ಪುಟ:ಭಾರತ ದರ್ಶನ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೦

ಭಾರತ ದರ್ಶನ

ಇನ್ನೂ ಭದ್ರವಾಯಿತು. ಭೇದ ಮನೋಭಾವ ಹೆಚ್ಚಿಸುವ ಪ್ರತ್ಯೇಕ ಚುನಾವಣೆಗಳು ಬಂದವು. ಬ್ರಿಟಿಷರ ವ್ಯಾಪಾರ, ಕೈಗಾರಿಕೆ, ಬಂಡವಾಳ ಮತ್ತು ಹಡಗಿನ ವ್ಯಾಪಾರ ಇವುಗಳ ಹಿಡಿತ ಇನ್ನೂ ಬಲವಾಯಿತು. “ಭೇದ ಭಾವನೆ”ಯ ಹೆಸರಿನಲ್ಲಿ ಆ ಹಿಡಿತ ಸಡಿಲಿಸದಂತೆ ಯಾವ ಶಾಸನವನ್ನೂ ಮಾಡಲಾಗದೆಂದು ನಿಷೇಧಿಸಲಾಯಿತು. ಭಾರತದ ಹಣಕಾಸು, ಸೈನ್ಯ ಮತ್ತು ವಿದೇಶ ವ್ಯವಹಾರವೆಲ್ಲ ಪೂರ್ಣ ಬ್ರಿಟಿಷರ ಅಧಿಕಾರದಲ್ಲೇ ಉಳಿಯಿತು. ವೈಸರಾಯನ ಅಧಿಕಾರ ಮೊದಲಿಗಿಂತ ಇನ್ನೂ ಹೆಚ್ಚಿತು.

ಪ್ರಾಂತ್ಯಾಡಳಿತದ ಸಣ್ಣ ಚೌಕಟ್ಟಿನಲ್ಲಿ ಸ್ವಲ್ಪ ಹೆಚ್ಚಿನ ಅಧಿಕಾರ ಭಾರತೀಯರ ಕೈಗೆ ಬಂದಂತೆ ತೋರಿತು. ಆದರೂ ಅದೊಂದು ವಿಚಿತ್ರ ಪ್ರಜಾಪ್ರತಿನಿಧಿ ಪ್ರಭುತ್ವವಾಗಿತ್ತು. ವೈಸರಾಯನ ಕೈಯಲ್ಲಿ ಮತ್ತು ಜವಾಬ್ದಾರಿರಹಿತ ಕೇಂದ್ರ ಸರಕಾರದ ಕೈಯಲ್ಲಿ ಎಲ್ಲ ಅಧಿಕಾರಗಳೂ ಕೇಂದ್ರೀಕೃತವಿದ್ದವು, ವೈಸ್ ರಾಯ್‌ನಂತೆ ಪ್ರಾಂತ್ಯದ ಗೌವರ್ನರ್ ಸಹ ಮಧ್ಯೆ ಬಂದು ಶಾಸನ ಸಭೆಯ ಶಾಸನವನ್ನು ನಿರಾಕರಿಸಿ, ತನಗೆ ಬೇಕಾದ ಶಾಸನ ರಚಿಸಿ ಜವಾಬ್ದಾರಿ ಮಂತ್ರಿ ಮಂಡಲ ಮತ್ತು ಪ್ರಾಂತ್ಯಶಾಸನ ಸಭೆಗಳಿಗೆ ವಿರುದ್ದವಾಗಿ ಏನು ಬೇಕಾದರೂ ಮಾಡಲು ಅಧಿಕಾರವಿತ್ತು, ಆದಾಯದ ಬಹು ಭಾಗ ಪಟ್ಟಭದ್ರರಿಗೆ ಮೀಸಲಾಯಿತು; ಅದರಲ್ಲಿ ಬಿಡಿಕಾಸನ್ನು ಮುಟ್ಟುವಂತೆ ಇರಲಿಲ್ಲ. ಉನ್ನತ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ರಕ್ಷಣೆ ದೊರೆತು ಮಂತ್ರಿಮಂಡಲವು ಅವರನ್ನು ಮಾತನಾಸುವಂತೆ ಇರಲಿಲ್ಲ. ಅವರ ದೃಷ್ಟಿ ಅಧಿಕಾರ ದರ್ಪದ ದೃಷ್ಟಿ, ಮಂತ್ರಿಗಳಿಂದ ಯಾವ ಸಲಹೆಯನ್ನೂ ಅಪೇಕ್ಷಿಸದೆ ಎಲ್ಲ ಪ್ರೇರಣೆಗೂ ಗೌರರ್ ಕಡೆಗೇ ನೋಡುತ್ತಿದ್ದರು. ಆದರೂ ಪ್ರಜಾ ಸರಕಾರ ಇವರ ಮೂಲಕವೇ ಆಡಳಿತ ನಡೆಸಬೇಕಾಯಿತು. ಗೌವರರಿಂದ ಮೊದಲುಗೊಂಡು ಕೆಳದರ್ಜೆಯ ಪೋಲಿಸಿನವರೆಗೆ ಸರಕಾರದ ಜಟಿಲ ಆಡಳಿತ ಯಂತ್ರವು ಅದೇ ಉಳಿಯಿತು. ಎಲ್ಲೋ ಮಧ್ಯೆ ಚುನಾಯಿತ ಸದಸ್ಯರಿಗೆ ಜವಾಬ್ದಾರರಾದ ಕೆಲವು ಮಂತ್ರಿಗಳು ಮಧ್ಯೆ ತೂರಿಕೊಂಡು ಸಾಧ್ಯವಿರುವ ಮಟ್ಟಿಗೆ ಆಡಳಿತ ನಡೆಸಬೇಕಾಯಿತು. ಬ್ರಿಟಿಷರ ಪ್ರತಿನಿಧಿಯಾದ ಗೌವರ್ ಮತ್ತು ಆತನ ಕೈಕೆಳಗಿನ ಅಧಿಕಾರಿಗಳು ಒಪ್ಪಿ ಸಹಕರಿಸಿದರೆ ಮಾತ್ರ ಆಡಳಿತ ಯಂತ್ರ ಸುಗಮವಾಗಿ ನಡೆಯಲು ಸಾಧ್ಯವಿತ್ತು. ಇಲ್ಲದಿದ್ದರೆ ಪ್ರಜಾ ಸರಕಾರದ ನೀತಿ ಮತ್ತು ಮಾರ್ಗಗಳಿಗೂ ಹಳೆಯ ಪೋಲಿಸ್ ರಾಜ್ಯದ ಅಧಿಕಾರ ದರ್ಪದ ನೀತಿಗೂ ವಿರೋಧ ಬಂದು ಸದಾಘರ್ಷಣೆ ಶತಸ್ಸಿದ್ದವಿತ್ತು. ಪ್ರಜಾ ಸರಕಾರದ ನೀತಿಗೆ ಗೌಡ್ಕರ್ ಮತ್ತು ಅಧಿಕಾರಿಗಳು ವಿರೋಧಿಗಳೂ ದ್ವೇಷಿಗಳೂ ಆಗಿರದಿದ್ದರೂ ಅದಕ್ಕೆ ಅಡ್ಡಿ ಬಂದು, ಕಾಲವಿಳಂಬ ಮಾಡಿ ಪ್ರಜಾಸರಕಾರದ ಧೈಯ ಅಥವ ಕಾರ್ಯ ನೀತಿಯನ್ನು ವಿಫಲಮಾಡಲು ಅವಕಾಶವಿತ್ತು. ಮಂತ್ರಿಮಂಡಲದ ಅಥವ ಶಾಸನ ಸಭೆಯ ವಿರುದ್ದ ತಮಗೆ ಇಷ್ಟ ಬಂದಂತೆ ವರ್ತಿಸಲು ವೈಸ್ರಾಯ್ಗೆ ಆಗಲಿ, ಗೌರ್ನ‌್ರಗೆ ಆಗಲಿ ಶಾಸನವಿಧಿಯಲ್ಲಿ ಯಾವ ಅಡ್ಡಿಯೂ ಇರಲಿಲ್ಲ: ನಿಜವಾದ ಆತಂಕವೆಂದರೆ ಘರ್ಷಣೆಯ ಭಯ ಒಂದೇ. ಮಂತ್ರಿಮಂಡಲ ರಾಜೀನಾಮೆ ಕೊಡಬಹುದಿತ್ತು ಮತ್ತು ಬೇರೆ ಯಾವ ಮಂತ್ರಿಮಂಡಲಕ್ಕೂ ಬಹುಮತವು ದೊರೆಯುವಂತೆ ಇರಲಿಲ್ಲ. ಇನ್ನುಳಿದುದು ಪುನಃ ಕಾಂಗ್ರೆಸ್ಸಿನೊಡನೆ ಹೋರಾಟ. ಇತರ ದೇಶಗಳಲ್ಲಿ ದೊರೆಗೂ ಶಾಸನ ಸಭೆಗಳಿಗೂ ಹೋರಾಟ ನಡೆದು, ಕ್ರಾಂತಿ ಎದ್ದು, ದೊರೆಯ ಅಧಿಕಾರಕ್ಕೆ ಸಂಚಕಾರ ಬಂದಂತೆ ಇಲ್ಲಿಯೂ ಅದೇ ಹಳೆಯ ವಿಧಿಬದ್ದ ಹೋರಾಟ. ಆದರೆ ಇಲ್ಲಿ ಆ ದೊರೆ ಆರುಸಾವಿರ ಮೈಲಿಗಳಾಚೆ ಮತ್ತು ಆ ದೊರೆಯ ಬೆಂಬಲಕ್ಕೆ ವಿದೇಶೀ ಸೈನ್ಯ, ವಿದೇಶೀ ಆರ್ಥಿಕ ನೀತಿ ಮತ್ತು ವಿದೇಶೀಯು ಸೃಷ್ಟಿಸಿದ ಪಟ್ಟದ ಹಕ್ಕುಗಳು ಮತ್ತು ಅವರ ಎಂಜಲಿಗಾಗಿ ಕಾದಿದ್ದ ಅನುಯಾಯಿಗಳ ತಂಡ.

ಇದೇ ಕಾಲದಲ್ಲಿ ಬ್ರಹ್ಮದೇಶವನ್ನು ಭಾರತದಿಂದ ಪ್ರತ್ಯೇಕಿಸಿದರು. ಬ್ರಹ್ಮದೇಶದಲ್ಲಿ ಬ್ರಿಟಿಷರ ಭಾರತೀಯರ ಮತ್ತು ಸ್ವಲ್ಪಮಟ್ಟಿಗೆ ಚೀಣದ ಆರ್ಥಿಕ ಮತ್ತು ವ್ಯಾಪಾರ ಹಕ್ಕುಗಳಿಗೆ ಘರ್ಷಣೆ ಬಂದಿತ್ತು. ಆದ್ದರಿಂದ ಬ್ರಹ್ಮದೇಶೀಯರಲ್ಲಿ ಭಾರತೀಯರ ಮತ್ತು ಚೀಣದ ವಿರುದ್ದ ದ್ವೇಷಭಾವನೆ ಹುಟ್ಟಿಸುವುದು ಬ್ರಿಟಿಷರ ನೀತಿಯಾಯಿತು. ಸ್ವಲ್ಪ ಕಾಲ ಇದರಿಂದ ಅವರಿಗೆ ಅನುಕೂಲವಾದರೂ ಬ್ರಹ್ಮದೇಶೀಯರಿಗೆ