ಪುಟ:ಭಾರತ ದರ್ಶನ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೩: ಅನ್ವೇಷಣೆ

೧. ಭಾರತದ ಗತವೈಭವ

ಯೋಜನೆ ಮತ್ತು ಕಾರ್ಯ ಪರಂಪರೆಗಳ ಈ ವರ್ಷಗಳಲ್ಲಿ ನನ್ನ ಮನಸ್ಸಿನಲ್ಲಿದ್ದು ದು ಭಾರತ ಒಂದೇ ; ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೆ, ಆ ಕಡೆ ನನ್ನ ಪ್ರತಿಕ್ರಿಯೆಗಳೇನು ಎಂದು ಚಿಂತನಮಾಡುತ್ತಿದ್ದೆ. ನನ್ನ ಬಾಲ್ಯದ ದಿನಗಳನ್ನು ನೆನಸಿಕೊಂಡು, ಆಗ ನನ್ನ ಭಾವನೆ ಏನಿತ್ತು, ಬೆಳೆಯುತ್ತಿದ್ದ ನನ್ನ ಮನಸ್ಸಿನಲ್ಲಿ ಈ ಭಾವನೆಗೆ ಏನು ಕಲ್ಪನೆ ಇತ್ತು; ಹೊಸ ಅನುಭವಗಳಿಂದ ಅದು ಹೇಗೆ ಒಂದು ಆಕಾರಕ್ಕೆ ಬಂದಿತು ಎಂದು ಜ್ಞಾಪಕಕ್ಕೆ ತರಲು ಪ್ರಯತ್ನ ಮಾಡಿದೆ. ಕೆಲವು ವೇಳೆ ಆ ಕಲ್ಪನೆ ಎಲ್ಲಿಯೋ ಮರೆಯಾಗುತ್ತಿತ್ತು. ಆದರೂ ಅದು ಪುರಾತನ ಕತೆಗಳು, ಪುರಾಣಗಳು ಮತ್ತು ಆಧುನಿಕ ವಾಸ್ತವಿಕತೆ ಇವುಗಳ ಒಂದು ವಿಚಿತ್ರ ಸಮ್ಮಿಶ್ರಣವಾಗಿ ನಿಧಾನವಾಗಿ ರೂಪಾಂತರ ಹೊಂದುತ್ತ ಅಲ್ಲಿಯೇ ಉಳಿದಿತ್ತು. ಅದರಿಂದ ನನಗೆ ಹೆಮ್ಮೆಯೂ ಆಯಿತು, ನಾಚಿಕೆಯೂ ಆಯಿತು. ನನ್ನ ಸುತ್ತಲು ಕಾಣುತ್ತಿದ್ದ ಅರ್ಥವಿಲ್ಲದ ಅಂಧ ಆಚಾರಗಳು, ಸತ್ವ ಶೂನ್ಯ ಭಾವನೆ ಗಳು ಎಲ್ಲಕ್ಕಿಂತ ಹೆಚ್ಚಾಗಿ ದಾಸ್ಯದಲ್ಲಿ ನರಳುವ ನಮ್ಮ ಬಡತನದ ಬಾಳು ಇವುಗಳಿಂದ ನನಗೆ ಬಹಳ ನಾಚಿಕೆಯಾಯಿತು,

ನಾನು ವಯಸ್ಕನಾಗಿ ಭಾರತದ ಸ್ವಾತಂತ್ರವೆ ನನ್ನ ಗುರಿ ಎಂದು ಕಾರ್ಯರಂಗಕ್ಕೆ ಇಳಿ ದೊಡನೆ ನನಗೆ ಭಾರತದ ಹುಚ್ಚು ಹಿಡಿಯಿತು. ಅಸ್ಪಷ್ಟವಿದ್ದರೂ ಎಲ್ಲರ ಮನಸ್ಸಿನಲ್ಲೂ ಸ್ಪಷ್ಟವಾಗಿ ಮೂಡಿ ಗುರಿಯ ಕಡೆಗೆ ಸದಾ ನನ್ನ ನ್ನು ಸೆಳೆದು ಮುನ್ನೂ ಕುತ್ತ ನನ್ನನ್ನು ಹಿಡಿತದಲ್ಲಿ ಸಿಕ್ಕಿಸಿ ಕೊಂಡ ಈ ಭಾರತ ಯಾವುದು. ವ್ಯಕ್ತಿಗೌರವ, ರಾಷ್ಟಗೌರವ, ಮತ್ತು ಪರದಾಸ್ಯವನ್ನು ಪ್ರತಿಭಟಿಸಿ. ನಮ್ಮ ಇಷ್ಟ ಕ್ಕನುಗುಣವಾಗಿ ನಮ್ಮ ಸ್ವತಂತ್ರ ಜೀವನವನ್ನು ನಾವು ನಡೆಸಬೇಕೆಂಬ ಮಾನವ ಸಹಜ ವಾದ ಆಶೆ ಇವುಗಳಿಂದ ನನ್ನ ಉತ್ಸಾಹ ಆರಂಭವಾಗಿರಬೇಕು. ಸನಾತನವೂ ಸಂಪದ್ಯುಕ್ತವೂ ಆದ ಭಾರತದಂಥ ಒಂದು ದೇಶವು ದೂರದ ಒಂದು ಸಣ್ಣ ದ್ವೀಪಕ್ಕೆ ಅಡಿಯಾಳಾಗಿ ದಾಸ್ಯದ ಹೊರೆಯಲ್ಲಿ ನರಳುತ್ತಿದ್ದುದು ಅಸಹ್ಯವೆನಿಸಿತು. ನಮ್ಮ ಕಡು ಬಡತನ ಮತ್ತು ಅವನತಿಗೆ ಈ ದಾಸ್ಯಶೃಂಖ ಲೆಯೇ ಕಾರಣವಾಗಿದ್ದುದು ಇನ್ನೂ ತುಚ್ಛವೆನಿಸಿತು.

ಆದರೆ ನನ್ನ ಅಂತರಾಳದಲ್ಲಿ ಏಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಕೊಡಲು ಅದರಿಂದ ಸಾಧ್ಯವಾಗ ಲಿಲ್ಲ. ನನ್ನ ಪ್ರಾಕೃತಿಕ ಮತ್ತು ಭೌಗೋಲಿಕ ಸ್ವರೂಪವಲ್ಲದೆ ಈ ಭಾರತ ಯಾವುದು? ಹಿಂದೆ ಅದರ ಸ್ವರೂಪವೇನಾಗಿತ್ತು? ಆಗ ಅದಕ್ಕೆ ಶಕ್ತಿ ಏತರಿಂದ ಬಂದಿತು? ಆ ಸನಾತನ ಶಕ್ತಿ ಹೇಗೆ ಮಾಯ ವಾಯಿತು? ಅದು ಪೂರ್ಣ ಮಾಯವಾಗಿದೆಯೆ? ಕೋಟ್ಯಂತರ ಜನಗಳ ಆವಾಸಸ್ಥಾನವಾಗಿರುವ ಭಾರತಕ್ಕೆ ಈಗ ಅಂತಸ್ಸತ್ವ ಏನಾದರೂ ಇದೆಯೇ? ಆಧುನಿಕ ಪ್ರಪಂಚದಲ್ಲಿ ಅದು ಹೇಗೆ ಹೊಂದಿ ಕೊಳ್ಳಬಲ್ಲುದು?

ಪ್ರತ್ಯೇಕವಾಗಿರುವುದು ಹಿತವೂ ಅಲ್ಲ, ಸಾಧ್ಯವೂ ಇಲ್ಲ ಎಂದು ಕ್ರಮೇಣ ನನಗೆ ಮನವರಿಕೆ ಯಾದಮೇಲೆ ಈ ವಿಶಾಲ ಅಂತರ ರಾಷ್ಟ್ರೀಯ ದೃಷ್ಟಿ ನನಗೆ ಬಂದಿತು. ಭಾರತ ಮತ್ತು ಪ್ರಪಂಚದ ಇತರ ದೇಶಗಳ ರಾಜಕೀಯ ಆರ್ಥಿಕ ಮತ್ತು ಸಂಸ್ಕೃತಿಗಳ ಪರಸ್ಪರ ಸಹಕಾರ ಮತ್ತು ಸಂಬಂಧವು ಹೆಚ್ಚು ಆತ್ಮೀಯವಾಗಿರಬೇಕಾದ್ದೇ ಭಾರತದ ಭವಿಷ್ಯ ಎಂದು ಹೊಳೆಯಿತು. ಆದರೆ ಭವಿಷ್ಯದ ಮೊದಲು, ಪ್ರಸ್ತುತ ಸ್ಥಿತಿ, ಅದಕ್ಕೆ ಮೊದಲು, ಸಾವಿರಾರು ವರ್ಷಗಳಿಂದ ಹೆಣೆದುಕೊಂಡು ಬಂದು ಇಂದಿನದಕ್ಕೆ ಮೂಲವಾಗಿರುವ ಗತಕಾಲ, ಆದ್ದರಿಂದ ಅರ್ಥವಿವರಣೆಗೆ ಗತಕಾಲದ ಕಡೆಗೆ ತಿರುಗಿದೆ.

ಭಾರತ ನನಗೆ ರಕ್ತದಲ್ಲಿತ್ತು. ಹೆಸರು ಕೇಳಿದರೇನೆ ನನಗೆ ರೋಮಾಂಚವಾಗುತ್ತಿತ್ತು. ಆದರೂ ಇಂದಿನ ಸ್ಥಿತಿಯನ್ನೂ ಮತ್ತು ಹಿಂದಿನ ಅನೇಕ ಪದ್ಧತಿಗಳನ್ನೂ ಕಂಡು ಅಸಹ್ಯ ಪಡುವ ಒಬ್ಬ ಪರಕೀಯ ರಂಧ್ರಾನ್ವೇಷಕನಂತೆ ವಿಷಯ ಪ್ರವೇಶಮಾಡಿದೆ. ಸ್ವಲ್ಪ ಮಟ್ಟಿಗೆ ನನ್ನ ದಾರಿ