ಪುಟ:ಭಾರತ ದರ್ಶನ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮೮

ಭಾರತ ದರ್ಶನ

ಪಾರ್ಲಿಮೆಂಟ್ ಒಂದು ತಿದ್ದುಪಡಿ ಒಪ್ಪಿ ಪ್ರಾಂತಗಳ ಆ ವಿಧಾಯಕ ಅಧಿಕಾರವನ್ನೂ ಕಸಿದುಕೊಂಡಿತು. ಪ್ರಾಂತಗಳಲ್ಲಿ ಯಾವಾಗ ಎಷ್ಟರಮಟ್ಟಿಗೆ ಪ್ರವೇಶ ಮಾಡಬೇಕೆಂಬ ಅಧಿಕಾರವನ್ನು ಇಂಡಿಯಾ ಸರಕಾರ ಅಂದರೆ ವೈಸರಾಯ್ ಕೈಯಲ್ಲಿಯೇ ಕೇಂದ್ರೀಕರಿಸಲಾಯಿತು. ಪ್ರಾಂತ ಸರಕಾರಗಳ ಅಧಿಕಾರ ರಕ್ಷಣೆಗೆ ಯಾವ ವಿಧಾಯಕ ಏರ್ಪಾಡೂ ಇಲ್ಲದ್ದರಿಂದ ವೈಸರಾಯ್ ಇಷ್ಟದಂತೆ ಮಾತ್ರ ನಡೆಯಬೇಕಾಗಿತ್ತು. ಯುದ್ಧದ ಆವಶ್ಯಕತೆಯ ಹೆಸರಿನಲ್ಲಿ ವೈಸರಾಯ್ ಮತ್ತು ಗವರ್ನರ್ ಜನರಲ್ ಮತ್ತು ಆತನಿಂದ ನಾಮ ಕರಣವಾದ ಮಂತ್ರಿಮಂಡಲ ಪ್ರಾಂತ ಸರಕಾರಗಳ ಮತ್ತು ಶಾಸನ ಸಭೆಗಳ ಪ್ರತಿಯೊಂದು ತೀರ್ಮಾನವನ್ನೂ ತಳ್ಳಿಹಾಕಲು ಅವಕಾಶವಿತ್ತು. ಈ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಮಂತ್ರಿ ಮಂಡಲ ಯಾವುದೂ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಗವರ್ನರ್ ಮತ್ತು ಅಧಿಕಾರ ವರ್ಗದ ವಿರೋಧ ಇಲ್ಲದಿದ್ದರೆ ಶಾಸನ ಸಭೆ ಮತ್ತು ಚುನಾವಣಾ ಕ್ಷೇತ್ರಗಳ ವಿರೋಧ. ಕಾಂಗ್ರೆಸ್ ಬಹುಮತವಿದ್ದು ಪ್ರತಿಯೊಂದು ಶಾಸನ ಸಭೆಯೂ ಯುದ್ಧ ಆರಂಭವಾದೊಡನೆ ಕಾಂಗ್ರೆಸ್ ಬೇಡಿಕೆಯನ್ನೇ ಶಾಸನ ಸಭೆಯ ಮುಂದಿಟ್ಟು ಸಭೆಯ ಒಪ್ಪಿಗೆ ಪಡೆದು ನಿರ್ಣಯ ಮಾಡಿತು. ವೈಸರಾಯ್ ಈ ಬೇಡಿಕೆ ನಿರಾಕರಿಸಿದರೆ ಉಳಿದುದು ತಿಕ್ಕಾಟ ಅಥವ ರಾಜಿನಾಮೆ, ಕಾಂಗ್ರೆಸ್ ನಾಯಕರಿಂದ ಮೊದಲುಗೊಂಡು ಪ್ರತಿಯೊಬ್ಬನಲ್ಲೂ ಬ್ರಿಟಿಷ್ ಸರಕಾರದೊಂದಿಗೆ ಹೋರಾಟ ಹೂಡಬೇಕೆಂದು ಅಭಿಪ್ರಾಯವೇ ಬಲಗೊಳ್ಳುತ್ತಲಿತ್ತು. ಸಾಧ್ಯವಾದರೆ ಈ ಹೋರಾಟ ತಪ್ಪಿಸಿ ಶಾಂತರೀತಿಯಲ್ಲಿ ಬಿಕ್ಕಟ್ಟನ್ನು ಪರಿಹರಿಸಬೇಕೆಂದೇ ಕಾರ್ಯ ಸಮಿತಿಯ ಅಭಿಮತವಿತ್ತು. ಹೊಸ ಚುನಾವಣೆ ನಡೆಸಿ, ಮತದಾರರ ಮತ್ತು ಜನಸಾಮಾನ್ಯದ ಅಭಿಪ್ರಾಯ ಏನಿದೆ ಎಂದು ಕಂಡು ಹಿಡಿಯಲು ಬ್ರಿಟಿಷ್ ಸರಕಾರಕ್ಕೆ ಸುಲಭವಿತ್ತು. ಹೊಸ ಚುನಾವಣೆ ಎಂದರೆ ಕಾಂಗ್ರೆಸ್‌ಗೆ ಅಖಂಡ ವಿಜಯವೆಂದು ಮನಗಂಡದ್ದರಿಂದ ಅದು ಅವರಿಗೆ ಬೇಕಿರಲಿಲ್ಲ.

ದೊಡ್ಡ ಪ್ರಾಂತಗಳಾದ ಬಂಗಾಲ ಮತ್ತು ಪಂಜಾಬ್‌ನಲ್ಲ, ಸಿಂಧ್ ನಲ್ಲೂ ರಾಜಿನಾಮೆಗಳಾಗಲಿಲ್ಲ. ಬಂಗಾಲ ಮತ್ತು ಪಂಜಾಬ್ ಎರಡರಲ್ಲೂ ಗೌರ್ನರ್‌ ಮತ್ತು ಸಿವಿಲ್ ಸರ್ವಿಸ್ ಅಧಿಕಾರಿಗಳ ಪ್ರಾಬಲ್ಯವೇ ಹೆಚ್ಚು ಇದ್ದ ಕಾರಣ ಅಲ್ಲಿ ತಿಕ್ಕಾಟವೇ ಇರಲಿಲ್ಲ. ಕೆಲವು ದಿನಗಳ ನಂತರ ಬಂಗಾಲದಲ್ಲಿ ಸಹ ಮುಖ್ಯ ಮಂತ್ರಿಗೂ ಗವರ್ನರ್‌ಗೂ ಸರಿಬೀಳದ ಕಾರಣ ಮುಖ್ಯ ಮಂತ್ರಿಯನ್ನೂ ಆತನ ಮಂತ್ರಿಮಂಡಲವನ್ನೂ ರಾಜಿನಾಮೆ ಕೊಡುವಂತೆ ಗೌರ್ನರ್ ಒತ್ತಾಯ ಮಾಡಿದನು. ಸಿಂಧನಲ್ಲಿ ಸಹ ಕೆಲವು ದಿನಗಳ ನಂತರ ಅಲ್ಲಿನ ಮುಖ್ಯ ಮಂತ್ರಿಯು ಬ್ರಿಟಿಷ್ ಸರಕಾರದ ನೀತಿಯನ್ನು ಖಂಡಿಸಿ ವೈಸರಾಯ್ಗೆ ಒಂದು ಪತ್ರ ಬರೆದು ಪ್ರತಿಭಟನಾ ಸೂಚನೆಯಾಗಿ ಬ್ರಿಟಿಷ್ ಸರಕಾರ ತನಗೆ ಕೊಟ್ಟ ಬಿರುದನ್ನು ತ್ಯಜಿಸಿದನು. ಆತನು ರಾಜಿನಾಮೆ ಕೊಡದಿದ್ದರೂ ಆ ರೀತಿ ಪತ್ರ ಬರೆದದ್ದು ತನ್ನ ಗೌರವಕ್ಕೆ ಮಹಾಕುಂದು ಎಂದು ವೈಸರಾಯ್ ಗವರ್ನರ್‌ಗೆ ಪತ್ರ ಬರೆದು ಮುಖ್ಯಮಂತ್ರಿಯನ್ನು ಮಂತ್ರಿ ಪದವಿಯಿಂದ ನಿವೃತ್ತಿ ಮಾಡಿಸಿದನು.

ಕಾಂಗ್ರೆಸ್ ಪ್ರಾಂತ ಸರಕಾರಗಳು ರಾಜಿನಾಮೆ ಕೊಟ್ಟು ಈಗ ಐದು ವರ್ಷಗಳಾದವು. ಈ ಐದು ವರ್ಷ ಎಲ್ಲ ಪ್ರಾಂತ್ಯಗಳಲ್ಲೂ ಗವರ್ನರ್ ಒಬ್ಬನ ಸರ್ವಾಧಿಕಾರ. ಯುದ್ಧದ ನೆಪದಲ್ಲಿ ಹತ್ತೊಂಭತ್ತನೆಯ ಶತಮಾನದ ಮಧ್ಯಕಾಲದ ಕುರುಡ ಸರ್ವಾಧಿಕಾರಿಯ ನಿರಂಕುಶ ಆಡಳಿತಕ್ಕೆ ಸಾಗಿದ್ದೇವೆ. ಸಿವಿಲ್ ಸರ್ವಿಸ್ ಮತ್ತು ಪೋಲೀಸರದೇ ಅಧಿಕಾರ, ಇಂಗ್ಲಿಷ್ನವನಾಗಲಿ, ಭಾರತೀಯನಾಗಲಿ, ಬ್ರಿಟಿಷ್ ಸರಕಾರದ ದಯಾಶೂನ್ಯ ನೀತಿಗೆ ಸ್ವಲ್ಪ ವಿರೋಧಿಸಿದರೂ ಮನೆಕಡೆ ದಾರಿ ಹಿಡಿಯಬೇಕಿತ್ತು. ಕಾಂಗ್ರೆಸ್ ಸರಕಾರಗಳ ಕೆಲಸವೆಲ್ಲ ತೆಲೆಕೆಳಗಾಗಿ ಅವರ ಯೋಜನೆಗಳನ್ನೆಲ್ಲ ಮಣ್ಣುಗೂಡಿಸಿದವು. ರೈತಾಪಿ ಜನರ ಶಾಸನಮಾತ್ರ ಉಳಿದಿದೆಯಾದರೂ ಆಚರಣೆಯಲ್ಲಿ ಅದರ ಪ್ರಯೋಗವೆಲ್ಲ ರೈತರ ವಿರುದ್ಧ.

ಕಳೆದ ಎರಡು ವರ್ಷಗಳಲ್ಲಿ ಅಸ್ಸಾಮ್, ಒರಿಸ್ಸ ಮತ್ತು ವಾಯವ್ಯ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಶಾಸನಾ ಸಭಾ ಸದಸ್ಯರನ್ನು ಸೆರೆಮನೆಗೆ ತಳ್ಳಿ ಅಲ್ಪ ಸಂಖ್ಯಾತರನ್ನು ಬಹು ಸಂಖ್ಯಾತರನ್ನಾಗಿ ಮಾಡಿ ಕಾಂಗ್ರೆಸೇತರ ಮಂತ್ರಿಮಂಡಲ ರಚಿಸಲಾಗಿದೆ. ಬಂಗಾಲದ ಮಂತ್ರಿಮಂಡಲ ಯೂರೋಪಿಯನರ ಬೆಂಬಲವಿಲ್ಲದೆ ಮೂರು ದಿನವೂ ಬಾಳಲಾರದು, ಒರಿಸ್ಸದ ಮಂತ್ರಿಮಂಡಲ ಬಹಳ ದಿನ ಬಾಳಲಾರದೆ ಪುನಃ