ಪುಟ:ಭಾರತ ದರ್ಶನ.djvu/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್‌ನಗರದ ಕೋಟೆಯಲ್ಲಿ ನಿರ್ಭಯವಾಗಿ ಸ್ವಾತಂತ್ರದ ನಂಬಿಕೆಯಿಂದ ಹಂಚಲು ಇತರರಿಗಿಂತ ನಮಗೆ ಮಾತ್ರ ಏಕೆ ಹೆಚ್ಚು ಸಾಧ ತಿಳಿದಿದೆಯೇ ? ” ಎಂದು ಕೇಳಿದ್ದಾನೆ. ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಯ ಘೋಷಣೆ ಎಲ್ಲ ಕಡೆ ಕೇಳಿ ಬಂದರೂ ಅವು ಕೆಲವರಿಗೆ ಮಾತ್ರ ಮಾಸಲಾಗಿರುವ ಈ ಕಾಲದಲ್ಲಿ ಮ್ಯೂಸಿಡಿಡಿಸನ ಈ ಮಾತು ತೀರ ಪರಿಚಿತವಿರುವಂತೆ ತೋರುತ್ತದೆ. ಅದರಲ್ಲಿ ಸತ್ಯವೂ ಇದೆ. ಸತ್ಯದ ನಿರಾಕರಣೆಯೂ ಇದೆ. ಮ್ಯೂಸಿಡಿಡೀಸನ ಪರಿಚಯವೆಲ್ಲ ಮೆಡಿಟರೇನಿಯನ್ ರಾಜ್ಯ ಗಳದು, ಬೇರೆ ಜನರ ಪರಿಚಯ ಅವನಿಗೆ ಇರಲಿಲ್ಲ. ತನ್ನ ಸುಪ್ರಸಿದ್ದ ನಗರದ ಸ್ವಾತಂತ್ರದಲ್ಲಿ ಹಮ್ಮ ಗೊಂಡು ಆ ಸ್ವಾತಂತ್ರವೇ ಮಾನವನ ಶಕ್ತಿ ಮತ್ತು ಸುಖದ ಗುಟ್ಟು ಎಂದು ಹೊಗಳುವುದರಲ್ಲಿ ಇತರರಿಗೂ ಆ ಸ್ವಾತಂತ್ರದ ಆಸೆ ಇದೆ, ಎಂದು ಮರೆತನು. ಸ್ವಾತಂತ್ರ ಪ್ರೇಮಿಯಾದ ಅಥೆನ್ಸ್ ನಗರವೇ ಫಾಲೋನ್ ನಗರ ಕೊಳ್ಳೆ ಹೊಡೆದು, ನಾಶಮಾಡಿ ಅಲ್ಲಿನ ಗಂಡಸರನ್ನೆಲ್ಲ ಕೊಲೆಮಾಡಿ, ಹೆಂಗಸರು ಮಕ್ಕಳನ್ನು ದಾಸ್ಯ ಕೂಪಕ್ಕೆ ತಳ್ಳಿತು. ಮ್ಯೂಸಿಡಿಡೀಸ್ ಅಥೆನ್ಸಿನ ಸಾಮ್ರಾಜ್ಯ ಮತ್ತು ಸ್ವಾತಂತ್ರ್ಯದ ವಿಷಯ ಬಗೆಯುತ್ತಿರು ವಾಗಲೇ ಆ ಸಾಮ್ರಾಜ್ಯವು ನುಚ್ಚು ನೂರಾಗಿ ತನ್ನ ಸ್ವಾತಂತ್ರ್ಯ ಕಳೆದುಕೊಂಡಿತು. ಸ್ವಾತಂತ್ರವೂ, ಆಕ್ರಮಣ ಮತ್ತು ದಾಸ್ಯವೂ ಒಟ್ಟಿಗೆ ಬಹುಕಾಲ ಬಾಳಲು ಸಾಧ್ಯವಿಲ್ಲ. ಒಂದಕ್ಕೆ ಇನ್ನೊಂದು ಸೋಲಲೇಬೇಕು ; ಸಾಮ್ರಾಜ್ಯ ಮದ ಮತ್ತು ಠೀವಿ ಮಣ್ಣು ಮುಕ್ಕಲು ಬಹುಕಾಲ ಬೇಕಿಲ್ಲ. ಎಂದಿಗಿಂತ ಹೆಚ್ಚಾಗಿ ಇಂದು ಸ್ವಾತಂತ್ರ ವಿಭಜನೆ ಸಾಧ್ಯವಿಲ್ಲ. ಪೆರಿಕ್ಲಿಸ್ ತನ್ನ ನೆಚ್ಚಿನ ಆಕ್ರೋಪೋಲೀಸ್ ನಗರವನ್ನು ಮುಕ್ತಕಂಠದಿಂದ ಹೊಗಳಿದ ಮರುಕ್ಷಣದಲ್ಲಿಯೇ ಸ್ಪಾರ್ಟಾ ಸೈನ್ಯ ಆ ನಗರ ವಶಪಡಿಸಿಕೊಂಡು ಆಕ್ರಮಿಸಿತು. ಆದರೂ ಅಥೆನ್ಸ್ ಜನರ ಸೌಂದರ್ಯ ಪ್ರೇಮ, ಬುದ್ಧಿಶಕ್ತಿ, ಸ್ವಾತಂತ್ರಾಭಿಲಾಷೆ ಮತ್ತು ಧೈರ್ಯಗಳ ವಿಷಯ ಆತನು ಆಡಿದ ಮಾತುಗಳು ಅಂದಿನ ಅಥೆನ್ಸಿಗೆ ಮಾತ್ರವಲ್ಲದೆ ಇಂದಿನ ವಿಶಾಲ ಪ್ರಪಂಚಕ್ಕೆ ಸಹ ಅನ್ವಯಿಸಿ ತಮ್ಮ ಉದಾರ ದೃಷ್ಟಿಯಿಂದ ಇಂದಿಗೂ ನಮ್ಮ ಹೃದಯ ಕಲಕುತ್ತವೆ. ನಾವು ಸೌಂದರ್ಯ ಪ್ರೇಮಿಗಳು ಆದರೆ ಮರ್ಯಾದೆ ಮಾರಿದವರಲ್ಲ; ಜ್ಞಾನಪ್ರೇಮಿಗಳು ಆದರೆ ಷಂಡರಲ್ಲ. ಐಶ್ವರ್ಯ ನಮಗೆ ಕೇವಲ ಡಂಭಾಚಾರದ ಒಂದು ಸಾಮಗ್ರಿಯಲ್ಲ, ಅದು ಒಂದು ಸಾಧನಸಾಮಗ್ರಿ ; ಬಡತನ ಒಪ್ಪುವುದರಲ್ಲಿ ಯಾವ ಅಗೌರವವೂ ಇಲ್ಲ, ಆದರೆ ಅದರ ನಿವಾರಣೆಗೆ ಪ್ರಯತ್ನ ಮಾಡದಿರುವುದು ನಿಜವಾದ ಅವನತಿ........... ಯುದ್ಧ ಪರಾಕ್ರಮವು ಪರಮಧರ್ಮ, ಒಂದು ಉದಾತ್ತಧೇಯ ಎಂಬ ನಾಣ್ಣುಡಿಯಿಂದ ಮಾತ್ರ ನಮ್ಮ ಶಕ್ತಿ ವೃದ್ಧಿಯಾಗುವುದಿಲ್ಲ. ಈ ನಮ್ಮ ಮಹಾನಗರದ ಕಾರ್ಯಾಸಕ್ತ ಜೀವನ, ಈ ಮಹಾನಗರವು ನಮ್ಮ ಕಣ್ಮನಗಳಿಗೆ ಕೊಡುವ ಸೌಂದರ್ಯದಸೊಬಗು, ಈ ಎಲ್ಲ ವೈಭವಸೃಷ್ಟಿಗೆ ಕಾರಣರಾದ ಶೂರಸಾಹಸಿಗಳೂ, ಕಾರ್ಯತತ್ಪರರಾದ ಮಹಾಜ್ಞಾನಿಗಳೂ, ಆತ್ಮಸಂಯಮಿಕಾರ್ಯ ನಿರ್ವಾ : ನಿಪುಣರೂ ಆದ ನಗರ ಜನರು-ಎಂದರೆ ಸೋಲು ಸಿದ್ದವೆನ್ನುವ ಸತ್ವ ಪರೀಕ್ಷೆಯ ಸಮಯದಲ್ಲಿ ಹೇಡಿಗಳಂತೆ ಕಾರ್ಯವಿಮುಖರಾಗಿ ಕಾಲುಕೀಳದೆ ನಗರ ರಕ್ಷಣೆಗಾಗಿ ಪ್ರಾಣಾರ್ಪಣೆಮಾಡಿದ ತ್ಯಾಗವೀರರ ಸ್ಮರಣೆ ಆ ನಮ್ಮ ಶಕ್ತಿಯ ಉಗಮಸ್ಥಾನ, ರಾಷ್ಟ್ರಕ್ಕಾಗಿ ಅವರು ತಮ್ಮ ದೇಹ ಅರ್ಪಿಸಿದರು ; ಶಾಶ್ವತ ಕೀರ್ತಿಪಡೆದು ಅಮರರಾದರು. ಆ ಪ್ರಶಂಸೆ ಅವರ ಮೃತದೇಹಗಳಮೇಲೆ ಕಟ್ಟಿದ ಭವ್ಯ ಸ್ಮಾರಕಗಳಲ್ಲ ; ಆದರೆ ಜನತೆಯ ಹೃದಯದಲ್ಲಿ ಮೂರ್ತಿವೆತ್ತ ಯಶೋರಾಶಿ, ಜನತೆಯು ತನ್ನ ನಡೆನುಡಿಯಲ್ಲಿ ತೋರುವ ಆ ಮಹಾಪುರುಷರ ಆದರ್ಶದ ಅನುಷ್ಠಾನದ ಚಿರನೂತನ ಪ್ರಶಂಸೆ. ಆ ಮಹಾಪುರುಷರಿಗೆ ಪ್ರಪಂಚವೇ ಒಂದು ಬೃಂದಾವನ, ಅವರ ಚಾರಿತ್ರವು ಅವರ ಜನ್ಮಭೂಮಿಯ ಶಿಲ್ಪ ಕಲಾಕೃತಿಯಲ್ಲಿ ಮಾತ್ರವಲ್ಲದೆ ಯಾವ ಸ್ಮಾರಕವೂ ಕಣ್ಣಿಗೆ ತೋರದ ದೂರದೇಶದ ಜನಜೀವನದಲ್ಲಿ ಸಹ ಹಾಸುಹೊಕ್ಕಾಗಿ ಹೆಣೆದು ಹೋಗಿ ಜೀವಂತ ಇದೆ. ಅವರು ಸಾಧಿಸಿದ ಕಾರ್ಯಮೀರಿ ದುಡಿದು ಮಡಿಯುವುದು ಈಗ ನಿಮ್ಮ ಕೆಲಸ ಸುಖದ ರಹಸ್ಯ ಸ್ವಾತಂತ್ರದಲ್ಲಿ, ಸ್ವಾತಂತ್ರದ ರಹಸ್ಯ ಕೆಚ್ಚೆದೆಯ ಕಟ್ಟಾಳನದಲ್ಲಿ, ಮುನ್ನುಗ್ಗುವ ಶತ್ರುವಿನೆದುರು ಸೋಮಾರಿಗಳಾಗಿ ಸರಿದು ನಿಲ್ಲುವುದರಲ್ಲಿ ಅಲ್ಲ” ಎಂದಿದ್ದಾನೆ ಮ್ಯೂಸಿಡಿಡೀಸ್