ಪುಟ:ಭಾರತ ದರ್ಶನ.djvu/೩೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೫೮
ಭಾರತ ದರ್ಶನ

ಹೆಚ್ಚುವರಿಯಿಂದ ನಮಗೆ ಬೇಕಾದ ಮಾಲುಗಳನ್ನು ವಿನಿಮಯ ಮೂಲಕ ಪಡೆಯಬಹುದೆಂದು ನಿರ್ಧರಿಸಿದೆವು. ರವು ಪೇಟೆಗಳ ಮೇಲೆಯೇ ನಮ್ಮ ರಾಷ್ಟ್ರೀಯ ಆರ್ಥಿಕ ನೀತಿ ರಚನೆಯಾದರೆ ಇತರ ರಾಷ್ಟ್ರಗಳೊಡನೆ ಘರ್ಷಣೆಗೆ ಅವಕಾಶವಾಗಬಹುದು ಮತ್ತು ಆ ಪೇಟೆಗಳು ನಮಗೆ ಮುಚ್ಚಿದರೆ ಇದ್ದಕ್ಕಿದ್ದಂತೆ ನಮ್ಮ ರಚನೆಯೂ ಕುಸಿಯಬಹುದು.

ಈ ರೀತಿ ಒಂದು ಖಚಿತ ಸಾಮಾಜಿಕ ತತ್ವದಿಂದ ನಾವು ಕೆಲಸ ಆರಂಭಿಸದಿದ್ದರೂ, ನಮ್ಮ ಸಾಮಾಜಿಕ ಗುರಿ ಸ್ಪಷ್ಟವಿತ್ತು; ಆದ್ದರಿಂದ ನಮ್ಮ ಯೋಜನೆಗೆ ಒಂದು ಸಾಮಾನ್ಯ ತಳಹದಿಯೂ ದೊರೆಯಿತು. ಆದಷ್ಟು ನಿಯಮಬದ್ಧ ನಿಯಂತ್ರಣ ಮತ್ತು ಸಂಯೋಜನೆಯೇ ನಮ್ಮ ಯೋಜನೆಯ ತಿರುಳು. ಈ ರೀತಿ ಸ್ವಪ್ರಯತ್ನಕ್ಕೆ ಪೂರ್ಣ ಅವಕಾಶಕೊಟ್ಟು ಅದಕ್ಕೊಂದು ಎಲ್ಲೆ ಯನ್ನು ವಿಧಿಸಿದೆವು. ಸಂರಕ್ಷಣೆಯ ಕೈಗಾರಿಕೆಗಳೆಲ್ಲ ರಾಷ್ಟ್ರದ ಸ್ವತ್ತಾಗಿ ಸರಕಾರವೇ ನಡೆಸಬೇಕೆಂದು ತೀರ್ಮಾನಿಸಿದೆವು. ಇತರ ಮುಖ್ಯ ಮೂಲಕೈಗಾರಿಕೆಗಳು ರಾಷ್ಟ್ರದ ಸ್ವತ್ತಾಗಿರಬೇಕೆಂದು ಬಹುಮತವಿತ್ತು, ಆದರೆ ಪ್ರಬಲರಾದ ಅಲ್ಪಸಂಖ್ಯಾ ತರು ರಾಷ್ಟ್ರದ ನಿಯಂತ್ರಣಕ್ಕೆ ಒಳಗಾದರೆ ಸಾಕೆಂದು ಅಭಿಪ್ರಾಯ ಬಂದಿತು. ಆದರೆ ಈ ನಿಯಂತ್ರಣ ಬಿಗಿಯಾಗಿರಬೇಕೆಂದು ಒಪ್ಪಿದರು. ಸಾರ್ವಜನಿಕೋಪಯುಕ್ತ ಉದ್ಯಮಗಳು ಕೇಂದ್ರ ಸರಕಾರ, ಪ್ರಾಂತ್ಯ ಸರಕಾರ ಅಥವ ಸ್ಥಳೀಯ ಸಂಸ್ಥೆ ಈ ರೀತಿ ಯಾವುದಾದರೂ ರಾಜ್ಯಾಂಗಕ್ಕೆ ಸೇರಿರಬೇಕೆಂದು ತೀರ್ಮಾನ ಮಾಡಿದೆವು. “ಲಂಡನ್ ಟ್ರಾನ್ಸ್ ಪೋರ್ಟ್ ಬೋರ್ಡಿನಂತೆ ಒಂದು ಕೇಂದ್ರ ಸಂಸ್ಥೆ ಎಲ್ಲ ಸಾರ್ವಜನಿಕೋಪಯುಕ್ತ ಸಂಸ್ಥೆಗಳನ್ನು ನೋಡಿಕೊಳ್ಳಬೇಕೆಂದು ಸಲಹೆಬಂದಿತು. ಇನ್ನುಳಿದ ಮುಖ್ಯ ಕೈಗಾರಿಕೆಗಳ ವಿಷಯದಲ್ಲಿ ಯಾವ ನಿಬಂಧನೆಯನ್ನೂ ವಿಧಿಸಲಿಲ್ಲ. ಆದರೆ ಸಮಗ್ರ ಯೋಜನೆಯ ದೃಷ್ಟಿಯಿಂದ ಬೇರೆ ಬೇರೆ ಕೈಗಾರಿಕೆಗೆ ಬೇರೆ ಬೇರೆ ಬಗೆಯದಾದರೂ ಒಂದು ಬಗೆಯ ನಿಯಂತ್ರಣವಿರಬೇಕೆಂದು ತೀರ್ಮಾನಿಸಿದೆವು.

ಸರಕಾರದ ಸ್ವತ್ತಾಗಿ ನಡೆಯತಕ್ಕ ಕೈಗಾರಿಕೆಗಳೆಲ್ಲ ಸಾಮಾನ್ಯವಾಗಿ ಸ್ವತಂತ್ರ ಸಾರ್ವಜನಿಕ ಟ್ರಸ್ಟ್” ಗಳ ಆಡಳಿತದಲ್ಲಿ ಇರಬೇಕೆಂದು ಸಲಹೆಮಾಡಿದೆವು. ಇದರಿಂದ ಸಾರ್ವಜನಿಕ ಸ್ವಾಮ್ಯ ಮತ್ತು ಆಡಳಿತ ಭದ್ರವಿರುವುದಲ್ಲದೆ ಪ್ರಜಾಸತ್ತೆಯ ಆಡಳಿತದಲ್ಲಿ ಕಾಣಬಹುದಾದ ತೊಂದರೆ ಮತ್ತು ದಕ್ಷತೆಯ ಅಭಾವ ನಿವಾರಣೆ ಸಾಧ್ಯವಿತ್ತು. ಕೈಗಾರಿಕೆಗಳಿಗೆ ಸಹಕಾರ ಸಂಘಗಳ ಸ್ವಾಮ್ಯ ಮತ್ತು ಆಡಳಿತವಿರಬೇಕೆಂದು ಸೂಚಿಸಿದೆವು. ಎಲ್ಲ ಯೋಜನೆಗಳಲ್ಲಿ ಕೈಗಾರಿಕೋದ್ಯಮವು ಎಲ್ಲ ಶಾಖೆಗಳಲ್ಲೂ ಮುಂದುವರಿಯುವಂತೆ ಎಚ್ಚರಿಕೆಯಿಂದ ಪರಿಶೀಲಿಸಬೇಕು ; ಆಗಿಂದಾಗ ಎಷ್ಟರಮಟ್ಟಿಗೆ ಪ್ರಗತಿಯಾಗಿದೆ ಪರೀಕ್ಷಿಸಬೇಕು ; ಕೈಗಾರಿಕೆಗಳ ಹೆಚ್ಚಿನ ಬೆಳೆವಣಿಗೆಗೆ ಉದ್ಯೋಗ ಶಿಕ್ಷಣ ಪಡೆದ ಕುಶಲ ಕರ್ಮಿಗಳು ಬೇಕು ; ಅಂತಹ ಉದ್ಯೋಗ ಕುಶಲರಿಗೆ ಶಿಕ್ಷಣ ಕೊಡಲು ಸರಕಾರವು ಕೈಗಾರಿಕಾ ಕಾರ್ಖಾನೆಗಳನ್ನು ಕೇಳಬಹುದು ಎಂದು ಮುಂತಾಗಿ ಸೂಚಿಸಿದೆವು.

ವ್ಯವಸಾಯಕ್ಕೆ ಯೋಗ್ಯವಾದ ಭೂಮಿ, ಗಣಿಗಳು, ಕಲ್ಲುಗಣಿಗಳು, ಅರಣ್ಯ ಇವೆಲ್ಲ ರಾಷ್ಟ್ರದ ಸ್ವತ್ತಾಗಿ ಭಾರತ ಜನತೆಯ ಒಟ್ಟು ಆಸ್ತಿಯಾಗಿ ಇರಬೇಕೆಂದು ನಮ್ಮ ಭೂನೀತಿಯಾಯಿತು. ಹೊಸ ಭೂಮಿಯನ್ನು ಸಾಗುವಳಿಗೆ ತರುವಾಗ ಸಹಕಾರ ತತ್ತ್ವದ ಮೇಲೆ ಸಾಮೂಹಿಕ ವ್ಯವಸಾಯ ಕೇಂದ್ರ ಏರ್ಪಡಿಸಬೇಕೆಂದು ತೀರ್ಮಾನಿಸಿದೆವು. ಆರಂಭದಲ್ಲಿ ಸ್ವತಃ ಸಾಗುವಳಿಮಾಡುವ ಸಣ್ಣ ಸಣ್ಣ ಹಿಡುವಳಿಗಳಿಗೆ ಯಾವ ತೊಂದರೆಯೂ ಇರಕೂಡದೆಂದೂ ಆದರೆ ಅಂತರದ ಕಾಲ ಮುಗಿದನಂತರ ತಾಲ್ಲೂಕುದಾರರು ಜಮಾನುದಾರರು ಮುಂತಾದ ಯಾವ ಮಧ್ಯಸ್ಥಗಾರರೂ ಇರಕೂಡದೆಂದು ತೀರ್ಮಾನಿಸಿದೆವು. ಇವರ ಹಕ್ಕು ಬಾಧ್ಯತೆಗಳನ್ನು ಸರಕಾರವು ಕೊಂಡುಕೊಳ್ಳತಕ್ಕದ್ದು ; ವ್ಯವಸಾಯಕ್ಕೆ ಯೋಗ್ಯವಿರುವ ಬೀಳುಜಮಿಾನುಗಳಲ್ಲಿ ಸಾಮೂಹಿಕ ವ್ಯವಸಾಯಕೇಂದ್ರಗಳನ್ನು ಕೂಡಲೆ ಸರಕಾರವು ಸ್ಥಾಪಿಸಬೇಕು ; ಬೇರೆ ಬೇರೆ ಹಿಡುವಳಿದಾರರು, ಅಥವ ಜಂಟ ಹಿಡುವಳಿದಾರರು ಸಹಕಾರ ತತ್ವದಮೇಲೆ ವ್ಯವಸಾಯ ಮಾಡಬಹುದು ; ಬೇರೆ ಬೇರೆ ಬಗೆಯ ವ್ಯವಸಾಯ ಪದ್ಧತಿಗಳು ಮುಂದುವರಿದು ಅನುಭವ ದೊರೆತಂತೆ ಬೇಕಾದ ಪದ್ಧತಿಗೆ ಪ್ರೋತ್ಸಾಹಕೊಡಲು ಸ್ವಲ್ಪ ಕಾಲಾವಕಾಶಕೊಡಬಹುದು ಎಂದು ಸಲಹೆಮಾಡಿದೆವು.