ಪುಟ:ಭಾರತ ದರ್ಶನ.djvu/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್‌ನಗರದ ಕೋಟೆಯಲ್ಲಿ ೫da ಮತ್ತು ದಕ್ಷಿಣ ಯೂರೋಪ್‌ಗಳಿಗಿಂತ ಉತ್ತರ, ಪಶ್ಚಿಮ ಮತ್ತು ಮಧ್ಯ ಯೂರೋಪಿನಲ್ಲಿ ಈ ಕ್ಷೀಣಗತಿಯ ವೇಗ ಇನ್ನೂ ಹೆಚ್ಚು ; ಕ್ಷೀಣಗತಿ ಮಾತ್ರ ಎಲ್ಲ ಕಡೆಯೂ ಇದೆ. ಇಂದಿನ ಲೆಕ್ಕಾಚಾರದಂತೆ ರಷ್ಯ ಬಿಟ್ಟು ಯೂರೋಪಿನ ಜನಸಂಖ್ಯೆ ೧೯೫೫ ರಲ್ಲಿ ಪರಮಾವಧಿ ಮುಟ್ಟ ಅನಂತರ ಇಳಿಮುಖವಾಗಬೇಕು. ಇದಕ್ಕೂ ಯುದ್ದ ಸಾವಿಗೂ ಏನೂ ಸಂಬಂಧವಿಲ್ಲ ; ಯುದ್ಧದಿಂದ ಜನಸಂಖ್ಯೆ ಇನ್ನೂ ಬೇಗ ಇಳಿಮುಖವಾಗುತ್ತದೆ. ಇದಕ್ಕೆ ಪ್ರತಿಯಾಗಿ ಸೋವಿಯಟ್ ಒಕ್ಕೂಟದ ಜನಸಂಖ್ಯೆ ಅತಿವೇಗದಿಂದ ವೃದ್ಧಿಯಾಗಿ ೧೯೭೦ರ ಹೊತ್ತಿಗೆ ೨೫ ಕೋಟಿ ಆಗಬಹುದೆಂದು ಅಂದಾಜು ಮಾಡಲಾಗಿದೆ. ಯುದ್ಧದ ಫಲವಾಗಿ ದೇಶ ವಿಸ್ತಾರ ಗೊಂಡು ಅದರಿಂದ ಹೆಚ್ಚಬಹುದಾದ ಜನಸಂಖ್ಯೆ ಇದರಲ್ಲಿ ಸೇರಿಲ್ಲ. ಈ ಅಪಾರ ಜನಸಂಖ್ಯೆ ಔದ್ಯೋಗಿಕ ಮತ್ತು ಇತರ ಪ್ರಗತಿಗಳಿಂದ ರಷ್ಯ ದೇಶವು ಯೂರೋಪ್ ಮತ್ತು ಏಷ್ಯ ಖಂಡಗಳಲ್ಲಿ ಅತ್ಯಂತ ಪ್ರಬಲ ರಾಷ್ಟವಾಗುತ್ತದೆ, ಏಷ್ಯದ ಭವಿಷ್ಯವೇ ಚೀನ ಮತ್ತು ಭಾರತದ ಕೈಗಾರಿಕಾ ಪ್ರಗತಿಯನ್ನು ಅವಲಂಬಿಸಿದೆ. ಈ ದೇಶಗಳ ಅಪಾರ ಜನ ಸಮುದಾಯವನ್ನು ರಾಷ್ಟ್ರದ ಶಕ್ತಿ ಸಂಪತ್ತು ಹೆಚ್ಚಿಸಲು ಅಣಿಗೊಳಿಸುವುದರ ಲ್ಲಿಯೇ ಅವುಗಳ ಶಕ್ತಿ ದೌರ್ಬಲ್ಯಗಳೆರಡೂ ಅಡಗಿವೆ, ಯೂರೋಪಿನ ಹಳೆಯ ಸಾಮ್ರಾಜ್ಯ ರಾಷ್ಟ್ರಗಳು ತಮ್ಮ ವಿಸ್ತರಣ ಮತ್ತು ಆಕ್ರಮಣದ ಕೊನೆಯ ಘಟ್ಟ ಮುಟ್ಟದಂತೆ ತೋರುತ್ತದೆ. ಅವುಗಳ ಆರ್ಥಿಕ ಮತ್ತು ಸಾಮಾಜಿಕ ರಚನೆ ಮತ್ತು ಜನರ ಕೌಶಲ ಮತ್ತು ಶಕ್ತಿಗಳಿಂದ ಅವು ಇನ್ನೂ ಸ್ವಲ್ಪ ಕಾಲ ಪ್ರಪಂಚ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರ ವಹಿಸಬಹುದು ; ಅವೆಲ್ಲ ಒಂದು ಒಕ್ಕೂಟದಲ್ಲಿ ಸೇರದಿದ್ದರೆ ಕ್ರಮೇಣ ಪ್ರಪಂಚದ ಮಹಾರಾಷ್ಟ್ರಗಳ ಶ್ರೇಣಿಯಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುತ್ತವೆ. “ ವಾಯವ್ಯ ಅಥವ ಮಧ್ಯ ಯುರೋಪಿನ ಯಾವ ಜನಾಂಗವೂ ಇನ್ನು ಮುಂದೆ ಪ್ರಪಂಚದ ಶಾಂತಿ ಕಲಕುವ ಭಯವಿಲ್ಲ. ಯಂತ್ರೋಪಕರಣ ನಾಗರಿಕತೆಯ ಬಹುವೇಗದಿಂದ ಇತರ ಪ್ರಗತಿ ಪರ ರಾಷ್ಟ್ರಗಳಿಗೂ ಹರಡಿರುವುದರಿಂದ ಜರ್ಮನಿ ಸಹ ತನ್ನ ಪಶ್ಚಿಮದ ನೆರೆಯವರಂತೆ ಪ್ರಪಂಚದ ಮಹಾಶಕ್ತಿಯಾಗುವ ಅವಕಾಶ ಕಳೆದು ಕೊಂಡಿದೆ ಎಂದು ಫ್ರಾಂಕ್ ನೋಟ್ಸ್ಟೀನ್ ಹೇಳಿದ್ದಾನೆ. ಯಂತ್ರೋಪಕರಣ ಮತ್ತು ಕೈಗಾರಿಕಾ ಪ್ರಗತಿಯಿಂದ ಅನೇಕ ಪಾಶ್ಚಾತ್ಯ ದೇಶಗಳಿಗೆ ಮತ್ತು ಜನರಿಗೆ ಪ್ರಬಲಶಕ್ತಿ ಬಂದಿತು. ಈ ಶಕ್ತಿ ಮೂಲವು ಕೆಲವು ರಾಷ್ಟ್ರಗಳ ಸ್ವಾಮ್ಯವಾಗಿ ಮಾತ್ರ ಉಳಿಯು ವುದು ತೀರ ಅಸಂಭವ. ಆದ್ದರಿಂದ ಪ್ರಪಂಚದ ಬಹು ಭಾಗದ ಮೇಲೆ ಯೂರೋಪಿಗೆ ಇರುವ ರಾಜ ಕೀಯ ಮತ್ತು ಆರ್ಥಿಕ ಸ್ವಾಮ್ಯ ಬೇಗ ಹೋಗಲೇಬೇಕು ; ಯುರೇಷ್ಯ ಮತ್ತು ಆಫ್ರಿಕ ಖಂಡಗಳಿಗೆ ಅದು ಜೀವನಾಡಿಯಾಗಿರುವುದು ನಿಲ್ಲಲೇಬೇಕು. ಯೂರೋಪಿಯನ್ ರಾಷ್ಟ್ರಗಳು ಯುದ್ಧ ವಿರೋಧಿಸಿ ಪ್ರಪಂಚದ ಶಾಂತಿ ಮತ್ತು ಸಹಕಾರಕ್ಕೆ ಸಾಧ್ಯವಾದ ತಮ್ಮ ಪೂರ್ಣ ಬೆಂಬಲ ಕೊಡಲು ನಿರ್ಧರಿಸಲು ಈ ಒಂದು ಮುಖ್ಯ ಕಾರಣ ಬೇಗ ಸಾಗಬೇಕು, ಆಕ್ರಮಣದಿಂದ ಸರ್ವನಾಶ ಖಂಡಿತವೆಂದಾಗ ಮಾತ್ರ ಈ ತಾತ್ವಿಕ ಪ್ರೇಮ ಮಾಯವಾಗಬಹುದು. ಆದರೆ ಈ ಸಹಕಾರ ಭಾವನೆಯ ಅವಶ್ಯಕತೆ ಪ್ರಪಂಚದ ಬಲಿಷ್ಠ ರಾಷ್ಟ್ರಗಳ ಮನಸ್ಸಿಗೆ ಇನ್ನೂ ಹೊಳೆದಿಲ್ಲ, ನೈತಿಕ ಪ್ರೇರಣೆಯಾಗುವವರೆಗೆ ಹೊಳೆಯುವುದು ಇಲ್ಲ, ಅಧಿಕಾರ ದರ್ಪದಿಂದ ಅಂಧರಾದವರಿಗೆ ಆ ನೈತಿಕ ಪ್ರೇರಣೆಯಾಗುವುದೂ ಕಷ್ಟ, - ಪ್ರಪಂಚದ ಇಷ್ಟು ದೇಶಗಳಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಕಾರಣವೇನು ? ಸಂತಾನ ನಿರೋಧ ಸಾಮಗ್ರಿಗಳ ಉಪಯೋಗ ಹೆಚ್ಚಿ ಮಿತಸಂತಾನದ ವ್ಯವಸ್ಥಿತ ಸಂಸಾರ ನಡೆಸುವುದು ಸ್ವಲ್ಪ ಮಟ್ಟಿಗೆ ಕಾರಣ ಇರಬಹುದು ; ಆದರೆ ಇದೇ ಮುಖ್ಯ ಕಾರಣವಲ್ಲವೆಂದು ತಜ್ಞರ ಅಭಿಪ್ರಾಯ, ಸಂತಾನ ನಿರೋಧ ಸಾಮಗ್ರಿಗಳನ್ನೇ ಉಪಯೋಗಿಸದ ಕ್ಯಾಥೋಲಿಕ್ ಐಲ್ಲೆಂಡಿನಲ್ಲಿ ಇತರ ದೇಶಗಳಿಗಿಂತ ಮುಂಚೆಯೇ ಸಂತಾನ ಕ್ಷೀಣತೆ ಆರಂಭವಾಯಿತು. ಬಹಳ ವಯಸ್ಸಾದ ಮೇಲೆ ಮದುವೆಮಾಡಿಕೊಳ್ಳುವ ಅಭ್ಯಾಸ ಒಂದು ಕಾರಣವಿರಬಹುದು. ಆರ್ಥಿಕ ಪರಿಸ್ಥಿತಿಯೂ ಸ್ವಲ್ಪ ಪರಿಣಾಮ ಮಾಡಿರಬಹುದು ; ಅದರೆ ಇದಾವುದೂ ಮುಖ್ಯ ಕಾರಣವಲ್ಲ. ಶ್ರೀಮಂತರಿಗಿಂತ ಬಡವರಲ್ಲ, ನಗರ ನಿವಾಸಿಗಳಿಗಿಂತ ಹಳ್ಳಿ ಗಾಡಿನ ಜನರಲ್ಲೂ ಮಕ್ಕಳಾಗುವುದು ಹೆಚ್ಚೆಂದು ಎಲ್ಲರೂ ತಿಳಿದ ವಿಷಯ. ಸಣ್ಣ ಗುಂಪೊಂದು ಉನ್ನತ