ಪುಟ:ಭಾರತ ದರ್ಶನ.djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಯೂರೋಪಿಯನ್ ರಾಷ್ಟ್ರಗಳಲ್ಲಿ ಎಲ್ಲೆಲ್ಲೂ ಪರಸ್ಪರ ದ್ವೇಷ, ಹಳೆಯ ಹೋರಾಟಗಳ ಮತ್ತು ಅನ್ಯಾಯಗಳ ನೆನಪು ತುಂಬಿವೆ. ಸಾಮ್ರಾಜ್ಯ ರಾಷ್ಟ್ರಗಳು ಜಾತೆಗೆ ತಮ್ಮ ಅಧೀನ ರಾಷ್ಟ್ರಗಳ ಜನರ ದ್ವೇಷವನ್ನೂ ಗಳಿಸಿದ್ದಾರೆ. ದೀರ್ಘಕಾಲದ ಸಾಮ್ರಾಜ್ಯ ಆಡಳಿತದ ಕಥೆಯ ಹೊರೆ ಇಂಗ್ಲೆಂಡಿಗೆ ಬಹಳ ವಿದೆ. ಈ ಕಾರಣದಿಂದಲೋ ಅಥವ ತಮ್ಮ ಸಹಜ ಗುಣದಿಂದಲೋ ಆಂಗ್ಲರು ಬಹಳ ಮಿತಭಾಷಿಗಳು, ಇತರರೊಂದಿಗೆ ಬೆರೆಯದೆ ತಮ್ಮ ಪಾಡಿಗೆ ತಾವು ಇರುವವರು ಆದರೆ, ಹೊರಗಡೆ ದುರದೃಷ್ಟವಶಾತ್ ಅವರ ಅಧಿಕೃತ ಪ್ರತಿನಿಧಿಗಳು ಆಂಗ್ಲರ ಗುಣಾವಗುಣ ನಿರ್ಧರ ಮಾಡುತ್ತಾರೆ. ಅನೇಕ ವೇಳೆ ಆಂಗ್ಲರ ಉದಾರ ನೀತಿಯೂ ಅವರಲ್ಲಿ ಇರುವುದಿಲ್ಲ, ಅವರ ಉತ್ತಮ ಸಂಸ್ಕೃತಿಯೂ ಇರುವುದಿಲ್ಲ ; ಮೇಲೆ ಭಕ್ತಿ, ಶ್ರದ್ದೆ ತೋರಿದರೂ ಒಳಗೆ ಪ್ರತಿಷ್ಠೆ ಯ ದಾಸಯ್ಯಗಳು, ಇತರರೆ ದ್ವೇಷ ಸಂಪಾದನೆ ಇವರಿಗೆ ಒಂದು ಸ್ವಭಾವವಾಗಿ ಹೋಗಿದೆ. ಕೆಲವು ತಿಂಗಳ ಕೆಳಗೆ ಇಂಡಿಯಾ ಸರಕಾರದ ಕಾರ್ಯದರ್ಶಿಯೊಬ್ಬ, ಗಾಂಧೀ ಜಿಗೆ ಸೆರೆಮನೆಯಲ್ಲಿ ಇದ್ದಾಗ ಒಂದು ಪತ್ರ ಬರೆದ, ಆ ಭಾಷೆಗಿಂತ ಉದ್ಧಟತನ ಬೇರೊಂದು ಬೇಕಿರಲಿಲ್ಲ; ಅನೇಕರು ಭಾರತ ಜನತೆಗೇ ಅದು ಅಗೌರವವೆಂದರು, ಏಕೆಂದರೆ ಭಾರತದ ಪ್ರತಿನಿಧಿ ಗಾಂಧಿ, ಮುಂದೆ ಬರುವುದು ಇನ್ನೊಂದು ಸಾಮ್ರಾಜ್ಯ ಯುಗವೆ ? ಅಂತರ ರಾಷ್ಟ್ರೀಯ ಸಹಕಾರ ಯುಗವೆ ? ಅಥವ ಪ್ರಪಂಚದ ಪ್ರಜಾಸ್ವಾಸ್ಥ್ಯವೆ ? ಸಾಮ್ರಾಜ್ಯ ಯುಗದ ಕಡೆಗೇ ತಕ್ಕಡಿ ಹೊಡೆಯುತ್ತಿದೆ. ಅದೇ ಪ್ರಾಮಾಣಿಕತೆ ಅಲ್ಲದಿದ್ದರೂ ಪುನಃ ಅದೇ ಶೃತಿ ಕೇಳಿಬರುತ್ತಿದೆ. ಮನವನ ಉನ್ನತ ನೈತಿಕ ಪ್ರೇರಣೆ ಮತ್ತು ಅಪಾರ ತ್ಯಾಗವೆಲ್ಲ ತುಚ್ಛ ಧೈಯಗಳಿಗಾಗಿ ದುರುಪಯೋಗ ಆಗುತ್ತಿವೆ ; ಅಧಿಕಾರದಲ್ಲಿರುವವರು ಮಾನವ ಸದ್ಗುಣವನ್ನು, ಔದಾರವನ್ನು ದುಷ್ಕೃತ್ಯಗಳಿಗೆ ದುರುಪಯೋಗಿಸಿ ಜನರ ಭಯ, ದ್ವೇಷ ಮತ್ತು ತಪ್ಪು ಧೈಯಗಳಿಂದ ಪ್ರಯೋಜನ ಪಡೆಯುತ್ತಿದಾರೆ. ಹಿಂದಿನ ಕಾಲದಲ್ಲಿ ಸಾಮ್ರಾಜ್ಯ ವಿಷಯದಲ್ಲಿ ಮುಚ್ಚು ಮರೆ ಇಲ್ಲದೆ ಮಾತನಾಡುತ್ತಿದ್ದರು. ಅಥೆನಿಯನ್ ಸಾಮ್ರಾಜ್ಯದ ವಿಷಯ ಮಾತನಾಡುತ್ತ “ ಇತರರ ಸಹಾಯವಿಲ್ಲದೆ ಏಕಾಂಗಿಯಾಗಿ ಬಾರ್ಬರರನ್ನು ಸೋಲಿಸಿರುವ ಕಾರಣ, ನಮ್ಮ ಅಧೀನ ಜನರಿ ಗಾಗಿ ನಮ್ಮ ನಾಗರಿಕತೆಗಾಗಿ ನಮ್ಮ ಅಸ್ತಿತ್ವವನ್ನೇ ಪರೀಕ್ಷೆಗೆ ಪಣಕೊಟ್ಟ ಕಾರಣ ಸಾಮ್ರಾಜ್ಯವಾಳಲು ನಮಗೆ ಹಕ್ಕು ಇದೆ ಎಂದು ನಾವು ಜಂಭಕೊಚ್ಚುವುದಿಲ್ಲ. ನಮ್ಮ ಭಯವೇ ನಮ್ಮನ್ನು ಇಲ್ಲಿಗೆ ಕರೆ ತಂದಿದೆ, ನಮ್ಮ ಸ್ನೇಹಿತರ ಸಹಾಯದಿಂದ ಸಿಸಿಲಿ ಪರಿಸ್ಥಿತಿ ಸರಿಪಡಿಸುತ್ತೇನೆ” ಎಂದು ಮ್ಯೂಸಿಡಿಡೀಸ್ ಹೇಳಿದ್ದಾನೆ. ಅಥೇನಿಯನ್ ಅಧೀನ ರಾಷ್ಟ್ರಗಳ ಕಾಣಿಕೆ ವಿಷಯ ಬರೆಯುತ್ತ “ ಅದನ್ನು ಗೆದ್ದು ದು ದೌರ್ಜನ್ಯವಿರಬಹುದು, ಬಿಟ್ಟಿದ್ದರೆ ಮೂರ್ಖತನವಾಗುತಿತ್ತು ” ಎಂದಿದ್ದಾನೆ. - ಅಥೆನ್ಸಿನ' ಇತಿಹಾಸವೆಲ್ಲ ಪ್ರಜಾಸತ್ತೆಗೂ ಸಾಮ್ರಾಜ್ಯಕ್ಕೂ ಇರುವ ವಿರೋಧ, ಪ್ರಜಾಸತ್ತೆಯ ರಾಷ್ಟ್ರ ತನ್ನ ಅಧೀನ ರಾಷ್ಟ್ರಗಳ ಮೇಲೆ ನಡೆಸಿದ ಅತ್ಯಾಚಾರ ಮತ್ತು ಅತ್ಯಲ್ಪ ಕಾಲದಲ್ಲೇ ಅದರಿಂದ ಪಡೆದ ದೌರ್ಬಲ್ಯ ಮತ್ತು ಅಂತ್ಯದಲ್ಲಿ ಅನುಭವಿಸಿದ ಸಾಮ್ರಾಜ್ಯ ನಾಶ ಇವುಗಳ ಕಥೆಯಿಂದ ತುಂಬಿದೆ. ಸ್ವಾತಂತ್ರ ಮತ್ತು ಸಾಮ್ರಾಜ್ಯ ಸಮರ್ಥಿಸುವವರು ಇಂದಿನವರು ಯಾರೂ ಮ್ಯೂಸಿಡಿಡೀಸನನ್ನು ಮೀರಿಸ ಲಾರರು. “ನಾಗರಿಕತೆಯ ನಾಯಕರು ನಾವು ; ಮಾನವಕುಲದ ಮುಂದಾಳುಗಳು ನಾವು ; ನಮ್ಮ ಸಹವಾಸ ಮತ್ತು ಸಂಪರ್ಕ ಮಾನವನಿಗೆ ದೊರೆಯುವ ಅತ್ಯುತ್ತಮ ವರಗಳು ; ನಮ್ಮ ಪ್ರಭಾವದ ಆವರಣ ದೊಳಗೆ ಇರುವುದು ದಾಸ್ಯವಲ್ಲ, ಅದೊಂದು ಮಹಾಪ್ರಸಾದ ; ಪೂರ್ವದೇಶದ ಐಶ್ವರ್ಯವೆಲ್ಲ ಕೊಟ್ಟರೂ ನಾವು ಕರುಣಿಸುವ ಸಂಪತ್ತು ದೊರೆಯಲಾರದು ಆದ್ದರಿಂದ ಅವರ ಪ್ರಯತ್ನ ಎಷ್ಟೇ ಇರಲಿ ಮೂಲಧನ ನಮ್ಮದು ಎಂಬ ದೃಢವಿಶ್ವಾಸದಿಂದ ನಮಗೆ ಬರುವ ಹಣ ಮತ್ತು ಸಂಪತ್ಸಾಧನ ಉಪಯೋಗಿಸಿ ಸಂತೋಷ ದಿಂದ ಕೆಲಸ ಮಾಡೋಣ. ಏಕೆಂದರೆ ಅನೇಕ ಯುದ್ಧ ರಂಗಗಳಲ್ಲಿ ಅಪಾರ ತ್ಯಾಗಮಾಡಿ ಮಾನವ ಸುಖದ ಮೂಲ ಮಾನವ ಶಕ್ತಿ ಎಂಬ ರಹಸ್ಯವನ್ನು ಬಹು ಪ್ರಯಾಸದಿಂದ ಕಲಿತುಕೊಂಡಿದ್ದೇವೆ. ಅನೇಕರು ಅನೇಕ ಹೆಸರಿನಿಂದ ಕರೆಯಬಹುದು, ಆದರೆ ಅದರ ಗೂಡಾರ್ಥ ನಮಗೆ ಮಾತ್ರ ಗೊತ್ತು : ನಮ್ಮ ನಗರವೇ ಅದಕ್ಕೆ ತೌರುಮನೆ ಆಗಬೇಕು. ಅದರ ಹೆಸರು ಸ್ವಾತಂತ್ರ ; ಸ್ವಾತಂತ್ರ ಬೇಕಾದರೆ ಸೇವೆ ಮಾಡು ಎಂದು ಅದು ನಮಗೆ ಕಲಿಸಿದೆ, ನಮ್ಮ ಉಪಕೃತಿಗಳನ್ನು ಸ್ವಾರ್ಥದೃಷ್ಟಿ ಇಲ್ಲದೆ,