್ಥಾನ ಏನೆ ಇರಲಿ ಸಿವಿಲ್ ಸರ್ವಿಸಿನ ಭಾರತೀಯರ ಈ ಒಳಗುಂಪಿನಲ್ಲಿ ಸ್ಥಾನವಿಲ್ಲ, ಕೆಲವರೇನೋ ತಮ್ಮ ಬ್ರಿಟಿಷ್ ಸಹೋದ್ಯೋಗಿ ಗಳನ್ನು ಮಂಗಗಳಂತೆ ಅನುಕರಿಸಲು ಪ್ರಯತ್ನ ಪಡುತ್ತ ನೋಡುವವರಿಗೆ ಅಸಹ್ಯವಾಗಿ ಕಾಣು ತ್ತಾರೆ, ಹಾಸ್ಯಾಸ್ಪದರಾಗಿದ್ದಾರೆ |

  • ಇಂಡಿರ್ಯ ಸಿವಿಲ್ ಸರ್ವಿಸಿಗೆ ಈಚೆಗೆ ಬಂದ ಬ್ರಿಟಿಷ್ ಅಧಿಕಾರಿಗಳು ತಮ್ಮ ಭಾವನೆಯಲ್ಲಿ, ನಡೆನುಡಿಯಲ್ಲಿ ಹಿಂದಿನವರಿಗಿಂತ ಸ್ವಲ್ಪ ಭಿನ್ನರಿದ್ದಾರೆ. ಆ ಹಳೆಯ ಚೌಕಟ್ಟಿನಲ್ಲಿ ಹೊಂದಿಕೊಳ್ಳು ವದು ಅವರಿಗೆ ಕಷ್ಟ, ಆದರೂ ಅಧಿಕಾರ ಮತ್ತು ಆಡಳಿತ ನೀತಿ ಎಲ್ಲವೂ ಹಿರಿಯ ಅಧಿಕಾರವರ್ಗದ ಕೈಲಿರುವುದರಿಂದ ಏನೂ ವ್ಯತ್ಯಾಸ ತೋರುವುದಿಲ್ಲ. ಮಠಾಧಿಕಾರವನ್ನು ಒಪ್ಪಬೇಕು, ಇಲ್ಲವಾದರೆ ಎಷ್ಟೋ ಬಾರಿ ನಡೆದಿರುವಂತೆ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು.* * ನಾನು ಹುಡುಗನಾಗಿದ್ದಾಗ, ಬ್ರಿಟಿಷರೇ ನಡೆಸುತ್ತಿದ್ದ ಭಾರತದ ಪತ್ರಿಕೆಗಳಲ್ಲೆಲ್ಲ ಅಧಿಕಾರಿ ವರ್ಗದ ಸುದ್ದಿ, ಅವರ ಬಾಯಿಂದ ಹೊರಬಿದ್ದ ಮುಕ್ತಾಫಲಗಳು, ಆಡಳಿತವರ್ಗದ ವರ್ತಮಾನ, ವರ್ಗಾವರ್ಗಿ, ಬಡ್ತಿ, ಆಂಗ್ಲ ಸಮಾಜದ ಘಟನೆಗಳು, ಪೋಲೋ, ಕುದುರೆ ಜೂಜು, ನೃತ್ಯ,