ಪುಟ:ಭಾರತ ದರ್ಶನ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೬

ಭಾರತ ದರ್ಶನ

ಭಾರತದ ಜನಕೋಟಿಯಲ್ಲಿ ಈ ಭಾವನೆಯುಳ್ಳವರು ಎಷ್ಟು ಜನ? ಅದು ಹೇಳಲು ಅಸಾಧ್ಯ. ಕೋಟ್ಯಂತರ ಜನರ ಪ್ರಜ್ಞಾ ಭಾವನೆಯು ಬಡತನದ ಬೇಗೆ ಮತ್ತು ಸಂಕಟಗಳಿಂದ ಶುಷ್ಕವಾಗಿತ್ತು. ಇನ್ನು ಕೆಲವರ ಮನಸ್ಸು ಅಧಿಕಾರ, ಪ್ರಶಸ್ತಿ, ವಿಶಿಷ್ಟ ಹಕ್ಕುಗಳು, ವಿಶೇಷ ಅನುಕೂಲತೆಗಳಿಂದ ಕಲುಷಿತವಾಗಿತ್ತು. ಉದ್ವೇಗದಲ್ಲಿ ವ್ಯತ್ಯಾಸವಿರಬಹುದು, ಬೇರೆ ಭಾವನೆಗಳ ಸೆಳತಕ್ಕೆ ಸಿಕ್ಕಿರಬಹುದು; ಆದರೂ ಆ ಕ್ರಾಂತಿಕಾರಕ ಭಾವನೆಯು ದೇಶಾದ್ಯಂತ ಹರಡಿತ್ತು. ಅದು ಬೇರೆ ಬೇರೆ ಮಟ್ಟದಲ್ಲೂ ಇತ್ತು; ಏನೇ ವಿಪತ್ತು ಒದಗಲಿ ಎದುರಿಸಿ ಮುಂದುವರಿಯಬೇಕೆಂಬ ಉತ್ಕಟೇಚ್ಛೆ ಮತ್ತು ದೃಢ ನಿಶ್ಚಯವಿತ್ತು; ಆದ್ದರಿಂದ ಹೋರಾಟ ಅನಿವಾರ್ಯವೆಂಬ ಜನರಿಂದ ಮೊದಲುಗೊಂಡು ದೂರನಿಂತು ಮುಚ್ಚು ಮರೆಯಲ್ಲಿ ಸಹಾನು ಭೂತಿ ತೋರುವ ಜನರವರೆಗೂ ಇತ್ತು. ದುರಂತ ದೃಷ್ಟಿಯ ಇನ್ನು ಕೆಲವು ಜನರಿಗೆ ಉಸಿರು ಕಟ್ಟಿದಂತಿತ್ತು. ತಮ್ಮ ಸುತ್ತಲಿನ ಗೋಳಿನ ವಾತಾವರಣದಲ್ಲಿ ಉಸಿರಾಡಲು ಸಾಧ್ಯವಿಲ್ಲದೆ ಕತ್ತು ಹಿಸುಕಿದಂತೆ ಆಗಿತ್ತು. ಸಾಮಾನ್ಯ ಜನರೂ, ಅಲ್ಪತೃಪ್ತರೂ ಇಷ್ಟವಿಲ್ಲದಿದ್ದರೂ ಹೇಗೋ ಪರಿಸ್ಥಿತಿಗೆ ಹೊಂದಿಕೊಂಡರು.

ಭಾರತದಲ್ಲಿ ಬ್ರಿಟಿಷ್ ಆಡಳಿತ ವರ್ಗದ ಅಧಿಕಾರಿಗಳ ಹಿನ್ನೆಲೆಯೇ ಬೇರೆ ಇತ್ತು. ತಪ್ಪು ಯಾರದೆ ಇರಲಿ ಬ್ರಿಟಿಷರ ಮತ್ತು ಭಾರತೀಯರ ಮನಸ್ಸಿನಲ್ಲಿ ಮಧ್ಯೆ ಇದ್ದ ಅಪಾರ ಅಂತರ ಅತಿ ವಿಚಿತ್ರವಿತ್ತು. ಭಾರತದಲ್ಲಿ ಆಡಳಿತ ನಡೆಸಲು ಬ್ರಿಟಿಷರು ಪೂರ್ಣ ಅಶಕ್ತರು ಎಂಬುದಕ್ಕೆ ಇದೊಂದೇ ನಿದರ್ಶನ ಸಾಕು. ಎಲ್ಲಿ ಒಂದು ಹೆಜ್ಜೆ ಮುಂದುವರಿಯಬೇಕಾದರೂ ಆಡಳಿತ ವರ್ಗಕ್ಕೂ ಪ್ರಜೆಗಳಿಗೂ ಒಂದು ಸಾಮರಸ್ಯ, ಸಾಮಾನ್ಯ ದೃಷ್ಟಿ ಇರಬೇಕು; ಇಲ್ಲದಿದ್ದರೆ ಪ್ರತ್ಯಕ್ಷ ಅಥವ ಆಂತರಿಕ ಹೋರಾಟ ಖಂಡಿತ, ಭಾರತದಲ್ಲಿ ಬ್ರಿಟಿಷರು ಯಾವಾಗಲೂ ಬ್ರಿಟನ್ನಿನ ಸಂಪ್ರದಾಯ ಪಕ್ಷದ ಪ್ರತಿನಿಧಿಗಳೇ ಇರುತ್ತಿದ್ದರು. ಅವರಿಗೂ ಇಂಗ್ಲೆಂಡಿನ ಪ್ರಗತಿ ಪರ ದೃಷ್ಟಿಗೂ ಯಾವ ಸಂಬಂಧವೂ ಇರಲಿಲ್ಲ. ಭಾರತದಲ್ಲಿ ಅವರು ಹೆಚ್ಚು ಕಾಲ ಕಳೆದಂತೆ ಅವರ ದೃಷ್ಟಿ ಇನ್ನೂ ಸಂಕುಚಿತಗೊಳ್ಳುತ್ತಿತ್ತು. ನಿವೃತ್ತರಾಗಿ ಇಂಗ್ಲೆಂಡಿಗೆ ಹೋದಮೇಲೆ ಭಾರತದ ಸಮಸ್ಯೆಗಳ ಮೇಲೆ ಸಲಹೆ ಕೊಡಲು ಇವರೇ ನಿಪುಣರಾಗುತ್ತಿದ್ದರು. ತಾವು ಮಾಡಿದುದೆಲ್ಲ ಸರಿ ಎಂಬ ಭಾವನೆಯಲ್ಲೂ, ಭಾರತದಲ್ಲಿ ಬ್ರಿಟಿಷರ ಆಡಳಿತದ ಉಪಯುಕ್ತತೆ ಮತ್ತು ಅವಶ್ಯಕತೆಗಳ ವಿಷಯದಲ್ಲ, ಸಾಮ್ರಾಜ್ಯ ಸಂಪ್ರದಾಯದ ಪ್ರತಿನಿಧಿಗಳಾಗಿ ಅವರ ಉನ್ನತ ಕರ್ತವ್ಯನಿಷ್ಠೆಯಲ್ಲ ಅವರಿಗಿದ್ದ ಅಗಾಧ ವಿಶ್ವಾಸವನ್ನು ಕದಲಿಸಲು ಸಾಧ್ಯವಿರಲಿಲ್ಲ. ರಾಷ್ಟ್ರೀಯ ಮಹಾಸಭೆಯು ಈ ಆಡಳಿತ ಮೂಲವನ್ನೇ ಸಂಪೂರ್ಣ ನಿರಾಕರಿಸಿ ಭಾರತದಿಂದ ಅದನ್ನು ಕಿತ್ತೊಗೆಯಲು ಪ್ರಯತ್ನ ಪಟ್ಟ ಕಾರಣ ಕಾಂಗ್ರೆಸ್ ಈಗ ಅವರ ದೃಷ್ಟಿಯಲ್ಲಿ ಮೊದಲನೆಯ ಸಾರ್ವಜನಿಕ ಶತ್ರು ಆಯಿತು. ಅಂದಿನ ಭಾರತ ಸರಕಾರದಗೃಹ ಸಚಿವ ಸರ್ ರೆಜಿನಾಲ್ಡ್ ಮಾಕ್ಸ್‌ವೆಲ್ ೧೯೪೧ರಲ್ಲಿ ಕೇಂದ್ರ ಶಾಸನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ತನ್ನ ಮನಸ್ಸನ್ನು ಬಿಚ್ಚಿ ತೋರಿಸಿದ್ದಾನೆ. 'ವಿಚಾರಣೆಯಿಲ್ಲದೆ ಸೆರೆಮನೆಯಲ್ಲಿದ್ದ ಕಾಂಗ್ರೆಸ್ಸಿನವರು, ಸಮಾಜವಾದಿಗಳು ಮತ್ತು ಸಾಮ್ಯಾವಾದಿಗಳನ್ನು ಜರ್ಮನ್ ಮತ್ತು ಇಟಾಲಿರ್ಯ ಯುದ್ದ ಖೈದಿಗಳಿಗಿಂತ ಕಡೆಯಾಗಿ ನೋಡಿಕೊಳ್ಳಲಾಗುತ್ತಿದೆ' ಎಂಬ ಆರೋಪಣೆಗೆ ಉತ್ತರ ಕೊಡುತ್ತ, "ಜರ್ಮನರು ಮತ್ತು ಇಟಾಲಿಯನರು ತಮ್ಮ ದೇಶಕ್ಕಾಗಿ ಯುದ್ಧ ಮಾಡುತ್ತಿದಾರೆ. ಕಾಂಗ್ರೆಸ್ಸಿನವರು ಸರಕಾರವ್ಯವಸ್ಥೆಯನ್ನು ಬುಡ ಮೇಲು ಮಾಡಲು ಹೊರಟಿರುವ ದೇಶದ್ರೋಹಿಗಳು” ಎಂದನು. ಭಾರತೀಯನು ತನ್ನ ದೇಶಕ್ಕೆ ಸ್ವಾತಂತ್ರ್ಯ ಬಯಸುವುದೂ ಮತ್ತು ದೇಶದ ಆರ್ಥಿಕ ರಚನೆ ಪರಿವರ್ತನೆ ಮಾಡಲೆತ್ನಿಸುವುದೂ ಸರ್ ರೆಜಿನಾಲ್ಡ್ಗೆ ಉದ್ದಟತನವೆಂದು ಕಂಡಿತು. ಆತನ ಮಾತೃ ಭೂಮಿಯೇ ಜರ್ಮನಿ ಮತ್ತು ಇಟಲಿಗಳ ಮೇಲೆ ಯುದ್ಧ ಮಾಡುತ್ತಿದ್ದರೂ ಭಾರತೀಯರು ಮತ್ತು ಜರ್ಮನರು ಇಟಾಲಿಯನರಲ್ಲಿ ಆತನ ಸಹಾನುಭೂತಿ ಎಲ್ಲ ಜರ್ಮನರ ಇಟಾಲಿಯನರ ಮೇಲೆ; ಇದು ನಡೆದದ್ದು ರಷ್ಯ ಯುದ್ಧರಂಗ ಪ್ರವೇಶಿಸುವ ಮುಂಚೆ, ಆಗ ಸಮಾಜರಚನೆ ಪರಿವರ್ತನೆಯ ಎಲ್ಲ ಪ್ರಯತ್ನವನ್ನೂ ಬೇಕಾದಂತೆ ಖಂಡಿಸಬಹುದಿತ್ತು. ಎರಡನೆಯ ಪ್ರಪಂಚ ಯುದ್ಧಕ್ಕೆ ಮೊದಲು ಫ್ಯಾಸಿಸ್ಟ್ ಆಡಳಿತವನ್ನು ಅನೇಕಬಾರಿ ಪ್ರಶಂಸಿಸಲಾಗಿತ್ತು. ಹಿಟ್ಲರನೇ ತನ್ನ “ಮೈನ್ ಕ್ಯಾಂಫ್” ಗ್ರಂಥದಲ್ಲಿ ಮತ್ತು ಅನಂತರ ಸಹ ಬ್ರಿಟಿಷ್ ಚಕ್ರಾಧಿಪತ್ಯವು ಶಾಶ್ವತ ಮುಂದುವರಿಯಬೇಕು ಎಂದು ಹೇಳಿರಲಿಲ್ಲವೆ? ಯುದ್ಧಕ್ಕೆ ಅಕ್ಷ ರಾಷ್ಟ್ರಗಳ ವಿರುದ್ಧ ಎಲ್ಲ ಬಗೆಯ ಸಹಾಯ ಕೊಡಬೇಕೆಂದು