ಪುಟ:ಭಾರತ ದರ್ಶನ.djvu/೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಭಾರತದರ್ಶನ
(Discovery of India)

ಬಹುಕೋಟ ಪ್ರಜಾಸಂಖ್ಯೆಯುಳ್ಳ ಭಾರತದಂಥ ಸಂಪದ್ಯುಕ್ತವಾದ ಪುರಾತನ ಭೂಖಂಡ ಸಾವಿರಾರು ಮೈಲಿಗಳ ದೂರದಲ್ಲಿರುವ ಇ೦ಗ್ಲೆ೦ಡಿನಂಥ ಸಣ್ಣ ರಾಜ್ಯವೊಂದಕ್ಕೆ ಹೇಗೆ ವಶವಾಗಿ ಅಧೀನವಾಯಿತು ? ಬಹು ಹಿಂದೆ ಪ್ರಪಂಚದ ಬಹುಭಾಗ ಅಜ್ಞಾನದಲ್ಲಿ ಮುಳುಗಿದ್ದಾಗ ಭಾರತ ಶ್ರೀಮಂತವಾದ ಸಂಸ್ಕಾರವನ್ನೂ ಉದಾತನಾದ ಧರ್ಮ ತತ್ತ್ವಗಳನ್ನೂ ಮರೆದುಧರೆಗೆ ಬೆಳಕಾಯಿತಲ್ಲವೆ? ಆ ಬೆಳಕಿನ ಶಕ್ತಿ ಮೂಲ ಯಾವುದು? ಭಾರತ ಅದನ್ನು ಹೇಗೆ ಕಳೆದುಕೂ೦ಡಿತು? ಪೂರ್ಣವಾಗಿ ಕಳೆದುಕೊಂಡಿದೆಯೆ? ಯಾವ ದೋಷದೌರ್ಬಲ್ಯಗಳಿಗೊಳಗಾಗಿ ಈ ದೇಶ ಶತಶತಮಾನಗಳ ಕಾಲ ದೇಶವಿದೇಶಗಳ ಜನರ ತಂಡೋಪತಂಡಗಳ ಧಾಳಿಗೊಳಪಟ್ಟ ರಾಧಿಪತ್ಯಕ್ಕೆ ಸರಿಯಾಗಿ ನರಳಿತು? ಅದರೂ, ಬೇರೆಬೇರೆ ರಾಜ್ಯ ಸಾಮಾಜ್ಯಗಳು ಪರದಾಳಿಗಳಿಂದ ನಿರ್ನಾಮವಾಗಿರುವಾಗ ಯಾವ ದುರ್ದಮ್ಮವಾದ ಅಂತಃಶಕ್ತಿ ಇಂದ ಈ ಭಾರತ ಪುನಃ ಪುನಃ ತಲೆಯೆತ್ತಿಕೊಳ್ಳುತ್ತಿದೆ, ಪ್ರಬಲವಾದ ಬ್ರಿಟಿಷ್ ಸಾಮ್ರಾಜ್ಯವನ್ನೂ ಎದುರಿಸಿ ದಾಸ್ಯವನ್ನು ತೊಡೆದುನಿಂತಿದೆ? ಪುರಾತನ ನೂತನ ಭಾರತಗಳಿಗೆ ಸಂಬಂಧವಿದೆಯೆ? ಧರ್ಮ ತತ್ವ ಸಂಸ್ಕಾರಗಳ ಭಾರತ ನೂತನ ವಿಜ್ಞಾನದ ಆಧುನಿಕ ಯುಗದೊಡನೆ ಹೊಂದಿಕೊಳ್ಳಬಲ್ಲುದೆ? ಇಂದಿನ ಬಲಪ್ರಧಾನವಾದ ತುಮುಲ ಪ್ರಪಂಚದಲ್ಲಿ- ಮುದಿ ಭಾರತ ಇನ್ನೊಮ್ಮೆ ಸತ್ಯ ಶಾಲಿಯಾಗಿ ಪ್ರಭಾವಶಾಲಿಯಾಗಿ ಪುನರ್ನೂತನವಾಗಿ ಬಾಳಬಲ್ಲುದೆ? ಯೋಚನಾಪರನಾದ ದೇಶಪ್ರೇಮಿಯ ಅಂತರಂಗದಲ್ಲಿ ಹೀಗೆ ಉದ್ಭವಿಸುವ ನಾನಾ ಪ್ರಶ್ನೆಗಳನ್ನು ಮಥಿಸುತ್ತ ಶ್ರೀ ಜವಹರಲಾಲರು ಈಗ್ರಂಥದಲ್ಲಿ ಭಾರತದ ಇತಿಹಾಸವನ್ನು, ಆತ್ಮವನ್ನು, ಪುರಾತನ-ನೂತನ ಶಕ್ತಿ ಮೂಲವನ್ನು ತಮ್ಮದೇ ಆದ ಉದಾರವಾದ ದೃಷ್ಟಿಯಿಂದ ಅವಲೋಕಿಸಿದ್ದಾರೆ, ವಿವೇಚಿಸಿದ್ದಾರೆ, ವಿಮರ್ಶಿಸಿದ್ದಾರೆ. ಭಾರತದ ಭವಿಷ್ಯತ್ತಿನಲ್ಲಿ ಆಶಾವಾದಿಯಾದ ಯಾವ ಭಾರತೀಯನೂ ಈ ಮಹತ್ಕೃತಿಯನ್ನು ಓದಿ ಸಂತೋಷಗೊಳ್ಳದಿರಲಾರನು.