ಪುಟ:ಭಾರತ ದರ್ಶನ.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೪೦೩

ಕಲಾಮ್ ಅಜಾದರೂ ಇತರರೂ ಗಾಂಧಿಜಿಯ ಅಭಿಪ್ರಾಯ ಒಪ್ಪದೆ ಹೋದರು. ಒಟ್ಟಿನಲ್ಲಿ ಕಾಂಗ್ರೆಸ್ಸೂ ಮತ್ತು ಗಾಂಧಿಜಿಯ ನೆಚ್ಚಿನ ಹಿಂಬಾಲಕರೂ ಈ ವಿಷಯದಲ್ಲಿ ಅವರಿಂದ ಬೇರೆ ನಿಂತರು. ಅಂದಿನ ವಿಷಮಪರಿಸ್ಥಿತಿ ಮತ್ತು ದಿನದಿನಕ್ಕೂ ಬದಲಾಯಿಸುತ್ತಿದ್ದ ಯುದ್ಧರಂಗದ ನಾಟಕೀಯ ದೃಶ್ಯಗಳ ಒತ್ತಡವು ನಮ್ಮೆಲ್ಲರ ಮೇಲೆ ಮಹತ್ಪರಿಣಾಮ ಮಾಡಿದವು. ಗಾಂಧಿಜಿಯ ಮೇಲೆ ಸಹ ಅದರ ಪರಿಣಾಮವಾಗಿ ಕಾಂಗ್ರೆಸ್ಸಿನ ಮೇಲೆ ಬಲಾತ್ಕಾರದಿಂದ ತಮ್ಮ ಅಭಿಪ್ರಾಯ ಹೇರಲು ಅವರು ಒಪ್ಪಲಿಲ್ಲ; ಆದರೆ ಕಾಂಗ್ರೆಸ್ ಅಭಿಪ್ರಾಯವನ್ನೂ ಅವರು ಒಪ್ಪಲಿಲ್ಲ.

ಗಾಂಧಿಜಿ ಮತ್ತೆ ಬೇರೆ ಯಾವ ಸಮಯದಲ್ಲೂ ಕಾಂಗ್ರೆಸ್ಸಿನಲ್ಲಿ ಪ್ರಸ್ತಾಪಿಸಲಿಲ್ಲ. ಮುಂದೆ ಸರ್ ಸ್ಟಾಫರ್ಡ್ಕ್ರಿಪ್ಸ್ ತನ್ನ ಸಲಹೆ ತೆಗೆದುಕೊಂಡು ಬಂದಾಗ ಸಹ ಅಹಿಂಸೆಯ ಪ್ರಶ್ನೆ ಏಳಲಿಲ್ಲ. ಆ ಸಲಹೆಗಳನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡಿದೆವು. ೧೯೪೨ನೆ ಆಗಸ್ಟ್ ವರೆಗಿನ ಕೊನೆಯ ತಿಂಗಳುಗಳಲ್ಲಿ ಸಹ ಭಾರತವು ಸ್ವತಂತ್ರ ರಾಷ್ಟ್ರವಾಗಿ ಕೆಲಸಮಾಡ ಬಲ್ಲದಾದರೆ ಕಾಂಗ್ರೆಸ್ಸು ಯುದ್ಧದಲ್ಲಿ ಸಹ ಭಾಗವಹಿಸಬಹುದೆಂದರು. ಅವರ ಉನ್ನತ ರಾಷ್ಟ್ರೀಯ ಭಾವನೆ ಮತ್ತು ಸ್ವಾತಂತ್ರದ ಉತ್ಕಟೇಚ್ಛೆಗಳೇ ಅವರ ಮೇಲೆ ಈ ಪರಿಣಾಮ ಮಾಡಿದವು. ಅವರ ಮನಸ್ಸಿನಲ್ಲಿ ಅಪಾರ ನೋವೂ ತಾತ್ವಿಕ ಹೋರಾಟವೂ ಉಂಟಾಗಿದ್ದರೂ ಅವರ ಮೇಲಿನ ಈ ಪರಿಣಾಮ ಮಾತ್ರ ಅತ್ಯಂತ ಆಶ್ಚರ್ಯಕರವೂ ಅದ್ಭುತವೂ ಇತ್ತು. ತನ್ನ ಜೀವನದ ಸಾರ ಸರಸ್ವವಾಗಿ ಅದಕ್ಕೊಂದು ಅರ್ಥ ಕೊಟ್ಟು ತಮಗೆ ರಕ್ತಗತವಾಗಿದ್ದ ಅಹಿಂಸಾ ತತ್ವಕ್ಕೂ ತಮ್ಮ ಜೀವನದ ಪರಮಧೇಯ ಮತ್ತು ಉತ್ಕಟೇಚ್ಛೆಯಾಗಿದ್ದ ಭಾರತದ ಸ್ವಾತಂತ್ರಕ್ಕೂ ಘರ್ಷಣೆಯೊದಗಿದಾಗ ಅವರ ಒಲುಮೆ ಭಾರತದ ಸ್ವಾತಂತ್ರದ ಕಡೆಗೆ ತಿರುಗಿತು. ಇದರಿಂದ ಅಹಿಂಸೆಯಲ್ಲಿ ಅವರ ನಂಬಿಕೆ ಕಡಮೆಯಾಯಿತೆಂದಲ್ಲ. ಆದರೆ ಕಾಂಗ್ರೆಸ್ಸಿನ ಅಭಿಪ್ರಾಯಕ್ಕೆ ಮನ್ನಣೆಕೊಟ್ಟು ಈ ಯುದ್ಧ ವಿಷಯದಲ್ಲಿ ತಮ್ಮ ಅಹಿಂಸಾ ತತ್ವವನ್ನು ಒತ್ತಾಯ ಪಡಿಸುವುದು ಸರಿಯಲ್ಲವೆಂದು ಒಪ್ಪಿದರು. ಅವರಲ್ಲಿನ ಕೂದಲೆಳೆಯಷ್ಟೂ ಕದಲದ ಧರ್ಮ ಪ್ರವರ್ತಕನಿಗಿಂತ ಸಾಧ್ಯಾಸಾಧ್ಯತೆಯನ್ನರಿತ ರಾಜಕಾರಣಿಗೆ ಜಯವಾಯಿತು.

ವಿರೋಧೋಕ್ತಿಗಳಂತೆ ಕಂಡು ಬಂದ ಅನೇಕ ಅಭಿಪ್ರಾಯಗಳಿಗೆ ಇಂಬುಗೊಟ್ಟು, ನನ್ನ ಮೇಲೆ ಮತ್ತು ನನ್ನ ಕಾರ್ಯನೀತಿಯ ಮೇಲೆ ಮಹತ್ಪರಿಣಾಮ ಮಾಡಿದ ಗಾಂಧೀಜಿಯ ಸಮೀಪ ನಾನು ನಿಂತು ಅವರ ಮನಸ್ಸಿನ ಈ ನಿರಂತರ ಹೋರಾಟ ನೋಡುತ್ತಿರುವಾಗ, ಅವುಗಳ ವಿಷಯ ಯೋಚಿಸಿದಾಗ ಲಿಡೆಲ್ ಹಾರ್ಟ್ನ ಗ್ರಂಥದ ಲೇಖನ ಒಂದು ಜ್ಞಾಪಕಕ್ಕೆ ಬರುತ್ತದೆ. “ಮಾನವ ಇತಿಹಾಸದಲ್ಲಿ ಮಹತ್ಪರಿಣಾಮಕಾರಕ ವಿಷಯವೆಂದರೆ ಒಂದು ಮನಸ್ಸಿನ ಮೇಲೆ ಇನ್ನೊಂದು ಮನಸ್ಸು ಪ್ರಭಾವ ಬೀರುವ ಎಲ್ಲ ಸಂಧರ್ಭಗಳಲ್ಲಿ ಅಪ್ರತ್ಯಕ್ಷ ಮಾರ್ಗದ ಪರಿಣಾಮವೇ ಬಹಳ ಹೆಚ್ಚು. ಆದರೂ ಭಿನ್ನ ಭಿನ್ನ ವಿಷಯಗಳಲ್ಲಿ ನಮ್ಮ ಗುರಿ ಎಲ್ಲಿಗೆ, ಅಥವ ಪರಿಣಾಮ ಏನು ಎಂದು ಲೆಕ್ಕಿಸದೆ ಸತ್ಯಾನ್ವೇಷಣೆ ಮಾಡಿದರೆ ಮಾತ್ರ, ಸತ್ಯ ನಿರ್ಣಯಕ್ಕೆ ಬರಬಹುದು ಅಥವ ಸತ್ಯದ ಸಮೀಪ ಸೇರಬಹುದು ಎಂಬ ಪಾಠ ಕಲಿಯದೆ ಗತ್ಯಂತರವಿಲ್ಲ.

ಮಾನವ ಪ್ರಗತಿಯಲ್ಲಿ ಧರ್ಮ ಪ್ರವರ್ತಕರ ಪ್ರಮುಖ ಪಾತ್ರ ಏನೆಂಬುದಕ್ಕೆ ಇತಿಹಾಸದಲ್ಲಿ ಅನೇಕ ನಿದರ್ಶನಗಳಿವೆ. ತಾನು ಕಂಡ ಸತ್ಯವನ್ನು ನಿರ್ಭಯವಾಗಿ ಪ್ರತಿಪಾದಿಸುವುದರಲ್ಲಿಯೇ ಅಂತ್ಯದಲ್ಲಿ ಹೆಚ್ಚಿನ ಬೆಲೆಯೂ ಉಪಯುಕ್ತತೆಯೂ ಇದೆ ಎನ್ನಲು ಇತಿಹಾಸವೇ ಸಾಕ್ಷಿ. ಆದರೂ ಆ ದಿವ್ಯ ದರ್ಶನ ಅಂಗೀಕಾರ ಮತ್ತು ಪ್ರಚಾರ ಇನ್ನೊಂದು ಬಗೆಯ ಜನರ ಕೈಯಲ್ಲಿ. ಆದರೆ ಜನತೆಗೆ ಆ ಸತ್ಯವನ್ನೂ ಅರಿಯಲು ಮತ್ತು ಅದನ್ನು ಜೀರ್ಣಿಸಿಕೊಳ್ಳಲು ಇರುವ ಶಕ್ತಿಯನ್ನು ಅವರು ಅಳೆದು ಮಧ್ಯ ಮಾರ್ಗ ಹಿಡಿದ ದಾರ್ಶನಿಕ ನಾಯಕರಿರಬೇಕು. ಸತ್ಯ ಅರಿಯಲು ಸ್ವತಃ ಅವರಿಗಿರುವ ಶಕ್ತಿ ಮತ್ತು ಅದನ್ನು ಜನತೆಗೆ ಸಾರಲು ಇರುವ ಅವರ ಸಾಮರ್ಥ್ಯ ಎಷ್ಟು ಉತ್ತಮವಿದ್ದರೆ ಜನತೆಯ ಮೇಲೆ ಪರಿಣಾಮವೂ ಅಷ್ಟು ಹೆಚ್ಚು ಫಲಕಾರಿಯಾಗುತ್ತದೆ."

ಧರ್ಮಪ್ರವರ್ತಕರಿಗೆ ಕಲ್ಲಿನೇಟು ಖಂಡಿ. ಅವರ ಹಣೆಯ ಬರಹವೇ ಅದು, ಮತ್ತು ಅದೇ