ಪುಟ:ಭಾರತ ದರ್ಶನ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೧೩

ತಿರಸ್ಕರಿಸಬೇಕು. ಆದರೆ ಅದರ ಹಿಂದೆ ಶತಮಾನಗಳಿಂದ ಭಾರತದಲ್ಲಿ ಒಡಕುಹುಟ್ಟಿಸಿ, ಭಾರತದ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭಾವನೆಯ ಬೆಳೆವಣಿಗೆಯನ್ನು ವಿರೋಧಿಸಿದ ಶಕ್ತಿಗಳಿಗೆ ಪ್ರೋತ್ಸಾಹ ಕೊಡುತ್ತಿದ್ದ ಬ್ರಿಟಿಷರ ಕುತಂತ್ರವೇ ಎದ್ದು ಕಾಣುತ್ತಿತ್ತು. ಈ ಮೊದಲು ನಾವು ಮುಂದಿಟ್ಟ ಪ್ರತಿ ಹೆಜ್ಜೆಗೂ ಅನೇಕ ನಿರ್ಬಂಧಗಳನ್ನು ಕಲ್ಪಿಸಲಾಗಿತ್ತು; ಆರಂಭದಲ್ಲಿ ಅವು ಸಾಧುವೆಂದು ಕಂಡರೂ ಅಂತ್ಯದಲ್ಲಿ ಸಹಿಸಲಸಾಧ್ಯ ಶೂಲಗಳಾಗಿದ್ದವು.

ಈ ಸಲಹೆಗಳಲ್ಲಿ ನಾವು ಊಹಿಸಿದ ಅನಿಷ್ಟ ಪರಿಣಾಮಗಳು ಪ್ರಾಯಶಃ ಬಾರದೆ ಇರಬಹುದು. ಬುದ್ದಿವಂತಿಕೆ, ದೇಶಾಭಿಮಾನ, ಪ್ರಪಂಚಕ್ಕೂ ಭಾರತಕ್ಕೂ ಯಾವುದು ಹಿತ ಎಂಬ ಉದಾರ ವಿವೇಚನಾ ದೃಷ್ಟಿಯು ರಾಜರುಗಳಲ್ಲೂ ಅವರ ಸಚಿವರಲ್ಲ, ಅನೇಕರಲ್ಲಿ ಸಾಧ್ಯವಿತ್ತು. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟಿದ್ದರೆ ಧೈಯ್ಯದಿಂದ ಎದುರು ಕಲೆತು, ಪ್ರತಿಯೊಂದು ಸಮಸ್ಯೆಯ ತೊಡಕುಗಳನ್ನೆಲ್ಲ ಯೋಚಿಸಿ, ಪ್ರತಿಯೊಂದು ಪಂಗಡದ ತೊಂದರೆ ವಿಚಾರಿಸಿ, ಪೂರ್ಣಚರ್ಚೆಮಾಡಿ ಒಂದು ಸರ್ವಸಮ್ಮತ ಪರಿಹಾರ ಕಂಡು ಹಿಡಿಯಲು ಸಾಧ್ಯವಿತ್ತು. ಸ್ವಯಂ ನಿರ್ಣಯಾಧಿಕಾರ ಉಪಯೋಗಿಸುತ್ತೇವೆಂದು ತಿಳಿಸಿದರೂ ನಮ್ಮನ್ನು ಸುಮ್ಮನೆ ಒಪ್ಪಲು ಅವರು ಸಿದ್ಧರಿರಲಿಲ್ಲ. ಮುಖ್ಯ ಸಮಯಗಳಲ್ಲಿ ಪ್ರವೇಶಮಾಡಿ ಅನೇಕ ರೀತಿ ಅಡ್ಡಿ ಬರಲು ಬ್ರಿಟಿಷ್ ಸರಕಾರ ಸದಾ ಸಿದ್ಧವಿತ್ತು. ಸರಕಾರದ ಪೂರ್ಣ ಆಡಳಿತ ಸೂತ್ರ, ಅಧಿಕಾರಿವರ್ಗಗಳೆಲ್ಲ ಅವರ ಕೈಯ್ಯಲ್ಲಿದ್ದುದಲ್ಲದೆ ಸಂಸ್ಥಾನಗಳ ಸೂತ್ರವೆಲ್ಲ ರೆಸಿಡೆಂಟರ ಮತ್ತು ರಾಜಕೀಯ ಇಲಾಖೆಯ ಅಧಿಕಾರಿಗಳ ಕೈಯಲ್ಲಿತ್ತು. ರಾಜರು ತಮ್ಮ ಪ್ರಜೆಗಳ ಮೇಲೆ ನಿರಂಕುಶಾಧಿಕಾರ ನಡೆಸುತ್ತಿದ್ದರೂ ವೈಸರಾಯ್ ಅಧೀನ ನಿದ್ದ ರಾಜಕೀಯ ಇಲಾಖೆಯ ಕೈಗೊಂಬೆಗಳಾಗಿದ್ದರು. ಅವರ ಮುಖ್ಯ ಸಚಿವರುಗಳಲ್ಲಿ ಅನೇಕರು ರಾಜಕೀಯ ಇಲಾಖೆಯ ಒತ್ತಾಯದಿಂದ ಬಂದ ಬ್ರಿಟಿಷ್ ಅಧಿಕಾರಿಗಳು ಅಥವ ಅವರ ಭಾರತೀಯ ಪಡಿಯಚ್ಚುಗಳು.

ಬ್ರಿಟಿಷ್ ಸಲಹೆಗಳ ಅನೇಕ ದುಷ್ಪರಿಣಾಮಗಳನ್ನು ನಾವು ಮಿಾರಿಸಿಕೊಂಡರೂ ಭಾರತದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು, ಪ್ರಗತಿ ವಿರೋಧ ಬಂದು ಅಸಾಧ್ಯ ತೊಂದರೆಕೊಡುವ ಅನೇಕ ಹೊಸ ವಿಪತ್ಕಾರಕ ಪ್ರಶ್ನೆಗಳನ್ನು ಎಬ್ಬಿಸಲು ಇನ್ನೂ ವಿಶೇಷ ಅವಕಾಶ ಇತ್ತು. ಇಪ್ಪತ್ತು ವರ್ಷಗಳ ಕೆಳಗೆ ಆಚರಣೆಗೆ ಬಂದ ಪ್ರತ್ಯೇಕ ಕೋಮುವಾರು ಚುನಾವಣಾ ಪದ್ದತಿಯಿಂದ ಬೇಕಾದಷ್ಟು ಅನಾಹುತವಾಗಿತ್ತು. ತೊಂದರೆ ಕೊಡಬೇಕೆಂಬ ಪ್ರತಿಯೊಂದು ಪ್ರತಿಗಾಮಿ ಪಂಗಡಕ್ಕೂ ಈಗ ರಾಜಮಾರ್ಗ ಕಲ್ಪಿಸಬೇಕಾಯಿತು; ಆ ಭಿನ್ನತೆ ಶಾಶ್ವತಗೊಳಿಸಿ ಭಾರತವನ್ನು ಇನ್ನೂ ತುಂಡುಮಾಡುವ ಭಯ ನಮಗೆ ಹೆಚ್ಚಾಯಿತು. ಯುದ್ಧಾನಂತರದ ಭವಿಷ್ಯಕ್ಕೆ ಈ ಸಲಹೆ ಒಪ್ಪಬೇಕೆಂದು ಬ್ರಿಟಿಷರು ನಮಗೆ ಸೂಚಿಸಿದ್ದರು, ಕಾಂಗ್ರೆಸ್ ಸಂಸ್ಥೆಯ ಮಾತು ಹಾಗಿರಲಿ, ಬ್ರಿಟಿಷ್ ಸರಕಾರದೊಂದಿಗೆ ಸದಾ ಸಹಕರಿಸುತ್ತಿದ್ದ ತೀರ ಸೌಮ್ಯವಾದಿ ಪಕ್ಷದ ರಾಜಕಾರಣಿಗಳು ಸಹ ಈ ಸಲಹೆ ಒಪ್ಪಲು ಸಾಧ್ಯವಿಲ್ಲವೆಂದರು.

ಭಾರತದ ಐಕ್ಯತೆ ಕಾಂಗ್ರೆಸ್ಸಿಗೆ ವಿಶೇಷ ಪ್ರಾಮುಖ್ಯವಿದ್ದರೂ ಎಲ್ಲ ಅಲ್ಪ ಸಂಖ್ಯಾಕರ ಮತ್ತು ಇತರ ಪಂಗಡಗಳ ಸಹಕಾರ ಪಡೆಯಲು ಅದು ಕಾತರವಿತ್ತು; ಮತ್ತು ಯಾವ ಭಾಗದ ಜನರು ಭಾರತದ ಒಕ್ಕೂಟದಲ್ಲಿ ಇರಲು ಒಪ್ಪದಿದ್ದರೂ ಅವರನ್ನು ಬಲಾತ್ಕಾರ ಮಾಡುವುದಿಲ್ಲವೆಂದು ಸಹ ಹೇಳಿತ್ತು. ಬೇರೆ ಉಪಾಯ ಇಲ್ಲವಾದರೆ ವಿಭಜನೆಯ ತತ್ವವನ್ನೂ ಒಪ್ಪಿತ್ತು; ಆದರೂ ಆ ತತ್ವಕ್ಕೆ ಸ್ವಲ್ಪವೂ ಪ್ರೋತ್ಸಾಹ ಕೊಡಲು ಇಷ್ಟ ಪಡಲಿಲ್ಲ. ಕ್ರಿಪ್ಸ್ ಸಲಹೆಯ ಮೇಲೆ ಕಾಂಗ್ರೆಸ್ ಕಾರ್ಯ ಸಮಿತಿಯ ನಿರ್ಣಯ ಈ ರೀತಿ ಇತ್ತು "ಭಾರತದ ಸ್ವಾತಂತ್ರ್ಯ ಮತ್ತು ಐಕ್ಯತೆಯೇ ಕಾಂಗ್ರೆಸ್ಸಿನ ಧ‍್ಯೇಯಗಳಾಗಿವೆ, ಆಧುನಿಕ ಪ್ರಪಂಚದಲ್ಲಿ ಜನರ ಮನಸ್ಸೆಲ್ಲ ಮುಖ್ಯವಾಗಿ ದೊಡ್ಡ ದೊಡ್ಡ ಒಕ್ಕೂಟ ರಾಷ್ಟ್ರ ಸ್ಥಾಪನೆಯೆ ಇರುವಾಗ ಭಾರತದ ಐಕ್ಯತೆ ಒಡೆಯುವುದೆಂದರೆ ಎಲ್ಲರಿಗೂ ಅದರಿಂದ ಹಾನಿ, ಮತ್ತು ಆ ಸಲಹೆಯನ್ನು ಯೋಚಿಸಲು ಸಹ ಅತ್ಯಂತ ಖೇದವಾಗುತ್ತದೆ. ಭಾರತ ಒಕ್ಕೂಟದ ಯಾವ ಭಾಗದ ಜನರನ್ನೇ ಆಗಲಿ ಅವರ ಇಷ್ಟಕ್ಕೆ ವಿರುದ್ಧ ಒಕ್ಕೂಟದಲ್ಲಿರಲು ಒತ್ತಾಯಮಾಡಲು ಕಾರ್ಯಸಮಿತಿಗೆ ಇಚ್ಛೆ ಇಲ್ಲ. ಈ ತತ್ವ ಒಪ್ಪಿಯೂ ದೇಶದ ಬೇರೆ ಬೇರೆ ಭಾಗಗಳ ಜನರು ಸಮಾನತೆಯಿಂದ ಸಹಕಾರದಿಂದ ಒಂದೇ ರಾಷ್ಟ್ರೀಯ ಜೀವನ ನಡೆಸಲು