ಪುಟ:ಭಾರತ ದರ್ಶನ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ೨೬. ಪ್ರಯತ್ನಿಸಿದಾಗ ಹಳೆಯ ಸಾಮ್ರಾಜ್ಯ ವೈರ, ಜನಾಂಗ ವೈರ ಮತ್ತೊಮ್ಮೆ ಉಗ್ರರೂಪವನ್ನು ತಾಳುತ್ತವೆ. ಆಂಗ್ಲರು ಸೂಕ್ಷ್ಮಸ್ವಭಾವದವರಾದಾಗೂ ಪರದೇಶಗಳಿಗೆ ಹೋದಾಗ ಎಚ್ಚರ ತಪ್ಪುತ್ತಾರೆ. ಭಾರತದಲ್ಲಿ ಆಳರಸರೇ ಬೇರೆ ಪ್ರಜೆಗಳೇ ಬೇರೆ ಎಂಬ ಅಂತರವಿದ್ದು ಪರಸ್ಪರ ಸಂಪರ್ಕವು ಕಷ್ಟ ವಿರುವಾಗ ಈ ಪ್ರಜ್ಞಾ ವಿಹೀನತೆಯು ಇನ್ನೂ ಎದ್ದು ತೋರುತ್ತದೆ. ತಮಗೆ ಬೇಕಾದುದನ್ನು ಮಾತ್ರ ಕಂಡು ಉಳಿದುದಕ್ಕೆಲ್ಲ ಕುರುಡರಾಗಿರುವುದು ಉದ್ದೇಶಪೂರ್ವಕವೇನೋ ಎನಿಸುತ್ತದೆ. ಆದರೆ ಅಲಕ್ಷ ಮಾಡಿ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ; ಸತ್ಯದ ಎದುರು ನಿಲ್ಲಬೇಕಾದ್ದು ಅನಿ ವಾರವಾದಾಗ ಮನಸ್ಸಿನಲ್ಲೊಂದು ತಳಮಳ ; ಏನೋ ಒಂದು ಮೋಸ ನಡೆದು ಆಗಬಾರದ್ದು ಆದುದಕ್ಕೆ ವ್ಯಸನ. ಜಾತಿಗಳ ಜಟಿಲತೆಯ ಈ ದೇಶದಲ್ಲಿ ಬ್ರಿಟಿಷರು, ಅದರಲ್ಲೂ ಇಂಡಿಯನ್ ಸಿವಿಲ್ ಸರ್ವಿಸಿನ ವರು, ಈ ರೀತಿ ತಮ್ಮದೇ ಒಂದು ಕಠಿಣವೂ ಪ್ರತ್ಯೇಕವೂ ಆದ ಜಾತಿಯನ್ನು ನಿರ್ಮಿಸಿಕೊಂಡಿದ್ದಾರೆ. ಅದೇ ಆಯಕಟ್ಟಿನೊಳಗೆ ಅದೇ ವೇಷಭೂಷಣವಿದ್ದರೂ ಆ ತಂಡದ ಭಾರತೀಯರಿಗೆ ಆ ಜಾತಿಯಲ್ಲಿ ಸ್ಥಾನವಿಲ್ಲ. ಸ್ವಪ್ರತಿಷ್ಠೆಯೇ ಅವರಿಗೊಂದು ಧರ್ಮವಾಗಿದೆ. ಆ ಧರ್ಮದ ಹಿಂದೆ ಒಂದು ಬಗೆಯ ಇತಿಹಾಸವೂ ಬೆಳೆದು ಬಂದು ಅದಕ್ಕೆ ಒಂದು ಅಸ್ತಿತ್ವವನ್ನು ಕೊಟ್ಟಿದೆ. ಈ ಧಾರ್ಮಿಕ ಮನೋ ವೃತ್ತಿಯ ಕೇಂದ್ರೀಕೃತ ಅಧಿಕಾರವೂ ಎರಡೂ ಅದರ ಸುತ್ತ ಭದ್ರವಾದ ಕೋಟೆಯನ್ನು ಕಟ್ಟಿವೆ. ಅದನ್ನು ಎದುರಿಸುವುದೆಂದರೆ ಕೊಳ್ಳಿಯಿಂದ ತಲೆ ತುರಿಸಿಕೊಂಡಂತೆ. ೨. ಬಂಗಾಳದ ಲೂಟಿಯಿಂದ ಇಂಗ್ಲೆಂಡಿನ ಕೈಗಾರಿಕೋದ್ಯಮ ಪ್ರಗತಿ, ೧೭ ನೆಯ ಶತಮಾನದ ಆರಂಭದಲ್ಲಿ ಸೂರತ್ ನಗರದಲ್ಲಿ ಒಂದು ಕಾರ್ಖಾನೆ ನಡೆಸಬಹು ದೆಂದು ಮೊಗಲ ಚಕ್ರವರ್ತಿಯಿಂದ ಈಸ್ಟ್ ಇಂಡಿಯ ಕಂಪೆನಿಗೆ ಅನುಮತಿ ದೊರೆಯಿತು. ಕೆಲವು ವರ್ಷಗಳ ನಂತರ ದಕ್ಷಿಣದಲ್ಲಿ ಸ್ವಲ್ಪ ಭೂಮಿಯನ್ನು ಕೊಂಡು ಕಂಪೆನಿಯವರು ಮದರಾಸಿನಲ್ಲಿ ಬೇರು ಬಿಟ್ಟರು. ೧೬೬೨ರಲ್ಲಿ ಮುಂಬೈ ದ್ವೀಪವು ಇಂಗ್ಲೆಂಡಿನ ಎರಡನೆಯ ಚಾರಸ್ಗೆ ಬಳುವಳಿಯಾಗಿ ಬಂದು ಅದನ್ನು ಆತನು ಕಂಪೆನಿಗೆ ಕೊಟ್ಟನು. ೧೬೯೦ರಲ್ಲಿ ಕಲ್ಕತ್ತ ನಗರವನ್ನು ಸ್ಥಾಪಿಸಿದರು. ಈ ರೀತಿ ೧೭ನೆಯ ಶತಮಾನ ಮುಗಿಯುವುದರ ಒಳಗೆ ಬ್ರಿಟಿಷರು ಅಲ್ಲಲ್ಲಿ ಕಾಲೂರಿ ಭಾರತದ ಸಮುದ್ರ ತೀರದಲ್ಲಿ ಕೆಲವು ಕೋಟಿಗಳನ್ನು ಕಟ್ಟಿಕೊಂಡರು. ಕ್ರಮೇಣ ನಿಧಾನವಾಗಿ ದೇಶದ ಒಳಗೆ ಹರಡಿದರು. ೧೭೫೭ ರಲ್ಲಿ ನಡೆದ ಪ್ಲಾಸಿ ಕದನದಿಂದ ಒಂದು ದೊಡ್ಡ ಭೂಪ್ರದೇಶವು ಅವರ ಅಧೀನ ವಾಯಿತು. ಇನ್ನು ಕೆಲವು ವರ್ಷಗಳಲ್ಲಿ ವಂಗದೇಶ, ಬಿಹಾರ, ಒರಿಸ್ಸ ಮತ್ತು ಪೂರ್ವದ ತೀರ ಪ್ರದೇಶಗಳು ಅವರ ಅಧೀನವಾದವು. ಮುಂದಿನ ದೊಡ್ಡ ಹೆಜ್ಜೆ ಎಂದರೆ ನಲವತ್ತು ವರ್ಷಗಳ ನಂತರ ೧೯ನೆಯ ಶತಮಾನದ ಆದಿಭಾಗದಲ್ಲಿ ದೆಹಲಿಯ ಹೆಬ್ಬಾಗಿಲಿಗೆ ಬಂದಾಗ; ೧೮೧೮ ರಲ್ಲಿ ಮರಾಠರು ಕೊನೆಯ ಬಾರಿ ಸೋತಾಗ ಮೂರನೆಯ ಹೆಜ್ಜೆ; ಸಿಕ್ ಯುದ್ಧಗಳಾದ ನಂತರ ೧೮೪೯ರಲ್ಲಿ ನಾಲ್ಕನೆಯ ಹೆಜ್ಜೆ; ಈ ರೀತಿ ಎಲ್ಲವೂ ಅವರ ಅಧೀನವಾಯಿತು. ಈ ರೀತಿ ಬ್ರಿಟಿಷರು ಮದರಾಸ್ ನಗರದಲ್ಲಿರುತ್ತ ಮೂರು ನೂರು ವರ್ಷಗಳಾದವು; ವಂಗದೇಶ ಬಿಹಾರಗಳನ್ನು ಆಳುತ್ತ ೧೮೭ ವರ್ಷಗಳಾದವು : ದಕ್ಷಿಣ ಭಾರತದ ಮೇಲೆ ಸ್ವಾಮ್ಯ ಪಡೆದು ೧೪೫ ವರ್ಷಗಳಾದವು ; ಸಂಯುಕ್ತ ಪ್ರಾಂತ್ಯ, ಮಧ್ಯ ಪ್ರಾಂತ್ಯ, ಮತ್ತು ಪಶ್ಚಿಮ ಭಾರತವನ್ನು ಆಕ್ರಮಿಸಿ ೧೨೫ ವರ್ಷಗಳಾದವು; ಪಂಜಾಬಿಗೆ ಹೋಗಿ ೯೫ ವರ್ಷಗಳಾದವು (ಇದನ್ನು ಬರೆಯು ತಿರುವುದು ೧೯೪೪ರಲ್ಲಿ). ಸಣ್ಣ ಪ್ರದೇಶವಾದ ಮದರಾಸನ್ನು ಬಿಟ್ಟರೆ ಬಂಗಾಳಾದ ಆಕ್ರಮಣಕ್ಕೂ ಪಂಜಾಬಿನ ಆಕ್ರಮಣಕ್ಕೂ ಮಧ್ಯೆ ಸುಮಾರು ಒಂದು ನೂರು ವರ್ಷಗಳು ಮಾತ್ರ. ಈ ಮಧ್ಯೆ ಬ್ರಿಟಿಷರ ನೀತಿಯಲ್ಲೂ, ಆಡಳಿತರೀತಿಯಲ್ಲಿ ಅನೇಕ ಬದಲಾವಣೆಗಳಾದವು. ಇಂಗ್ಲೆಂಡಿನ