ಪುಟ:ಭಾರತ ದರ್ಶನ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಘನ ಪರಿಸ್ಥಿತಿ ಮತ್ತು ಭಾರತದಲ್ಲಿ ಬ್ರಿಟಿಷರ ಶಕ್ತಿ ಸಂಘಟನೆಯೇ ಇದಕ್ಕೆ ಕಾರಣ. ಈ ವ್ಯತ್ಯಾಸಕ್ಕನುಗುಣವಾಗಿ ಮತ್ತು ಬ್ರಿಟಿಷರು ಅಧೀನಪಡಿಸಿಕೊಂಡ ರಾಜ ಮನೆತನಗಳ ನಡತೆಗನು ಗುಣವಾಗಿ ಬ್ರಿಟಿಷರು ಗೆದ್ದ ಪ್ರತಿಯೊಂದು ಭಾಗದ ಆಡಳಿತ ನೀತಿಯಲ್ಲಿ ವ್ಯತ್ಯಾಸವಿತ್ತು. ಬಹು ಸುಲಭವಾಗಿ ಗೆದ್ದ ಬಂಗಾಳದಲ್ಲಿ ಮುಸ್ಲಿ೦ ಜಮೀನುದಾರರೇ ರಾಜಮನೆತನದವರಾದರು. ಅವರ ಶಕ್ತಿಯನ್ನು ಅಡಗಿಸುವುದೇ ಅಲ್ಲಿನ ನೀತಿಯಾಯಿತು. ಪಂಜಾಬಿನಲ್ಲಿ ಸಿಕ್ಕರಿಂದ ರಾಜ್ಯವನ್ನು ಕಸಿದುಕೊಂಡ ಕಾರಣ ಬ್ರಿಟಿಷರಿಗೂ ಮುಸ್ಲಿಮರಿಗೂ ಯಾವ ವೈಷಮ್ಯಕ್ಕೂ ಕಾರಣವಿರಲಿಲ್ಲ. ಭಾರತದಲ್ಲಿ ಬಹು ಭಾಗದಲ್ಲಿ ಮರಾಠರೇ ಬ್ರಿಟಿಷರ ಶತ್ರುಗಳಾಗಿದ್ದರು. ಬ್ರಿಟಿಷರ ಆಡಳಿತದಲ್ಲಿ ಯಾವ ಯಾವ ಭಾಗಗಳು ಬಹುಕಾಲ ಇದ್ದವೋ ಅವೇ ಇಂದು ತೀರ ಬಡತನದಲ್ಲಿರುವ ಪ್ರಾಂತ್ಯಗಳು. ಬ್ರಿಟಿಷರ ಆಳ್ವಿಕೆಯ ಕಾಲಾವಧಿ ಹೆಚ್ಚಿದಂತೆ ಬಡತನವೂ ಹೇಗೆ ಹೆಚ್ಚಿದೆ ಎಂಬ ಪ್ರಮಾಣವನ್ನು ತೋರಿಸುವ ಒಂದು ನಕ್ಷೆಯನ್ನೇ ಸಿದ್ದ ಮಾಡಬಹುದು, ಕೆಲವು ದೊಡ್ಡ ನಗರಗಳು ಅಥವ ಕೈಗಾರಿಕಾ ಕೇಂದ್ರಗಳು ಆ ಚಿತ್ರದಲ್ಲಿ ಯಾವ ವ್ಯತ್ಯಾಸವನ್ನೂ ಮಾಡ ಲಾರವು. ಒಟ್ಟಿನಲ್ಲಿ ಮುಖ್ಯ ಗಮನಿಸಬೇಕಾದ್ದು ಜನಸಾಮಾನ್ಯದ ಜೀವನ ಮಟ್ಟ. ಭಾರತದಲ್ಲಿ ಬಂಗಾಳ, ಬಿಹಾರ, ಒರಿಸ್ಸ ಮತ್ತು ಮದರಾಸಿನ ಕೆಲವು ಭಾಗಗಳು ಕಡು ಬಡತನದಲ್ಲಿವೆ ಎಂಬುದು ನಿರ್ವಿವಾದ. ಜನತೆಯ ಜೀವನ ಮಟ್ಟ ಉತ್ತಮ ವಿರುವುದು ಪಂಜಾಬಿನಲ್ಲಿ. ಬ್ರಿಟಿಷರು ಬರುವ ಮೊದಲು ಬಂಗಾಳವು ಸಂಪತ್ಸಮೃದ್ಧಿಯಿಂದ ಅತ್ಯುನ್ನತ ಸ್ಥಿತಿಯಲ್ಲಿತ್ತು. ಈ ವ್ಯತ್ಯಾಸಕ್ಕೆ ಅನೇಕ ಕಾರಣಗಳಿರಬಹುದು, ಆದರೆ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಕ್ಕೂ ಜನರಿಗೆ ಪ್ರಜಾಡಳಿತ ಪದ್ದತಿಯನ್ನು ಕಲಿಸುವುದಕ್ಕೂ ವಿಶೇಷ ಶ್ರಮ ಪಡಲಾಯಿತೆಂದು ಬಡಾಯಿಕೊಚ್ಚುವ ಬ್ರಿಟಿಷರ ಬಂಗಾಳದಲ್ಲಿ ೧೮೭ ವರ್ಷಗಳ ಹಿಂದೆ ಐಶ್ವರದಿಂದ ತುಂಬಿ ತುಳುಕುತ್ತಿದ್ದ ಸಂಪತ್ಸಮೃದ್ಧ ಬಂಗಾಳ ಇಂದು ಬಡತನದಲ್ಲಿ ಮುಳುಗಿ ಹಸಿವಿನಿಂದ ಸಾಯುವ ಜೀವಶವಗಳ ದೇಶವಾಗಿದೆ ಎನ್ನುವುದನ್ನು ಮರೆಯುವುದು ಕಷ್ಟ. ಬ್ರಿಟಿಷರ ಆಳ್ವಿಕೆಯ ಪೂರ್ಣ ಅನುಭವ ಮೊದಲು ಅನುಭವಿಸಿದ್ದು ಬಂಗಾಳ, ಲೂಟಿಯಿಂದಲೇ ಆರಂಭವಾಯಿತು, ಜೀವಂತ ಬೇಸಾಯಗಾರನಿಂದ ಮಾತ್ರವಲ್ಲದೆ ಸತ್ತವರಿಂದ ಸಹ ಸುಲಿಗೆಮಾಡುವ ಜಮೀನು ಕಂದಾಯ ಪದ್ದತಿಯು ಆಚರಣೆಗೆ ಬಂದಿತು. “ಕಾರ್ಟೆಜ್‌ನ ಸ್ಪಾನಿಯರ್ರ ಕಾಲ ದಲ್ಲಿ ಮತ್ತು ಪಿಜಾರೊ ಕಾಲದಲ್ಲಿ ಹಿಡಿದಿದ್ದ ಹೊನ್ನಿನ ಹುಚ್ಚನ್ನು ಸಹ ಮಾರಿಸಿದ ಹಣದ ಆಸೆ ಇಂಗ್ಲಿಷರನ್ನು ಆವರಿಸಿತು. ರಕ್ತ ಹೀರಿ ಹೆಣವಾಗುವವರೆಗೆ ಶಾಂತಿ ಎಂಬುದು ಬಂಗಾಳಕ್ಕೆ ದೊರೆಯಲಿಲ್ಲ. ಭಾರತದಲ್ಲಿ ಅನೇಕ ಕಾಲ ಇಂಗ್ಲಿಷರ ಈ ಹಣದ ಸುಲಿಗೆಯ ರಾಕ್ಷಸೀ ಕೃತ್ಯಕ್ಕೆ ಕ್ಷನ್ ಮುಖ್ಯ ಕಾರಣ ?” ಎಂದು ಇಂಗ್ಲಿಷ್ ಚರಿತ್ರೆಕಾರರಾದ ಎಡ್ವರ್ಡ್ ಥಾಮ್ರನ್ ಮತ್ತು ಜಿ, ಟ, ಗ್ಯಾರಟ್ (Rise and Fulfilment of British Rule in India) ಹೇಳಿದ್ದಾರೆ. ಲಂಡನ್‌ನಲ್ಲಿ ಭಾರತ ಕಚೇರಿಯ ಎದುರು ಇರುವ ಶಿಲಾಪ್ರತಿಮೆ ಇದೇ ಸಾಮ್ರಾಜ್ಯ ನಿರ್ಮಾಣ ಕರ್ತೃವಾದ ಕೈವನದು. ಅವನದು ಹಗಲು ದರೋಡೆಯಾಗಿತ್ತು. ಬಂಗಾಳ ದೇಶ ಕ್ಷಾಮಕ್ಕೆ ತುತ್ತಾ ಗುವ ವರೆಗೆ ಆ “ ಚಿನ್ನ ದ ಗಿಡ ” ಅಲುಗಿಸಿ ಸುಲಿಗೆ ಮಾಡಲಾಯಿತು. ಕೆಲವು ಕಾಲದ ನಂತರ ಇದನ್ನೆ ' ವ್ಯಾಪಾರ ” ಎಂದು ಕರೆದರೂ ಕಾರನೀತಿ ಮಾತ್ರ ಸುಲಿಗೆ, ಸರಕಾರವೇ ಈ “ವ್ಯಾಪಾರ' ವಾಗಿತ್ತು; ವ್ಯಾಪಾರವೆಂದರೆ ಸುಲಿಗೆ, ಪ್ರಪಂಚದ ಇತಿಹಾಸ ಪರಂಪರೆಯಲ್ಲಿ ಇಂತಹ ದೃಶ್ಯಗಳು ಅತಿ ವಿರಳ, ಅನೇಕ ರೂಪಗಳಿಂದ, ಅನೇಕ ಹೆಸರಿನಿಂದ ಸುಲಿಗೆಯಾಯಿತು. ಇದು ನಡೆದದ್ದು ಕೆಲವು ವರ್ಷಗಳು ಮಾತ್ರವಲ್ಲ, ಅನೇಕ ತಲೆಮಾರುಗಳ ವರೆಗೆ ನಡೆಯಿತು. ಸುಲಿಗೆಯಿಂದ ಆರಂಭ ವಾದ ಕಾರ್ಯನೀತಿಗೆ ಆಮೇಲೆ ಒಂದು ನ್ಯಾಯದ ಸೋಗನ್ನು ತೊಡಿಸಿದರು. ಆರಂಭದ ಭಾರತದ ಬ್ರಿಟಿಷ್ ಆಡಳಿತಗಾರರಲ್ಲಿದ್ದ ಲಂಚ, ದುರಾಸೆ, ಪಕ್ಷಪಾತ, ಹಿಂಸೆ ಮತ್ತು ಹಣದ ಆಶೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. “ಇಂಗ್ಲಿಷ್ ಭಾಷೆಯ 'ಲೂಟ್' ಎಂಬ ಶಬ್ದ ಇಂಗ್ಲಿಷಿಗೆ