ಪುಟ:ಭಾರತ ದರ್ಶನ.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೦

ಭಾರತ ದರ್ಶನ

ಘಟನೆಗಳಮೇಲೆ ಘಟನೆಗಳು ನಡೆದುಹೋದುವು; ಆದರೂ ಭಾರತದ ಗೌರವ ರಕ್ಷಣೆಗೆ, ಅದರ ಸ್ವಾತಂತ್ರಘೋಷಣೆಗೆ ಮತ್ತು ಸ್ವತಂತ್ರ ರಾಷ್ಟ್ರವಾಗಿ ಆಕ್ರಮಣ ವಿರುದ್ಧ ಯುದ್ಧದಲ್ಲಿ ಪೂರ್ಣ ಸಹಕರಿಸಲು ಸಾಧ್ಯವಾಗುವಂತೆ ಏನಾದರೂ ಕಾರ್ಯ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದ ಗಾಂಧಿಜಿ, ಆ ಕಾರ್ಯಾಚರ ಣೆಯ ಸ್ವಭಾವ ಏನೆಂದು ಒಂದು ಮಾತನ್ನೂ ಹೇಳದಿದ್ದುದು ನಮಗೆ ಆಶ್ಚರ್ಯವೆನಿಸಿತು. ಆ ಕಾರ್ಯಾಚರಣೆ ಶಾಂತಿಯುತ ಇರಬೇಕಾದುದು ಅತ್ಯವಶ್ಯವಿತ್ತು; ಆದರೆ ಇನ್ನೇನು? ಬ್ರಿಟಿಷ್ ಸರಕಾರದೊಡನೆ ಒಪ್ಪಂದಕ್ಕೆ ಬರಲು ಪುನಃ ಸರಕಾರದ ಬಳಿ ಹೋಗಿ ಸರ್ವಪ್ರಯತ್ನ ಮಾಡಿ ಯಾವುದಾದರೂ ಒಂದು ರೀತಿ ಸಂಧಾನಕ್ಕೆ ಬರಬೇಕೆಂಬ ಅಭಿಲಾಷೆಗೆ ಗಾಂಧಿಜಿ ಬಹಳ ಪ್ರಾಮುಖ್ಯತೆ ಕೊಟ್ಟರು. ಅಖಿಲ ಭಾರತ. ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಅವರ ಭಾಷಣದಲ್ಲಿ ಒಪ್ಪಂದವಾಗಬೇಕೆಂದು ಮನಮುಟ್ಟ ಪ್ರಾರ್ಥಿಸಿದ್ದರು ಮತ್ತು ಅದಕ್ಕಾಗಿ ವೈಸರಾಯ್ ನೋಡಲು ನಿಶ್ಚಯಿಸಿರುವುದಾಗಿ ತಿಳಿಸಿದರು. ಹೊರಗೆ ಆಗಲಿ, ಕಾಂಗ್ರೆಸ್ ಕಾರ್ಯಸಮಿತಿಯಲ್ಲಿ ಆಗಲಿ ಈ ಒಂದು ಇಚ್ಛೆ ವಿನಾ ತಮ್ಮ ಮನಸ್ಸಿನಲ್ಲಿದ್ದ ಬೇರಾವ ಕಾರ್ಯಾಚರಣೆಯ ಸ್ವರೂಪವನ್ನೂ ತಿಳಿಸಿರಲಿಲ್ಲ. ಸಂಧಾನ ವಿಫಲವಾದರೆ ಯಾವುದೋ ಒಂದು ಬಗೆಯ ಅಸಹಕಾರ ಹೂಡಬೇಕೆಂದೂ ರಾಷ್ಟ್ರದ ಪ್ರತಿಭಟನೆ ತೋರಲು ಎಲ್ಲ ಕೆಲಸವನ್ನೂ ನಿಲ್ಲಿಸಿ ಒಂದು ದಿನ ಸಾರ್ವತ್ರಿಕ ಮುಷ್ಕರ ಹೂಡಿ ಹರತಾಳ ಆಚರಿಸಬೇಕೆಂದೂ ಆಪ್ತರಿಗೆ ಪ್ರತ್ಯೇಕ ತಿಳಿಸಿದ್ದರು. ಇದು ಸಹ ಅನುಮಾನದ ಸಲಹೆ. ಸಂಧಾನ ಪ್ರಯತ್ನ ಮುಗಿಯುವವರೆಗೆ ಯಾವ ಸಿದ್ಧತೆಯನ್ನೂ ಮಾಡಲು ಇಷ್ಟ ಇರಲಿಲ್ಲ. ಆದ್ದರಿಂದ ಗಾಂಧಿಜಿ ಆಗಲಿ, ಕಾಂಗ್ರೆಸ್ ಕಾರ್ಯ ಸಮಿತಿಯಾಗಲಿ, ಸಾರ್ವಜನಿಕವಾಗಿ ಅಥವ ಗುಪ್ತವಾಗಿ ಯಾವ ಸಲಹೆಗಳನ್ನೂ ಕೊಟ್ಟಿರಲಿಲ್ಲ. ಆದರೆ ಯಾವ ಪರಿಸ್ಥಿತಿ ಒದಗಿದರೂ ಜನರು ಎಲ್ಲಕ್ಕೂ ಸಿದ್ಧರಿರಬೇಕೆಂದೂ, ಎಲ್ಲ ಪರಿಸ್ಥಿತಿಯಲ್ಲೂ ಶಾಂತಿಯುತ ಅಹಿಂಸಾಮಾರ್ಗ ಬಿಡಬಾರದೆಂದೂ ಮಾತ್ರ ತಿಳಿಸಿದ್ದೆವು.

ಈ ಬಿಕ್ಕಟ್ಟಿನಿಂದ ಪಾರಾಗಲು ಯಾವುದೋ ಒಂದು ಮಾರ್ಗ ಸಾಧ್ಯವೆಂದು ಗಾಂಧಿಜಿಗೆ ಇನ್ನೂ ಆಸೆ ಇದ್ದರೂ ಆ ಆಸೆ ನಮ್ಮಲ್ಲಿ ಅನೇಕರಿಗೆ ಇರಲಿಲ್ಲ. ಘಟನೆಗಳ ಗಮನರೀತಿಯೂ ಈಚಿನ ಪರಿ ಸ್ಥಿತಿಯೂ ಎಲ್ಲ ಹೋರಾಟದ ಕಡೆಗೇ ಕೈತೋರಿದ್ದವು. ಆ ವಿಷಮ ಪರಿಸ್ಥಿತಿಯೊದಗಿದಾಗ ಮಧ್ಯಮಾರ್ಗಗಳೆಲ್ಲ ಮಾಯವಾಗುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನಿಲುವನ್ನು ತಾನು ನಿರ್ಧರಿಸಬೇಕಾಗುತ್ತದೆ, ಕಾಂಗ್ರೆಸ್ಸಿಗೆ ಮತ್ತು ಅದರೊಂದಿಗೆ ಸಹಾನುಭೂತಿಯುಳ್ಳವರಿಗೆ ನಿರ್ಧರಿಸಬೇಕಾದ್ದು ಏನೂ ಇರಲಿಲ್ಲ. ಬಲಿಷ್ಠ ಬ್ರಿಟಿಷ್ ಸರಕಾರ ತನ್ನ ಸರ್ವಶಕ್ತಿ ವಿನಿಯೋಗಿಸಿ ನಮ್ಮ ಜನರನ್ನು ಸದೆಬಡಿಯುತ್ತ ಇರುವಾಗ ಭಾರತ ಸ್ವಾತಂತ್ರದ ಆ ಮಹಾ ಹೋರಾಟದ ಕಾಲದಲ್ಲಿ ನಾವು ದೂರ ನಿಂತು ಕಣ್ಣು ಮುಚ್ಚಿ ಕುಳಿತು ನೋಡುವುದು ಅಸಾಧ್ಯವೆನಿಸಿತು. ಸಹಾನುಭೂತಿ ಎಷ್ಟೇ ಇದ್ದರೂ ಅನೇಕರು ದೂರ ಸರಿಯುತ್ತಾರೆ ನಿಜ; ಆದರೆ ಪ್ರಮುಖ ಕಾಂಗ್ರೆಸ್‌ ವ್ಯಕ್ತಿ ಯಾರೇ ಇರಲಿ ತನ್ನ ಹಿಂದಿನ ಕಾರ್ಯ ನೀತಿಯನ್ನೆಲ್ಲ ಮರೆತು ಪರಿಣಾಮಕ್ಕೆ ಅಂಜಿ ಈಗ ದೂರ ನಿಂತರೆ ಅದಕ್ಕಿಂತ ನಾಚಿಕೆಗೇಡು ಅಗೌರವ ಮತ್ತೊಂದು ಇರಲಿಲ್ಲ; ಅಲ್ಲದೆ ಅವರಿಗೆ ಬೇರೆ ದಾರಿಯೂ ಇರಲಿಲ್ಲ. ಭಾರತದ ಹಿಂದಿನ ಇತಿಹಾಸ, ಇಂದಿನ ಸಂಕಟ ಮತ್ತು ಮುಂದಿನ ಬಾಳಿನ ಆಸೆಗಳೇ ಅವರನ್ನು ಬಡಿದೆಬ್ಬಿಸಿ ಕರೆತಂದು, ಮುಂದೆ ತಳ್ಳಿ ಅವರ ಕಾವ್ಯ ನಿರೂಪಿಸುತ್ತಿದ್ದವು. “ಪ್ರಾಚೀನತೆಯು ನಿರಂತರ ಬಿಡುವಿಲ್ಲದೆ ಸದರಮೇಲೆ ಪದರು ಬೆಳೆಯುತ್ತಲೇ ಇದೆ. ನಿಜ ವಾಗಿ ನೋಡಿದರೆ ಪ್ರಾಚೀನತೆಯು ತನ್ನ ರಕ್ಷಣೆ ತಾನೇ ಮಾಡಿಕೊಳ್ಳುತ್ತದೆ. ತನ್ನ ಪೂರ್ಣ ಶಕ್ತಿಯಿಂದ ಅದು ಪ್ರತಿ ನಿಮಿಷ ನಮ್ಮ ಬೆನ್ನು ಹಿಡಿದೇ ಇದೆ. ನಮ್ಮ ಪ್ರಾಚೀನತೆಯ ಕಲ್ಪನೆಯು ಸಾಮಾನ್ಯವಾಗಿ ಅತ್ಯಲ್ಪ ಭಾಗ ಮಾತ್ರ. ಆದರೆ ನಮ್ಮ ಆತ್ಮದ ಮೂಲ ಒಲವು, ನಮ್ಮ ಇಚ್ಛೆ, ಮನೋದಾರ್ಢ್ಯ, ಕಾರ್ಯ ತತ್ಪರತೆ ಇವೆಲ್ಲದರಲ್ಲೂ ಅದರ ಪೂರ್ಣ ಪ್ರಭಾವ ಇದೆ” ಎಂದು ಬರ್ಗ್ಸನ್ ತನ್ನ “ರಚನಾತ್ಮಕ ವಿಕಾಸ” (Creative Evolution) ಎಂಬ ಗ್ರಂಥದಲ್ಲಿ ಹೇಳಿದ್ದಾನೆ.

೧೯೪೨ನೆ ಆಗಸ್ಟ್ ೭ ಮತ್ತು ೮ನೆಯ ದಿನಗಳಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು “ಕ್ವಿಟ್ ಇಂಡಿಯಾ” ನಿರ್ಣಯ ಎಂದು ಈಚೆಗೆ ಪ್ರಸಿದ್ಧವಾದ ನಿರ್ಣಯವನ್ನು ಬಹಿರಂಗವಾಗಿ ಯೋಚಿಸಿ ಚರ್ಚೆ