ಪುಟ:ಭಾರತ ದರ್ಶನ.djvu/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೭೩

ಪ್ರಚಂಡಶಕ್ತಿ ಸಾಮರ್ಥ್ಯಗಳು ಹೊರಹೊಮ್ಮಿ ಬಹುಬೇಗ ದೇಶದ ಸ್ವರೂಪವೇ ಬದಲಾಯಿಸುತ್ತದೆ.

ಯುಗಧರ್ಮ ಸಮಾನತೆ ಕೇಳಿದರೆ ಅದಕ್ಕೆ ಅನುಗುಣವಾದ ಮತ್ತು ಪೂರಕವಾದ ಆರ್ಥಿಕ ರಚನೆಯನ್ನೂ ಕೇಳುತ್ತದೆ. ಅದಕ್ಕೂ ಮತ್ತು ಭಾರತದ ಇಂದಿನ ಸಾಮ್ರಾಜ್ಯವಾದಿ ಆಡಳಿತ ಪದ್ಧತಿಗೂ ಅಜಗಜಾಂತರ. ಅಸಮಾನತೆಯೇ ಸಾಧಿಕಾರದ ಮೂಲ, ಜೀವನದ ಎಲ್ಲ ಕಾರರಂಗಗಳಲ್ಲಿ ಅದನ್ನು ಶಾಶ್ವತಗೊಳಿಸುತ್ತದೆ ; ಬುದ್ಧಿ ಶಕ್ತಿಯನ್ನೂ ಕಾರ್ಯಶಕ್ತಿಯನ್ನೂ ಹಿಸುಕುತ್ತದೆ; ಜವಾಬ್ದಾರಿ ಮನೋಭಾವನೆಗೆ ಅಡ್ಡಿ ಮಾಡುತ್ತದೆ. ಅದರ ದೌಷ್ಟಕ್ಕೆ ಸಿಕ್ಕಿದವರಲ್ಲಿ ಆತ್ಮಗೌರವವೂ, ಆತ್ಮಾವಲಂಬನ ಶಕ್ತಿ ನಾಶವಾಗುತ್ತವೆ. ಭಾರತದ ಸಮಸ್ಯೆಗಳು ಬಹು ಕಠಿಣ ಕಂಡರೂ ಹಿಂದಿನ ರಾಜಕೀಯ ಮತ್ತು ಆರ್ಥಿಕ ರಚನೆ ಉಳಿಸಿಕೊಂಡು ಮುಂದುವರಿಯಲು ಪ್ರಯತ್ನ ಮಾಡುತ್ತಿರುವುದೇ ಅವೆಲ್ಲಕ್ಕೂ ಮುಖ್ಯ ಕಾರಣ. ಈ ರಚನೆಯನ್ನೂ, ಇರುವ ಹಕ್ಕು ದಾರಿಗಳನ್ನೂ ಕಾಪಾಡಿಕೊಂಡು ಬರುವುದಾದರೆ ಮಾತ್ರ ರಾಜಕೀಯ ಪ್ರಗತಿ ಎಂದು ಹೇಳಿದಾರೆ, ಅದು ಸಾಧ್ಯವೇ ಇಲ್ಲ.

ರಾಜಕೀಯ ಪರಿವತ್ರನೆ ಆಗಲೇಬೇಕು, ಆದರೆ ಆಗ್ಲಿಕ ಪರಿವರ್ತನೆಯೂ ಅಷ್ಟೇ ಅವಶ್ಯವಿದೆ. ಪ್ರಜಾ ಸತ್ತಾತ್ಮಕ ದೃಷ್ಟಿಯಿಂದ ಯೋಜಿಸಿದ ಸಾಮೂಹಿಕ ಪ್ರಯತ್ನದ ಕಡೆ ಪರಿವರ್ತನೆಯದಾರಿ ಇರಬೇಕು. “ನಾವು ಇಂದು ನಿರ್ಧರಿಸಬೇಕಾದ್ದು ಪೈಪೋಟಿಯೇ ಅಥವ ಏಕಸ್ವಾಮ್ಯವೇ ಎಂದಲ್ಲ; ಬೇಜವಾಬ್ದಾರಿ ವೈಯಕ್ತಿಕ ಏಕಸ್ವಾಮ್ಯವೇ ಆಥವಾ ಜವಾಬ್ದಾರಿಯುತ ಸಾತ್ವಿಕ ಏಕಸ್ವಾಮ್ಯವೇ ಎಂದು” ಎಂಬುದಾಗಿ ಆರ್. ಎಚ್. ರಾನೆ ಹೇಳುತ್ತಾನೆ. ಬಂಡವಾಳಶಾಹಿ ರಾಜ್ಯಗಳಲ್ಲಿ ಸಹ ಸಾತ್ವಜನಿಕ ಏಕಸ್ವಾಮ್ಯಗಳು ಬೆಳೆಯುತ್ತವೆ ಮತ್ತು ಮುಂದೆ ಇನ್ನೂ ಹೆಚ್ಚುತ್ತವೆ. ವೈಯಕ್ತಿಕ ಏಕಸ್ವಾಮ್ಯಗಳು ನಿರ್ನಾಮವಾಗುವವರೆಗೂ ವೈಯಕ್ತಿಕ ಏಕಸ್ವಾಮ್ಯಗಳಿಗೂ ಸಾರ್ವಜನಿಕ ಏಕಸ್ವಾಮ್ಯಗಳಿಗೂ ಘರ್ಷಣೆ ತಪ್ಪಿದ್ದಲ್ಲ. ಪ್ರಜಾಸತ್ತಾತ್ಮಕ ಸಮಷ್ಟಿ ಸ್ವಾಮ್ಯವೆಂದರೆ ವೈಯಕ್ತಿಕ ಆಸ್ತಿಯೇ ಇರಬಾರದೆಂದಲ್ಲ, ಆದರೆ ದೊಡ್ಡ ದೊಡ್ಡ ಮೂಲ ಕೈಗಾರಿಕೆಗಳೆಲ್ಲ ಸಾರ್ವಜನಿಕರ ಸ್ವತ್ತಾಗಿರಬೇಕೆಂದು ಅರ್ಥ. ಭೂ ಆಸ್ತಿಯ ಸಹಕಾರ ತತ್ತ್ವದಿಂದಲೋ ಸಾಮೂಹಿಕವಾಗಿಯೋ ರೂಢಿಯಾಗಬೇಕು. ಭಾರತದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳ ಜೊತೆಗೆ ಸಹಕಾರ ತತ್ತ್ವದ ಮೇಲೆ ನಡೆಯುವ ಸಣ್ಣ ಗ್ರಾಮ ಕೈಗಾರಿಕೆಗಳು ಅತ್ಯವಶ್ಯಕ. ಆ ಬಗೆಯ ಪ್ರಜಾಸತ್ತಾತ್ಮಕ ಸಮಷ್ಟಿವಾದ ಪದ್ಧತಿಯೂ ಕಾರಗತವಾಗಬೇಕಾದರೆ ಜನರ ಅವಶ್ಯಕತೆಗಳು ವ್ಯತ್ಯಾಸಗೊಂಡಂತೆ ಬಹು ಎಚ್ಚರಿಕೆಯಿಂದ ಸದಾ ಯೋಚಿಸುತ್ತಲೇ ಇರಬೇಕಾಗುತ್ತದೆ. ಯಾವುದಾದರೂ ಒಂದು ರೀತಿಯಲ್ಲಿ ರಾಷ್ಟ್ರದ ಎಲ್ಲ ಸಶ್ರಮ ಶಕ್ತಿಯನ್ನು ಉಪಯೋಗಿಸಿಕೊಂಡು, ನಿರುದ್ಯೋಗ ನಾಶಮಾಡಿ ಸರ್ವತೋಮುಖ ರಾಷ್ಟ್ರದ ನಿರ್ಮಾಣ ಶಕ್ತಿಯನ್ನು ವೃದ್ಧಿಗೊಳಿಸುವುದೇ ಗುರಿಯಾಗಬೇಕು. ಸಾಧ್ಯವಾದ ಮಟ್ಟಿಗೂ ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಿರುವ ಉದ್ಯೋಗ ಅವಲಂಬಿಸಲು ಸ್ವಾತಂತ್ರ್ಯವಿರಬೇಕು. ಇದರಿಂದ ಎಲ್ಲರ ವರಮಾನವೂ ಒಂದೇ ಆಗುವುದಿಲ್ಲ; ಆದರೆ ಹೆಚ್ಚು ನ್ಯಾಯಸಮ್ಮತ ಲಾಭ ದೊರೆಯುತ್ತವೆ ; ಕ್ರಮೇಣ ಸಮಾನ ಲಾಭವನ್ನೂ ಪಡೆಯಬಹುದು, ಏನೇ ಆಗಲಿ ಈಗಿರುವ ಅಪಾರ ಅಂತರ ನಾಶವಾಗುತ್ತದೆ; ವರಮಾನದ ಆಧಾರದ ಮೇಲೆ ನಿಂತಿರುವ ಪಂಗಡ ಭೇದಗಳು ಮಾಯವಾಗುತ್ತವೆ.

ಈ ಪರಿವರ್ತನೆ ಸಾಧಿಸುವುದೆಂದರೆ ಲಾಭದ ಗುರಿಯೇ ಮುಖ್ಯ ಆಧಾರವಾಗಿರುವ ಈಗಿನ ಲಾಭ ಬಡಕ ಸಮಾಜ ಬುಡಮೇಲಾಗಬೇಕು. ಸ್ವಲ್ಪ ಮಟ್ಟಿಗೆ ಲಾಭದ ದೃಷ್ಟಿ ಇದ್ದೇ ಇರಬೇಕು, ಆದರೆ ಅದೇ ಮುಖ್ಯಗುರಿಯಾಗುವುದಿಲ್ಲ ಮತ್ತು ಲಾಭಸಂಪಾದನೆಗೆ ಈಗ ಇರುವಷ್ಟು ಅವಕಾಶವೂ ಇರುವುದಿಲ್ಲ. ಸಾಮಾನ್ಯ ಭಾರತೀಯನಿಗೆ ಲಾಭದಾಸೆ ಇಲ್ಲವೆಂದು ಹೇಳುವುದು ಶುದ್ಧ ತಪ್ಪು, ಆದರೆ ಪಾಶ್ಚಾತ್ಯರಷ್ಟು ಇಲ್ಲವೆಂದು ಮಾತ್ರ ಹೇಳಬಹುದು. ಹಣವಂತನನ್ನು ಕಂಡು ಕರುಬಬಹುದು, ಆದರೆ ವಿಶೇಷಗೌರವ, ಪ್ರಶಂಸೆ ಯಾರೂ ತೋರುವುದಿಲ್ಲ. ಗುಣ ಅಥವ ಬುದ್ಧಿ ಇರುವ ಸ್ತ್ರೀಪುರುಷರಿಗೆ ಮಾತ್ರ ಗೌರವವೂ, ಪ್ರಶಂಸೆಯೂ ದೊರೆತಿದೆ. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಹಿತಕ್ಕಾಗಿ ತಮ್ಮ ಸರ್ವಸ್ವ ತ್ಯಾಗಮಾಡುವವರಿಗೆ ಮತ್ತು ಆತ್ಮತ್ಯಾಗಿಗಳಿಗೆ ವಿಶೇಷ ಗೌರವ ದೊರೆತಿದೆ. ಸಾಮಾನ್ಯ ಭಾರತೀಯ ದೃಷ್ಟಿಯಲ್ಲಿ ಸಹ ಲಾಭಬಡಕರಿಗೆ ಯಾವ ಮನ್ನಣೆಯೂ ದೊರೆತಿಲ್ಲ.

37