ಪುಟ:ಭಾರತ ದರ್ಶನ.djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ಅದು ಅರಿಯದಿದ್ದರೆ ಅದರ ವೈಜ್ಞಾನಿಕ, ಔದ್ಯೋಗಿಕ ಪ್ರಗತಿಯಿಂದ ಯಾವ ಶಾಂತಿಯೂ ದೊರೆಯ ಲಾರದು. ಈ ಗಾಢ ರಹಸ್ಯಗಳು ಎಲ್ಲ ಕಾಲದ ಎಲ್ಲ ದೇಶಗಳ ದಾರ್ಶನಿಕರ ಮನಸ್ಸನ್ನೂ ಸೆಳೆದಿವೆ. ಭಾರತದಲ್ಲಿ ಜಡತ್ವ ಬೆಳೆಯಿತು ನಿಜ; ಆದರೆ ಪರಿವರ್ತನೆ ಏನೂ ಆಗಿಲ್ಲವೆಂದು ಭಾವಿಸುವುದು ತಪ್ಪು, ಪರಿವರ್ತನೆಯೇ ಇಲ್ಲವೆಂದರೆ ಸಾವು ಸಿದ್ದ. ಒಂದು ಉನ್ನತ ನಾಗರಿಕ ಜನಾಂಗವಾಗಿ ಇನ್ನೂ ಉಳಿದಿರುವುದು ನೋಡಿದರೆ ಕಾಲಸ್ಥಿತಿಗನುಗುಣವಾಗಿ ನಿರಂತರ ಪರಿವರ್ತನೆ ಆಗುತ್ತಲೇ ಇದೆ ಎಂದು ಸ್ಪಷ್ಟವಾಗುತ್ತದೆ. ಬ್ರಿಟಿಷರು ಭಾರತಕ್ಕೆ ಕಾಲಿಟ್ಟಾಗ ಔದ್ಯೋಗಿಕ ಪ್ರಗತಿಯಾಗಿ ಭಾರತದಲ್ಲೂ ಅನೇಕ ಪರಿವರ್ತನೆಗಳಾಗುತ್ತಿದ್ದವು. ಆದರೆ ಬ್ರಿಟಿಷರ ಆಕ್ರಮಣದಿಂದ ಭಾರತದ ಸ್ವಾಭಾವಿಕ ಬೆಳೆವಣಿಗೆಗೆ ಅಡ್ಡಿ ಬಂದಿತು. ಔದ್ಯೋಗಿಕ ಪ್ರಗತಿ ಹಿಂದೆ ಬಿತ್ತು; ಅದರ ಪರಿಣಾಮವಾಗಿ ಸಾಮಾಜಿಕ ಪ್ರಗತಿಯೂ ಇಲ್ಲ ದಾಯಿತು. ಎಲ್ಲ ಅಧಿಕಾರವೂ ಪರಕೀಯರ ಕೈಯಲ್ಲಿ ಕೇಂದ್ರೀಕೃತವಾಗಿ, ಹಿಂಸೆಯೇ ಆ ಅಧಿಕಾರ ಮೂಲವಾಗಿ, ಈಗ ನಿಜವಾಗಿ ಅರ್ಥವಿಲ್ಲದ ಜಾತಿ ಪಂಗಡಗಳಿಗೆ ಪ್ರೋತ್ಸಾಹಿಸಿ ಒಡಕು ತರಲು ಪರಕೀಯರು ಆರಂಭಿಸಿದುದರಿಂದ ಸಮಾಜದ ಸಾಮಾನ್ಯ ಅಧಿಕಾರ ಸಂಬಂಧವು ಕಡಿದು ಪರಸ್ಪರ ಹೊಂದಿಕೊಂಡು ಸಾಮರಸ್ಯದಿಂದ ಮುಂದುವರಿಯಲು ಅಸಾಧ್ಯವಾಯಿತು. ಭಾರತೀಯ ಸಮಾಜ ಜೀವನ ಹೆಚ್ಚು ಹೆಚ್ಚು ಕೃತಕವಾಗತೊಡಗಿತು. ಆ ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಅನೇಕ ವ್ಯಕ್ತಿಗಳಿಗೆ ಮತ್ತು ಪಂಗಡಗಳಿಗೆ ಯಾವ ಕರ್ತವ್ಯವೂ ಇಲ್ಲದಾಯಿತು. ಪರದೇಶೀಯರ ಬೆಂಬಲವೇ ಅವರ ಆಶ್ರಯ ವಾಯಿತು. ಇತಿಹಾಸದೃಷ್ಟಿಯಿಂದ ಅವರ ಕರ್ತವ್ಯ ಎಂದೋ ಮುಗಿದಿತ್ತು. ಪರದೇಶೀ ಅಧಿಕಾರ ವರ್ಗದ ಬೆಂಬಲ ಇಲ್ಲದಿದ್ದರೆ ಹೊಸ ಶಕ್ತಿಗಳ ಪ್ರವಾಹದಲ್ಲಿ ಎಂದೋ ಕೊಚ್ಚಿ ಹೋಗುತ್ತಿದ್ದರು. ಈಗ ಹುಲ್ಲುಹೊಟ್ಟಿನಿಂದ ಮಾಡಿದ ಬೊಂಬೆಗಳಂತೆ ವಿದೇಶೀ ಆಡಳಿತವರ್ಗದ ಕೈಗೊಂಬೆಗಳಾಗಿ ಅವರ ಪ್ರತಿ ನಿಧಿಗಳಾಗಿ ಅವರ ಪ್ರತಿನಿಧಿಗಳಾದರು. ಆ ಮೂಲಕ ರಾಷ್ಟ್ರ ಜೀವನದ ಗತಿಯಿಂದ ದೂರವಾದರು. ಕ್ರಾಂತಿಯ ಪರಿಣಾಮವಾಗಿಯೋ, ಪ್ರಜಾಸತ್ತಾತ್ಮಕ ಶಕ್ತಿಯ ಹೊಡೆತದಲ್ಲೂ ಸಾಮಾನ್ಯವಾಗಿ ಅವರು ನಿರ್ನಾಮವಾಗುತ್ತಿದ್ದರು ಅಥವ ಬೇರೆ ಒಂದು ಕರ್ತವ್ಯಭಾರ ಹೊರಬೇಕಿತ್ತು. ಆದರೆ ಪರಕೀಯರ ಸರ್ವಾಧಿಕಾರ ನಡೆಯುವವರೆಗೆ ಅದು ಯಾವುದಕ್ಕೂ ಅವಕಾಶವಿರಲಿಲ್ಲ. ಆದ್ದರಿಂದ ಭಾರತದಲ್ಲಿ ಎಲ್ಲೆಲ್ಲೂ ಈ ಪ್ರಾಚ್ಯ ವಸ್ತುಗಳು ಹಾಗೇ ಉಳಿದವು. ಅವುಗಳ ಮೆರವಣಿಗೆಯ ತೆರೆಯ ಹಿಂದೆ ನಿಜವಾದ ಪರಿವರ್ತನೆ ನಡೆಯುತ್ತಿತ್ತು. ಸಮಾಜದಲ್ಲಿ ನಿಜವಾದ ಸಾಮಾಜಿಕ ಸಾಮರಸ್ಯ ಅಥವ ಅಧಿಕಾರ ಸಂಬಂಧ ಬೆಳೆಯುವುದಕ್ಕೆ ಆಗಲಿ ವ್ಯಕ್ತಗೊಳ್ಳುವುದಕ್ಕೇ ಆಗಲಿ ಅವಕಾಶ ಇರಲಿಲ್ಲ. ಕೃತಕ ಸಮಸ್ಯೆ ಗಳಿಗೇ ವಿಶೇಷ ಪ್ರಾಮುಖ್ಯತೆ ದೊರೆಯಿತು. ರಾಷ್ಟದಜೀವನದ ಸ್ವಾಭಾವಿಕ ಬೆಳೆವಣಿಗೆಗೆ ವಿರೋಧ ನಿಂತು ಸಮಾಜದ ವಿವಿಧ ಅಂಗಗಳು ಪರಸ್ಪರ ಪೋಷಕವಾಗಿ ಸಮರಸ ಜೀವನ ನಡೆಸಲು ಬ್ರಿಟಿಷ್ ಅಧಿಕಾರಿವರ್ಗ ಅಡ್ಡ ಬಂದುದೇ ಇಂದಿನ ನಮ್ಮ ಎಲ್ಲ ಸಮಸ್ಯೆಗಳಿಗೆ ಮುಖ್ಯ ಕಾರಣ, ಈ ಹೊರಗಿನ ಶಕ್ತಿ ನಿರ್ಮೂಲವಾದರೆ ಭಾರತೀಯ ಅರಸರ ಪ್ರಶ್ನೆ ತಾನಾಗಿಯೇ ಸರಿಹೋಗುತ್ತದೆ. ಇಲ್ಲಿನ ಅಲ್ಪಸಂಖ್ಯಾತರ ಪ್ರಶ್ನೆಗೂ ಬೇರೆಕಡೆಗಳ ಅಲ್ಪಸಂಖ್ಯಾತರ ಪ್ರಶ್ನೆಯೇ ಅಲ್ಲ. ಅದರಲ್ಲಿ ಅನೇಕ ಪ್ರಶ್ನೆಗಳಿವೆ ; ಹಿಂದಿನ ಮತ್ತು ಇಂದಿನ ಪರಿಸ್ಥಿತಿಗೆ ನಾವೇ ಜವಾ ಬ್ದಾರಿ ಹೊರಬೇಕು. ಆದರೂ ಈ ಎಲ್ಲ ಮತ್ತು ಇತರ ಸಮಸ್ಯೆಗಳ ಹಿಂದೆ ಬ್ರಿಟಿಷ್ ಭಾವನೆಯು ಸಾಧ್ಯವಾದ ಮಟ್ಟಿಗೆ ಭಾರತೀಯ ಜೀವನದಲ್ಲಿ ಈಗಿರುವ ಆರ್ಥಿಕ ಮತ್ತು ರಾಜಕೀಯ ರಚನೆ ಮುಂದು ವರಿಯಬೇಕು; ಅದಕ್ಕಾಗಿ ಸಮಾಜದಲ್ಲಿ ಹಿಂದುಳಿದ ಪಂಗಡದವರನ್ನು ಎತ್ತಿ ಕಟ್ಟಿ ಅದೇ ಸ್ಥಿತಿಯಲ್ಲಿ ಇಟ್ಟು ಪ್ರೋತ್ಸಾಹಿಸಬೇಕು ಎಂದು ಇದೆ. ಆರ್ಥಿಕ ಮತ್ತು ರಾಜಕೀಯ ಪ್ರಗತಿ ಬೇಡವೆಂದು ಪ್ರತ್ಯಕ್ಷ ಹೇಳಿಲ್ಲ ನಿಜ. ಆದರೆ ಪ್ರತಿಗಾಮಿ ಪಂಗಡಗಳ ಮತ್ತು ಹಕ್ಕು ದಾರಿ ಗುಂಪುಗಳ ಒಪ್ಪಿಗೆ ಪಡೆದು ಬನ್ನಿ ಎಂದು ಹೇಳುತ್ತಿದಾರೆ. ಆ ಒಪ್ಪಿಗೆ ದೊರೆಯಬೇಕಾದರೆ ಅವರ ವಿಶೇಷ ಅಧಿಕಾರ, ಹಕ್ಕುದಾರಿಗಳನ್ನೆಲ್ಲ ಒಪ್ಪಿ ಮುಂದಿನ ರಾಜ್ಯಾಡಳಿತದಲ್ಲಿ ಅವರಿಗೆ ವಿಶೇಷ ಸ್ಥಾನ ಕೊಟ್ಟರೆ ಮಾತ್ರ ಸಾಧ್ಯ; ಅಂದರೆ ನಿಜವಾದ ಎಲ್ಲ