ಪುಟ:ಭಾರತ ದರ್ಶನ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೪

ಭಾರತ ದರ್ಶನ

ಈಗಲೂ ಅದೇ ಸ್ಥಾನಗಳಲ್ಲಿ ಉಳಿದರು. ಮಂತ್ರಿವರ್ಗಕ್ಕೂ ಬ್ರಿಟಿಷ್ ಆಡಳಿತಗಾರರಿಗೂ ಯಾವ ಘರ್ಷಣೆ ಅಥವ ರಾಜಕೀಯ ಬಿಕ್ಕಟ್ಟೂ ಏಳಲಿಲ್ಲ; ಏಕೆಂದರೆ ಅಲ್ಲಿ ಆಡಳಿತ ವರ್ಗದ ಪರಮಾಧಿಕಾರವೇ ಇತ್ತು, ಅದೇ ಮುಂದುವರಿಯಿತು.

ಕಾಂಗ್ರೆಸ್ ಪ್ರಾಂತ್ಯಗಳಿಗೂ, ಬಂಗಾಲ ಮತ್ತು ಪಂಜಾಬಿಗೂ ಇದ್ದ ವ್ಯತ್ಯಾಸ ಒಡನೆ ರಾಜಕೀಯ ಬಂದಿಗಳ ವಿಷಯದಲ್ಲಿ ಮತ್ತು ಪ್ರಜೆಗಳ ಮೂಲಭೂತ ಹಕ್ಕುಗಳ ವಿಷಯದಲ್ಲಿ ಎದ್ದು ಕಾಣಿಸಿತು. ಪಂಜಾಬ್ ಮತ್ತು ಬಂಗಾಲಗಳಲ್ಲಿ ಪೊಲೀಸರ ಮತ್ತು ಗುಪ್ತಚಾರರ ಬಿಗಿತ ಸ್ವಲ್ಪವೂ ಕಡಮೆಯಾಗಲಿಲ್ಲ ; ರಾಜಕೀಯ ಬಂದಿಗಳ ಬಿಡುಗಡೆ ಆಗಲಿಲ್ಲ. ಯೂರೋಪಿಯನ್ರ ಮತಗಳ ಬೆಂಬಲದಿಂದಲೇ ಬಾಳಬೇಕಾಗಿದ್ದ ಮಂತ್ರಿಮಂಡಲದ ಬಂಗಾಲದಲ್ಲಿ ಆರೋಪಣೆ ಅಥವ ವಿಚಾರವಿಲ್ಲದೆ ವರ್ಷಗಟ್ಟಲೆ ಸೆರೆ ಮನೆಯಲ್ಲಿ ಕೊಳೆಯುತ್ತಿದ್ದ ಸಹಸ್ರಾರು ಜನ-ಹೆಂಗಸರು, ಗಂಡಸರು-ಬಂದಿಗಳಿದ್ದರು. ಕಾಂಗ್ರೆಸ್ ಪ್ರಾಂತ್ಯಗಳಲ್ಲಿ ರಾಜಕೀಯ ಬಂದಿಗಳ ಬಿಡುಗಡೆಯೇ ಮೊದಲನೆಯ ಕೆಲಸವಾಗಿತ್ತು. ಹಿಂಸಾತ್ಮಕ ಕಾರ್ಯಗಳಿಗಾಗಿ ಶಿಕ್ಷಿತರಾದವರ ಬಿಡುಗಡೆಗೆ ಗೌರರುಗಳು ಒಪ್ಪದೇ ಇದ್ದುದರಿಂದ ಸ್ವಲ್ಪ ತಡವಾಗಿ ೧೯೩೮ರಲ್ಲಿ ಸಂಯುಕ್ತ ಪ್ರಾಂತ ಮತ್ತು ಬೀಹಾರದಲ್ಲಿ ಕಾಂಗ್ರೆಸ್ ಸರಕಾರಗಳು ರಾಜೀನಾಮೆ ಸಹ ಕೊಟ್ಟವು. ಅನಂತರ ಗೌರರುಗಳು ಒಪ್ಪಿ ರಾಜಕೀಯ ಬಂದಿಗಳ ಬಿಡುಗಡೆ ಮಾಡಬೇಕಾಯಿತು.

೪. ಭಾರತ ರಾಷ್ಟ್ರೀಯ ಶಕ್ತಿಗೂ ಬ್ರಿಟಿಷ್ ಸಾಂಪ್ರದಾಯಿಕ ಆಡಳಿತ ಶಕ್ತಿಗೂ
ಭಾರತದಲ್ಲಿ ಘರ್ಷಣೆ

ಹೊಸ ಪ್ರಾಂತ ಶಾಸನ ಸಭೆಗಳಲ್ಲಿ ಗ್ರಾಮಾಂತರ ಪ್ರತಿನಿಧಿಗಳ ಸಂಖ್ಯೆಯು ಹೆಚ್ಚು ಇದ್ದ ಕಾರಣ ಭೂಸ್ವಾಮ್ಯದ ಸುಧಾರಣೆಗೆ ಒತ್ತಾಯವು ಪ್ರಬಲವಾಯಿತು. ಬಂಗಾಲದಲ್ಲಿ ಕಾಯಂ ಹಿಡುವಳಿ ಮತ್ತು ಇತರ ಕಾರಣಗಳಿಂದ ಗೇಣಿದಾರರ ಪರಿಸ್ಥಿತಿಯು ತೀರ ಹದಗೆಟ್ಟಿತ್ತು ; ಅನಂತರ ದೊಡ್ಡ ಜಮಾಬ್ದಾರಿ ಪ್ರಾಂತಗಳಾದ ಬೀಹಾರ್ ಮತ್ತು ಸಂಯುಕ್ತ ಪ್ರಾಂತಗಳೂ ಮೂರನೆಯದಾಗಿ ಸ್ವಲ್ಪ ರೈತಾಪಿ ಹಿಡುವಳಿಗಳು ಆರಂಭದಲ್ಲಿ ಇದ್ದರೂ ದೊಡ್ಡ ಜಮಾಬ್ದಾರಿಗಳು ಬೆಳೆದ ಮುಂಬೈ, ಮದರಾಸು ಮತ್ತು ಪಂಜಾಬ ಪ್ರಾಂತಗಳು, ಬಂಗಾಲದಲ್ಲಿ ಜಮಾಬ್ದಾರಿ ಸುಧಾರಣೆಗೆ ದೊಡ್ಡ ಆತಂಕವೆಂದರೆ ಅಲ್ಲಿನ ಕಾಯಂ ಹಿಡುವಳಿ ಪದ್ಧತಿ. ಇದು ಹೋಗಬೇಕೆಂದು ಎಲ್ಲರೂ ಒಪ್ಪಿದ್ದರು, ಸರ್ಕಾರಿ ವಿಚಾರಣಾ ಸಮಿತಿಗಳು ಸಹ ಸಿಫಾರಸು ಮಾಡಿದ್ದವು; ಆದರೂ ಹಕ್ಕುದಾರರು ಹೇಗೋ ಅಡ್ಡಿ ಬಂದು ಸುಧಾರಣೆಯನ್ನು ತಡೆದರು. ಪಂಜಾಬಿನಲ್ಲಿ ಬೇರೆ ಭೂಮಿ ಹೆಚ್ಚು ಇದ್ದುದರಿಂದ ತೊಂದರೆಯಾಗಲಿಲ್ಲ.

ಕಾಂಗ್ರೆಸ್ಸಿಗೆ ಈ ಭೂಸ್ವಾಮ್ಯದ ಪ್ರಶ್ನೆಯೇ ಮುಖ್ಯ ಸಾಮಾಜಿಕ ಪ್ರಶ್ನೆಯಾಯಿತು. ವಿಶೇಷ ಪರಿಶ್ರಮದಿಂದ ವಿಷಯ ವಿಚಾರಮಾಡಿ ಕಾರನೀತಿ ನಿರ್ಧರಿಸಲಾಗಿತ್ತು. ಬೇರೆ ಬೇರೆ ಪ್ರಾಂತಗಳ ಪರಿಸ್ಥಿತಿ ಬೇರೆ ಬೇರೆ ಇದ್ದುದರಿಂದ ಮತ್ತು ಅಲ್ಲಿನ ಪ್ರಾಂತ ಕಾಂಗ್ರೆಸ್ ಸಮಿತಿಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕಾದ್ದರಿಂದ ಈ ಕಾಠ್ಯ ನೀತಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಕೇಂದ್ರ ಕಾಂಗ್ರೆಸ್ ಸಂಸ್ಥೆಯು ಇಡೀ ಭಾರತಕ್ಕೆಲ್ಲ ಒಂದು ಸ್ಕೂಲ ರೂಪು ರೇಖೆ ಹಾಕಿಕೊಟ್ಟಿತು. ಪ್ರಾಸ್ತ್ರಗಳು ಸ್ವಲ್ಪ ಹೆಚ್ಚು ಕಡಮೆ ಮಾಡಿ ವಿವರಗಳನ್ನು ನಿರ್ಧರಿಸಿದವು. ಇವುಗಳಲ್ಲೆಲ್ಲ ಸಂಯುಕ್ತ ಪ್ರಾಂತವು ತೀರ ಮುಂದೆ ಹೋಗಿ ಜಮಾನ್ದಾರಿ ಪದ್ಧತಿ ಹೋಗಬೇಕೆಂದು ತೀರ್ಮಾನಿಸಿತು. ವೈಸರಾಯ್ ಮತ್ತು ಗೌರರ್‌ಗಳಿಗೆ ವಿಶೇಷ ಅಧಿಕಾರವಿದ್ದುದರಿಂದಲೂ, ಮತ್ತು ಹಿರಿಯ ಶಾಸನ ಸಭೆಯಲ್ಲಿ ಜಮಾನ್ದಾರರುಗಳೇ ಬಹುಮತದಿಂದ ಇದ್ದುದರಿಂದಲೂ ೧೯೩೫ ನೆಯ ಇಂಡಿಯಾ ಸರಕಾರ ಶಾಸನದ ಪ್ರಕಾರ ಇದು ಸಾಧ್ಯವಿತ್ತು. ಆದ್ದರಿಂದ ಏನು ಸುಧಾರಣೆಬೇಕಾದರೂ ಕೇಂದ್ರ ಆಡಳಿತ ವ್ಯೂಹದ ಚೌಕಟ್ಟಿನಲ್ಲಿ ಸುಧಾರಣೆ ಆಗದೆ ಸಾಧ್ಯವಿರಲಿಲ್ಲ. ದೊಡ್ಡ ಕ್ರಾಂತಿಯಿಂದಲ್ಲದೆ ಆ ವ್ಯೂಹ ಭೇದಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಯಾವ ಸುಧಾರಣೆಯಾದರೂ ಬಹು ಕಷ್ಟತಮವೂ, ಅತಿ ಜಟಿಲವೂ ಆಗಿತ್ತು; ಬಹಳ ಕಾಲ ತೆಗೆದುಕೊಳ್ಳುತ್ತಿತ್ತು.