ಪುಟ:ಭಾರತ ದರ್ಶನ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಇಂಡಿಯ ಕಂಪನಿಯ ಕೈಯಲ್ಲೇ ಇದ್ದುದರಿಂದ ಈ ಬಹಿಷ್ಕಾರ ಶಾಸನದಿಂದ ಇಂಗ್ಲೆಂಡಿನ ಇತರ ವಿದೇಶ ವ್ಯಾಪಾರದ ಮೇಲೂ ಪರಿಣಾಮವಾಯಿತು. ಇದಲ್ಲದೆ ಭಾರತೀಯರ ಕೈಗಾರಿಕೆಗಳ ಮೇಲೆ ಅನೇಕ ನಿರ್ಬಂಧಗಳನ್ನು ಹಾಕಿ ಅವುಗಳನ್ನು ನಾಶಮಾಡಲು ಸರ್ವ ಪ್ರಯತ್ನ ವೂ ನಡೆಯಿತು. ಬ್ರಿಟಿಷ್ ಸಾಮಾನುಗಳು ಯಾವ ಸುಂಕವೂ ಇಲ್ಲದೆ ದೇಶದೊಳಗೆ ಪ್ರವೇಶಿಸಲು ಅವಕಾಶವಿದ್ದರೂ ಭಾರತದಲ್ಲೇ ತಯಾರಾದ ಸಾಮಾನುಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಸುಂಕ ಕೊಡಬೇಕಾಯಿತು. ಭಾರತದ ಬಟ್ಟಿ, ಕೈಗಾರಿಕೆಯು ನಾಶವಾಗಿ ಅಸಂಖ್ಯಾತ ನೇಕಾರರಿಗೆ, ಕುಶಲ ಕರ್ಮಿಗಳಿಗೆ ಕೆಲಸವಿಲ್ಲದಂತಾಯಿತು. ಬಂಗಾಳ ಮತ್ತು ಬಿಹಾರದಲ್ಲಿ ಬಹು ಬೇಗ ಕೈಗಾರಿಕೆ ಹಾಳಾಯಿತು ; ಕ್ರಮೇಣ ಬ್ರಿಟಿಷರು ಪ್ರಚಲಿತರಾಗಿ ಪಸರಿಸಿ ದಂತೆ, ರೈಲುದಾರಿ ಮುಂದುವರಿದಂತೆ ಇತರ ಕಡೆಯೂ ಇದೇ ಅವರ ನೀತಿಯಾಯಿತು. ಹತ್ತೊ೦ ಭತ್ತನೆಯ ಶತಮಾನದಲ್ಲೆಲ್ಲ ಈ ವಿನಾಶಕಾರ್ಯವು ನಡೆದು, ಕ್ರಮೇಣ ಹಡಗು ನಿರ್ಮಾಣ, ಲೋಹಗಳ ಕೈಗಾರಿಕೆ, ಗಾಜು, ಮತ್ತು ಕಾಗದ ನಿರ್ಮಾಣ ಮುಂತಾದ ಅನೇಕ ಕುಶಲ ಕರ್ಮ ಗಳು ನಾಶವಾದವು. ಹೊಸ ಕೈಗಾರಿಕೋದ್ಯಮದ ರೀತಿಗೂ ಹಳೆಯ ರೀತಿಗೂ ಬಹಳ ವ್ಯತ್ಯಾಸವಿದ್ದುದರಿಂದ ಇದು ಅನಿವಾರವೂ ಇತ್ತು. ಆದರೆ ರಾಜಕೀಯ ಮತ್ತು ಆರ್ಥಿಕ ಕಾರಣಗಳ ಬಲಾತ್ಕಾರವು ಈ ವಿನಾಶಕ್ಕೆ ಪುಟಕೊಟ್ಟಿತು. ಹೊಸ ಕೈಗಾರಿಕಾ ವಿಧಾನವನ್ನು ಆಚರಣೆಗೆ ತರಲು ಇಲ್ಲಿ ಯಾವ ಪ್ರಯ ತ್ನವೂ ನಡೆಯಲಿಲ್ಲ. ಹೊಸ ಪದ್ಧತಿಯು ಭಾರತದ ಒಳಗೆ ಬರದಂತೆ ಎಲ್ಲ ಪ್ರಯತ್ನವನ್ನೂ ಮಾಡಿ ಭಾರತದಲ್ಲಿ ಹೊಸ ಕೈಗಾರಿಕೆಗಳು ಬೆಳೆಯದಂತೆ ಮಾಡಿ ಭಾರತದ ಆರ್ಥಿಕ ಪ್ರಗತಿಯನ್ನು ತಡೆಗಟ್ಟ ದರು. ಯಾವ ಯಂತ್ರೋಪಕರಣವನ್ನೂ ಭಾರತದ ಒಳಗೆ ತರುವಂತೆ ಇರಲಿಲ್ಲ. ದೇಶದಲ್ಲಿ ಒಂದು ಆರ್ಥಿಕ ಶೂನ್ಯತೆಯುಂಟಾಗಿ ಬ್ರಿಟಿಷ್ ತಯಾರಿಕೆಯ ವಸ್ತುಗಳಿಗೆ ಒಳ್ಳೆಯ ಪೇಟೆ ದೊರೆಯಿತು ಇದರಿಂದ ದೇಶದಲ್ಲಿ ನಿರುದ್ಯೋಗವೂ ಬಡತನವೂ ಬೇರೂರಿತು. ಕೈಗಾರಿಕೋದ್ಯಮದ ಇಂಗ್ಲೆಂಡಿಗೆ ಭಾರತವು ಒಂದು ವ್ಯವಸಾಯದ ವಲಸೆದೇಶವಾಯಿತು ಇತಿಹಾಸ ಪ್ರಸಿದ್ದವಾದ ಆಧುನಿಕ ಬ್ರಿಟಿಷ್ ಸಾಮ್ರಾಜ್ಯದ ಆರ್ಥಿಕ ನೀತಿಯ ತಳಹದಿಯು ಭಾರತವು ಇಂಗ್ಲೆಂಡಿಗೆ ಕಚ್ಚ ಪದಾರ್ಥಗಳನ್ನು ಒದ ಗಿಸಿ ಇಂಗ್ಲೆಂಡಿನ ಕೈಗಾರಿಕೆಗಳ ನಯ ಮಾಲುಗಳನ್ನು ಕೊಳ್ಳುವ ಪೇಟೆಯಾಗಿರಲೆಂದೇ ಇತ್ತು. - ಕುಶಲಕರ್ಮಿಗಳ ಜೀವನೋಪಾಯ ನಾಶವಾಗಿ ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಕೈಗಾರಿಕೆ ಮತ್ತು ವಸ್ತು ನಿರ್ಮಾಣ ಕಾವ್ಯದಲ್ಲಿ ತೊಡಗಿದ್ದ ಈ ಕೋಟ್ಯಂತರ ಜನರ ಪಾಡೇನು ? ಎಲ್ಲಿಗೆ ಹೋಗಬೇಕು. ತಲೆತಲಾಂತರದಿಂದ ಬಂದ ಕಸಬು ಹಾಳಾಯಿತು, ಹೊಸ ಕಸಬು ಯಾವುದೂ ಕಾಣದಾಯಿತು. ಸಾಯುವುದು ಒಂದು ಮಾರ್ಗವಿತ್ತು. ದಿಕ್ಕು ತೋರದಾಗ ಅಸಹ ನೀಯ ಪರಿಸ್ಥಿತಿಯಿಂದ ಪಾರಾಗಲು ಈ ಒಂದು ಮಾರ್ಗ ಇದ್ದೇ ಇದೆ, ಕೋಟ್ಯಂತರ ಜನರು ಸಾವನ್ನೂ ಅಪ್ಪಿದರು. “ವ್ಯಾಪಾರದ ಇತಿಹಾಸದಲ್ಲಿ ಇಂತಹ ದುರ್ದೆಶೆಯನ್ನು ನಾನು ಎಲ್ಲಿಯೂ ಕಂಡಿಲ್ಲ. ನೇಕಾರರ ಎಲುಬುಗಳು ಭಾರತದ ಮೈದಾನಗಳನ್ನು ತುಂಬಿ ಸುಡುತ್ತಿವೆ” ಎಂದು ೧೮೩೪ರಲ್ಲಿ ಗೌರರ್ ಜನರಲ್ ಆಗಿದ್ದ ಆ೦ಗ್ಲೀಯ ಲಾರ್ಡ್ ಬೆಂಟಿಂಕ್ ಹೇಳುತ್ತಾನೆ. ಆದರೂ ಎಷ್ಟೋ ಜನರು ಬದುಕಿಕೊಂಡರು. ವರ್ಷ ವರ್ಷ ಬ್ರಿಟಿಷ್‌ ನೀತಿಯು ದೇಶದ ಒಳಗೆ ಹರಡಿದಂತೆ ದೇಶದಲ್ಲಿ ನಿರುದ್ಯೋಗವೂ ಹೆಚ್ಚಿತು. ಈ ಕೋಟ್ಯಂತರ ಕುಶಲ ಕರ್ಮಿಗಳಿಗೆ ಕಸಬುದಾರರಿಗೆ ಕೆಲಸವಿಲ್ಲದೆ, ಕಸಬು ಇಲ್ಲದೆ, ತಮ್ಮ ಕುಲಕಸಬನ್ನು ಕಳೆದುಕೊಂಡು ಭೂಮಿಯೇ ಗತಿಯಾಯಿತು. ಆದರೆ ವ್ಯವಸಾಯಗಾರರ ಸಂಖ್ಯೆಯು ಆಗಲೇ ಮಿತಿ ಮಾರಿ ಬೆಳೆದಿತ್ತು; ಹೆಚ್ಚು ಜನರನ್ನು ಒಳಗೊಳ್ಳುವಂತೆ ಇರಲಿಲ್ಲ, ಆದ್ದರಿಂದ ಭೂಮಿಯ ಮೇಲಿನ ಹೊರೆ ಹೆಚ್ಚಾಗಿ, ಬಡ ತನವು ಹೆಚ್ಚಿ ಜನತೆಯ ಜೀವನಮಟ್ಟವು ಬಹಳ ತಗ್ಗಿತು ಈ ರೀತಿ ಕೋಟ್ಯಂತರ ಜನರು ಬಲಾ ತ್ಕಾರದಿಂದ ವ್ಯವಸಾಯವನ್ನು ಅವಲಂಬಿಸಿದ್ದರಿಂದ ವ್ಯವಸಾಯಕ್ಕೂ ಕೈಗಾರಿಕೆಗೂ ಇದ್ದ ಅಂತ