ಪುಟ:ಭಾರತ ದರ್ಶನ.djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಎರಡು ಸುಂದರ ಸನ್ನಿವೇಶಗಳಲ್ಲದೆ ನಮ್ಮ ಕಿವಿಯ ಬಳಿ ಬಂದು ತನ್ನ ಪಿಸುಮಾತಿನಿಂದ ನಮ್ಮ ಅಸಂಸ್ಕೃತ ಜೀವನ ಕಲಕಿ ಬುವಿಯ ಜನತೆ ದೇವರನ್ನು ನಂಬಿದಂದು ದೇವಲೋಕ ಬೆಳಗಿ ಬಾಳ್ವುದಿಲ್ಲೆ ಉಸಿರಿ ಎಂದು ದುಃಖದಿಂದ ಪ್ರಪಂಚದ ಮುಂಬೆಳಗಿನಲ್ಲಿ ಹಾಡಿದ ಕವಿಯ ಪ್ರಾಚೀನ ಯುಗಕ್ಕೆ ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಕರೆದೊಯ್ಯುವ ಅಂತರ್ಧಾನ ಜೀವಶಕ್ತಿಯೊಂದು ಕಾಶ್ಮೀರದಲ್ಲಿ ದೊರೆಯುವುದೇ ಮುಖ್ಯ ಕಾರಣ.” ಎಂದಿದಾನೆ. ನನ್ನ ಕಾಶ್ಮೀರ ಪ್ರೇಮ ನನ್ನನ್ನು ಅನೇಕ ವೇಳೆ ಅಡ್ಡದಾರಿಗೆಳೆದರೂ, ಕಾಶ್ಮೀರ ಹೊಗಳುವುದು ನನ್ನ ಉದ್ದೇಶವಲ್ಲ. ಸ್ವಲ್ಪ ವಿಶ್ವ ದೇವತ್ವವಾದವು ಮೈಗೂ ಮನಸ್ಸಿಗೂ ಒಳ್ಳೆಯದೆಂದು ನಂಬುವಷ್ಟು ವಿಶ್ವದೇವತ್ವವಾದಿ ನಾನಿದ್ದರೂ, ವಿಶ್ವದೇವತ್ವವಾದ ಸಮರ್ಥನೆಯೂ ನನ್ನ ಉದ್ದೇಶವಲ್ಲ. ಭೂಮಿಯ ಸಂಪರ್ಕ ಪೂರ್ಣ ಅಲಕ್ಷೆಮಾಡಿದ ನಾಗರಿಕತೆಗೆ ಅಂತ್ಯ ನಾಶವೇ ನಿಶ್ಚಯ ಎಂದು ತೋರುವುದು ನನ್ನ ಉದ್ದೇಶ. ಆದರೆ ಆ ವಿನಾಶ ಏಕಾಏಕಿ ಒದಗುವುದಿಲ್ಲ. ಎಲ್ಲ ಪ್ರಕೃತಿ ನಿಯಮಗಳಿಗೂ ಕಾಲಬೇಕು. ಆದರೆ ಆಧುನಿಕ ನಾಗರಿಕತೆಯು ಕ್ರಮೇಣ ನಿಸರ್ಗ ಜೀವಸತ್ವಗಳಿಂದ ದೂರ ದೂರ ಹೋಗುತ್ತಿರುವುದು ಅದರ ಒಂದು ಮುಖ್ಯ ದೌರ್ಬಲ್ಯ, ಆಧುನಿಕ ಬಂಡವಲಶಾಹಿ ಸಮಾಜದ ಲಾಭಬಡಕತನ, ದುಡ್ಡ ದೇವರೆಂಬ ಐಶ್ವರ್ಯೋಪಾಸನೆ, ಅನೇಕರ ಸ್ಥಿಮಿತರಹಿತ ಜೀವನ ಇವುಗಳಿಂದ ಒದಗುವ ಮನೋರೋಗ ಮತ್ತು ಮನೋವಿಕಾರಗಳೇ ಆ ದುರ್ಬಲತೆಗಳು ಹೆಚ್ಚು ಮನೋಸ್ಥೆರ್ಯ ಮತ್ತು ಸಮತೂಕಗಳಿದ್ದರೆ ಈ ಸ್ಥಿತಿ ಉತ್ತಮಗೊಳ್ಳಬಹುದು. ಆದರೂ ಭೂಮಿಯೊಂದಿಗೆ, ನಿಸರ್ಗದೊಂದಿಗೆ ಹೆಚ್ಚಿನ ಸಜೀವ ಸಂಪರ್ಕ ಬೇಕೇ ಬೇಕು. ಅಂದರೆ ಭೂಮಿಗೆ ಮರಳಿ ಹಿಂದಿನ ಅಸಂಸ್ಕೃತ ಜೀವನ ನಡೆಸಬೇಕೆಂಬ ಸಂಕುಚಿತ ಅರ್ಥದಲ್ಲಿ ಅಲ್ಲ. ಅದರಿಂದ ರೋಗಕ್ಕಿಂತ ಚಿಕಿತ್ಸೆಯೇ ಅಪಾಯಕರವಾಯಿತು. ಸ್ತ್ರೀ ಪುರುಷರ ಭೂಮಿಯ ಸಮಾಸ ಸಂಪರ್ಕ ಸಾಧ್ಯವಾದಮಟ್ಟಿಗೆ ತಪ್ಪದಂತೆ ಮತ್ತು ಗ್ರಾಮಾಂತರ ಪ್ರದೇಶ ಗಳ ಸಂಸ್ಕೃತಿ ಮಟ್ಟ ಉನ್ನತಿಗೊಳ್ಳುವಂತೆ ಆಧುನಿಕ ಕೈಗಾರಿಕೋದ್ಯಮ ರಚಿಸುವುಕ್ಕೆ ಸಾಧ್ಯವಿದೆ. ದೈಹಿಕ ಮತ್ತು ಮಾನಸಿಕ ಬೆಳೆವಣಿಗೆಗೆ ಮತ್ತು ಸರ್ವ ಸಮೃದ್ಧಿ ತುಂಬುವ ಜೀವನ ನಡೆಸುವುದಕ್ಕೆ ಗ್ರಾಮ ಮತ್ತು ನಗರಗಳೆರಡರಲ್ಲೂ ಪೂರ್ಣ ಅವಕಾಶವಿರುವಂತೆ ಜೀವನದ ಅವಶ್ಯಕತೆಗಳ ಪೂರೈಕೆಯಲ್ಲಿ ಗ್ರಾಮ ಮತ್ತು ನಗರಗಳೆರಡಕ್ಕೂ ಪರಸ್ಪರ ಸಾಮ್ಯವಿರಬೇಕು. ಸಾಧಿಸಬೇಕೆಂಬದಢಸಂಕಲ್ಪ ಮಾತ್ರ ಇದ್ದರೆ ಕೃತಕೃತ್ಯರಾಗುವುದು ಕಷ್ಟವಾಗಲಾರದು. ಆದರೆ ಪ್ರಕೃತದಲ್ಲಿ ಬಹು ಜನರಿಗೆ ಆ ಇಚ್ಛೆ ಇಲ್ಲ. ನಮ್ಮ ಶಕ್ತಿ ಎಲ್ಲ ಪರಸ್ಪರ ಕೊಲೆ, ಬಿಟ್ಟರೆ ಕೃತಕ ವಸ್ತುಗಳ ಮತ್ತು ಕೃತಕ ವಿನೋದಗಳ ನಿರ್ಮಾಣ ಕಾರ್ಯದಲ್ಲಿ ವಿನಿಯೋಗವಾಗುತ್ತಿದೆ; ಅವುಗಳ ಅನೇಕ ವಸ್ತುಗಳಿಗೆ ನಾನು ವಿರೋಧಿಯಲ್ಲ, ಕೆಲ ವಂತೂ ಬೇಕೇ ಬೇಕು ಆದರೆ ಇನ್ನೂ ಉಪಯುಕ್ತ' ಕಾರ್ಯದಲ್ಲಿ ಉಪಯೋಗಿಸಬಹುದಾದ ಶಕ್ತಿಯ ನ್ನೆಲ್ಲ ಇದರಲ್ಲಿ ಕಳೆಯುತ್ತೇವೆ ; ಮತ್ತು ಅವುಗಳಿಂದ ಜೀವನಕ್ಕೊಂದು ತಪ್ಪು ದೃಷ್ಟಿ ಕೊಡುತ್ತಿದೇವೆ. ಎಲ್ಲೆಲ್ಲೂ ಕೃತಕ ಗೊಬ್ಬರಗಳಿಗೆ ಗಿರಾಕಿ ಇದೆ, ಒಂದು ರೀತಿಯಲ್ಲಿ ಅವುಗಳಿಂದ ತುಂಬಿ ಪ್ರಯೋಜನವೂ ಆಗಿದೆ. ಆದರೆ ಕೃತಕ ಗೊಬ್ಬರದ ಅಭಿಮಾನದಲ್ಲಿ ನೈಸರ್ಗಿಕ ಗೊಬ್ಬರ ಮರೆತು, ಅವನ್ನು ದುರ್ವಯ ಮಾಡಿ ಹಾಳುಮಾಡುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ. ಈ ನೈಸರ್ಗಿಕ ಗೊಬ್ಬರದ ಪೂರ್ಣ ಉಪ ಯೋಗ ಪಡೆಯುವ ಜ್ಞಾನ ಚೀನಾ ದೇಶ ಒಂದಕ್ಕೆ ಮಾತ್ರ ಇದೆ. ಕೆಲವು ತಜ್ಞರು ಕೃತಕ ಗೊಬ್ಬರದ ಉಪಯೋಗದಿಂದ ಸ್ವಲ್ಪ ಕಾಲ ಹೆಚ್ಚು ಬೆಳೆಬರಬಹುದಾದರೂ ಭೂಮಿಯ ಕೆಲವು ಮುಖ್ಯವಾದ ವಸ್ತು ಗಳನ್ನು ಹೀರಿ ಕ್ರಮೇಣ ಭೂಮಿಯನ್ನು ಬರಡು ಮಾಡುತ್ತದೆ ಎಂದು ಹೇಳುತ್ತಾರೆ. ಭೂಮಿಯಂತೆಯೇ ನಮ್ಮ ವ್ಯಕ್ತಿ ಜೀವನ. ಒಟ್ಟಿನಲ್ಲಿ ಹಾಗೂ ಕೆಡುತ್ತಿದ್ದೇವೆ, ಹೀಗೂ ಕೆಡುತ್ತಿದ್ದೇವೆ. ಒಂದೇ ಸವನೆ ಪ್ರಕೃತಿಯನ್ನು ಸೂರೆಗೊಳ್ಳುತ್ತಿದ್ದೇವೆ ; ನಾವು ಮಾತ್ರ ಯಾವ ಪ್ರತಿಫಲವನ್ನೂ ಕೊಡುತ್ತಿಲ್ಲ.