ಪುಟ:ಭಾರತ ದರ್ಶನ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ೪೫೬ ಭಾರತದಲ್ಲಿ ಈಗ ಎಲ್ಲಿ ನೋಡಿದರೂ ನಿರಾಶಾ ಭಾವನೆ ಮತ್ತು ಅಸಹಾಯಕತೆ ಎದ್ದು ಕಾಣುತ್ತಿವೆ; ಮೇಲಿಂದ ಮೇಲೆ ಒದಗಿದ ದುರ್ಘಟನೆಗಳು, ಜನರು ಅನುಭವಿಸಿದ ಅಪಾರ ಸಂಕಟ, ಆಶಾಶೂನ್ಯ ಭವಿಷ್ಯ ಇವುಗಳ ಪರಿಣಾಮವಾಗಿ ನಿರಾಶೆ ಮೂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಈ ಪ್ರಶಾಂತತೆಯ ಕೆಳಗಡೆ ಒಂದು ಹೊಸ ಜೀವನದ ಚೈತನ್ಯ ಶಕ್ತಿಯ ತಳಮಳವು, ಚಲನವು ಇದ್ದೇ ಇದೆ ; ಕಾಣದ ಶಕ್ತಿಗಳು ಒಳಗೇ ಕೆಲಸಮಾಡುತ್ತಿವೆ. ಅಧಿನಾಯಕರ ಕಾರ್ಯ ಕ್ಷೇತ್ರವೆಲ್ಲ ಮೇಲೆ ಮಾತ್ರ ಆದರೆ ಹಿಂದಿನ ಬಂಧನವನ್ನೆಲ್ಲ ಕಳಚಿಕೊಂಡು ಚೇತನಗೊಳ್ಳುತ್ತಿರುವ ಜನತೆಯ ಅವ್ಯಕ್ತ, ಅವ್ಯವಸ್ಥಿತ ಪ್ರೇರಣೆಯು ಅವರನ್ನು ತನ್ನದೇ ಒಂದು ದಾರಿಯಲ್ಲಿ ಎಳೆದೊಯ್ಯುತ್ತಿದೆ. - ೮, ಭಾರತದ ಬೆಳವಣಿಗೆಗೆ ಅಡ್ಡಿ ವ್ಯಕ್ತಿಯಂತೆ ಪ್ರತಿಯೊಂದು ಜನಾಂಗಕ್ಕೂ ಅನೇಕ ಮುಖಗಳು ; ಅದರ ಜೀವನಕ್ಕೆ ಅನೇಕ ಪ್ರವೇಶಗಳು. ಈ ಬಹುಮುಖ ಜನಾಂಗ ಜೀವನದಲ್ಲಿ ಒಂದಕ್ಕೊಂದಕ್ಕೆ ಪ್ರಬಲ ಆತ್ಮೀಯ ಸಂಬಂಧ ವಿದ್ದರೆ ಮಾತ್ರ ಜನಾಂಗ ಜೀವನ ಸುಲಲಿತವಾಗುತ್ತದೆ. ಇಲ್ಲವಾದರೆ ಒಂದಕ್ಕೊಂದಕ್ಕೆ ವಿರೋಧ ಬಂದು, ಜನಾಂಗ ಜೀವನ ಛಿದ್ರಗೊಂಡು ತೊಂದರೆಗೀಡಾಗುತ್ತದೆ. ಸಾಮಾನ್ಯವಾಗಿ ಅನ್ನೋನ್ಯ ಭಾವನೆ ಬೆಳೆ ಬೆಳೆಯುತ್ತ ಒಂದು ಬಗೆಯ ಸಾ ಮ ರ ಸ್ಯ ವೇ ರ್ಪ ಡು ತ್ತ ದೆ. ಸಾಮಾನ್ಯ ಬೆಳವಣಿ ಗೆಗೆ ತೊಂದರೆ ಬಂದರೆ ಅಥವ ಸುಲಭವಾಗಿ ಜೀರ್ಣಿಸಿಕೊಳ್ಳಲಾಗದ ಯಾವುದಾದರೂ ವಿಶೇಷ ವ್ಯತ್ಯಾಸವಾದರೆ ಆಗ ಆ ವಿವಿಧ ಮುಖಗಳಲ್ಲಿ ವಿರೋಧ ಹುಟ್ಟುತ್ತದೆ. ಮೇಲಿನ ಅಭಿನ್ನತೆ ಮತ್ತು ಘರ್ಷಣೆಯು ಬಹುಕಾಲ ಯಾವ ಬೆಳೆವಣಿಗೆಗೂ ಅವಕಾಶವಿಲ್ಲದೆ ಭಾರತದ ಮನಸ್ಸಿನಲ್ಲಿ ಮತ್ತು ಭಾವ ನೆಯಲ್ಲಿ ಮೂಲ ಹೋರಾಟ ಒಂದು ಇದ್ದೇ ಇದೆ. ಯಾವ ಸಮಾಜವೇ ಆಗಲಿ ಭದ್ರವೂ ಪ್ರಗತಿಪರವೂ ಇರಬೇಕಾದರೆ ಸ್ವಲ್ಪ ಹೆಚ್ಚು ಕಡಮೆ ಭದ್ರವಾದ ಮೂಲತತ್ತ್ವಗಳ ತಳಹದಿ ಅದಕ್ಕೆ ಬೇಕು ಮತ್ತು ಕಾರ್ಯೋನ್ಮುಖ ದೃಷ್ಟಿಯೂ ಇರಬೇಕು; ಎರಡೂ ಅತ್ಯವಶ್ಯಕ ತೋರುತ್ತದೆ. ಕಾರ್ಯೋನ್ಮುಖ ದೃಷ್ಟಿ ಇಲ್ಲದಿದ್ದರೆ ಜೀವನ ಪಾಚಿಗಟ್ಟ ಕೊಳೆತು ನಾರುತ್ತದೆ ; ಕೆಲವು ಮೂಲ ತತ್ತ್ವಗಳ ಭದ್ರ ತಳಹದಿ ಇಲ್ಲ ದಿದ್ದರೆ ಸಮಾಜ ಜೀವನ ಛಿದ್ರವಾಗಿ ನಾಶಹೊಂದುತ್ತದೆ.

  • ಭಾರತದಲ್ಲಿ ಶಾಶ್ವತ, ಸರ್ವ ವ್ಯಾಪಕ, ನಿರುಪಾಧಿಕ, ಮೂಲತತ್ತ್ವಗಳ ಅನ್ವೇಷಣೆ ಅನಾದಿಕಾಲ ದಿಂದ ನಡೆದಿದೆ. ಜೊತೆಗೆ ಕಾರ್ಯೋನ್ಮುಖ ದೃಷ್ಟಿ ಇತ್ತು ಮತ್ತು ವ್ಯತ್ಯಾಸಗೊಳ್ಳುತ್ತಿರುವ ಪ್ರಪಂಚದ ಮತ್ತು ಜೀವನದ ಅಭಿರುಚಿ ಬಿಟ್ಟಿರಲಿಲ್ಲ. ಜನಾಂಗ ಭದ್ರತೆ, ಸುರಕ್ಷತೆ ಮತ್ತು ಉಳಿವಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೂ ಈ ಎರಡೂ ತಳಹದಿಯ ಮೇಲೆ ಒಂದು ಭದ್ರವಾದ ಪ್ರಗತಿಪರ ಸಮಾಜ ಕಟ್ಟಿದರು. ಆದರೆ ಕ್ರಮೇಣ ಕಾರ್ಯೋನ್ಮುಖ ದೃಷ್ಟಿ ಕ್ಷೀಣಗೊಂಡು ಶಾಶ್ವತ ತತ್ತ್ವಗಳ ಹೆಸರಿನಲ್ಲಿ ಸಮಾಜದ ರಚನೆ ಬಿಗಿಯಾಗಿ ಯಾವ ಪರಿವರ್ತನೆಗೂ ಅವಕಾಶವಿಲ್ಲವಾಯಿತು. ನಿಶ್ಚಯವಾಗಿ

ಇರಲಿಲ್ಲ, ಅನಕ್ಷರತೆ, ವಿಷಮಶೀತಜ್ವರ, ಮೈಲಿಬೇನೆ, ಕಾಲರ, ಆಮಶಂಕೆ, ಪ್ಲೇಗ್ ಮುಂತಾದ ಪಾತ್ರಗಳು ಶಂಕ್ರಾಮಿಕವಾಗಿದ್ದವು. ಈಗ ಬೆಟ್ಟಗಳಮೇಲೆಲ್ಲ ದಟ್ಟವಾದ ಕಾಡು ಬೆಳೆದಿದೆ. ರೈಲ್ವೆ, ಟೆಲಿಪೋಸ್, ಟೆಲಿಗ್ರಾಫ್ ಚಳಯ ಅತಮವಿದೆ, ಸಾರ್ವಜನಿಕ ಆರೋಗ್ಯ ಬಹಳ ಚೆನ್ನಾಗಿದೆ, ಒಳ್ಳೆಯ ರಾಜಮಾರ್ಗಗಳಿವೆ, ಪ್ರವಾಹದ ಹಾವಳಿ ತಪ್ಪಿಸಿ, ಅನೇಕ ನೀರಾವರಿ ಯೋಜನೆ ಕೈಗೊಂಡುದರ ಫಲವಾಗಿ ಆಹಾರ ಸಮೃದ್ಧಿ ಇದೆ, ಒಳ್ಳೆಯ ಬಂದರು ಗಳನ್ನು ಕಟ್ಟ ಆವನ್ನು ಉತ್ತಮರೀತಿ ನಡೆಸುತ್ತಿದ್ದಾರೆ, ೧೯೦೫ರಲ್ಲಿ ೧೧೦೦೦,೦೦೦ ಇದ್ದ ಜನಸಂಖ್ಯೆ ಈಗ ೨v೦೦೦೦೦೦ಕ್ಕೆ ಏರಿದ ಮತ್ತು ಜನರ ಜೀವನಮಟ್ಟ ಈ ಶತಮಾನದ ಆರಂಭದಲ್ಲಿದ್ದುದಕ್ಕಿಂತ ಈಗ ಬಹಳ ಉನ್ನತ ಏಜೆ, ಇದರಿಂದ ದೇಶದ ಪ್ರಗತಿ ಮತ್ತು ಆರೋಗ್ಯ ಎಷ್ಟು ಉತ್ತಮಗೊಂಡಿದೆ ಯೋಚಿಸಿ ” ಎಂದು ಬರೆದಿದ್ದಾನೆ. * ಆದರೆ ಈ ಜೀವನ ಸ೦ಕರದ ಪ್ರಗತಿ ಎಲ್ಲ ಕೊರಿಯನರಿಗಾಗಿ ಮಾಡಿದ್ದಲ್ಲ; ಜಪಾನರಿಗೆ ಹೆಚ್ಚಿನ ಆಳ ಹೊರೆಯ ಲಿಂದು ಮಾಡಿದ್ದು ” ಎಂದು ಅಭಂಗ್ ಹೇಳುತ್ತಾನೆ. 35