ಪುಟ:ಭಾರತ ದರ್ಶನ.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೮

ಭಾರತ ದರ್ಶನ

ಕಾಂಗ್ರೆಸ್ ಸರಕಾರಗಳ ಕೆಲಸವನ್ನೂ, ಪ್ರಗತಿಯ ಮಂದಗತಿಯನ್ನೂ ಕಂಡು ಕಟುವಾಗಿ ಟೀಕೆ ಮಾಡಿದೆ ; ಕೋಪಗೊಂಡೆ; ಆದರೆ ಈಗ ನೋಡಿದರೆ ಕೇವಲ ಇಪ್ಪತ್ತೇಳು ತಿಂಗಳುಗಳಲ್ಲಿ ಅವರ ಸುತ್ತಲಿದ್ದ ಅಸಂಖ್ಯಾತ ಆತಂಕಗಳ ಮಧ್ಯೆ ಇವರು ಸಾಧಿಸಿದ ಪ್ರಗತಿಯು ಆಶ್ಚರ್ಯವೆನಿಸುತ್ತದೆ. ದುರದೃಷ್ಟದಿಂದ ಅವರ ಕೆಲವು ಮುಖ್ಯ ಕಾರ್ಯಕ್ರಮಗಳು ಫಲಕಾರಿಯಾಗಲಿಲ್ಲ ; ಅಷ್ಟರಲ್ಲಿಯೇ ಅವರು ಅಧಿಕಾರತ್ಯಾಗ ಮಾಡಬೇಕಾಯಿತು. ಅನಂತರ ಅವರ ಸ್ಥಾನ ಆಕ್ರಮಿಸಿದ ಗೌರರ್ ಅವೆಲ್ಲವನ್ನೂ ಕಸದ ಬುಟ್ಟಿಗೆ ಹಾಕಿದ. ರೈತರಿಗೂ, ಕಾರ್ಮಿಕರಿಗೂ ಉಪಯೋಗವಾಗಿ ಅವರ ಶಕ್ತಿಯು ಬೆಳೆಯಿತು. ಅತಿಮುಖ್ಯವೂ, ಪರಿಣಾಮಕಾರಿಯೂ ಆದ ಒಂದು ಸಾಧನೆ ಎಂದರೆ ಜನತಾ ವಿದ್ಯಾಭ್ಯಾಸಕ್ಕೆಂದು ಆಚರಣೆಗೆ ತಂದ ಮೂಲ ಶಿಕ್ಷಣ ಪದ್ಧತಿ. ಇದು ಆಧುನಿಕ ಶಿಕ್ಷಣ ತತ್ವಕ್ಕನುಗುಣವಾಗಿತ್ತು ಮಾತ್ರವಲ್ಲದೆ ಭಾರತೀಯ ಸ್ಥಿತಿಗತಿಗೂ ಬಹಳ ಉಚಿತವಿತ್ತು.

ಪ್ರತಿಯೊಂದು ಪ್ರತಿಗಾಮಿ ಶಕ್ತಿಯೂ ಪ್ರಗತಿಸಾಧನೆಯನ್ನು ವಿರೋಧಿಸಿತು, ಸಂಯುಕ್ತ ಪ್ರಾಂತ ಸರಕಾರವು ಕಾನ್ಸುರದ ಗಿರಣಿ ಕೆಲಸಗಾರರ ಸ್ಥಿತಿಗತಿಗಳನ್ನು ವಿಚಾರಿಸಲು ನೇಮಿಸಿದ ಸಮಿತಿಯನ್ನು ಯುರೋಪಿಯನ್ ಮತ್ತು ಭಾರತೀಯ ಬಂಡವಾಳಗಾರರು ತೃಣೀಕರಿಸಿದರು. ಸಮಿತಿಯು ಕೇಳಿದ ಅಂಕಿ ಅಂಶಗಳನ್ನು ಒದಗಿಸಲು ಸಹ ನಿರಾಕರಿಸಿದರು. ಬಂಡವಾಳಗಾರರು ಮತ್ತು ಸರಕಾರ ಇಬ್ಬರೂ ಒಟ್ಟಿಗೆ ಬಹುಕಾಲದಿಂದ ಕೂಲಿಗಾರರ ವಿರುದ್ದವಿದ್ದರು. ಪೊಲೀಸರು ಸದಾ ಬಂಡವಾಳಗಾರರ ಕೈಗೊಂಬೆಗಳಾಗಿದ್ದರು. ಕಾಂಗ್ರೆಸ್ ಸರಕಾರಗಳ ಹೊಸ ಧೋರಣೆಯು ಬಂಡವಲಗಾರರಿಗೆ ಸರಿಬೀಳಲಿಲ್ಲ. ಕೂಲಿಗಾರ ಸಮಸ್ಯೆಯಲ್ಲಿ ದೀರ್ಘಕಾಲದ ಅನುಭವ ಪಡೆದವರೂ, ಮಿತವಾದಿಗಳೂ ಆದ ಶ್ರೀ ಬಿ. ಶಿವರಾಯರು ಬಂಡವಲಗಾರರು ಅನುಸರಿಸುವ ನೀತಿಯ ವಿಷಯದಲ್ಲಿ “ಮುಷ್ಕರ ಸಮಯದಲ್ಲಿ ಪೊಲೀಸರ ಸಹಾಯದಿಂದ ಬಂಡವಲಗಾರರು ತೋರುವ ಚಾಣಕ್ಯ ತಂತ್ರ ಮತ್ತು ಅನೈತಿಕಮಟ್ಟವನ್ನು ಭಾರತದ ಸ್ಥಿತಿಗತಿಗಳನ್ನು ತಿಳಿದವರಿಗೆ ಮಾತ್ರವಲ್ಲದೆ ಇತರರಿಗೆ ನಂಬಲು ಸಹ ಸಾಧ್ಯವಿಲ್ಲ' ಎನ್ನುತ್ತಾರೆ. ಈಗಿರುವಂತೆ ಎಲ್ಲ ದೇಶಗಳಲ್ಲೂ ಸರಕಾರವು ಬಂಡವಲಗಾರರ ಕಡೆಯೇ ಒಲಿದಿದೆ. ಶ್ರೀ ಶಿವರಾಯರು ಭಾರತದಲ್ಲಿ ಇನ್ನೊಂದು ಹೆಚ್ಚಿನ ಕಾರಣ ತೋರಿಸುತ್ತಾರೆ. “ವೈಯಕ್ತಿಕ ವಿರೋಧವಲ್ಲದೆ ಭಾರತದ ಅಧಿಕಾರಿಗಳು ಕಾಮಗಾರ ಸಂಘಗಳಿಗೆ ಹೆದರಿದ್ದಾರೆ. ಸಂಘಗಳು ಬೆಳೆದಂತೆ ಜನಜಾಗ್ರತಿ ಆಗುತ್ತೆಂಬುದೇ ಆ ಭಯಕ್ಕೆ ಕಾರಣ; ಮೇಲಿಂದ ಮೇಲೆ ಅಸಹಕಾರ, ಸತ್ಯಾಗ್ರಹ ಚಳುವಳಿಗಳು ಉದ್ಭವಿಸುತ್ತಿರುವಾಗ ಜನಜಾಗೃತಿಯನ್ನುಂಟುಮಾಡಿ ಜನತೆಯನ್ನು ಸಂಘಟಿಸುವ ಕಾರ್ಯಕ್ರಮ ಎಲ್ಲವೂ ಅಪಾಯಕರವೆಂದೇ ಅವರ ಅಭಿಪ್ರಾಯ".

ಸರಕಾರಗಳು ನೀತಿಯನ್ನು ನಿರ್ಧರಿಸುತ್ತವೆ; ಶಾಸನ ಸಭೆಗಳು ಶಾಸನ ಮಾಡುತ್ತವೆ. ಆದರೆ ನೀತಿಯನ್ನು ಕಾರ್ಯಗತಮಾಡಿ ಶಾಸನವನ್ನು ಆಚರಣೆಗೆ ತರುವವರು ಅಧಿಕಾರಿಗಳು ಮತ್ತು ನೌಕರರು. ಎಲ್ಲ ಪ್ರಾಂತ ಸರಕಾರಗಳೂ ಈ ಕಾವ್ಯದಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಮತ್ತು ಪೊಲೀಸ್ ಅಧಿಕಾರಿಗಳನ್ನೇ ನಂಬಬೇಕಾಗಿತ್ತು. ಬೇರೊಂದು ಅಧಿಕಾರ ದರ್ಪದ ವಾತಾವರಣದಲ್ಲಿ ಬೆಳೆದ ಈ ಅಧಿಕಾರಿಗಳು ಹೊಸ ಸನ್ನಿವೇಶವನ್ನೂ, ಜನರ ಜಾಗ್ರತಿಯ ಒತ್ತಾಯದ ಮನೋಭಾವವನ್ನೂ, ತಮಗಿದ್ದ ಪ್ರಾಮುಖ್ಯತೆಯ ಇಳಿಮುಖವನ್ನೂ ಮತ್ತು ಇದುವರೆಗೆ ತಾವೇ ಬಂಧಿಸಿ ಸೆರೆಮನೆಯಲ್ಲಿಡುತ್ತಿದ್ದ ಜನರ ಅಧೀನದಲ್ಲಿ ಕೆಲಸಮಾಡಬೇಕಾಗಿ ಬಂದುದನ್ನೂ ಸಹಿಸಲಿಲ್ಲ. ಮುಂದೆ ಏನಾಗುತ್ತದೆಯೋ ಎಂಬ ಭಯವು ಆರಂಭದಲ್ಲಿ ಅವರಿಗೆ ಇತ್ತು. ಆದರೆ ಯಾವ ಕ್ರಾಂತಿಯೂ ಆಗದ ಕಾರಣ ಪುನಃ ತಮ್ಮ ಹಳೆಯ ಸಂಪ್ರದಾಯವನ್ನೇ ಹಿಡಿದರು. ಸ್ಥಳದ ಅಧಿಕಾರಿಯ ವಿರುದ್ದ ಹೋಗುವುದು ಮಂತ್ರಿಗಳಿಗೆ ಕಷ್ಟವಿತ್ತು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಾಧ್ಯವಿತ್ತು, ಅಧಿಕಾರಿವರ್ಗವು ಒಂದು ಸುಸಂಘಟಿತ ಸಂಸ್ಥೆಯಾಗಿತ್ತು. ಅವರಲ್ಲಿ ಭಿನ್ನಾಭಿಪ್ರಾಯವಿರಲಿಲ್ಲ; ಒಬ್ಬನನ್ನು ವರ್ಗಮಾಡಿದರೆ, ಆತನ ನಂತರ ಬಂದವನ ನೀತಿಯು ಅದೇ ಇರುತ್ತಿತ್ತು. ಅಧಿಕಾರವರ್ಗದ ಹಳೆಯ ಪ್ರಗತಿಗಾಮಿ ಮತ್ತು ದರ್ಪದ ಮನೋಭಾವವನ್ನು