ಪುಟ:ಭಾರತ ದರ್ಶನ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭
ಬೇಡನ್ ವೀಲರ್ : ಲಾಸೆನ್

ಶಾಂತಿಯಿಲ್ಲ ಎಂಬುದು ಎದ್ದು ಕಾಣುತ್ತಿತ್ತು. ನಾನು ಹೊರಗಿದ್ದರೆ ಪ್ರಾಯಶಃ ಸ್ವಲ್ಪ ಸಹಾಯ ವಾಗುತ್ತಿದ್ದೆನೋ ಏನೋ ? ಆದರೆ ಸೆರೆಮನೆಯಿಂದ ಅದು ಸಾಧ್ಯವಿರಲಿಲ್ಲ.

೩. ಮಾನವ ಬಾಂಧವ್ಯದ ಸಮಸ್ಯೆ

ಬೇಡನ್ ವೀಲರ್‌ನಲ್ಲಿ ನಾನೊಬ್ಬನೇ ಏಕಾಂಗಿಯಾಗಿ ಕಾಲ ಕಳೆಯುತ್ತ ಇದ್ದಾಗ ಈ ಎಲ್ಲ ಮತ್ತು, ಇನ್ನೂ ಅನೇಕ ಯೋಚನೆಗಳು ಹೊಳೆಯಲಾರಂಭಿಸಿದವು. ಸೆರೆಮನೆಯ ಕಾಲವನ್ನು ನಾನು ಸುಲಭವಾಗಿ ಕಳೆಯಲಿಲ್ಲ. ಅದು ಅಭ್ಯಾಸವಾಗಿ ಹೋಗಿತ್ತು ; ಆದರೆ ಈ ಹೊಸ ಸನ್ನಿವೇಶ ಅದಕ್ಕಿಂತ ಉತ್ತಮವೇನೂ ಇರಲಿಲ್ಲ. ನಾನು ನಾಜಿ ರಾಜ್ಯದಲ್ಲಿ ಇದ್ದೆ. ಅದರ ವಿಚಿತ್ರ ವೈಪರೀತ್ಯ ಗಳು ನನಗೆ ಸರಿ ಬೀಳುತ್ತಿರಲಿಲ್ಲ. ಆದರೂ ನಾಜಿಸಂ ನನಗೆ ಯಾವ ಅಡ್ಡಿ ಯನ್ನೂ ಮಾಡಲಿಲ್ಲ. ಬ್ಲಾಕ್ ಫಾರೆಸ್ಟ್ ನ ಮೂಲೆಯಲ್ಲಿನ ಆ ಹಳ್ಳಿಯಲ್ಲಿ ಅದರ ಪ್ರಭಾವ ಎದ್ದು ಕಾಣುತ್ತಿರಲಿಲ್ಲ.

ಪ್ರಾಯಶಃ ನನ್ನ ಮನಸ್ಸೆಲ್ಲ ಇತರ ವಿಷಯಗಳ ಮೇಲೆ ಇತ್ತು. ನನ್ನ ಹಿಂದಿನ ಜೀವನ ಚಿತ್ರ ಪಟವೆಲ್ಲ ಕಣ್ಣೆದುರಿಗೆ ಸುಳಿದು ಹೋಗುತಿತ್ತು. ಪಕ್ಕದಲ್ಲಿ ಸದಾ ಕಮಲಳ ಚಿತ್ರ, ಆಕೆ ಭಾರತ ಮಹಿಳೆಯ-ಏಕೆ ಜಾತಿಯ ಸಂಕೇತವಾದಳು. ಒಂದೊಂದು ವೇಳೆ ಆಕೆ ತನ್ನ ಎಲ್ಲ ದೋಷ ದೌರ್ಬಲ್ಯಗಳಿಂದಲೂ ಪ್ರಿಯತಮವಾದ, ಮನಸ್ಸಿಗೆ ಎಟುಕದ ರಹಸ್ಯಗಳಿಂದ ಕೂಡಿದ ನಮ್ಮ ಮಾತೃಭೂಮಿಯಾದ ಭಾರತದ ಭಾವನೆಗಳೊಂದಿಗೆ ಹೇಗೋ ಆಶ್ಚರ್ಯ ರೀತಿಯಲ್ಲಿ ಮಿಳಿತವಾಗು ತಿದ್ದಳು. ಕಮಲ ಯಾರು ? ಅವಳು ನನಗೆ ಪರಿಚಿತಳೆ ? ಅವಳ ನೈಜ ಆತ್ಮವನ್ನು ನಾನು ಬಲ್ಲೆನೆ ? ಅವಳು ನನ್ನ ನ್ನು ಅರಿತು ಅರ್ಥಮಾಡಿಕೊಂಡಿರುವಳೆ ? ಏಕೆಂದರೆ ನಾನೂ ಸಹ ನನ್ನ ಆಳವನ್ನು ನಾನೇ ಅರಿಯದ ಅಸಾಧಾರಣ ವ್ಯಕ್ತಿಯಾಗಿದ್ದೆ. ನನ್ನೊಳಗೆ ಅಡಗಿರುವ ರಹಸ್ಯ, ಅದರ ಎಟುಕದ ಆಳ ನನಗೇ ಅರ್ಥವಾಗುತ್ತಿರಲಿಲ್ಲ. ಇದರಿಂದಲೇ ಒಂದೊಂದು ವೇಳೆ ನನ್ನನ್ನು ಕಂಡರೆ ಕಮಲ ಹೆದರುತ್ತಿದ್ದಳೆಂದು ಕಾಣುತ್ತದೆ. ಮದುವೆಯಾಗಲು ನಾನು ಎಂದಿಗೂ ಸಮರ್ಪಕವಾದ ವರನಲ್ಲ. ಕೆಲವು ವಿಷಯಗಳಲ್ಲಿ ನಾನೂ ಕಮಲಳೂ ಉತ್ತರ ದಕ್ಷಿಣ ಧ್ರುವಗಳಂತೆ. ಇನ್ನು ಕೆಲವು ವಿಷಯಗಳಲ್ಲಿ ಅತಿ ಸಮಿಾಪ: ಆದರೆ ಒಬ್ಬರಿಗೊಬ್ಬರು ಪರಿ ಪೋಷಕರಲ್ಲ. ನಮ್ಮ ಶಕ್ತಿಯೇ ನಮ್ಮ ಪರಸ್ಪರ ಬಾಂಧವ್ಯದಲ್ಲಿ ದೌರ್ಬಲ್ಯವಾಯಿತು. ಪರಸ್ಪರ ಪೂರ್ಣ ಗ್ರಹಿಕೆ, ಮನಸ್ಸುಗಳ ಮಿಳಿತ ಅಥವ ಕಷ್ಟ ಇವು ನಮ್ಮಲ್ಲಿ ಸಾಧ್ಯ. ಬಂದಂತೆ ಅನುಭವಿಸಿ ಸಾಮಾನ್ಯ ಸಂಸಾರಜೀವನ ನಡೆಸುವಂಥ ವ್ಯಕ್ತಿಗಳಾಗಿರಲಿಲ್ಲ ನಾವಿಬ್ಬರೂ.

ಇಂಡಿಯಾ ದೇಶದ ಅಂಗಡಿಗಳಲ್ಲಿ ಮಾರುತ್ತಿದ್ದ ಅನೇಕ ಪಟಗಳಲ್ಲಿ ನನ್ನ ಮತ್ತು ಕಮಲಳ ಬೇರೆ ಬೇರೆ ಚಿತ್ರಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಅಂಟಿಸಿ ಮೇಲೆ “ ಆದರ್ಶ ಜೋಡಿ ” ಎಂದು ಬರೆದ ಒಂದು ಚಿತ್ರವಿತ್ತು. ಅನೇಕರು ನಮ್ಮನ್ನು ಅದೇ ರೀತಿ ಭಾವಿಸಿದ್ದರು. ಆದರೆ ಆದರ್ಶ ವನ್ನು ಮುಟ್ಟಲು ಅಥವ ಧರಿಸಲು ಬಹಳ ಕಷ್ಟವಿದೆ. ನಮ್ಮ ಕಷ್ಟಗಳು, ಭೇದಗಳು ಏನೆ ಇರಲಿ, ಜೀವನ ನಮ್ಮಲ್ಲಿ ಎಷ್ಟೇ ಕಣ್ಣು ಮುಚ್ಚಾಲೆಯಾಟವನ್ನು ಆಡಿರಲಿ ನಾವು ತುಂಬ ಅದೃಷ್ಟ ಶಾಲಿಗಳು ಎಂದು ಸಿಂಹಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಕಮಲಳಿಗೆ ನಾನು ಹೇಳಿದ್ದು ಇನ್ನೂ ಜ್ಞಾಪಕ ದಲ್ಲಿದೆ. ಮದುವೆಯು ಒಂದು ವಿಲಕ್ಷಣ ವ್ಯಾಪಾರ ; ಸಾವಿರಾರು ವರ್ಷಗಳ ಅನುಭವವಿದ್ದರೂ ಅದು ಹಾಗೆಯೇ ಉಳಿದಿದೆ. ವಿವಾಹಿತ ಜೀವನದ ಅನೇಕ ಭಗ್ನ ಜೀವಿಗಳನ್ನು ನಾವೂ ಸುತ್ತಲೂ ನೋಡುತ್ತಿದ್ದೇವೆ. ಅಥವ ಎಲ್ಲಕ್ಕೂ ಮಿಗಿಲಾಗಿ ಯಾವುದು ಜಾಜ್ವಲ್ಯಮಾನವಾದ ಸ್ವರ್ಣಮಂದಿರವಾ ಗಿರಬೇಕೋ ಅದು ಇಂದು ತುಕ್ಕು ಹಿಡಿದು ಮಲಿನವಾಗಿದೆ. “ ನಾವು ಎಷ್ಟು ಅದೃಷ್ಟಶಾಲಿಗಳು " ಎಂದು ಹೇಳಿದಾಗ ಆಕೆ ಒಪ್ಪಿದಳು, ನಾವು ಅನೇಕ ಬಾರಿ ವ್ಯಾಜ್ಯವಾಡಿ ಒಬ್ಬರ ಮೇಲೊಬ್ಬರು ಸಿಟ್ಟಾಗಿದ್ದರೂ ನಮ್ಮ ಜೀವನಜ್ಯೋತಿ ಪ್ರಕಾಶವಾಗಿಯೇ ಇತ್ತು. ನಾವಿಬ್ಬರೂ ಜೀವನದಲ್ಲಿ ಹೊಸ ಸಾಹಸಗಳನ್ನು ಕಾಣುತ್ತ ಪರಸ್ಪರ ಆಳವನ್ನು ಅರಿತುಕೊಳ್ಳಲು ಯತ್ನಿಸಿದೆವು,