ಪುಟ:ಭಾರತ ದರ್ಶನ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೩೫

ಆದರೂ ಭೂಮಿದಾರಿ ವಿಷಯದಲ್ಲಿ ಕೆಲವು ಮಹತ್ವದ ಸುಧಾರಣೆಗಳನ್ನು ಮಾಡಿ ರೈತರ ಸಾಲ ಪರಿಹಾರಕ್ಕೆ ಶಾಸನ ಮಾಡಲಾಯಿತು. ಅದೇ ರೀತಿ ಕಾರ್ಖಾನೆಗಳ ಶ್ರಮಜೀವಿಗಳ ಸ್ಥಿತಿ, ಸಾರ್ವ ಜನಿಕ ಸ್ವಾಸ್ಥ್ಯ ಮತ್ತು ಪಾಕೀಜು, ಸ್ಥಳೀಯ ಸಂಸ್ಥೆಗಳ ಆಡಳಿತ, ಪ್ರಾಥಮಿಕ ವಿದ್ಯಾಭ್ಯಾಸದವರಿಗೆ ಶಿಕ್ಷಣ, ವಯಸ್ಕರ ವಿದ್ಯಾಭ್ಯಾಸ, ಕೈಗಾರಿಕೆ, ಗ್ರಾಮಾಭಿವೃದ್ದಿ ಮುಂತಾದ ಅನೇಕ ಮುಖ್ಯ ಸಮಸ್ಯೆಗಳ ಕಡೆಗೆ ಗಮನ ಕೊಡಲಾಯಿತು. ಹಿಂದಿನ ಪ್ರಾನ್ನ ಸರಕಾರಗಳು ಈ ಎಲ್ಲ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಅಲಕ್ಷ ಮಾಡಿ ಬದಿಗೊತ್ತಿದ್ದವು. ಪೋಲಿಸ್ ಮತ್ತು ರೆವಿನ್ಯೂ ಇಲಾಖೆಗಳ ದಕ್ಷತೆಗೆ ಮಾತ್ರ ಗಮನ ಕೊಟ್ಟು, ಉಳಿದವುಗಳನ್ನು ಅವುಗಳ ಪಾಡಿಗೆ ಬಿಟ್ಟಿದ್ದರು. ಆಗಾಗ ಅಲ್ಪ ಸ್ವಲ್ಪ ಪ್ರಯತ್ನ ನಡೆದಿತ್ತು. ಕೆಲವು ವಿಚಾರಣಾ ಸಮಿತಿಗಳು ದೇಶಾದ್ಯಂತ ಪ್ರವಾಸಮಾಡಿ ಶ್ರಮವಹಿಸಿ ಬೃಹದಾಕಾರದ ತರದಿಗಳನ್ನು ಮಾತ್ರ ಸಿದ್ದ ಪಡಿಸಿದ್ದವು. ಈ ವರದಿಗಳೆಲ್ಲ ಗೊಟ್ಟಕ್ಕೆ ಬಿದ್ದು ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಎಷ್ಟು ಒತ್ತಾಯ ಮಾಡಿದ್ದರೂ ಸರಿಯಾದ ಅಂಕಿ ಅಂಶಗಳೂ ಇರಲಿಲ್ಲ. ಸರಿಯಾದ ಅಂಕಿ ಅಂಶಗಳು, ಸುದೀರ್ಘ ಮುನ್ನೋಟ ಮತ್ತು ಅವಶ್ಯವಾದ ವಿವರಗಳಿಲ್ಲದೆ ಯಾವ ದಿಕ್ಕಿನಲ್ಲಿಯೂ ಮುಂದುವರಿಯಲು ಸಾಧ್ಯವಿರಲಿಲ್ಲ ; ಈ ರೀತಿ ಪ್ರಾಂತ ಸರಕಾರಗಳು ಸಾಮಾನ್ಯ ಆಡಳಿತ ನಿರ್ವಹಣೆಯಲ್ಲದೆ ಅನೇಕ ವರ್ಷಗಳ ಅಲಕ್ಷದಿಂದ ಬಿಟ್ಟಿದ್ದ ಕೆಲಸವನ್ನೆಲ್ಲ ಮಾಡಬೇಕಾಗಿ ಬಂದು ಎಲ್ಲ ಕಡೆಯೂ ಆತುರದ ಸಮಸ್ಯೆಗಳೇ ಎದ್ದವು. ಪೊಲೀಸ್ ರಾಜ್ಯವನ್ನು ಸಮಾಜ ಹಿತದ ರಾಜ್ಯವನ್ನಾಗಿ ಪರಿವರ್ತಿಸಬೇಕಾಯಿತು. ತಮ್ಮ ಅಧಿಕಾರ ಮಿತಿ, ಜನತೆಯ ದಾರಿದ್ರ, ಪ್ರಾಂತ ಸರಕಾರಗಳ ದೃಷ್ಟಿಕೋಣಕ್ಕೂ ಕೇಂದ್ರ ಸರಕಾರದ ದೃಷ್ಟಿ ಕೋಣಕ್ಕೂ ಇದ್ದ ಅಪಾರ ಅಂತರ, ವೈಸ ರಾಯನ ಕೇಂದ್ರೀಕೃತ ನಿರಂಕುಶಾಧಿಕಾರ ಇವುಗಳಿಂದ ಈ ಕೆಲಸ ಸ್ವಲ್ಪವೂ ಸುಗಮವಾಗದೆ ಇನ್ನೂ ಕಷ್ಟ ತಮವೇ ಆಯಿತು.

ನಮ್ಮ ಅಧಿಕಾರ ಮಿತಿಯ ಮತ್ತು ಇದ್ದ ಆತಂಕಗಳ ಪೂರ್ಣ ಪರಿಚಯ ನಮಗೆ ಇತ್ತು. ಪರಿಸ್ಥಿತಿ ಪೂರ್ಣ ವ್ಯತ್ಯಾಸವಾಗುವವರೆಗೆ ಹೆಚ್ಚು ಏನನ್ನೂ ಮಾಡಲು ಸಾಧ್ಯವಿಲ್ಲವೆಂದೂ ಅಂತರಂಗದಲ್ಲಿ ನಮಗೆ ಮನವರಿಕೆಯಾಗಿತ್ತು. ಆದರೂ ಮುಂದುವರಿಯಬೇಕು, ಅನೇಕ ವಿಷಯಗಳಲ್ಲಿ ನಮಗಿಂತ ಮುಂದುವರಿದಿದ್ದ ದೇಶಗಳಂತೆ ನಾವೂ ಪ್ರಗತಿ ಹೊಂದಬೇಕು ಎಂಬ ಆಶೆ ನಮ್ಮನ್ನು ತುಂಬಿತು ; ಸ್ವತಂತ್ರರಾಗ ಬೇಕೆಂಬ ಉತ್ಕಟೇಚ್ಛೆ ಬೇರೂರಿತು. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳು ಮತ್ತು ನಮಗಿಂತ ಮುಂದೆ ಹೋದ ಕೆಲವು ಪಾಶ್ಚಾತ್ಯ ದೇಶಗಳ ದೃಷ್ಟಿ ನಮ್ಮ ಎದುರು ನಿಂತವು. ಆದರೆ ಎಲ್ಲಕ್ಕೂ ಹೆಚ್ಚಾಗಿ ಯುದ್ಧ ಮತ್ತು ಅಂತಃಕಲಹಗಳ ಮಧ್ಯೆ ಮಹತ್ತಮ ತೊಂದರೆಗಳನ್ನು ಎದುರಿಸಿ ಎರಡೇ ದಶಕಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದ ಸೋವಿಯಟ್ ರಷ್ಯದ ಉದಾಹರಣೆ ನಮ್ಮನ್ನು ಬೆರಗುಗೊಳಿಸಿತು. ಕೆಲವರು ಕಮ್ಯೂನಿಸಮ್ಗೆ ಮಾರುಹೋದರು, ಕೆಲವರು ಅದನ್ನು ಒಪ್ಪಲಿಲ್ಲ ; ಆದರೆ ಸೋವಿಯಟ್ ಒಕ್ಕೂಟದಲ್ಲಿ ಆದ ವಿದ್ಯೆ, ಸಂಸ್ಕೃತಿ, ವೈದ್ಯ ಸಹಾಯ, ದೇಹದಾರ್ಡ್ಯ, ವಿವಿಧ ಜನಾಂಗಗಳ ಸಮಸ್ಯಾ ಪರಿಹಾರದಲ್ಲಿ ಕಂಡು ಬಂದ ಪ್ರಗತಿಪರನೀತಿ, ಪಾಚಿಗಟ್ಟ ಕೊಳೆತು ನಾರುತ್ತಿದ್ದ ಜೀವನದಿಂದ ಹೊಸದೊಂದು ಪ್ರಪಂಚ ಸೃಷ್ಟಿಸಿದ ಅದ್ಭುತ ಕಾರ್ಯಶಕ್ತಿ, ಇವುಗಳನ್ನು ನೋಡಿ ಮನಸೋಲದವರೇ ಇಲ್ಲ. ವ್ಯಕ್ತಿ ವೈಶಿಷ್ಟಕ್ಕೆ ವಿಶೇಷ ಮಹತ್ವ ಕೊಟ್ಟವರೂ, ಸಾಮ್ಯವಾದದ ಕೆಲವು ತತ್ತ್ವಗಳನ್ನು ಒಪ್ಪದವರೂ ಆದ ರವೀಂದ್ರನಾಥ ಠಾಕೂರರು ಸಹ ಈ ಹೊಸ ನಾಗರಿಕತೆಯನ್ನು ಕಂಡು ಮುಗ್ಧರಾಗಿ ನಮ್ಮ ದೇಶದ ಇಂದಿನ ಪರಿಸ್ಥಿತಿಗೂ ಅದರ ಪರಿಸ್ಥಿತಿಗೂ ಇರುವ ಅಜಗಜಾಂತರವನ್ನು ಕಂಡು ಮರುಗಿದರು. ಅವರ ಮರಣ ಶಯ್ಕೆಯಿಂದ “ರೋಗರುಜಿನಗಳು ವಿದ್ಯಾವಿಹೀನತೆಯು ನಿರ್ಮೂಲ ವಾಗಬೇಕೆಂದು ಸರ್ವಶಕ್ತಿಯನ್ನೂ ವಿನಿಯೋಗಿಸಿ ರಷ್ಯ ಬಡತನವನ್ನೂ ಅಜ್ಞಾನವನ್ನೂ ಹೊಡೆದೋಡಿಸಿದೆ. ಆ ಬೃಹತ್ಸಂಡ ತನ್ನ ಅಪಮಾನ ಅಳಿಸಿ ಹಾಕಿದೆ. ಅದರ ನಾಗರಿಕತೆಯಲ್ಲಿ ಪಂಗಡ ಪಂಗಡಕ್ಕೂ, ಜಾತಿ ಜಾತಿಗೂ ಯಾವ ಭೇದವೂ ಇಲ್ಲ. ಅತ್ಯಲ್ಪ ಕಾಲದಲ್ಲಿ ಅದು ಸಾಧಿಸಿದ ಪ್ರಗತಿಯಿಂದ ನನಗೆ