ಪುಟ:ಭಾರತ ದರ್ಶನ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M 'ಭಾರತ ದರ್ಶನ ನಾಟಕಾಭಿನಯ ಇವುಗಳೇ ತುಂಬಿರುತ್ತಿದ್ದವು. ಭಾರತದ ಜನರು, ಅವರ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಅಥವ ಆರ್ಥಿಕ ಜೀವನದ ವಿಷಯ ಒಂದು ಮಾತ್ರ ಇರುತ್ತಿರಲಿಲ್ಲ. ಆ ವೃತ್ತಪತ್ರಿಕ ಗಳನ್ನು ಓದಿದರೆ ಭಾರತದಲ್ಲಿ ಭಾರತೀಯರೂ ಇದ್ದಾರೆ ಎಂಬ ಭಾವನೆಯು ಹುಟ್ಟುವುದೂ ಸಹ ಕಷ್ಟವಾಗಿತ್ತು. ಮುಂಬೈಯಲ್ಲಿ ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಯೂರೋಪಿಯನರು ಈ ರೀತಿ ನಾಲ್ಕು ಪಂಗಡಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಯುರೋಪಿಯನ್ ಹನ್ನೊಂದು ಜನರೇ “ ಮುಂಬೈ ಪ್ರಾಂತ್ಯ”, ಇತರರು ಬರೀ ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಯಾರಾದರೂ ನೋಡಿದರೆ ಇತರರೇ ಪರಕೀಯರು, ಉದ್ದೇಶಪಟ್ಟು ಆ ರೀತಿ ಕರೆಸಿಕೊಳ್ಳುತ್ತಿದಾ ರೇನೋ ಎಂದು ಭಾಸವಾಗುತ್ತಿತ್ತು. ಈಗಲೂ ಈ ಚೌಪಂದ್ಯಗಳು ನಡೆಯುತ್ತಿವೆ. * ಮುಂಬೈ ಪ್ರಾಂತ್ಯ”ವು ಈಗ “ಯುರೋಪಿಯನ್* ಆಗಿದೆ. ಭಾರತದಲ್ಲಿನ ಇಂಗ್ಲಿಷ್ “ಕ್ಲಬ್ " ಗಳಿಗೆಲ್ಲ ಪ್ರಾದೇಶಿಕ ಹೆಸರುಗಳು. ಬಂಗಾಳ ಕ್ಲಬ್, ಇಲಾಹಾಬಾದ್ ಕ್ಲಬ್ ಇತ್ಯಾದಿ, ಅವುಗಳ ಸದಸ್ಯರೆಲ್ಲ ಬ್ರಿಟಿಷರು ಅಥವ ಯೂರೋಪಿಯನರು, ಪ್ರಾದೇಶಿಕ ಹೆಸರುಗಳನ್ನು ಇಡುವುದಕ್ಕಾಗಲಿ, ಅಥವ ಕೆಲವೇ ಜನರು ತಮ್ಮದೇ ಒಂದು “ಕ್ಲಬ್” ಮಾಡಿಕೊಂಡು ಪರಕೀಯರು ಯಾರೂ ಸೇರಲು ಅವಕಾಶವಿಲ್ಲವೆಂದು ಕಟ್ಟು ವಿಧಿಸಿಕೊಳ್ಳುವುದ ಕಾಗಲಿ ಯಾವ ಆಕ್ಷೇಪಣೆಯೂ ಇಲ್ಲ. ಆದರೆ ಈ ರೀತಿ ಹೆಸರನ್ನು ಇಟ್ಟುಕೊಳ್ಳುವ ಪದ್ಧತಿಯು ತಾವೇ ನಿಜವಾದ ಭಾರತ, ಬಂಗಾಳ, ಇಲಾಹಾಬಾದ್ ಎಂಬ ಭಾವನೆಯಿಂದ ಹುಟ್ಟಿದ್ದು, ತಮ್ಮ ಸ್ಥಾನ ತಾವು ಅರಿತು ನಡೆದರೆ ಉಳಿದವುಗಳಿದ್ದರೂ ಇರಬಹುದು ಇಲ್ಲವಾದರೆ ಅವುಗಳಿಗೆ ಬಂತು ಹೊತ್ತು, ಯುರೋಪಿಯರನೇಕರ ಬಹಿಷ್ಕಾರಕ್ಕೆ ಒಂದೇ ಮಟ್ಟದ ಸುಸಂಸ್ಕೃತ ಜನರ ವಿರಾಮ ಕಾಲದ ಆಟ ಮತ್ತು ವಿನೋದಗಳಲ್ಲಿ ಇತರರ ತೊಂದರೆ ಇರಬಾರದೆನ್ನುವುದಕ್ಕಿಂತ ಹೆಚ್ಚಾಗಿ ಜನಾಂಗ ದ್ವೇಷವೇ ಹಿನ್ನೆಲೆಯಾಗಿತ್ತು ಆಂಗ್ಲರು ಅಥವ ಯುರೋಪಿಯನರೇ ತಮ್ಮ ತಮ್ಮ “ಕ್ಲಬ್” ಗಳನ್ನು ಮಾಡಿಕೊಳ್ಳಲು ನನ್ನ ಅಡ್ಡಿಯಿಲ್ಲ ; ಭಾರತೀಯರೂ ಹೆಚ್ಚು ಜನರು ಅಲ್ಲಿಗೆ ಹೋಗುವುದಿಲ್ಲ. ಆದರೆ ತಾವು ಅಧಿಕಾರ ವರ್ಗದವರು, ತಮಗೆ ಸಮಾನರಿಲ್ಲ, ತಮ್ಮ ಸಮಾಸ ಬರುವವರಿಲ್ಲ ಎಂಬ ದುರಭಿಮಾನದಿಂದ ಸಮಾಜದಿಂದ ದೂರವಿದ್ದರೆ ಆ ವಿಷಯವೇ ಬೇರೆಯಾಗು ಇದೆ. ಮಹಾರಾಜನಿರಲಿ ಉನ್ನತ ಕೈಗಾರಿಕೋದ್ಯಮಿ ಇರಲಿ ಭಾರತೀಯವಾದರೆ ಮೆಟ್ಟಲು ಸಹ ಹಸದ ಕ್ಲಬ್ ಒಂದು ಮುಂಬೈಯಲ್ಲಿ ಇದೆ. ಭಾರತದಲ್ಲಿ ಈ ಜನಾಂಗದ್ವೇಷವು ಕೇವಲ ಇಂಗ್ಲಿಷರಿಗೆ ಮತ್ತು ಭಾರತೀಯರಿಗೆ ಮಾತ್ರವಲ್ಲ, ಅದು ಯುರೋಪಿರ್ಯ, ಮತ್ತು ಏಷ್ಯನರಿಗೆ ಸಂಬಂಧಿಸಿದ್ದು, ಭಾರತದಲ್ಲಿ ಯುರೋಪಿಯನ್ ಜರ್ಮಸ್ ಆಗಲಿ, ಪೋಲ್ ಆಗಲಿ, ರುಮೇನಿಯದವನಾಗಲಿ, ಯಾರೇ ಆಗಲಿ ಆಳರಸ ನಾಗುತ್ತಾನೆ. ರೈಲುಗಾಡಿಗಳಲ್ಲಿ, ನಿಲ್ದಾಣಗಳಲ್ಲಿ, ಉದ್ಯಾನವನಗಳಲ್ಲಿ “ ಯುರೋಪಿಯನ್ನರಿಗೆ ಮಾತ್ರ” ಎಂಬ ಮೀಸಲು ಸ್ಥಾನಗಳು, ದಕ್ಷಿಣ ಆಫ್ರಿಕದಲ್ಲೋ ಅಥವ ಬೇರೆ ಎಲ್ಲಿಯೋ ಆದರೇನೆ ಸಹಿಸುವುದು ಕಷ್ಟ; ಆದರೆ ನಮ್ಮ ದೇಶದಲ್ಲೇ ಇದನ್ನು ಅನುಭವಿಸಬೇಕಾದ್ದು ನಮ್ಮ ಗುಲಾಮ ಗಿರಿಯನ್ನು ಕೆಣಕಿ ತೋರಿಸುವ ಚಿಹ್ನೆ. ಈ ಜನಾಂಗ ಶ್ರೇಷ್ಠತೆ ಮತ್ತು ಸಾಮ್ರಾಜ್ಯ ಮದವು ಹೊರಗಡೆ ಸ್ವಲ್ಪ ಕಡಿಮೆಯಾಗುತ್ತಿದೆ ನಿಜ, ಆದರೆ ಪದೇ ಪದೇ ಏಳುತ್ತಿರುವ ನಿದರ್ಶನಗಳಿಂದ ಈ ಬದಲಾವಣೆಯು ಮೇಲೆಮೇಲೆ ಮಾತ್ರ ಮತ್ತು ಬಹು ನಿಧಾನ ಎನ್ನುವುದು ಕಾಣುತ್ತದೆ. ರಾಜಕೀಯದ ಒತ್ತಡ ಮತ್ತು ಕೊಚ್ಚಿ ನುಗ್ಗುವ ರಾಷ್ಟ್ರೀಯ ಭಾವನೆಯಿಂದ ಮೊದಲಿನ ಜನಾಂಗ ವೈರವೂ, ದಬ್ಬಾಳಿಕೆಯೂ ಬೇಗ ಕಡಮೆಯಾಗು ಇದೆ ನಿಜ, ಆದರೆ ಉಗ್ರರೂಪವನ್ನು ತಾಳಿದ ಆ ರಾಜಕೀಯ ಚಳವಳಿಯನ್ನು ಹತ್ತಿಕ್ಕಲು