ಪುಟ:ಭಾರತ ದರ್ಶನ.djvu/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಭಾರತ ದರ್ಶನ ಮಟ್ಟ ಕಾಪಾಡಿಕೊಂಡು ಬರುವುದು ಸುಲಭ ; ವ್ಯಕ್ತಿತ್ವಕ್ಕೆ ಬೆಲೆ ಹೆಚ್ಚಿದಂತೆ ಪಂಗಡ ಅಥವ ಜನಾಂಗದ ಪ್ರಾಮುಖ್ಯತೆ ಕಡಮೆಯಾಗುತ್ತದೆ. ಯಾವ ನಾಗರಿಕ ಸಮಾಜ ನೋಡಿದರೂ ಆ ಸಮಾಜದ ಯಾವ ಗುಂಪಿಗೆ ಆದರ್ಶ ಜೀವಿಗಳೆಂದು ಗೌರವಸಲ್ಲುತ್ತಿದೆಯೋ ಆ ಗುಂಪಿನಲ್ಲಿ ಸಾಮಾನ್ಯ ಜನರಿಗಿಂತ ಸಂತಾನ ಫಲ ಬಹು ಕಡಮೆ ಎಂದು ಜೆ ಬಿ.ಎಸ್, ಹಾಲೇನ್ ಹೇಳುತ್ತಾನೆ. ಆ ಸಮಾಜಗಳು ಭದ್ರವಲ್ಲವೆಂದು ಜೀವಶಾಸ್ತ್ರದ ಮತ. ಅನೇಕ ಸಂಸಾರಗಳ ಬುದ್ದಿ ಶಕ್ತಿ ಸಹ ಬಹಳ ಕಡಮೆ ಮಟ್ಟದಲ್ಲಿ ಇರುತ್ತದೆ. ಆರ್ಥಿಕ ಅಭಿವೃದ್ಧಿ ಯೂ ಸಂತಾನ ಅಭಿವೃದ್ದಿ ಯೂ ಉತ್ತರ ದಕ್ಷಿಣ ಧ್ರುವಗಳು ಎಂದು ಹೇಳುತ್ತಾರೆ. ಉಪ ಕಾರಣಗಳು ಅನೇಕ ಇದ್ದರೂ, ಈ ಸಂತಾನ ಕ್ಷೀಣತೆಗೆ ಮುಖ್ಯ ಕಾರಣ ಏನೆಂದು ಯಾರಿಗೂ ತಿಳಿದಂತಿಲ್ಲ. ಕೈಗಾರಿಕೋದ್ಯಮದಲ್ಲಿ ಮುಂದುವರಿದ ಜನಾಂಗಗಳು ನಡೆಸುವ ಜೀವನರೀತಿ, ಅವರ ಸುತ್ತಲಿನ ವಾತಾವರಣದಿಂದ ಆಗುವ ಕೆಲವು ಮಾನಸಿಕ ಮತ್ತು ವೈಜ್ಞಾನಿಕ ಪರಿಣಾಮಗಳೇ ಅದಕ್ಕೆ ಕಾರಣವಿರಬಹುದು. ಪುಷ್ಟಿ ಇಲ್ಲದ ಆಹಾರ, ಕುಡಿತ, ಮನೋದೌರ್ಬಲ್ಯ ಮತ್ತು ದೈಹಿಕ ಅಥವ ಮಾನಸಿಕ ರೋಗ, ಇವು ಸಾಮಾನ್ಯವಾಗಿ ಸಂತಾನಾಭಿವೃದ್ಧಿ ಶಕ್ತಿಯ ಮೇಲೆ ಪರಿಣಾಮ ಮಾಡುತ್ತವೆ. ಆದರೂ ರೋಗರುಜಿನಗಳ ತವರುಮನೆಯಾದ ಅರೆಹೊಟ್ಟೆಯ ಭಾರತದಲ್ಲಿ ಮಿತಿ ಇಲ್ಲದೆ ಮಕ್ಕಳು ಹುಟ್ಟು ದಾರೆ. ಪ್ರಾಯಶಃ ಆಧುನಿಕ ಜೀವನದ ಕಷ್ಟ ನಿಷ್ಟುರಗಳು ಕೊನೆ ಇಲ್ಲದ ಪೈಪೋಟ ಮತ್ತು ಚಿಂತೆ ಇವು ಸಂತಾನೋತ್ಪತ್ತಿ ಕ್ಷೀಣಿಸಲು ಕಾರಣ ಇರಬಹುದು, ಜೀವದಾಯಕ ಭೂಮಾತೆಯಿಂದ ದೂರ ಇರು ವುದೂ ಪ್ರಾಯಶಃ ಒಂದು ಮುಖ್ಯ ಕಾರಣವಿರಬಹುದು. ಅಮೆರಿಕದಲ್ಲಿ ಸಹ ಇತರ ಉದ್ಯಮಿಗಳಿಗಿಂತ ರೈತರಲ್ಲಿ ಮಕ್ಕಳ ಸಂಖ್ಯೆ ಎರಡರಷ್ಟು ಮೀರಿ ಇದೆ, * ಪಾಶ್ಚಾತರಲ್ಲಿ ಮೊದಲು ವಿಕಾಸವಾಗಿ ಕ್ರಮೇಣ ಇತರ ಕಡೆ ಹಬ್ಬಿದ ಆಧುನಿಕ ನಾಗರಿಕತೆಯು ಅದ ರಲ್ಲ ಅದರ ಮುಖ್ಯ ಲಕ್ಷಣವಾದ ನಗರಜೀವನವು ಜೀವ ಸತ್ವವನ್ನೇ ಕ್ಷೀಣಿಸಿ ಒಂದು ಬುಡ ಭದ್ರವಿಲ್ಲದ ಸಮಾಜಕ್ಕೆ ಕ್ರಮೇಣ ಅವಕಾಶ ಕೊಡುವಂತೆ ಕಾಣುತ್ತದೆ. ಜೀವನವು ಬಹುಮುಖವಾಗಿ ವಿಕಾಸ ಹೊಂದಿ ದರೂ, ಅದರ ಹಿಡಿತ ಸಡಿಲುತ್ತದೆ ; ಅದು ಹೆಚ್ಚು ಹೆಚ್ಚು ಕೃತಕವಾಗಿ ಕ್ರಮೇಣ ನಾಶಹೊಂದುತ್ತದೆ. ನಿದ್ರೆಮಾಡಲು ಔಷಧ ; ಸ್ವಾಭಾವಿಕ ನಿತ್ಯವಿಧಿಗಳಿಗೆ ಔಷಧ ; ನಾಲಗೆರುಚಿ ಕೆರಳಿಸಿ, ದೇಹಕ್ಕೆ ಅಪಾಯ ತಂದರೂ ತಾತ್ಕಾಲಿಕ ಉನ್ಮಾದ ಕೊಡುವ ಆಹಾರ ಪಾನೀಯಗಳು ; ಸುಖ ಮತ್ತು ಅತಿರೇಕದ ತಾತ್ಕಾಲಿಕ ಭಾವಪರವಶತೆ ಕೊಡುವ ವಿಶೇಷ ಸಾಧನಗಳು ; ಈ ರೀತಿ ಹೆಚ್ಚು ಹೆಚ್ಚು ಪ್ರಚೋದಕವಸ್ತುಗಳ ಅವಶ್ಯಕತೆ ; ಕೊನೆಯಲ್ಲಿ ಈ ಭಾವೋದ್ರೇಕದ ಪ್ರತಿಕ್ರಿಯೆ, ಶೂನ್ಯತಾಭಾವನೆ. ಈ ಅದ್ಭುತ ನಾಗರಿಕತೆ ಬಹುಮುಖ ಬೆಳೆದು ಮಹತ್ಕಾರ್ಯ ಸಾಧಿಸಿದ್ದರೂ ಅದರಲ್ಲಿ ಏನೋ ಕೃತಕವಿದೆ. ಕೃತಕಗೊಬ್ಬರದ ಕೃತಕ ಆಹಾರ ತಿಂದು, ಕೃತಕ ಭಾವೋದ್ರೇಕ ಅನುಭವಿಸುತ್ತೇವೆ. ಮಾನವೆ ಭಾಂಧವ್ಯವು ಬಾಹ್ಯ ಉಪಚಾರ ಬಿಟ್ಟು ಒಳಗೆ ಇಳಿಯುವುದೇ ಇಲ್ಲ. ನಮ್ಮ ಯುಗದ ಮುಖ್ಯ ವೈಶಿಷ್ಟ ಪ್ರಕಟನೆ ತನ್ನ ನಿರಂತರ ಬೊಬ್ಬೆಯಿಂದ ನಮ್ಮನ್ನು ಅಡ್ಡದಾರಿಗೆಳೆದು, ನಮ್ಮನ್ನು ಬುದ್ಧಿ ಭ್ರಮೆಗೊಳಿಸಿ ಅನವಶ್ಯಕ ಅನೇಕವೇಳೆ ಅಪಾಯಕರ ವಸ್ತು ಪ್ರೇಮಕ್ಕೆ ಪ್ರೇರಿಸುತ್ತದೆ. ಈ ಪರಿಸ್ಥಿತಿಗೆ ಬೇರೆ ಯಾರನ್ನೂ ನಾನು ದೂಷಿಸುತ್ತಿಲ್ಲ. ನಾವೆಲ್ಲರೂ ಈ ಯುಗದ ಶಿಶುಗಳು, ನಮ್ಮ ಪೀಳಿಗೆಯ ಗುಣದೋಷಗಳೆರಡಕ್ಕೂ ನಾವೇ ಹೊಣೆ. ನಾನೂ ಆ ನಾಗರಿಕತೆಯ ಒಂದು ಶಿಶು. ಅದನ್ನು ಹೊಗಳಲು ಅಥವ ತೆಗಳಲು ಇತರರಿಗೆ ಎಷ್ಟು ಹಕ್ಕು ಇದೆಯೋ ಅಷ್ಟು ಹಕ್ಕು ನನಗೂ ಇದೆ. ನನ್ನ ಎಲ್ಲ ಭಾವನೆಗಳು, ರೀತಿ ನೀತಿಗಳು ರೂಪಿತವಾಗಿರುವುದು ಅದರಿಂದ ಈ ರೀತಿ ನಪುಂಸಕತ್ವ ಮತ್ತು ಜನಾಂಗ ಕ್ಷೀಣತೆಯ ಲಕ್ಷಣಗಳು ಅಂತರ್ಗತವಿರುವ ಈ ನಮ್ಮ ಆಧುನಿಕ ನಾಗರಿಕತೆಯ ನ್ಯೂನತೆಗಳು ಯಾವುವು ? ಈ ರೋಗ ಹೊಸದೇನೂ ಅಲ್ಲ. ಹಿಂದೆಯೂ ಈ ರೀತಿ ಆದ ನಿದರ್ಶನಗಳು ಇತಿಹಾಸದಲ್ಲಿ ಎಷ್ಟೋ ಇವೆ. ರೋಮ ಸಾಮ್ರಾಜ್ಯದ ಅವನತಿ ಕಾಲದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಈ ಅಸ್ಥಿಗತಕ್ಷಯರೋಗದ ಗತಿಗೆ ನಿರ್ಧಾರಕ ನಿಯಮಚಕ್ರ ಏನಾದರೂ ಇದೆಯೇ-ಕಂಡುಹಿಡಿದು ನಿವಾರಿಸಿಕೊಳ್ಳಲು ಸಾಧ್ಯವೆ ? ಇಂದಿನ ಸಮಾಜದ ಆಧುನಿಕ ಕೈಗಾರಿಕೋದ್ಯಮ