ಪುಟ:ಭಾರತ ದರ್ಶನ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೦

ಭಾರತ ದರ್ಶನ

ಆದರ್ಶವಿಟ್ಟುಕೊಂಡು ರೂಪರೇಖೆ ರಚಿಸುವುದು ಸುಲಭವಿತ್ತು. ಆದರೆ ಆ ಯೋಜನೆಯು ತೃಪ್ತಿಕರವಾಗಿ ಕಾರ್ಯಗತವಾಗಲು ಅವಶ್ಯವಾದ ಸಾಮಾನ್ಯ ಒಪ್ಪಿಗೆ ಮತ್ತು ಸಮ್ಮತಿ ದೊರಕುವುದು ಇನ್ನೂ ಕಷ್ಟ ತಮಕೆಲಸ.

ಯೋಜನೆಯಿಂದ ಬಹುಮಟ್ಟಿನ ನಿಯಂತ್ರಣ, ಮತ್ತು ವ್ಯಕ್ತಿ ಸ್ವಾತಂತ್ರಕ್ಕೆ ಸ್ವಲ್ಪ ಲೋಪ ಬಂದಾಗ್ಯೂ ಇಂದಿನ ಭಾರತದ ಸ್ಥಿತಿಯಲ್ಲಿ ಅದು ಹೆಚ್ಚಿನ ಸ್ವಾತಂತ್ರಕ್ಕೆ ಮಾರ್ಗವಾಗುತ್ತದೆ. ಕಳೆದುಕೊಳ್ಳಲು ನಮಗೆ ಸ್ವಾತಂತ್ರ್ಯವೇ ಇಲ್ಲ. ನಮಗೆ ಇಂದು ಬೇಕಾದುದೇ ಸ್ವಾತಂತ್ರ ಪ್ರಜಾಸತ್ತಾತ್ಮಕ ರಾಜ್ಯ ಸ್ಥಾಪಿಸಿ ಸಹಕಾರೋದ್ಯಮಗಳಿಗೆ ಪ್ರೋತ್ಸಾಹವಿತ್ತರೆ ಅಧಿಕಾರ ಶಕ್ತಿಯ ಕೇಂದ್ರೀಕರಣ ಮತ್ತು ಒಂದೇ ಪಡಿಯಚ್ಚಿನ ಅಪಾಯಗಳನ್ನು ತಡೆಗಟ್ಟಬಹುದು.

ಮೊದಲನೆಯ ನನ್ನ ಅಧಿವೇಶನದಲ್ಲಿಯೇ ಒಂದು ದೊಡ್ಡ ಸಮಗ್ರ ಪ್ರಶ್ನೆ ಪತ್ರಿಕೆ ಹೊರಡಿಸಿ ಬೇರೆ ಬೇರೆ ಸರಕಾರಗಳಿಗೆ, ವಿಶ್ವವಿದ್ಯಾನಿಲಯಗಳಿಗೆ ವರ್ತಕ ಸಂಘಗಳಿಗೆ ಸಂಶೋಧನಾಲಯಗಳಿಗೆ ಕಳುಹಿಸಿಕೊಟ್ಟೆವು. ನಿರ್ದಿಷ್ಟ ವಿಷಯಗಳ ಪೂರ್ಣ ಪರಿಶೀಲನೆಗೆ ಇಪ್ಪತ್ತೊಂಬತ್ತು ಉಪಸಮಿತಿಗಳನ್ನು ನೇಮಿಸಿದೆವು ; ಇವುಗಳಲ್ಲಿ ವ್ಯವಸಾಯ ಸಂಬಂಧ ವಿಷಯಗಳಿಗೆ ಎಂಟು ಸಮಿತಿಗಳು, ಕೈಗಾರಿಕೆಗಳಿಗೆ ಕೆಲವು ವಾಣಿಜ್ಯ ಹಣಕಾಸಿಗೆ ಐದು, ಸಂಚಾರ ಸೌಕಯ್ಯಕ್ಕೆ ಎರಡು, ಸಾರ್ವಜನಿಕ ಸ್ವಾಸ್ಥದ ಬಗೆಗೆ ಎರಡು ಜನಾಂಗ ಸ್ಥಿತಿ ಅಭ್ಯಸಿಸಲು ಎರಡು, ರಾಷ್ಟಜೀವನದ ಯೋಜನೆಯಲ್ಲಿ ಮಹಿಳೆಯರ ಪಾತ್ರ ನಿರ್ಧರಿಸಲು ಒಂದು. ಈ ಉಪಸಮಿತಿಗಳ ಸದಸ್ಯ ಸಂಖ್ಯೆ ೩೫೦ ಇತ್ತು ; ಕೆಲವರು ಒಂದಕ್ಕಿಂತ ಹೆಚ್ಚು ಸಮಿತಿಗಳಲ್ಲಿ ಇದ್ದರು. ಅವರಲ್ಲಿ ಅನೇಕರು ತಮ್ಮ ತಮ್ಮ ವಿಷಯಗಳಲ್ಲಿ ಪ್ರಾಜ್ಞರು-ವಣಿಕ ಶ್ರೇಷ್ಠರು, ಸರಕಾರದ ಸಂಸ್ಥಾನಗಳ, ಸ್ಥಳೀಯ ಸಂಸ್ಥಾನಗಳ, ಸ್ಥಳೀಯ ಸಂಸ್ಥೆಗಳ ಉನ್ನತ ಅಧಿಕಾರಿಗಳು, ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಮತ್ತು ಶಾಸ್ತ್ರಜ್ಞರು, ಕರ್ಮಕುಶಲರು, ವಿಜ್ಞಾನಿಗಳು, ಕೂಲಿಗಾರ ಸಂಘಗಳ ಪ್ರತಿ ನಿಧಿಗಳು ಮತ್ತು ಸಾರ್ವಜನಿಕ ಪ್ರಮುಖರು ಇದ್ದರು. ದೇಶದ ಘಟಾನುಘಟ ವ್ಯಕ್ತಿಗಳನ್ನೆಲ್ಲಾ ಈ ರೀತಿ ತಡೆಹಾಕಿದೆವು. ವ್ಯಕ್ತಿಶಃ ನಮ್ಮೊಂದಿಗೆ ಕೆಲಸಮಾಡಲು ಇಷ್ಟ ಪಟ್ಟರೂ ನಾವು ಬಿಟ್ಟವರೆಂದರೆ ಇಂಡಿಯಾ ಸರಕಾರದ ಅಧಿಕಾರಿಗಳು, ಇಷ್ಟು ಜನರು ನಮ್ಮೊಂದಿಗೆ ಸಹಕರಿಸ ಬಂದುದು ತುಂಬ ನಮಗೆ ಪ್ರಯೋ ಜನವಾಯಿತು. ಅದರ ವಿಶೇಷ ಜ್ಞಾನಸಂಪತ್ತು ಮತ್ತು ಅನುಭವ ನಮಗೆ ಒದಗಿದವು ; ರಾಷ್ಟ್ರದ ಬೃಹತ್ಸಮಸ್ಯೆಯ ದೃಷ್ಟಿಯಿಂದ ತಮ್ಮ ವಿಶಿಷ್ಟ ವಿಷಯ ಪರಿಶೀಲಿಸಬೇಕೆಂದು ಅವರಿಗೆ ತಿಳಿಸಿದೆವು. ಈ ಯೋಚನೆಯಲ್ಲಿ ದೇಶಾದ್ಯಂತ ಒಂದು ವಿಶೇಷ ಆಸಕ್ತಿ ಹುಟ್ಟಿತು. ಅದರ ಈ ದೊಡ್ಡ ಸದಸ್ಯ ಸಂಖ್ಯೆಯಿಂದ ತೊಂದರೆಯೂ ಇತ್ತು ; ದೇಶದ ಮೂಲೆ ಮೂಲೆಯಿಂದ ಕೆಲಸ ಬಾಹುಳ್ಯದ ಜನರು ಪದೇ ಪದೇ ಸೇರಲು ಕಾಲವಿಳಂಬವಾಗುತ್ತಿತ್ತು.

ರಾಷ್ಟ್ರ ಜೀವನದ ವಿವಿಧ ಕಾರಚಟುವಟಿಕೆಗಳಲ್ಲಿ ಇಷ್ಟು ಶ್ರೇಷ್ಠ ಕಾವ್ಯಶಕ್ತಿ ಮತ್ತು ಉತ್ಸಾಹ ಕಂಡು ನನಗೆ ಧೈರ್ಯಬಂದಿತು ; ಈ ಪರಿಚಯದಿಂದ ನನ್ನ ಆತ್ಮ ಶಿಕ್ಷಣವೂ ಉತ್ತಮಗೊಂಡಿತು. ಪ್ರತಿಯೊಂದು ಉಪಸಮಿತಿಯಿಂದ ಒಂದು ಮಧ್ಯವರ್ತಿ ವರದಿ ತರಿಸಿ, ಒಪ್ಪುವುದನ್ನು ಒಪ್ಪಿ, ವಿಮರ್ಶೆ ಮಾಡ ಬೇಕಾದ್ದನ್ನು ಮಾಡಿ, ಪುನಃ ಉಪಸಮಿತಿಗೆ ನಮ್ಮ ಟೀಕೆಗಳೊಂದಿಗೆ ಕಳುಹಿಸಬೇಕೆಂದು ಕಾಠ್ಯಕ್ರಮ ಗೊತ್ತುಮಾಡಿದ್ದೆವು. ಆಮೇಲೆ ಅವರ ಕೊನೆಯ ವರದಿ ಅದನ್ನಿಟ್ಟುಕೊಂಡು ಆ ವಿಷಯದ ಮೇಲೆ ಪುನಃ ನಾವು ತೀರ್ಮಾನಕ್ಕೆ ಬರುತ್ತಿದ್ದೆವು. ಪ್ರತಿಯೊಂದು ವಿಷಯದ ಮೇಲೆ ಮೇಲಿನ ತೀರ್ಮಾನವನ್ನೂ, ಇತರ ವಿಷಯಗಳ ಮೇಲೆ ತೆಗೆದುಕೊಂಡ ತೀರ್ಮಾನಗಳಿಗೆ ಅನುಗುಣವಾಗಿರುವಂತೆ ಸತತ ಪ್ರಯತ್ನ ಮಾಡುತ್ತಿದ್ದೆವು. ಈ ರೀತಿ ಎಲ್ಲ ವಿಷಯಗಳ ಮೇಲಿನ ಅಂತಿಮ ವರದಿಗಳನ್ನು ಯೋಚಿಸಿ ತೀರ್ಮಾನಿಸಿದ ಮೇಲೆ ಯೋಜನಾ ಸಮಿತಿಯು ಸಮಗ್ರ ಯೋಜನೆಯ ವೈಶಾಲ್ಯ, ಮತ್ತು ಜಟಿಲತೆಗಳ ಪೂರ್ಣ ಚಿತ್ರ ಪರಿಶೀಲಿಸಿ ತನ್ನದೇ ಆದ ಸಮಗ್ರವರದಿ ಕೊಡಬೇಕೆಂದೂ ಉಪಸಮಿತಿಗಳ ವರದಿಗಳು ಅದರ ಪರಿಶಿಷ್ಟಗಳಾಗಿರಬೇಕೆಂದೂ ತೀರ್ಮಾನಿಸಿದೆವು. ನಾವು ಉಪಸಮಿತಿಗಳ ವರದಿಗಳನ್ನು ಪರಿಶೀಲಿ ಸುತ್ತಿದ್ದಾಗ ನಮ್ಮ ಅಂತಿಮ ವರದಿಯ ರೂಪುರೇಖೆಯೂ ತಾನಾಗಿ ಖಚಿತಗೊಳ್ಳುತ್ತಲಿತ್ತು.