ಪುಟ:ಭಾರತ ದರ್ಶನ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೩೯

ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಅದು ಶಾಂತಿಯುತವಾಗಿ ಮೂರುತಿಂಗಳ ಕಾಲ ನಡೆಯಿತು. ಅದು ಶ್ರಮಜೀವಿಗಳ ಸ್ವಯಂಪ್ರೇರಿತ ರಾಜಕೀಯ ಪ್ರತಿಕ್ರಿಯೆ. ಆಗ ದುಬಾರಿ ಕೂಲಿದರದ ಕಾಲವಾದ್ದರಿಂದ ಬಹಳ ಕಷ್ಟ ಅನುಭವಿಸಿದರು. ಅಷ್ಟು ದೀರ್ಘಕಾಲದ ಮುಷ್ಕರ ಸಮಯದಲ್ಲಿ ಹೊರಗಿನಿಂದ ಯಾರ ಸಹಾಯವನ್ನೂ ಅವರು ಅಪೇಕ್ಷಿಸಲಿಲ್ಲ. ಕೆಲವೇ ದಿನಗಳಾದರೂ ಇತರ ಕೇಂದ್ರಗಳಲ್ಲಿ ಸಹ ಅನೇಕ ಮುಷ್ಕರಗಳು ನಡೆದವು. ಕಾನಪುರದಲ್ಲಿ ಕಮ್ಯೂನಿಸ್ಟರ ಪ್ರಾಬಲ್ಯದಿಂದ ಯಾವ ಮುಷ್ಕರಕ್ಕೂ ಅವಕಾಶದೊರೆಯಲಿಲ್ಲ. ಸರಕಾರದ ಅಧೀನದಲ್ಲೇ ಇದ್ದ ರೈಲ್ವೆಗಳಲ್ಲಿ ದೊಡ್ಡ ಮುಷ್ಕರ ಯಾವುದೂ ಸಾಧ್ಯವಿರಲಿಲ್ಲ. ಆದರೆ ಅಲ್ಲಲ್ಲಿ ನಡೆದ ಗಲಭೆಗಳಿಂದ ಕೆಲಸಕ್ಕೆ ತುಂಬ ಅಡಚಣೆಯಾಯಿತು.

ಪಂಜಾಬದಲ್ಲೂ ಅನೇಕ ಹರತಾಳಗಳೂ ಮುಷ್ಕರಗಳೂ ಆದರೂ ಉಳಿದ ಪ್ರಾಂತಗಳಿಗಿಂತ ಅದು ಹಿಂದೆ ಬಿದ್ದಿತು. ಮುಸ್ಲಿಮರೇ ಬಹು ಸಂಖ್ಯಾತರಿದ್ದ ಗಡಿನಾಡಿನ ವಾಯವ್ಯ ಪ್ರಾಂತದ ಪರಿಸ್ಥಿತಿ ಅತೀ ವಿಚಿತ್ರವಿತ್ತು. ಇತರ ಪ್ರಾಂತಗಳಂತೆ ಸರಕಾರವು ಅಲ್ಲಿ ಆರಂಭದಲ್ಲಿ ಸಾಮೂಹಿಕ ಬಂಧನಗಳನ್ನು ಮಾಡಲಿಲ್ಲ; ಬೇರೆ ಯಾವ ಉಗ್ರಕಾರ್ಯಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಗಡಿನಾಡಿನ ಜನರು ಬಹು ಬೇಗ ಉದ್ರೇಕಗೊಳ್ಳುವವರೆಂಬ ಕಾರಣದಿಂದ ಇದ್ದರೂ ಇರಬಹುದು ಅಥವ ಮುಸ್ಲಿಮರು ಈ ರಾಷ್ಟ್ರೀಯ ಚಳವಳಿಗೆ ಸೇರಿಲ್ಲವೆಂದು ತೋರಿಸಲು ಇದ್ದರೂ ಇರಬಹುದು. ಆದರೆ ಇತರ ಪ್ರಾಂತಗಳ ಘಟನೆಗಳ ಸುದ್ದಿಯು ವಾಯವ್ಯ ಪ್ರಾಂತಕ್ಕೆ ಮುಟ್ಟಿದೊಡನೆ ಅಲ್ಲಿಯೂ ಅಸಂಖ್ಯಾತ ವಿರೋಧ ಪ್ರದರ್ಶನಗಳು ನಡೆದು ಬ್ರಿಟಿಷ್ ಅಧಿಕಾರವನ್ನೇ ಧಿಕ್ಕರಿಸಲು ಆರಂಭಿಸಿದರು. ಪ್ರದರ್ಶನಕಾರರಮೇಲೆ ಗುಂಡಿನ ಮಳೆಸುರಿಸಿ ಜನರದಂಗೆ ಅಡಗಿಸಲು ಎಲ್ಲ ಕಾರ್ಯಕ್ರಮ ತೆಗೆದುಕೊಂಡರು. ಅನೇಕ ಸಹಸ್ರ ಜನರ ಬಂಧನವಾಗಿ ಪಠಾಣ ಮಹಾನಾಯಕನಾದ ಬಾದಷಾರ್ಖಾ ಎಂದು ಪ್ರಸಿದ್ಧರಾದ ಅಬ್ದುಲ್ ಗಫಾರ್ ರ್ಖಾರಿಗೆ ಪೋಲೀಸರ ಏಟಿನಿಂದ ಬಲವಾದ ಗಾಯವಾಯಿತು. ಜನರನ್ನು ಉದ್ರೇಕಿಸಲು ಇದೊಂದೇ ಸಾಕಿತ್ತು. ಆದರೆ ಅಬ್ದುಲ್ ಗಫಾರ್ ರ್ಖಾ ತಮ್ಮ ಜನರಲ್ಲಿ ತುಂಬಿದ್ದ ಉತ್ತಮ ಸಂಯಮದಿಂದ ಇತರ ಕಡೆಗಳಂತೆ ಅಲ್ಲಿ ಯಾವ ಹಿಂಸಾತ್ಮಕ ಕಾರ್ಯಗಳೂ ನಡೆಯಲಿಲ್ಲ.

ಹಿಂಸಾತ್ಮಕ ಹೋರಾಟ ಮತ್ತು ವಿನಾಶ ಕೃತ್ಯಗಳಲ್ಲಿ ಕೊನೆಗಂಡ ಜನರ ಈ ಆಕಸ್ಮಿಕ ಅವ್ಯವಸ್ಥಿತ ಪ್ರದರ್ಶನಗಳು ಮತ್ತು ದಂಗೆಗಳು ಜನಮನದ ಉದ್ರೇಕ ಸ್ಥಿತಿಯ ಅಳತೆಗೋಲುಗಳು. ಈ ಜನಶಕ್ತಿಯು ಸರಕಾರದ ಅಸಂಖ್ಯಾತ, ಸುಸಜ್ಜಿತ ಸೈನ್ಯ ಶಕ್ತಿಯನ್ನು ಸಹ ಎದುರಿಸಿತು. ಈ ಉದ್ರೇಕ ಭಾವನೆಯು ನಾಯಕರ ಬಂಧನಕ್ಕೆ ಮುಂಚೆಯೂ ಜನರಲ್ಲಿ ಇತ್ತು. ಆದರೆ ಆ ಬಂಧನಗಳೂ, ಅನಂತರದ ಗುಂಡಿನ ಸುರಿಮಳೆಗಳೂ ಜನರನ್ನು ಸಿಟ್ಟಿಗೆಬ್ಬಿಸಿದವು; ಸಿಟ್ಟಿದ್ದ ಜನತೆ ಹುಚ್ಚೆದ್ದು ಹರಿಯಿತು, ಸ್ವಲ್ಪ ಕಾಲ ಏನು ಮಾಡಬೇಕೆಂದು ತೋರದೆ ದಿಗ್ಭ್ರಮೆಗೊಂಡಂತೆ ಕಂಡಿತು; ಯಾವ ತಿಳಿವಳಿಕೆಯನ್ನೂ, ಕಾರ್ಯಕ್ರಮವನ್ನೂ ಕೊಟ್ಟಿರಲಿಲ್ಲ. ಮಾರ್ಗದರ್ಶಿಯಾಗಿ ನಿಂತು ಈರೀತಿ ಮಾಡಿ ಎಂದು ಹೇಳಲು ಒಬ್ಬ ನಾಯಕನೂ ಹೊರಗೆ ಉಳಿದಿರಲಿಲ್ಲ; ಆದರೂ ಆ ಕೋಪಾವೇಶದಲ್ಲಿ, ಉದ್ರೇಕ ಮನಸ್ಸಿನಲ್ಲಿ ಸುಮ್ಮನಿರಲು ಸಾಧ್ಯವೂ ಇರಲಿಲ್ಲ. ಅಂತಹ ಸಂದರ್ಭಗಳಲ್ಲಿ ಎಲ್ಲಕಡೆ ಆಗುವಂತೆ ಸ್ಥಳದಲ್ಲಿಯೇ ನಾಯಕರು ಹುಟ್ಟಿದರು; ಸ್ವಲ್ಪ ಕಾಲ ಜನರು ಅವರ ಮಾತನ್ನು ಕೇಳಿದರು. ಆದರೆ ಅವರಿಗೂ ಏನೂ ತಿಳಿಯದೆ ಜನರೇ ಸ್ವಯಂ
——————
ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದ ನಿಸ್ವಾರ್ಥಸೇವೆಯಿಂದ. ಆಗಾಗ ದೊಡ್ಡ ನಗರಗಳಲ್ಲಿ ಪರ್ತಕರು ಸ್ವಲ್ಪ ಹಣಸಹಾಯ ಮಾಡಿದ್ದಾರೆ. ೧೯೩೭ರಲ್ಲಿ ಮೂತ್ರ ಕೆಲವು ದೊಡ್ಡ ಕೈಗಾರಿಕಾ ಬಂಡವಾಳಗಾರರು ಮಹಾ ಚುನಾಣೆಗಳಿಗೆ ಧನಸಹಾಯ ಮಾಡಿದರು. ನಮ್ಮ ಕಾರ್ಯವಿಸ್ತಾರ ನೋಡಿದರೆ ಈ ಹಣ ಸಹ ಅತ್ಯ, ರಾಜಕೀಯ ಅದ್ಭುತ ಕಾರ್ಯಚಟುವಟಿಕೆ ಮತ್ತು ವಿಪ್ಲವಗಳಿಂದ ತುಂಬಿದ ಕಳೆದ ಇಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಕಲಸ ಎಷ್ಟು ಅತ್ಯಲ್ಪ ಹಣದಿಂದ ನಡೆದಿದೆ ಎಂದು ಹೇಳಿದರೆ ಪಾಶ್ಚಾತ್ಯರು ನಂಬುವುದು ಸಹ ಕಷ್ಟ. ನನಗೆ ಗೊತ್ತಿರುವಂತೆ ತುಂಬ ಕಾರ್ಯೋನ್ಮುಖವೂ ಸುಸಂಘಟಕವೂ ಆದ ಯುಕ್ತಪ್ರಾಂತದಲ್ಲಿ ನಮ್ಮ ಕೆಲಸವೆಲ್ಲ ನಡೆದುದು ನಮ್ಮ ಸದಸ್ಯರ ನಾಲ್ಕು ಆಗ ಚಂದಾ ಹಣದಿಂದ ಮಾತ್ರ.