ಪುಟ:ಭಾರತ ದರ್ಶನ.djvu/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ೫da ಮತ್ತು ಬಂಡವಳಷಾಹಿ ಪದ್ಧತಿಯೇ ಮುಖ್ಯ ಕಾರಣ ಇರಲಾರವು ; ಏಕೆಂದರೆ ಅದು ಯಾವುದೂ ಇಲ್ಲದ ನಾಗರಿಕತೆಗಳೂ ನಾಶವಾಗಿವೆ. ಆದರೆ ಅವುಗಳ ಇಂದಿನ ಸ್ವರೂಪಗಳಿಂದ ಮಾನವನ ದೈಹಿಕ ಮತ್ತು ಮಾನಸಿಕಸ್ಥಿತಿ ಹದಗೊಳಿಸಿ ಒಂದು ಅನುಕೂಲ ಸನ್ನಿವೇಶ ಕಲ್ಪಿಸಿ ಮೂಲಕಾರಣಗಳ ಪರಿಣಾಮವನ್ನು ತ್ವರಿತಗೊಳಿಸಬಹುದು. ಈ ಮೂಲಕಾರಣ ಮಾನವನ ಮನಸ್ಸು ಮತ್ತು ಆತ್ಮದಮೇಲೆ ಪರಿಣಾಮಮಾಡುವ ತಾತ್ವಿಕ ವಿಷಯವಾದರೆ ಅದನ್ನ ರಿಯಲು ಬಹಿರಂಗ, ಅಂತರಂಗ ಪ್ರಯತ್ನ ಎಷ್ಟು ಮಾಡಿದರೂ ಆದರ ಅನುಭವ ಮತ್ತು ಅರಿವು ದೊರೆಯುವುದು ಕಷ್ಟ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ ಕಾಣುತ್ತದೆ. ಜೀವದಾತೃ ಭೂಮಾತೆಯನ್ನು ಮರೆತರೆ ವ್ಯಕ್ತಿಗಾಗಲಿ, ಜನಾಂಗಕ್ಕಾಗಲಿ ವಿನಾಶಖಂಡಿತ, ಭೂಮಿಯೂ ಸೂರ್ಯರಶ್ಮಿಯೂ ಜೀವನ ಮೂಲಗಳು ; ಬಹುಕಾಲ ಅವುಗಳಿಂದ ದೂರವಿದ್ದರೆ ವಿನಾಶದ ದಾರಿ ಹಿಡಿಯುತ್ತೇವೆ. ಆಧುನಿಕ ಕೈಗಾರಿಕೋದ್ಯಮಿ ಜನಾಂಗಗಳು ಭೂಸಂಪರ್ಕ ಕಳೆದುಕೊಂಡಿವೆ. ಪ್ರಕೃತಿ ಸೌಂದರ್ಯದ ಸುಖವೂ ಭೂಸಂಪರ್ಕದಿಂದ ಒದಗುವ ಆರೋಗ್ಯ ಭಾಗ್ಯ ಮತ್ತು ತೇಜಸ್ಸಿನ ಅನುಭವವೂ ಅವರಿಗೆ ಇಲ್ಲ. ಪ್ರಕೃತಿ ಸೌಂದರ್ಯದ ವಿಷಯ ಮಾತನಾಡಬಹುದು ; ಆಗಾಗ ವಾರಕ್ಕೊಮ್ಮೆ ಪ್ರಕೃತಿ ಸೌಂದರ್ಯದೆಡೆಗೆ ಹೋಗಿ ತಮ್ಮ ಕೃತಕಜೀವನದ ಭೋಗ ಸಾಮಗ್ರಿಗಳಿಂದ ಗ್ರಾಮಾಂತರ ಪ್ರದೇಶ ವಿರೂಪಗೊಳಿಸಬಹುದು ; ಆದರೆ ಪ್ರಕೃತಿಯೊಂದಿಗೆ ತಾದಾತ್ಮಭಾವ ಪಡೆಯಲು ಅಥವ ಏಕೀಭವಿಸಲು ಅವರಿಂದ ಸಾಧ್ಯವಿಲ್ಲ. ಪರರು ಹೊಗಳುವರೆಂದು ತಾವೂ ನೋಡಿ ಪ್ರಶಂಸೆಮಾಡಿ, ನಿಟ್ಟುಸಿರುಬಿಟ್ಟು ತಮ್ಮ ಗೂಡಿಗೆ ಮರಳಿದರೆ ಮುಗಿಯಿತು. ಮಹಾಕಾವ್ಯವನ್ನೊ ಮಹಾಕವಿಯನ್ನೂ ಓದಿ ಆನಂದಾಮೃತ ಸವಿಯಲೆತ್ನಿಸಿ ಸಾಧ್ಯವಾಗದೆ ಯಾವ ಮನೋಸಾಧನೆಯೂ ಇಲ್ಲದೆ ಅರ್ಥ ಮಾಡಿಕೊಳ್ಳಬಹುದಾದ ತಮ್ಮ ನೆಚ್ಚಿನ ಕಾದಂಬರಿಗೋ, ಪತ್ತೆದಾರಿ ಕತೆಗೋ ಪುನಃ ಹಿಂದಿರುಗಿದಂತೆ ಈ ಅನುಭವ ಪುರಾತನ ಗ್ರೀಕರಂತೆ ಅಥವ ಭಾರತೀಯರಂತೆ ಅವರು ಪ್ರಕೃತಿಯ ಮಡಿಲಶಿಶುಗಳಲ್ಲ ; ಯಾವುದೋ ದೂರದ ನೆಂಟನಮನೆಗೆ ಬಲಾತ್ಕಾರದ ಔತನಕ್ಕೆ ಹೋದ ಪರಕೀಯರಂತೆ ಅವರ ಈ ಪ್ರಕೃತಿ ಉಪಾಸನೆ. ಆದ್ದರಿಂದ ನಮ್ಮ ಪೂರ್ವಜರು ಸ್ವಾಭಾವಿಕವಾಗಿ ಕಂಡು ಅನುಭವಿಸಿದ ಪ್ರಕೃತಿಯ ಜೀವನ ಸಂಪತ್ಸಮೃದ್ಧಿ ಬಹುಮುಖ ವೈಚಿತ್ರ ಆನಂದ ಮತ್ತು ಉತ್ಕಟ ಜೀವನಾಸಕ್ತಿಗಳನ್ನು ಅವರು ಅನುಭವಿಸಲು ಸಾಧ್ಯವಿಲ್ಲ, ಆದ್ದರಿಂದ ಪ್ರಕೃತಿಯು ತನಗೆ ಬೇಡದ ಮಲಮಕ್ಕಳಂತೆ ಅವರನ್ನು ಕಂಡರೆ ಅದರಲ್ಲಿ ತಪ್ಪೇನು ?

  • ಅವರ ವಿಶ್ವದೇವೈ ಕ್ಯದೃಷ್ಟಿ ನಮಗೆ ಸರಿಬೀಳದೆ ಇರಬಹುದು, ಆದರೂ ಪ್ರಕೃತಿರಹಸ್ಯ ಅನುಭವಿಸ ಬಹುದು. ಜೀವನಗಾನ ಮಾಧುರ್ಯ ಮತ್ತು ಜೀವನ ಸೌಂದರ್ಯ ಸವಿಯಬಹುದು ; ಮತ್ತು ಅದ ರಿಂದ ಒಂದು ಜೀವಪುಷ್ಟಿ ಪಡೆಯಬಹುದು. ಆ ಗಾನದ ಸವಿ ಕೇಳಲು ವಿಶಿಷ್ಟ ಸ್ಥಳಗಳಿಗೆ ಹೋಗ ಬೇಕಾಗಿಲ್ಲ ; ಕೇಳುವ ಕಿವಿಯೊಂದಿದ್ದರೆ ಎಲ್ಲಾದರೂ ಕೇಳಬಹುದು. ಆದರೆ ಕೇಳಲು ಒಲ್ಲದ ಜನರನ್ನೂ ಮುಗ್ಧಗೊಳಿಸುವ ಕೆಲವು ಸ್ಥಳಗಳಿವೆ. ದೂರದ ಯಾವುದೋ ಒಂದು ಪ್ರಬಲ ಭೇರಿಯ ಗಂಭೀರ ನಿನಾದ ದಂತೆ ಕೇಳಿಬರುತ್ತದೆ. ಈ ವಿಶಿಷ್ಟ ಸ್ಥಳಗಳಲ್ಲಿ ಕಾಶ್ಮೀರ ಒಂದು ಸೌಂದರ್ಯದ ನೆಲೆವೀಡು, ಅನುಪಮ ಮನಮೋಹಕತೆಯಿಂದ ಮೈಮರೆಯುತ್ತೇವೆ. ಕಾಶ್ಮೀರ ವಿಷಯ ಬರೆಯುತ್ತ ಫ್ರೆಂಚ್ ವಿದ್ವಾಂಸನಾದ ಪೂಷೆ “ಯಾರೂ ಅರಿಯಲೆತ್ನಿಸದಿದ್ದರೂ ಎಲ್ಲರೂ ಅರಸುವ' ಕಾಶ್ಮೀರದ ಮನಮೋಹಕ ಸೌಂದರ್ಯಕ್ಕೆ ನಿಜ ವಾದ ಕಾರಣ ತಿಳಿಸುತ್ತೇನೆ. ಅದರ ವೈಭವ ಪೂರ್ಣ ವನರಾಶಿ, ಸರೋವರಗಳ ನಿರ್ಮಲ ಸಲಿಲ, ಹಿಮ ಆಚ್ಛಾದಿತ ಗಿರಿ ತಟಗಳ ಭವ್ಯ ಸೌಂದರ್ಯ, ಮಧುರ ತಂಗಾಳಿಯಲ್ಲಿ ಸುಳಿದು ಹರಿಯುವ ಅಸಂಖ್ಯಾತ ತೊರೆಗಳ ಮರ್ಮದ ನಿನಾದಗಳು ಮಾತ್ರ ಅಲ್ಲ, ಭೂಶಿರದ ಮೇಲಿನ ಗ್ರೀಕ್ ದೇವಾಲಯದ ಗಾಂಭೀರ ದಂತೆ ಕರೇವಾ ಗಿರಿನೆತ್ತಿಯ ಮೇಲೆ ಪಾಳುಗೋಡೆಗಳಿಂದ ಕಂಗೊಳಿಸುವ ಮಾರ್ತಾಂಡ ದೇವಾಲಯ ವಾಗಲಿ ಅಸಿಕ್ರೆಟೀಸನ (choralic) ಸ್ಮಾರಕಗಳಂತೆ ಸುಂದರ ಮೈಕಟ್ಟಿನ ಹತ್ತು ಶಿಲಾ ವಿಗ್ರಹ ಗಳಿರುವ ಪ್ರಾಚೀನ ಪಾಯಾರ್ ಕ್ಷೇತ್ರಗಳ ಗಾಂಭೀರ್ಯ ಮತ್ತು ಭವ್ಯತೆಯಾಗಲಿ ಕಾರಣವಲ್ಲ. ಪ್ರಕೃತಿ ಮಡಿಲಿನ ಕಲಾಪೂರ್ಣತೆಯಿಂದ ಬಂದುದು ಎಂದು ಹೇಳಲೂ ಸಾಧ್ಯವಿಲ್ಲ; ಏಕೆಂದರೆ ಅನೇಕ ದೇಶಗಳಲ್ಲಿ ಪ್ರಕೃತಿ ಸೌಂದರ್ಯದ ಮಧ್ಯೆ ಅನೇಕ ಸುಂದರ ಸೌಧಗಳಿವೆ. ಆದರೆ ಪ್ರಕೃತಿಯ ಸೊಬಗಿನ ಮಡಿಲಿನ ಈ