ಪುಟ:ಭಾರತ ದರ್ಶನ.djvu/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೭೪

ಭಾರತ ದರ್ಶನ

ಸಮಷ್ಟಿ ಸ್ವಾಮ್ಯವೆಂದರೆ ಸಹಕಾರ ಪ್ರಯತ್ನದಿಂದ ಸಾಮೂಹಿಕಕಾರ ನಡೆಸಬೇಕಾಗುತ್ತದೆ. ಇದು ಸಹ ಸಮಷ್ಟಿ ಭಾವನೆಯ ಆಧಾರದಮೇಲೆ ರಚಿತವಾದ ಪ್ರಾಚೀನ ಭಾರತೀಯ ಸಮಾಜಕಲ್ಪನೆಗೆ ಸರಿ ಹೋಗುತ್ತದೆ. ಬ್ರಿಟಿಷ್ ಆಡಳಿತದಲ್ಲಿ ಈ ಸಮಷ್ಟಿಪದ್ಧತಿ ನಾಶವಾಗಿ ಅದರಲ್ಲೂ ಪ್ರಜಾಸತ್ತಾತ್ಮಕ ಗ್ರಾಮಾಡಳಿತ ವ್ಯವಸ್ಥೆ ಕುಸಿದುಬಿದ್ದು ಭಾರತದ ಜನತೆಗೆ ಆರ್ಥಿಕ ಪೆಟ್ಟಿಗಿಂತ ಹೆಚ್ಚಾಗಿ ಮಾನಸಿಕ ಖೇದದಿಂದ ಬಲವಾದ ಗಾಯವಾಗಿದೆ. ಅದರ ಸ್ಥಾನದಲ್ಲಿ ಬೇರೆಯಾವ ವ್ಯವಸ್ಥೆಯೂ ಬರಲಿಲ್ಲ; ಭಾರತೀಯರ ಸ್ವತಂತ್ರ ಭಾವನೆ ನಾಶವಾಯಿತು, ಅವರ ಹೊಣೆಗಾರಿಕೆ ದೃಷ್ಟಿ ಹಾಳಾಯಿತು. ಸರ್ವರ ಹಿತಕ್ಕಾಗಿ ಒಟ್ಟಿಗೆ ಸಹಕರಿಸಿ ಕೆಲಸಮಾಡುವ ಶಕ್ತಿ ಕುಂದಿತು. ಸಜೀವ ಸತ್ವಪೂರ್ಣ ಗ್ರಾಮಜೀವನ ಕ್ರಮೇಣ ಮಣ್ಣು ಗುಡಿ ಸಲುಗಳ, ವಿಲಕ್ಷಣವ್ಯಕ್ತಿಗಳ ಪಾಳುಕೊಂಪೆಯಾಯಿತು. ಆದರೆ ಯಾವುದೋ ಒಂದು ಅವ್ಯಕ್ತ ತಂತು ಆ ಗ್ರಾಮಜೀವನವನ್ನು ಪೂರ್ಣ ಛಿದ್ರವಾಗದಂತೆ ಇನ್ನೂ ಬಂಧಿಸಿದೆ. ಹಳೆಯ ಕನಸುಗಳು ಅಳಿದಿಲ್ಲ. ಈ ಅನಾದಿಕಾಲದ ಸತ್ಸಂಪ್ರದಾಯಗಳ ಸದುಪಯೋಗದಿಂದ ಭೂವ್ಯವಸಾಯದಲ್ಲಿ ಸಣ್ಣ ಗ್ರಾಮ ಕೈಗಾರಿಕೆಗಳ ಸ್ಥಾಪನೆಯಲ್ಲಿ ಸಾಮೂಹಿಕ ಸರಕಾರ ಉದ್ಯಮಗಳ ಉಪಕ್ರಮದಲ್ಲಿ ಸುಲಭವಾಗಿ ಮುಂದುವರಿಯ ಬಹುದು. ಸಾಮೂಹಿಕ ಅಥವ ಸಹಕಾರ ವ್ಯವಸಾಯ ಕೇಂದ್ರಸ್ಥಾಪನೆ ಸಾಧ್ಯವಿದ್ದರೂ ಗ್ರಾಮಜೀವನ ಇನ್ನು ಮುಂದೆ ಒಂದು ಸ್ವಯಂಪೂರ್ಣ ಆರ್ಥಿಕ ಏಕಮಾನವಾಗಲು ಮಾತ್ರ ಸಾಧ್ಯವಿಲ್ಲ; ಆದರೆ ಸರ್ಕಾರದ ಆಡಳಿತದಲ್ಲಿ ಚುನಾವಣೆಗಳಲ್ಲಿ ಒಂದು ಕೇಂದ್ರವಾಗಿ ದೊಡ್ಡ ರಾಜಕೀಯ ರಚನೆಯ ಒಂದು ಸ್ವಯಮಾಡಳಿತವುಳ್ಳ ಮುಖ್ಯ ಅಂಗವಾಗಿ ಕೆಲಸಮಾಡುತ್ತ ತಾನೇ ತನ್ನ ಮುಖ್ಯ ಅವಶ್ಯಕತೆ ಪೂರೈಸುತ್ತ ವಿಕಾಸಗೊಳ್ಳಲು ಅವಕಾಶವಿದೆ. ಗ್ರಾಮವನ್ನೆ ಒಂದು ಚುನಾವಣಾ ವ್ಯಕ್ತಿ ಎಂದು ಭಾವಿಸಿದರೆ ಪ್ರತ್ಯಕ್ಷ ಮತ ಕೊಡುವ ಮತದಾರರ ಸಂಖ್ಯೆ ಕಡಮೆಯಾಗಿ ಪ್ರಾಂತ್ಯ ಮತ್ತು ಅಖಿಲ ಭಾರತದ ಚುನಾವಣೆಗಳು ಸುಲಭವಾಗಬಹುದು. ಗ್ರಾಮದ ವಯಸ್ಕ ಸ್ತ್ರೀ ಪುರುಷರಿಂದ ಚುನಾಯಿತರಾದ ಗ್ರಾಮ ಪಂಚಾಯಿತಿಯ ಸದಸ್ಯರು ರಾಷ್ಟ್ರದ ಮಹಾಚುನಾವಣೆಗಳಿಗೆ ಮತದಾರರಾಗಬಹುದು. ಅಪ್ರತ್ಯಕ್ಷ ಚುನಾವಣೆಗಳಲ್ಲಿ ಕೆಲವು ತೊಂದರೆಗಳಿರಬಹುದು. ಆದರೆ ಭಾರತೀಯ ಇತಿಹಾಸ ಪರಂಪರೆಯ ಹಿನ್ನೆಲೆಯ ದೃಷ್ಟಿಯಿಂದ ಗ್ರಾಮವು ಒಂದು ಏಕಮಾನವಾಗುವುದು ಒಳ್ಳೆಯದೆಂದು ನನ್ನ ಭಾವನೆ. ಇದರಿಂದ ಹೆಚ್ಚು ಜವಾಬ್ದಾ ರಿಯ ನಿಜವಾದ ಪ್ರಾತಿನಿಧ್ಯ ದೊರೆಯುತ್ತದೆ.

ಈ ಕ್ಷೇತ್ರ ಪ್ರಾತಿನಿಧ್ಯದ ಜೊತೆಗೆ ವ್ಯವಸಾಯ ಮತ್ತು ಕೈಗಾರಿಕೆಯಲ್ಲಿ ಸಮಷ್ಟಿ ಸಂಘಗಳಿಗೆ ಮತ್ತು ಸಹಕಾರ ಸಂಸ್ಥೆಗಳಿಗೆ ನೇರ ಪ್ರಾತಿನಿಧ್ಯವಿರಬೇಕು. ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯಲ್ಲಿ ಈ ರೀತಿ ಔದ್ಯೋಗಿಕ ಮತ್ತು ಕ್ಷೇತ್ರ ಪ್ರತಿನಿಧಿಗಳಿರುತ್ತಾರೆ. ಅಲ್ಲದೆ ಅದು ಸ್ಥಳೀಯ ಸ್ವಾತಂತ್ರ್ಯದ ಆಧಾರದ ಮೇಲೆ ರಚಿತವಾಗುತ್ತದೆ. ಈ ಬಗೆಯ ಒಂದು ವ್ಯವಸ್ಥೆ ಭಾರತದ ಇತಿಹಾಸ ಮತ್ತು ಇಂದಿನ ಅವಶ್ಯಕತೆ ಎರಡಕ್ಕೂ ಸಮಂಜಸವಾಗುತ್ತದೆ. ಬ್ರಿಟಿಷರು ಬಲಾತ್ಕಾರದಿಂದ ಹೇರಿದ ಕೆಲವು ವಿಷಯ ಬಿಟ್ಟು ಏನೂ ನಾಶವಾಗುವುದಿಲ್ಲ. ಈಗಲೂ ಮಮತೆಯಿಂದ ಸ್ಮರಿಸಿ ಜನರು ಹೆಮ್ಮೆಪಡುವ ಹಿಂದಿನ ವ್ಯವಸ್ಥೆಯೇ ಪುನರುತ್ಥಾನವಾಗಿದೆ ಎಂದು ಜನತೆ ಹರ್ಷಿಸುತ್ತದೆ.

ಆ ಬಗೆಯ ಒಂದು ಪ್ರಗತಿ ಭಾರತದಲ್ಲಿ ಆದರೆ ಅದು ಅಂತರ ರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಭಾವನೆಗಳಿಗೂ ಸರಿಹೊಂದುತ್ತದೆ. ಇತರ ರಾಷ್ಟ್ರಗಳೊಂದಿಗೆ ಯಾವ ಘರ್ಷಣೆಗೂ ಅವಕಾಶವಿರುವುದಿಲ್ಲ ಏಷ್ಯದ ಮತ್ತು ಪ್ರಪಂಚದ ಶಾಂತಿಸ್ಥಾಪನೆಗೆ ಒಂದು ಮಹಾಶಕ್ತಿಯಾಗುತ್ತದೆ. ನಮ್ಮ ಮನೋವಿಕಾರಗಳಿಂದ ನಾವು ಮೋಸಹೋದರೂ, ನಮ್ಮ ಮನಸ್ಸಿನ ನಿಲುವಿಗೆ ಅದು ಎಟುಕದಿದ್ದರೂ, ನಾವು ಮಾತ್ರ ನಿಸ್ಸಂದೇಹವಾಗಿ ಯಾವ ಒಂದು ಪ್ರಪಂಚದ ಕಡೆ ಓಡುತ್ತಿರುವೆವೊ ಆ ಒಂದು ಪ್ರಪಂಚದ ಸಾಕ್ಷಾತ್ಕಾರಕ್ಕೂ ಅದು ಸಹಾಯಕವಾಗುತ್ತದೆ, ಭೀಕರ ದಾಸ್ಯ ಮತ್ತು ನಿರಾಶೆಯ ಭಾವನೆಗಳಿಂದ ಒಂದು ಬಾರಿ ಭಾರತೀಯರು ಮುಕ್ತರಾದರೆ ಅವರ ನಿಲುವು ಪುನಃ ಉನ್ನತವಾಗುವುದಲ್ಲದೆ ಸಂಕುಚಿತ ರಾಷ್ಟ್ರೀಯ ಭಾವನೆಯೂ, ಬಹಿಷ್ಕಾರ ದೃಷ್ಟಿಯೂ ಮಾಯವಾಗುತ್ತವೆ. ತಮ್ಮ ಭಾರತೀಯ ಸಂಸ್ಕೃತಿಯ