ಪುಟ:ಭಾರತ ದರ್ಶನ.djvu/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ಭಾರತ ದರ್ಶನ ಪ್ರಗತಿ ಮತ್ತು ಪರಿವರ್ತನೆಗೆ ನಾನೇ ಅಡ್ಡ ಗೋಡೆ ಹಾಕಿದಂತೆ, ಹೊಸ ರಾಜ್ಯ ವಿಧಾನದಲ್ಲಿ ನಿಜವಾದ ಶಕ್ತಿ ಮತ್ತು ಸಾಮರ್ಥ್ಯ ಇರಬೇಕೆಂದರೆ ಜನತೆಯ ಬಹುಮತದ ಆಸೆ ಮತ್ತು ಆಕಾಂಕ್ಷೆಗಳನ್ನು ಅದು ಪ್ರತಿಬಿಂಬಿಸಬೇಕು. ಆದರೆ ಭಾರತದಲ್ಲಿ ನಮಗೆ ಇರುವ ಮುಖ್ಯ ತೊಂದರೆ ಎಂದರೆ ಬ್ರಿಟಿಷರು ಮತ್ತು ಅನೇಕ ಭಾರತೀಯರು ಭಾವೀ ಭಾರತದ ರಾಜ್ಯ ವಿಧಾನಕ್ಕೆಂದು ಮಾಡಿರುವ ಎಲ್ಲ ಸಲಹೆಗಳಲ್ಲಿ ಇಂದಿನ ಸಮಾಜ ಶಕ್ತಿಗಳನ್ನೇ ಅಲಕ್ಷೆ ಮಾಡಲಾಗಿದೆ ಮತ್ತು ಬಹುಕಾಲದಿಂದ ಇದುವರೆಗೆ ಅಷ್ಟದಿಗ್ರಂಧನದಲ್ಲಿ ಸಿಕ್ಕು ಈಗತಾನೆ ಹೊರಹೊಮ್ಮುತ್ತಿರುವ ಆಂತರಿಕ ಶಕ್ತಿಗಳನ್ನು ಉಪೇಕ್ಷೆಮಾಡಲಾಗಿದೆ; ಅದಕ್ಕೆ ಪ್ರತಿ ಯಾಗಿ, ಇಂದಿನ ಭಾರತಕ್ಕೆ ಯಾವ ಅರ್ಥವೂ ಇಲ್ಲದೆ ಕ್ಷಯದಿಂದ ನಡೆಸುತ್ತಿರುವ ಹಿಂದಿನ ರಚನೆಯನ್ನೇ ಇನ್ನೂ ಕಠಿಣಮಾಡಿ ಭಾರತದಮೇಲೆ ಹೊರಿಸಲು ಪ್ರಯತ್ನ ನಡೆಯುತ್ತಿದೆ, ಇಂದಿನ ನಮ್ಮ ನಿಜವಾದ ಸಮಸ್ಯೆ ಎಂದರೆ ಬ್ರಿಟಿಷ್ ಸೈನ್ಯದ ಭಾರತ ಆಕ್ರಮಣ ಮತ್ತು ಅದರ ಕಾರ್ಯನೀತಿ, ಆ ನೀತಿಯನ್ನು ಅನೇಕವೇಳೆ ಪ್ರತಿಪಾದಿಸಿದ್ದಾರೆ. ಅನೇಕ ಸವಿ ಮಾತುಗಳಲ್ಲಿ ಹೇಳಿದ್ದಾರೆ, ಆದರೆ ಈಚಿನ ದಂಡನಾಯಕ ವೈಸರಾಯ್ ಒಬ್ಬ ಬಹಳ ಸ್ಪಷ್ಟ ತಿಳಿಸಿದ್ದಾನೆ. ಬ್ರಿಟಿಷರಿಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಸೈನ್ಯದ ಅಕ್ರಮಣ ಮುಂದುರಿಯಲೇಬೇಕು ಎಂದು. ಆದರೆ ಶಕ್ತಿಗಳ ಬೆಳೆವಣಿಗೆಗೆ ಮಾತ್ರವಲ್ಲದೆ ಸೈನ್ಯಶಕ್ತಿಯನ್ನೇ ನಂಬಿದವರು ಕನಸಿನಲ್ಲಿ ಎಣಿಸದ ದುಷ್ಪರಿಣಾಮ ಗಳಿಗೆ ಅವಕಾಶವಾಗುತ್ತದೆ. ಈ ಮಧ್ಯೆ ಭಾರತದ ಬೆಳವಣಿಗೆ ಇಲ್ಲದೆ ಪ್ರಗತಿ ಶೂನ್ಯತೆಯ ಪರಿಣಾಮ ನಾವು ಪ್ರತ್ಯಕ್ಷ ಕಾಣು ತಿದ್ದೇವೆ. ಎದ್ದು ಕಾಣುವ ಮುಖ್ಯ ಪರಿಣಾಮಗಳೆಂದರೆ ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಂಜೆತನ ಮತ್ತು ಅದರಫಲ. ಭಾರತೀಯರ ನೀರಸಜೀವನ ರಚನಾತ್ಮಕ ಶಕ್ತಿಗೂ ಜನತೆಯಮೇಲೆ ಅಧಿಕಾರ ನಡೆಸುವ ಪರಕೀಯ ಆಡಳಿತವರ್ಗಕ್ಕೂ ಬಹುದೂರ, ಈ ಆಡಳಿತವರ್ಗಕ್ಕೆ ಅಧೀನರಾಷ್ಟದಿಂದ ಸಾವಿರಾರು ಮೈಲಿಗಳಾಚೆ ತಮ್ಮದೇ ಒಂದು ಪ್ರತ್ಯೇಕ ಆರ್ಥಿಕ ಮತ್ತು ಸಂಸ್ಕೃತಿ ಕೇಂದ್ರವಿದ್ದು ಅದಕ್ಕೆ ವರ್ಣಭೇದದ ಬೆಂಬಲವೂ ಇರುವಾಗ ಈ ವಿಚ್ಛೇದನ ಇನ್ನೂ ಸಂಪೂರ್ಣವಾಗುತ್ತದೆ ಮತ್ತು ಅಧೀನರಾಷ್ಟ್ರದ ರಚನಾತ್ಮಕ ಶಕ್ತಿಗೆ ಆಗ ಇರುವ ಒಂದೇ ಮಾರ್ಗ ಯಾವ ರೀತಿಯಲ್ಲಾದರೂ ಪರಾಕ್ರಮಣ ಪ್ರತಿಭಟನೆ, ಆದರೆ ಅದಕ್ಕೂ ಒಂದು ಮಿತಿ ಇರುವುದರಿಂದ ರಾಷ್ಟ್ರದ ದೃಷ್ಟಿಯೇ ಸಂಕುಚಿತವಾಗಿ ಒಳಗೆ ಬೆಳೆಯುತ್ತಿರುವ ಜೀವಂತ ಶಕ್ತಿಗಳು ತಮ್ಮ ಮೇಲಿನ ಕರಟ ಒಡೆದು ಹೊರಬೀಳಲು ವ್ಯಕ್ತವಾಗಿ ಮತ್ತು ಅವ್ಯಕ್ತವಾಗಿ ಮಾಡುವ ಪ್ರಯತ್ನವೇ ಈ ಪ್ರತಿಭಟನೆ, ಆದರೆ ಅದರ ದಾರಿ ನಿರಾಕರಣೆಯ ಕಡಿದಾದ ದಾರಿಯಾದ್ದ ರಿಂದ ನಮ್ಮ ಜೀವನದ ವಾಸ್ತವಿಕತೆಯ ವಿವಿಧ ಮುಖಗಳೊಂದಿಗೆ ಪೂರ್ಣ ಸಂಪರ್ಕವನ್ನಿಟ್ಟುಕೊಳ್ಳಲು ಅದಕ್ಕೆ ಸಾಧ್ಯವಿಲ್ಲವಾಗಿದೆ. ಮನೋವಿಕಾರಗಳು, ಪೂರ್ವಾಭಿಪ್ರಾಯಗಳು, ಭಯ ಸಂಶಯಗಳು ಬೆಳೆದು ನಮ್ಮ ಮನಸ್ಸನ್ನು ಬಗೆಗೆಡಿಸುತ್ತವೆ; ಜಾತಿ ಪಂಗಡಗಳ ಕಲ್ಪನೆಗಳು ರೂಪಗೊಳ್ಳುತ್ತವೆ; ನಿಜವಾದ ಪ್ರಶ್ನೆ ಗಳ ವಿಚಾರ ವಿಮರ್ಶೆಯ ಬದುಲು ಗುಂಪು ಕೂಗು ಮತ್ತು ಸ್ವಾರ್ಥ ದೃಷ್ಟಿಗಳಿಗೆ ಪ್ರಾಧಾನ್ಯತೆ ದೊರೆಯು ಇದೆ. ಸತ್ವಶೂನ್ಯ ಪರಾಡಳಿತದ ಚೌಕಟ್ಟಿನಲ್ಲಿ ಯಾವ ಪರಿಣಾಮಕಾರಕ ಪರಿಹಾರಕ್ಕೂ ಅವಕಾಶವಿರುವು ದಿಲ್ಲ; ಅಷ್ಟೇ ಅಲ್ಲದೆ ಅದು ಇನ್ನೂ ಕಠಿನವಾಗುತ್ತದೆ. ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅರೆ ಬರೆ ಪರಿಹಾರಗಳಿಂದ ನಮ್ಮ ಸಮಸ್ಯೆಗಳು ಬಗೆ ಹರಿಯುವಂತಿಲ್ಲ; ಮತ್ತು ಕೇವಲ ಒಂದು ಮಾರ್ಗದಲ್ಲಿ ಮುಂದುವರಿದರೆ ಸಾಲದು. ಈಗ ಬೇಕಾದ್ದು ಒಂದು ದೊಡ್ಡ ಹೆಜ್ಜೆ ; ಸರ್ವತೋಮುಖ ಪ್ರಗತಿಬೇಕು, ಇಲ್ಲವಾದರೆ ಸರ್ವನಾಶ ಖಂಡಿತ. ಪ್ರಪಂಚದಲ್ಲಿ ಎಲ್ಲ ಕಡೆ ಕಾಣುವಂತೆ ಭಾರತದಲ್ಲಿ ಸಹ ಒಂದು ಕಡೆ ಶಾಂತಿಯುತ ಪ್ರಗತಿ ಮತ್ತು ರಚನಾತ್ಮಕ ಶಕ್ತಿಗಳಿಗೂ, ಇನ್ನೊಂದು ಕಡೆ ವಿಚ್ಛೇದನ ಮತ್ತು ವಿನಾಶಕಾರಕ ಶಕ್ತಿಗಳಿಗೂ ಜೂಜಿನ ಪಂದ್ಯ ನಡೆಯುತ್ತಲೇ ಇದೆ. ಪ್ರತಿಯೊಂದು ವಿಪತ್ತು ಹಿಂದಿನದಕ್ಕಿಂತ ಇಂದು ಘೋರ. ನಮ್ಮ ಪೂರ್ವ ಕಲ್ಪನೆಗಳಂತೆ, ಮನಸ್ಸಿನ ನಿಲುವಿನಂತೆ ಈ ಪರಿಸ್ಥಿತಿಯನ್ನು ನಾವು ಆಶಾವಾದಿಗಳಾಗಿ ಆದರೂ ನೋಡ