ಪುಟ:ಭಾರತ ದರ್ಶನ.djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ರಾಸಾಯನಿಕ ಪ್ರಯೋಗಶಾಲೆಯಲ್ಲಿ ಏನನ್ನಾದರೂ ಸೃಷ್ಟಿಸಬಲ್ಲೆ ಎಂಬ ಅಹಂಕಾರ ಬಂದಿದೆ. ಆವಿಯ ಯುಗದಿಂದ ವಿದ್ಯುಚ್ಛಕ್ತಿಯ ಯುಗಕ್ಕೆ ಬಂದು ಈಗ ಜೀವಾಣು ಮತ್ತು ಪರಮಾಣುಗಳ ಯುಗ ದಲ್ಲಿದ್ದೇವೆ ; ನಮ್ಮ ಇಂದಿನ ಜೀವನ ಕೋಭೆಗೆ ಕಾರಣವಾದ ಅನೇಕ ಸಮಸ್ಯೆಗಳಿಗೆ ಪರಿಹಾರ ತೋರಬಲ್ಲ ಸಮಾಜವಿಜ್ಞಾನದ ಆಶಾಯುಗದ ಮುಂಬೆಳಗಿನಲ್ಲಿ ನಾವಿದ್ದೇವೆ; ಮ್ಯಾಗ್ನಿಷಿಯಂ-ಅಲ್ಯುಮಿನಿಯಂ ಯುಗದ ಹೊಸ್ತಿಲಲ್ಲಿ ಇದ್ದೇವೆ, ಎಂದು ಹೇಳುತ್ತಿದ್ದೇವೆ. ಈ ಎರಡು ಲೋಹಗಳೂ ಪ್ರಪಂಚದಲ್ಲಿ ಎಲ್ಲೆಲ್ಲೂ ಹರಡಿ ಇರುವುದರಿಂದ ಯಾರಿಗೂ ಏನೂ ಕೊರತೆಯಾಗಲಾರದು. ಹೊಸ ರಾಸಾಯನಿಕ ಶಾಸ್ತ್ರ ಮಾನವನಿಗೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತಿದೆ. ಮಾನವ ಶಕ್ತಿಮೂಲಗಳ ಅದ್ಭುತ ಪ್ರಮಾಣದ ಅಭಿವೃದ್ದಿ ಯಿಂದ ಪ್ರಳಯಾಂತಕ ಸಂಶೋಧನೆಗಳ ಭವಿಷ್ಯವು ನಮ್ಮೆದುರು ನಿಂತಂತೆ ಇದೆ. - ಇದೆಲ್ಲ ಮನಸ್ಸಿಗೊಂದು ಸಮಾಧಾನಕೊಟ್ಟರೂ ಒಂದು ಸಂಶಯ ಮಾತ್ರ ಮನಸ್ಸಿನಲ್ಲಿ ಸುಳಿಯು ತಲೇ ಇದೆ. ನಮ್ಮ ಇಂದಿನ ಸಂಕಟಕ್ಕೆ ಕಾರಣ ನಮ್ಮ ಶಕ್ತಿಯ ಅಭಾವವಲ್ಲ, ಆದರೆ ಇರುವ ಶಕ್ತಿಯ ದುರುಪಯೋಗ ಅಥವ ಉಪಯೋಗ ಮಾರ್ಗದ ಅಜ್ಞಾನ, ವಿಜ್ಞಾನವು ಅದ್ಭುತಶಕ್ತಿ ಕೊಡುತ್ತದೆ ; ಆದರೆ ಅದಕ್ಕೆ ವ್ಯಕ್ತಿತ್ವವಾಗಲಿ, ಧೈಯವಾಗಲಿ ಯಾವುದೂ ಇಲ್ಲ. ನನ್ನ ಕೈಗೆ ಕೊಡುವ ಶಕ್ತಿಯ ಉಪಯೋಗ ಎಂತೆಂಬ ಯೋಚನೆ ಅದಕ್ಕಿಲ್ಲ. ವಿಜ್ಞಾನವು ಯಶಸ್ಸಿನಮೇಲೆ ಯಶಸ್ಫೂ ಪಡೆಯಬಹುದು. ಆದರೆ ಪ್ರಕೃತಿಯನ್ನು ಅದು ಬಹಳ ಅಲಕ್ಷಿಸುತ್ತದೆ ; ಪ್ರಕೃತಿಯೂ ಭಯಂಕರ ರೀತಿಯಲ್ಲಿ ತನ್ನ ಸೇಡು ತೀರಿಸಿಕೊಳ್ಳಬಹುದು. ಜೀವನದ ಬಾಹ್ಯಶೃಂಗಾರ ಮನಮೋಹಕ ಕಂಡರೂ ವಿಜ್ಞಾನದ ಕೈಗೆ ಯಾವುದೋ ಒಂದು ಜೀವಸತ್ವದ ಅಭಾವದಿಂದ ಅದೆಲ್ಲ ಹೆಣದ ಶೃಂಗಾರವಾಗಬಹುದು. ೧೫. ಹಳೆಯ ಸಮಸ್ಯೆಗೆ ಹೊಸಪ್ರವೇಶ, - ಆಧುನಿಕ ಮಾನವನ ಮನಸ್ಸು ಅಂದರೆ ಉತ್ತಮ ಮಟ್ಟದ ಆಧುನಿಕ ಮನಸ್ಸು ಪ್ರಾಯೋಗಿಕ ಮತ್ತು ಕಾರ್ಯತತ್ಪರವೂ, ನೈತಿಕ ಮತ್ತು ಸಾಮಾಜಿಕವೂ, ಮಾನವೀಯ ಮತ್ತು ಪರಹಿತಕಾರಿಯೂ ಇದೆ. ಸಾಮಾಜಿಕ ಉನ್ನತಿಯಾಗಬೇಕೆಂಬ ಒಂದು ವಾಸ್ತವ ಆದರ್ಶವಿದೆ. ಆ ಮನಸ್ಸಿನಮೇಲೆ ಪರಿಣಾಮ ಮಾಡುವ ಧೈಯಗಳೇ ಯುಗಧರ್ಮ, ಪುರಾತನದ ದಾರ್ಶನಿಕದೃಷ್ಟಿ ಬಹುಮಟ್ಟಿಗೆ ಕಡಿಮೆಯಾಗಿದೆ. ಅವರ ಮಧ್ಯಯುಗದ ಅಂತಿಮ ಸತ್ಯದ ಅನ್ವೇಷಣೆ, ಭಕ್ತಿ ಮತ್ತು ಭಾವಪರವಶತೆಗಳು ಇಂದಿನ ಯುಗ ಧರ್ಮಕ್ಕೆ ಪ್ರಾಮುಖ್ಯವಲ್ಲ. ಮಾನವೀಯತೆಯೇ ಅದರ ದೇವರು, ಸಮಾಜಸೇವೆಯೇ ಅದರ ಧರ್ಮ ಪ್ರತಿಯೊಂದು ಯುಗದಲ್ಲೂ ಆ ಯುಗದ ಸನ್ನಿವೇಶವೇ ಮನಸ್ಸಿಗೊಂದು ಮಿತಿಕಲ್ಪಿಸಿ, ತಾನು ಕಂಡ ಅರೆ ಸತ್ಯವೇ ಎಲ್ಲ ಸತ್ಯದ ಕೀಲಿಕ್ಕೆ ಎಂದು ಭಾವಿಸುವುದರಿಂದ ಈ ಭಾವನೆ ತಪ್ಪಿರಬಹುದು. ಪ್ರತಿಯೊಂದು ಪೀಳಿಗೆಯೂ ಪ್ರತಿಯೊಂದು ಜನಾಂಗವೂ ತನ್ನ ದೃಷ್ಟಿ ಯೇ ಸರಿಯಾದ ದೃಷ್ಟಿ ಅಥವ ಅದಕ್ಕೆ ಸಮೀಪದ ದೃಷ್ಟಿ ಎಂಬ ಮೋಹಕ್ಕೆ ಕಟ್ಟು ಬೀಳುತ್ತದೆ. ಸ್ವಕಲ್ಪಿತ ಮಿತಿ ಮತ್ತು ಸ್ಥಿತಿಗಳಿಗೆ ಒಳಗಾಗಿ ಪ್ರತಿಯೊಂದು ಸಂಸ್ಕೃತಿಯಲ್ಲೂ ಕೆಲವು ಶ್ರೇಷ್ಠ ಗುಣಗಳಿವೆ, ಆ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ ಜನರು ಅವನ್ನೇ ನಂಬಿ ಅವುಗಳಿಗೆ ಒಂದು ಶಾಶ್ವತ ಪ್ರಾಮಾಣ್ಯ ಕೊಡುತ್ತಾರೆ. ಆದ್ದರಿಂದ ಆಧುನಿಕ ಸಂಸ್ಕೃತಿಯ ಮೌಲ್ಯಗಳು ಶಾಶ್ವತವೂ ಅಲ್ಲ ; ಕೊನೆಯಮಾತೂ ಅಲ್ಲ. ಆದರೂ ನಾವು ಜೀವಿಸುವ ಯುಗದ ಧರ್ಮ ಮತ್ತು ಭಾವನೆಗಳನ್ನು ಅವು ಪ್ರತಿಬಿಂಬಿಸುವುದರಿಂದ ನಮಗೆ ಅವುಗಳಲ್ಲಿ ಒಂದು ಮುಖ್ಯವೈಶಿಷ್ಟ ಭವಿಷ್ಯದ ನೋಟ ನೋಡಬಲ್ಲ ಕೆಲವು ಸಾಧಕರಿಗೆ ಮತ್ತು ಮಹಾಪುರುಷರಿಗೆ ಮಾನವಕುಲದ ಮತ್ತು ಪ್ರಪಂಚದ ಪೂರ್ಣತರ ನೋಟ ನೋಡಲು ಸಾಧ್ಯವಾಗಬಹುದು, ನಿಜವಾದ ಪ್ರಗತಿಗೆ ಉಗಮ ಮೂಲವಾದ ಜೀವ ಸತ್ವವು ಅವರಲ್ಲಿದೆ. ಜನತೆಯಲ್ಲಿ ಅಸಂಖ್ಯಾತರಿಗೆ ಯುಗಧರ್ಮದ ಮೌಲ್ಯಗಳ ಪರಿ ಜ್ಞಾನ ಸಹ ಇರುವುದಿಲ್ಲ; ಕಾಲಕ್ಕೆ ತಕ್ಕಂತೆ ಲೊಟಗುಟ್ಟಿದರೂ ಹಿಂದಿನ ಯುಗದ ಬಂಧನಗಳಲ್ಲೇ ಸೆರೆಸಿಕ್ಕಿದ್ದಾರೆ, ಆದ್ದರಿಂದ ನಮ್ಮ ಜೀವಿತಕಾಲದ ಯುಗಧರ್ಮದ ಉನ್ನತ ಆದರ್ಶಗಳ ದಾರಿಯಲ್ಲಿ ನಾವು ನಡೆಯ 40