ಪುಟ:ಭಾರತ ದರ್ಶನ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೮

ಭಾರತ ದರ್ಶನ

ಚಳುವಳಿಯನ್ನು ಬೇರೆ ಎಲ್ಲಿಯೂ ನಾನು ಕಂಡಿಲ್ಲ. ಗಾಂಧೀಜಿ ಪೂರ್ಣ ರಾಷ್ಟ್ರೀಯವಾದಿ. ಆದರೂ ತಮ್ಮ ಸಂದೇಶ ಭಾರತಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆಂದು ತಿಳಿದಿದ್ದರು ; ಪ್ರಪಂಚ ಶಾಂತಿಗಾಗಿ ಸದಾ ಕಾತುರರಿದ್ದರು. ಆದ್ದರಿಂದ ಅವರ ರಾಷ್ಟ್ರೀಯ ಭಾವನೆಗೆ ಪ್ರಪಂಚ ಹಿತದ ದೃಷ್ಟಿ ಇತ್ತು; ಆದ್ದರಿಂದ ಅದರಲ್ಲಿ ಯಾವ ದೌರ್ಜನ್ಯಭಾವನೆಯೂ ಇರಲಿಲ್ಲ. ಭಾರತದ ಸ್ವಾತಂತ್ರ ಬಯಸುತ್ತಿರುವಾಗಲೇ, ಅದು ಎಷ್ಟೇ ದೂರವಿರಲಿ ಪ್ರಪಂಚಕ್ಕೆಲ್ಲ ಎಲ್ಲ ಸ್ವತಂತ್ರ ರಾಷ್ಟ್ರಗಳನ್ನೊಳಗೊಂಡ ಸಂಯುಕ್ತ ರಾಜ್ಯ ವಿಧಾನ ಬಂದರೇನೆ ಪ್ರಪಂಚದ ಶಾಂತಿ ಎಂದು ನಂಬಿದ್ದರು. ನನ್ನ ರಾಷ್ಟ್ರೀಯ ಭಾವನೆ ಎಂದರೆ ನನ್ನ ದೇಶ ಸ್ವತಂತ್ರವಾಗಲೆಂದು ; ಮಾನವ ಕುಲದ ಉದ್ಧಾರಕ್ಕೆ ಅವಶ್ಯ ಕಂಡರೆ ಭಾರತೀಯರೆಲ್ಲ ನಾಶ ಹೊಂದಿದರೂ ಹೊಂದಲೆಂದು; ಇಲ್ಲಿ ಯಾವ ಜನಾಂಗ ದ್ವೇಷಕ್ಕೂ ಎಡೆ ಇಲ್ಲ. ಇದೇ ನಮ್ಮ ರಾಷ್ಟ್ರೀಯ ಭಾವನೆಯಾಗಿರಲಿ” ಎಂದು ಹೇಳಿದ್ದರು. “ಇಡೀ ಪ್ರಪಂಚದ ದೃಷ್ಟಿಯಿಂದ ನೋಡಬೇಕೆಂದೇ ನನ್ನ ಉದ್ದೇಶ. ನನ್ನ ದೇಶವಾತ್ಸಲ್ಯದಲ್ಲಿ ಮಾನವ ಕುಲ ಆಡಗಿದೆ. ಆದ್ದರಿಂದ ಭಾರತದ ಸೇವೆ ಎಂದರೆ ಮಾನವ ಕುಲದ ಸೇವೆ. ಪ್ರಪಂಚದ ರಾಷ್ಟ್ರಗಳ ಗುರಿಯು ಪ್ರತ್ಯೇಕ ಮನೋಭಾವದ ಸ್ವಾತಂತ್ರವಾಗಿ ಇರಕೂಡದು. ಸ್ವಯಂಪ್ರೇರಿತ ಪರಸ್ಪರಾವಲಂಬನೆಯೇ ಗುರಿಯಾಗಬೇಕು. ಪ್ರಪಂಚದ ಇಂದಿನ ಉನ್ನತ ಭಾವನೆಯು ಒಂದಕ್ಕೊಂದು ಕಾದಾಡುವ ಪೂರ್ಣ ಸ್ವತಂತ್ರ ರಾಷ್ಟ್ರಗಳು ಇರಬೇಕೆಂದಲ್ಲ; ಆದರೆ ಸ್ನೇಹ ಭಾವನೆಯಿಂದ ಪರಸ್ಪರ ಅವಲಂಬನೆಯಿಂದ ಬಾಳುವ ಸ್ವತಂತ್ರ ರಾಷ್ಟ್ರಗಳ ಸಂಯುಕ್ತ ಆಡಳಿತ ವಾಗಲೆಂದು; ಈ ಆಸೆ ಫಲಿಸಲು ಬಹುಕಾಲ ಹಿಡಿಯಬಹುದು. ನನ್ನ ದೇಶಕ್ಕಾಗಿ ಯಾವ ಮಹತ್ವದ ಬೇಡಿಕೆಯನ್ನೂ ನಾನು ಕೇಳುತ್ತಿಲ್ಲ. ಪ್ರತ್ಯೇಕ ಮನೋಭಾವನೆಯ ಸ್ವಾತಂತ್ರ್ಯಕ್ಕೆ ಪ್ರತಿಯಾಗಿ ಪ್ರಪಂಚದಲ್ಲಿ ಪರಸ್ಪರ ಅವಲಂಬನೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳುವುದರಲ್ಲಿ ಅಸಾಧ್ಯ ಅಥವ ಅತಿ ಮಹತ್ವದ ಬೇರೆ ಯಾವುದೂ ನನಗೆ ಕಾಣುವುದಿಲ್ಲ. ಇತರರ ಎದುರು ನನ್ನ ಸ್ವಾತಂತ್ರ ಮೆರೆಸುವುದಕ್ಕಿಂತ ಪೂರ್ಣ ಸ್ವತಂತ್ರನಾಗಲು ಶಕ್ತಿಯಿದ್ದರೆ ನನಗೆ ಸಾಕು” ಎಂದು ಹೇಳಿದರು.

ರಾಷ್ಟ್ರೀಯ ಆಂದೋಲನದ ಶಕ್ತಿಯೂ, ನಮ್ಮ ಆತ್ಮವಿಶ್ವಾಸವೂ ಬೆಳೆದಂತೆ ಅನೇಕರು ಸ್ವತಂತ್ರ ಭಾರತದ ಸ್ವರೂಪ, ಕಾರ್ಯನೀತಿ, ವಿದೇಶಾಂಗ ನೀತಿ ಇವುಗಳ ವಿಷಯ ಯೋಚಿಸಲಾರಂಭಿಸಿದರು. ಭಾರತದ ದೇಶ ವೈಶಾಲ್ಯ, ಅದರ ಅದ್ಭುತ ಅಂತಶ್ಯಕ್ತಿ, ಅಪಾರ ಪ್ರಕೃತಿ ಸಂಪತ್ತುಗಳೇ ಆ ದೊಡ್ಡ ಯೋಚನೆಗಳ ಕಡೆ ಅವರ ಮನಸ್ಸನ್ನು ತಿರುಗಿಸಿದವು. ಯಾವ ಒಂದು ದೇಶ ಅಥವ ರಾಷ್ಟ್ರಗಳ ಗುಂಪಿನ ಬಾಲ ಬಡಿದಿರಲೂ ಭಾರತಕ್ಕೆ ಸಾಧ್ಯವಿರಲಿಲ್ಲ. ಆದ್ದರಿಂದ ಇಂಗ್ಲೆಂಡ್ ಮತ್ತು ಅದರ ಸಾಮ್ರಾಜ್ಯದ ಸಂಬಂಧ ಕಡಿದುಕೊಂಡು ಪೂರ್ಣ ಸ್ವಾತಂತ್ರದ ಗುರಿ ಸಾಧಿಸುವುದು ಅನಿವಾರ್ಯವಾಯಿತು. ಭಾರತದ ಸ್ವಾತಂತ್ರವೂ, ಪ್ರಗತಿಯೂ ಏಷ್ಯದಲ್ಲಿ ಮತ್ತು ಇಡೀ ಪ್ರಪಂಚದಲ್ಲಿ ಮಹತ್ಪರಿಣಾಮಕಾರಕ ಸಂಗತಿಗಳಾ ದವು. ಸ್ವಾತಂತ್ರಕ್ಕೆ ಸಮಾನವಾದ ಡೊಮಿನಿರ್ಯ ಸ್ಟೇಟಸ್ ಸಹ ಅರ್ಥರಹಿತ ಬಂಧನವೆಂದೂ ಪೂರ್ಣ ಪ್ರಗತಿಗೆ ಆತಂಕವೆಂದೂ ತೋರಿತು. ಡೊಮಿನಿಯನ್ ಸ್ಟೇಟಸ್‌ನ ಹಿಂದೆ ಇಂಗ್ಲೆಂಡ್ ಹಿರಿಯ ತಾಯಿ, ಉಳಿದ ಡೊಮಿನಿರ್ಯಗಳೆಲ್ಲ ಅದರ ಮಕ್ಕಳು; ತಾಯಿ ಮಕ್ಕಳಂತೆ ಒಂದೇ ಸಂಸ್ಕೃತಿಯ ಸಂಬಂಧವಿದೆ ಎಂಬ ಭಾವನೆಯು ಭಾರತಕ್ಕೆ ಎಷ್ಟರಮಟ್ಟಿಗೂ ಅನ್ವಯಿಸುವಂತೆ ಇರಲಿಲ್ಲ. ಅದರ ಫಲವಾಗಿ ದೊರೆಯುವ ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರ ಎಷ್ಟೇ ಅಪೇಕ್ಷಣೀಯವಾದರೂ ಸಾಮ್ರಾಜ್ಯ ಅಥವ ಕಾಮನ್‌ವೆಲ್‌ನ ಹೊರಗಿನ ರಾಷ್ಟ್ರಗಳೊಂದಿಗೆ ಅಷ್ಟರಮಟ್ಟಿನ ಸಹಕಾರವಿಲ್ಲವೆಂದೇ ಅದರ ಅರ್ಥ. ಆದ್ದರಿಂದ ಅದು ನಮಗೆ ಒಂದು ದೊಡ್ಡ ತೊಂದರೆ ಎಂದು ತೋರಿತು. ನಮ್ಮ ಭಾವನೆಗಳೆಲ್ಲ ಯಾವ ಮಿತಿಯೂ ಇಲ್ಲದ ವಿಶಾಲ ವಿಶ್ವ ಸಹಕಾರದ ಕಡೆ ಒಲಿದಿದ್ದವು. ಅದರಲ್ಲೂ ನಮ್ಮ ಪೂರ್ವ ಮತ್ತು ಪಶ್ಚಿಮ ಗಡಿಗಳ ನೆರೆಯ ರಾಷ್ಟ್ರ ಗಳೊಂದಿಗೆ ಚೀಣ, ಆಫ್ಘಾನಿಸ್ತಾನ, ಇರಾಣ ಮತ್ತು ಸೋವಿಯಟ್ ಯೂನಿರ್ಯಗಳೊಂದಿಗೆ ಸ್ನೇಹ ದಿಂದ ಇರಲು ಬಯಸಿದೆವು. ದೂರದ ಅಮೆರಿಕೆಯೊಂದಿಗೂ ಸ್ನೇಹದಿಂದಿರಬೇಕೆಂದೆವು. ಅಮೆರಿಕ ಮತ್ತು ರಷ್ಯಾದಿಂದ ನಾವು ಕಲಿಯಬೇಕಾದ್ದು ಇನ್ನು ಏನೂ ಇಲ್ಲವೆಂಬ ಭಾವನೆ ನಮ್ಮಲ್ಲಿ ಬೆಳೆದಿತ್ತು.