ಪುಟ:ಭಾರತ ದರ್ಶನ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೫೦

ಭಾರತ ದರ್ಶನ

ಹೊರಗೆಡವಿತು. ಎಲ್ಲ ಪ್ರಮುಖ ವ್ಯಕ್ತಿಗಳೂ ಸೇರಿ ಬಹು ಸಂಖ್ಯಾಕರು ಸೆರೆಮನೆಯಲ್ಲಿದ್ದುದರಿಂದ ಅವರಿಂದ ಯಾವ ಸಹಾಯವೂ ದೊರೆಯುವಂತಿರಲಿಲ್ಲ. ಆದರೂ ಅನಧಿಕಾರಯುತ ಏರ್ಪಟ್ಟ ಪರಿಹಾರ ಸಂಸ್ಥೆಗಳಲ್ಲಿ ಸಮಾಜದ ಪ್ರತಿಯೊಂದು ಮಟ್ಟದಿಂದಲೂ ಸ್ತ್ರೀ ಪುರುಷರು ಬಂದು ಅದ್ಭುತಶಕ್ತಿ, ಪರಸ್ಪರ ಸಹಾಯ, ಸಹಕಾರದೃಷ್ಟಿ ಮತ್ತು ಆತ್ಮತ್ಯಾಗ ತೋರಿಸಿ ಶಕ್ತಿ ಮೀರಿ ಕೆಲಸಮಾಡಿದರು. ಇನ್ನೂ ಕೆಲವರು ಸಹಕರಿಸದೆ ತಮ್ಮ ಅಲ್ಪತನ ಮತ್ತು ಪರಸ್ಪರ ವ್ಯಕ್ತಿ ವೈಷಮ್ಯ ತೋರಿಸಿದರು; ಕೆಲವರು ಯಾವ ಸಹಾಯ ಮಾಡದೆ ಸುಮ್ಮನೆ ಹಿಂದೆನಿಂತರು; ಕೆಲವರು ಎಲ್ಲ ಮಾನವೀಯತೆ ಮತ್ತು ರಾಷ್ಟ್ರೀಯತೆ ಮರೆತು ಕಣ್ಣೆದುರಿಗೆ ನಡೆಯುವುದನ್ನೇ ಕಾಣದಷ್ಟು ಕುರುಡಾದರು.

ಯುದ್ಧ ಪರಿಸ್ಥಿತಿ, ಅಧಿಕಾರಿಗಳ ಅಜಾಗರೂಕತೆ, ದೂರದೃಷ್ಟಿಯ ಪೂರ್ಣ ಅಭಾವ ಇವುಗಳ ಪರಿಣಾಮವಾಗಿಯೇ ಕಾಮ ಒದಗಿತು. ಸ್ವಲ್ಪ ತಲೆ ಇದ್ದು ಯೋಚಿಸಿದ ಪ್ರತಿಯೊಬ್ಬನಿಗೂ ಏನೋ ವಿಪತ್ತು ನಿಶ್ಚಯವೆಂದು ತಿಳಿದಿದ್ದರೂ ದೇಶದ ಆಹಾರ ಸಮಸ್ಯೆಯ ಕಡೆ ಅಧಿಕಾರಿಗಳು ತೋರಿದ ಅಲಕ್ಷ ಮನೋಭಾವ ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಯುದ್ಧದ ಸೆಳೆತಕ್ಕೆ ಸಿಕ್ಕಿ ಬಿದ್ದ ಪ್ರತಿಯೊಂದು ದೇಶದಲ್ಲಿ ಈ ಮುಖ್ಯ ಆರ್ಥಿಕ ಸಮಸ್ಯೆಗೆ ಯುದ್ಧಕ್ಕೆ ಪೂರ್ವಭಾವಿಯಾಗಿಯೇ ಪೂರ್ಣ ಗಮನ ಕೊಡಲಾಗಿತ್ತು. ಭಾರತದಲ್ಲಿ ಇಂಡಿಯ ಸರಕಾರ ಯೂರೋಪಿನಲ್ಲಿ ಯುದ್ಧ ಆರಂಭವಾದ ಮೂರು ವರ್ಷ ನಾಲ್ಕು ತಿಂಗಳನಂತರ, ಜಪಾನ್ ಯುದ್ಧ ಆರಂಭವಾದ ಒಂದು ವರ್ಷದ ನಂತರ ಆಹಾರ ಶಾಖೆ ಆರಂಭಿಸಿತು. ಜಪಾನ್ ಬರ ಆಕ್ರಮಣ ಮಾಡಿದರೆ ಬಂಗಾಲದ ಆಹಾರ ಸರಬರಾಜಿಗೆ ದೊಡ್ಡ ವಿಪತ್ತು ಎಂದು ಎಲ್ಲರಿಗೂ ಮುಂಚೆಯೇ ತಿಳಿದಿತ್ತು. ಕಾಮ ಉಲ್ಬಣಿಸಿ ಘೋರ ಪರಿಸ್ಥಿತಿ ಒದಗಿದ ೧೯೪೩ರ ಮಧ್ಯ ಭಾಗದ ವರೆಗೆ ಆಹಾರ ವಿಷಯದಲ್ಲಿ ಇಂಡಿಯ ಸರಕಾರಕ್ಕೆ ಯಾವ ನೀತಿಯೂ ಇರಲಿಲ್ಲ. ತನ್ನ ವಿರೋಧಿಗಳನ್ನು ಅಡಗಿಸುವ ಕಾರ್ ಒಂದು ಬಿಟ್ಟರೆ ಉಳಿದ ಎಲ್ಲ ವಿಷಯಗಳಲ್ಲಿ ಸರಕಾರ ಎಷ್ಟು ಅಸಮರ್ಥವಿದೆ ಎಂಬುದೇ ಒಂದು ಆಶ್ಚರ್ಯ. ಅಥವ ಈಗಿನ ತನ್ನ ರಚನೆ ವ್ಯತ್ಯಾಸವಾಗದಂತೆ ತನ್ನ ಉಳಿಗಾಲ ನೋಡಿಕೊಳ್ಳುವುದೊಂದೇ ಅದಕ್ಕೆ ಮುಖ್ಯ ಕೆಲಸವೆಂದು ತೋರುತ್ತದೆ. ಸಂಕಟ ಬಂದಾಗ ಮಾತ್ರ ವೆಂಕಟರಮಣ. ಸರಕಾರದ ಸಾಮರ್ಥದಲ್ಲಿ ಅಪನಂಬಿಕೆ ಮತ್ತು ಅದರ ಸದುದ್ದೇಶಗಳಲ್ಲಿ ಸಂಶಯ ಸದಾ ಎದುರು ನಿಂತಾಗ ಈ ಸಂಕಟ ಇನ್ನೂ ಅಸಹನೀಯವಾಗುತ್ತದೆ.
——————
* ಸರ್ ರ್ಜಾ ವುಡ್ಹಡ್ ಅಧ್ಯಕ್ಷತೆ ವಹಿಸಿದ್ದ ಕ್ಷಾಮ ವಿಚಾರಣಾ ಸಮಿತಿಯು ಅಧಿಕಾರಿಗಳ ಮಿತಭಾಷೆಯನ್ನೇ ಬಳಸಿದ್ದರೂ ಮೇಲಿಂದ ಮೇಲೆ ಅಧಿಕಾರಿಗಳು ಮಾಡಿದ ತಪ್ಪುಗಳ ದುರಂತ ಪರಂಪರೆಯೂ ವರ್ತಕರ ಹಣದ ದುರಾಸೆಯೂ ಬಂಗಾಲ ಕ್ಷಾಮಕ್ಕೆ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದೆ. "ಬಂಗಾಲ ಕ್ಷಾಮವು ಹಬ್ಬಿದ ಬಗೆ ಮತ್ತು ಅದಕ್ಕೆ ಕಾರಣ ಕಂಡುಹಿಡಿಯುವ ದುಃಖಮಯ ಕಾರ್ಯ ನಮ್ಮ ಪಾಲಿಗೆ ಬಂದಿದೆ. ಆ ದುರಂತದ ಭಯಂಕರ ಚಿತ್ರ ಇನ್ನೂ ನಮ್ಮ ಮನಸ್ಸಿನಲ್ಲಿ ಸುಳಿಯುತ್ತಿದೆ. ೧೫ ಲಕ್ಷ ಬಂಗಾಲದ ಬಡಜನರು ತಮ್ಮ ತಪ್ಪು ಏನೂ ಇಲ್ಲದೆ ಈ ಕ್ಷಾಮಕ್ಕೆ ಆಹುತಿಯಾದರು. ಸಮಾಜವೂ ಮತ್ತು ಅದರ ಅಂಗಗಳೂ ಸಮಾಜದ ಬಲಹೀನರನ್ನು ರಕ್ಷಿಸಿಕೊಳ್ಳಲು ಅಸಮರ್ಥವಾದವು. ನಿಜವಾಗಿ ನೈತಿಕ, ಸಾಮಾಜಿಕ ಮತ್ತು ಆಡಳಿತವರ್ಗದ ಪತನವಾಯಿತು,” ಎಂದು ಹೇಳಿದ್ದಾರೆ. ಪ್ರಾಂತದ ತಳಹತ್ತಿದ ಆರ್ಥಿಕಮಟ್ಟ, ಕೈಗಾರಿಕೆಯ ಅಭಿವೃದ್ಧಿಯಿಂದ ಕಡಮೆಯಾಗದ ಭೂಮಿಯಮೇಲಿನ ಅವಲಂಬನೆಯ ಹೆಚ್ಚಿನ ಒತ್ತಡ, ಜನರಲ್ಲನೇಕರು ಜೀವಶ್ರನಗಳಾಗಿ ಬಾಳಿ ಆರ್ಥಿಕ ವ್ಯತ್ಯಾಸದ ಯಾವ ಹೊಡೆತವನ್ನೂ ಸಹಿಸಲಾರದ ಸ್ಥಿತಿಯ ದುರ್ಬಲಜೀವನ, ಅನಾರೋಗ್ಯ ಸ್ಥಿತಿ, ಸ್ವಲ್ಪವೂ ಪುಷ್ಟಿಯಿಲ್ಲದ ಆಹಾರ ಸೇವನೆ, ಆರೋಗ್ಯ ಮತ್ತು ಐಶ್ವರ್ಯಗಳ ಅಭಾವ ಎಲ್ಲವನ್ನೂ ವಿವರಿಸಿದ್ದಾರೆ. ಆ ವರ್ಷದ ಅಲ್ಪ ಬೆಳೆ ಬರ ಜಪಾನರ ವಶವಾಗಿ ಅಕ್ಕಿ ಬರದ ಹೋದುದು, ಸರಕಾರ ನಕಾರ ಹೇಳಿ ಅನೇಕ ಬಡವರನ್ನು ಸಾವಿನ ದವಡೆಗೆ ತಳ್ಳಿದುದು, ಆಹಾರ ಮತ್ತು ಮಾರ್ಗ ಸಾಕರ್ಯವೆಲ್ಲ ಸೈನ್ಯಶಾಖೆಗೆ ಮೀಸಲಾದುದು, ಸರಕಾರದಲ್ಲಿ ಅವಿಶ್ವಾಸ, ಕ್ಷಾಮಕ್ಕೆ ತತ್ಕ್ಷಣದ ಕಾರಣಗಳೆಂದಿದ್ದಾರೆ; ಇಂಡಿಯಾ ಸರಕಾರ ಮತ್ತು ಬಂಗಾಲ ಸರಕಾರ ಎರಡರ ನೀತಿಯನ್ನೂ, ಅಥವ ನೀತಿ ಶೂನ್ಯತೆ ಅಥವ ನಿಮಿಷ ನಿಮಿಷಕ್ಕೆ ಬದಲಾಯಿಸುವ ನೀತಿಯನ್ನೂ;