ಪುಟ:ಭಾರತ ದರ್ಶನ.djvu/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್‌ನಗರದ ಕೋಟೆಯಲ್ಲಿ

೪೮೯

ತತ್ತ್ವವು ಇಂಗ್ಲೆಂಡಿನಲ್ಲೊ ಸ್ಕಾಟ್ಲೆಂಡಿನಲ್ಲೊ ಆರಂಭವಾಗಿ ಆಮೇಲೆ ನಾಜಿಗಳ ಕೈದೀವಿಗೆಯಾಯಿತು. ವಿಶ್ವಸಾಮ್ರಾಜ್ಯ ಅಧಿಕಾರದ ಕನಸುಗಳಿಗೆ, ಆಸೆಗಳಿಗೆ ಆಧಾರವಾಯಿತು ಮತ್ತು ಅಂತ್ಯದಲ್ಲಿ ಅದರ ನಾಶಕ್ಕೂ ಕಾರಣವಾಯಿತು. ಸುಳ್ಳಿಗಿಂತ ಅರೆಸತ್ಯ ಇನ್ನೂ ಅಪಾಯಕರ. ಯಾವುದೋ ಒಂದು ಕಾಲದ ಸತ್ಯ ಇಂದಿನ ವಾಸ್ತವತೆಗೆ ನಮ್ಮನ್ನು ಕುರುಡುಮಾಡುತ್ತದೆ. ಆಮೇಲೆ ಜರ್ಮನಿಯಲ್ಲಿ ಬಲಗೊಂಡ ಹೆಚ್. ಜೆ. ಮ್ಯಾಕಿಂಡರನ ವಿಶ್ವಸಾಮ್ರಾಜ್ಯ ತತ್ತ್ವವು ಏಷ್ಯ ಮತ್ತು ಯೂರೋಪ್ ಖಂಡಗಳ ಸಮುದ್ರ ತೀರದ ನಾಗರಿಕತೆಗಳ ಬೆಳವಣಿಗೆಯ ಆಧಾರದ ಮೇಲೆ ಪ್ರತಿಪಾದಿಸಿದ್ದು. ಯುರೇಷ್ಯದ ಮಧ್ಯ ಭಾಗವು ಯುರೇಷ್ಯನರ ಕೇಂದ್ರವಾಗಿ, ಹೃದಯಭೂಮಿ ಎಂದು ಹೆಸರಾಯಿತು. ಅಲ್ಲಿಂದ ಬಂದ ಆಕ್ರಮಣಕಾರರ ಒತ್ತಡ ಎದುರಿಸಬೇಕೆಂಬ ತತ್ತ್ವದ ಮೇಲೆ ಮ್ಯಾಕಿಂಡರನ ತತ್ತ್ವ ಪುಷ್ಟಿಗೊಂಡಿತು. ಆ ಹೃದಯಸ್ಥಾನ ಅಧೀನ ಮಾಡಿಕೊಂಡರೆ, ಪ್ರಪಂಚ ಗೆದ್ದಂತೆ. ಆದರೆ ನಾಗರಿಕತೆಯು ಸಮುದ್ರ ತೀರದ ಜನರ ಮಾಸಲು ಸ್ವತ್ತಲ್ಲ. ಅದು ತನ್ನ ವ್ಯಾಪ್ತಿಯಲ್ಲಿ ಮತ್ತು ಪುಷ್ಟಿಯಲ್ಲಿ ವಿಶ್ವವ್ಯಾಪಕವಾಗಲೆತ್ನಿಸುತ್ತದೆ. ಯುರೇಷಿಯನರ ಹೃದಯ ಭೂಮಿಯ ವಿಶ್ವಸಾಮ್ರಾಜ್ಯ ಕಲ್ಪನೆಗೆ ಅಮೆರಿಕೆಗಳ ಪ್ರಗತಿ ಸಹ ಸರಿಹೊಂದುವುದಿಲ್ಲ. ಸಮುದ್ರ ಬಲಕ್ಕೂ ಭೂಬಲಕ್ಕೂ ಇದ್ದ ಸಮತಾಕವು ಈಗ ವಿಮಾನಬಲದಿಂದ ತಲೆಕೆಳಗೆ ಆಗಿದೆ.

ವಿಶ್ವಸಾಮ್ರಾಜ್ಯ ಸ್ಥಾಪನೆಯ ಕನಸಿನ ಮನೆ ಕಟ್ಟುತ್ತ ಜರ್ಮನಿಗೆ ಅಷ್ಟದಿಗ್ಧಂಧನ ಭಯದ ಪೀಡೆ ಹಿಡಿಯಿತು. ತನ್ನ ಶತ್ರುಗಳು ಒಟ್ಟಾದರೆಂದು ಸೋವಿಯಟ್ ರಷ್ಯ ಭಯಗೊಂಡಿತು. ಯೂರೋಪಿನಲ್ಲಿ ರಾಷ್ಟ ಶಕ್ತಿಗಳ ಸಮತೂಕದಿಂದ ಯಾವರಾಷ್ಟವೂ ಬಲಗೊಳ್ಳದಂತೆ ನೋಡಿಕೊಂಡಿರುವುದೇ ಇಂಗ್ಲೆಂಡಿನ ರಾಷ್ಟ್ರನೀತಿಯಾಯಿತು. ಇತರರ ಭಯ ಸದಾ ಇದ್ದೇ ಇದೆ. ಎಲ್ಲ ಆಕ್ರಮಣಕ್ಕೂ, ಕುಟಿಲ ಮತ್ತು ಕೃತ್ರಿಮ ಸಂಧಾನಗಳಿಗೂ ಈ ಭಯವೇ ಕಾರಣ. ಯುದ್ಧಾನಂತರ ಅಮೆರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ರಷ್ಯದ ಸೋವಿಯಟ್ ಸಂಯುಕ್ತ ರಾಷ್ಟ್ರ, ಈ ಎರಡೇ ಶಕ್ತಿಗಳು ಪ್ರಪಂಚದಲ್ಲಿ ಪ್ರಬಲಗೊಂಡು, ಉಳಿದ ಇತರ ರಾಷ್ಟಶಕ್ತಿಗಳು ತಮ್ಮದೇ ಒಂದು ರೀತಿಯ ಗುಂಪು ಕಟ್ಟಿಕೊಳ್ಳದಿದ್ದರೆ, ಬಹಳ ಹಿಂದೆ ಬಿದ್ದು ಪೂರ್ಣ ನೂತನ ಪರಿಸ್ಥಿತಿ ಒದಗುತ್ತದೆ. “ಅಮೆರಿಕ ಸಹ ದಿಗ್ಬಂಧನಕ್ಕೆ ಒಳಗಾಗಬಹುದೆಂದೂ, ಯಾವುದಾದರೊಂದು ತೀರದ ರಾಷ್ಟ್ರದೊಡನೆ ಸೇರಿಕೊಳ್ಳಬೇಕೆಂದೂ, ಏನೇ ಆಗಲಿ 'ಹೃದಯಭೂಮಿ' ರಾಷ್ಟ್ರವು (ಈಗ ಸೋವಿಯಟ್ ರಷ್ಯ) ತೀರ ರಾಷ್ಟ್ರದೊಡನೆ ಸಂಬಂಧ ಬೆಳೆಸದಂತೆ ಎಚ್ಚರವಾಗಿದ್ದು ತಡೆ ಹಾಕಬೇಕೆಂದೂ” ಪ್ರೊಫೆಸರ್ ಸ್ಪೈಕ್‌ಮನ್ ತನ್ನ ಇತ್ತೀಚಿನ ಸಂದೇಶ ಸಾರಿದ್ದಾನೆ.

ಇದೆಲ್ಲ ಅತಿ ಬುದ್ಧಿವಂತಿಕೆ, ವಾಸ್ತವಿಕತೆ, ಎಂದು ತೋರುತ್ತದೆ; ಆದರೂ ಶುದ್ಧ ಅವಿವೇಕ, ಏಕೆಂದರೆ ಹಳೆಯ ಆಕ್ರಮಣ ನೀತಿ, ಸಾಮ್ರಾಜ್ಯ ಕಲ್ಪನೆ, ರಾಷ್ಟಶಕ್ತಿಗಳ ಸಮತೋಲನ, ಅಂತ್ಯ ಘರ್ಷಣೆ ಮತ್ತು ಯುದ್ಧ-ಇವುಗಳ ಆಧಾರದ ಮೇಲೆಯೇ ಈ ನೀತಿಯ ರಚನೆ. ಈ ಮಾರ್ಗದಲ್ಲಿ ಅಷ್ಟ ದಿಗ್ರಂಧನಗಳು ತಪ್ಪಬೇಕಾದರೆ ಒಪ್ಪಂದ, ಪ್ರತಿ ಒಪ್ಪಂದ, ಆಕ್ರಮಣ, ವಿಸ್ತರಣ, ಈ ರೀತಿ ಅಧಿಕಾರದ ರಾಜಕೀಯ ಮುಂದುವರಿಯಲೇಬೇಕು. ಆದರೆ ಒಂದು ದೇಶದ ಅಧಿಕಾರ ವ್ಯಾಪ್ತಿ ಅಥವ ಪ್ರಭಾವ ಎಷ್ಟೇ ದೊಡ್ಡದಿರಲಿ ಅದರ ಹೊರಗಿರುವವರಿಂದ ದಿಗ್ರಂಧನದ ಅಪಾಯ ಎಂದೂ ತಪ್ಪಿದ್ದಲ್ಲ; ಅವರೂ ಸಹ ಎದು ರಾಳಿಯ ಶಕ್ತಿ ವಿಶೇಷ ಬೆಳೆಯಬಾರದೆಂದು ಸದಾ ಎಚ್ಚರದಿಂದಿರುತ್ತಾರೆ. ಈ ಭಯ ನಿವಾರಣೆಗೆ ಇರುವುದು ಒಂದೇ ಮದ್ದು, ಈ ವಿಶ್ವವನ್ನೆಲ್ಲ ಗೆಲ್ಲಬೇಕು; ಅಥವ ಇರುವ ಮತ್ತು ಬರುವ ಎಲ್ಲ ಶತ್ರುಗಳನ್ನೂ ನಿರ್ನಾಮ ಮಾಡಬೇಕು. ಪ್ರಪಂಚ ಗೆಲ್ಲಲು ಇತ್ತೀಚೆಗೆ ಮಾಡಿದ ಪ್ರಯತ್ನ ಮಣ್ಣು ಗೂಡಿದ್ದನ್ನು ಇಂದು ನಾವು ನೋಡುತ್ತಿದ್ದೇವೆ. ಈ ಪಾಠವು ಸಾಕೆ? ಅಥವ ಆಸೆ, ಜನಾಂಗಮದ ಅಧಿಕಾರ ಮದದಿಂದ ಪ್ರೇರಿತರಾಗಿ ಇನ್ನೂ ಕೆಲವರು ತಮ್ಮ ಅದೃಷ್ಟ ಪರೀಕ್ಷೆಗೆಂದು ದುರಂತ ರಂಗಸ್ಥಳದ ಮೇಲೆ ಧುಮುಕುವರೆ?

ಪ್ರಪಂಚದ ಒಡೆತನ ಮತ್ತು ಪ್ರಪಂಚದ ಸಹಕಾರ ಈ ಎರಡು ಮಾರ್ಗವಲ್ಲದೆ ಬೇರೆ ಯಾವ ದಾರಿಯ ಮಧ್ಯೆ ಇರುವಂತೆ ಕಾಣುವುದಿಲ್ಲ; ಮಧ್ಯವರ್ತಿ ಮಾರ್ಗ ಆರಿಸುವಂತೆಯೂ ಇಲ್ಲ. ಹಿಂದಿನ ವಿಭಜನೆಗಳಲ್ಲಿ, ರಾಜ್ಯಾಧಿಕಾರದ ಅನ್ವೇಷಣೆಯಲ್ಲಿ ಇಂದು ಯಾವ ಅರ್ಥವೂ ಇಲ್ಲ; ಇಂದಿನ ವಾತಾವರಣಕ್ಕೆ ಅವು ಸರಿಹೋಗುವುದಿಲ್ಲ; ಆದರೂ ಅವಕ್ಕೆ ಕೊನೆ ಇಲ್ಲ. ರಾಷ್ಟ್ರಗಳ ಹಿತಾಹಿತಗಳು,