ಪುಟ:ಭಾರತ ದರ್ಶನ.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦೬ ಭಾರತ ದರ್ಶನ ಬೇಕು. ಅವುಗಳನ್ನು ಪುಷ್ಟಿಕರಿಸಬಹುದು, ಅಥವ ನಮ್ಮ ರಾಷ್ಟ್ರೀಯ ವೈಶಿಷ್ಟಕ್ಕೆ ಅನುಗುಣವಾಗಿ ಬೇರೊಂದು ರೂಪದಲ್ಲಿ ಎರಕ ಹೊಯ್ಯಬಹುದು. ಈ ಧೈಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸ ಬಹುದು. ಮಾನವತಾ ಪ್ರಾಧಾನ್ಯದೃಷ್ಟಿ ಮತ್ತು ವಿಜ್ಞಾನದೃಷ್ಟಿ, ಇವೆರಡಕ್ಕೂ ಒಂದು ಘರ್ಷಣೆ ಇರುವಂತೆ ತೋರುತ್ತದೆ. ಆದರೆ ಇಂದಿನ ಮಹಾಭಾವನಾಕ್ರಾಂತಿಯು ಎಲ್ಲ ಮೌಲ್ಯಗಳನ್ನೂ ವಿಮರ್ಶೆಯ ಕುಲುಮೆಯಲ್ಲಿ ಒರೆಹಚ್ಚಿ ಇವೆರಡರ ಮಧ್ಯೆ ಮತ್ತು ವಿಜ್ಞಾನದ ಬಾಹ್ಯ ಪ್ರಪಂಚ ಮತ್ತು ಆತ್ಮವೀಕ್ಷಣೆಯ ಅಂತರಂಗ ಪ್ರಪಂಚಕ್ಕೆ ಮಧ್ಯೆ ಅಡ್ಡಲಾಗಿದ್ದ ಗೋಡೆಗಳನ್ನೂ ಒಡೆದು ಹಾಕುತ್ತಿದೆ. ಮಾನವತಾ ಪ್ರಾಧಾನ್ಯದೃಷ್ಟಿಗೂ ವಿಜ್ಞಾನದೃಷ್ಟಿಗೂ ಒಂದು ಬಗೆಯ ಸಂಯೋಜನೆಯಾಗಿ ವೈಜ್ಞಾನಿಕ ಮಾನವತಾ ಪ್ರಾಧಾನ್ಯದೃಷ್ಟಿ ರೂಪುಗೊಳ್ಳುತ್ತಿದೆ. ವಿಜ್ಞಾನವು ಸಹ ವಾಸ್ತವತೆಯ ತಳಹದಿಗೆ ಭದ್ರವಾಗಿ ಅಂಟ ಕೊಂಡಿದ್ದರೂ ಇತರಕಡೆಗೂ ಅದರ ದೃಷ್ಟಿ ಬೀಳುತ್ತಿದೆ; ಉಳಿದುದನ್ನೆಲ್ಲ ಹಳಿಯುವ ಮನೋಭಾವ ಹೋಗುತ್ತಿದೆ. ನಮ್ಮ ಪಂಚೇಂದ್ರಿಯಗಳಿಗೆ ಗೋಚರವಾಗುವ ಪ್ರಪಂಚ ಮಾತ್ರ ವಿಶ್ವವಲ್ಲ ಎಂಬ ಅರಿವು ಬಂದಿದೆ. ಕಳೆದ ಇಪ್ಪತ್ತೈದು ವರ್ಷಗಳ ಭೌತಶಾಸ್ತ್ರಜ್ಞನ ಪ್ರಪಂಚದ ಕಲ್ಪನೆಯಲ್ಲಿ ಅದ್ಭುತ ಬದಲಾವಣೆ ಗಳಾಗಿವೆ, ಮನುಷ್ಯನಿಗೂ ಪ್ರಕೃತಿಗೂ ಯಾವ ಸಂಬಂಧವೂ ಇಲ್ಲವೆಂದೇ ವಿಜ್ಞಾನದ ದೃಷ್ಟಿಯಾಗಿತ್ತು. * ಪ್ರಕೃತಿಯು ತನಗಿಂತ ಒಂದು ಭಿನ್ನ ವಸ್ತು ಎಂದು ಇನ್ನು ಮುಂದೆ ನೋಡುವಂತೆ ಇಲ್ಲ” ಎಂಬುದೇ ವಿಜ್ಞಾನದ ತಿರುಳು ಎಂದು ಈಗ ಸರ್ ಜೇಮ್ಸ್ ಜೀನ್ಸ್ ಹೇಳುತ್ತಿದ್ದಾನೆ. ಪುನಃ, ಉಪನಿಷತ್ಕಾರರ ಮನಸ್ಸನ್ನು ಕೆಣಕಿದ ಅದೇ ಹಳೆಯ ಪ್ರಶ್ನೆ : ಜ್ಞಾತೃವನ್ನು ಅರಿಯುವುದೆಂತು ? ಬಾಹ್ಯ ವಸ್ತುಗಳನ್ನು ನೋಡುವ ಕಣ್ಣುಗಳು ತಮ್ಮನ್ನೇ ತಾವು ಅರಿಯುವುದೆಂತು ? ಬಾಹ್ಯಪ್ರಪಂಚವೂ ನಮ್ಮ ಅಂತರಂಗ ಪ್ರಪಂಚವೂ ಒಂದೇ ಆದರೆ ನಾವು ಹೊರಗೆ ಕಾಣುವುದು, ಭಾವಿಸುವುದು ನಮ್ಮ ಮನಸ್ಸಿನ ಪ್ರಲಂಬನ ಮಾತ್ರ; ವಿಶ್ಯ, ಪ್ರಕೃತಿ, ಆತ್ಮ, ಮನಸ್ಸು, ದೇಹ ಮತ್ತು ಉಪಲಬ್ದ ಮತ್ತು ಅಂತರ್ವತಿ್ರ ವಿಷಯಗಳು ಎಲ್ಲವೂ ಮೂಲತಃ ಒಂದೇ ಆದ್ದರಿಂದ ನಮ್ಮ ಮನಸ್ಸಿನ ಮಿತಿಯಿಂದ ವಿಶ್ವದ ಈ ಮಹಾವ್ಯೂಹದ ವಾಸ್ತವಿಕ ಅರ್ಥ ಅರಿಯುವುದು ಹೇಗೆ ? ವಿಜ್ಞಾನವು ಈಗ ಈ ವಿಷಯಗಳ ಹೊರವಲಯದಲ್ಲಿದೆ, ಕೈಗೆ ಎಟಕದಿದ್ದರೂ ಇಂದಿನ ನಿಜವಾದ ವಿಜ್ಞಾನಿ ಯುಗಾಂತರದ ದಾರ್ಶನಿಕ ಮತ್ತು ಧರ್ಮ ಪ್ರವರ್ತಕ ಋಷಿಯಂತೆ, “ ನಮ್ಮ ಇಂದಿನ ಪ್ರಾಪಂಚಿಕ ಯುಗದಲ್ಲಿ ನಿಷ್ಠ ವಿಜ್ಞಾನ ಸಂಶೋಧಕರೆಂದರೆ ಪರಮ ಧಾರ್ಮಿಕ ಮನೋಭಾವದವರು ” ಎಂದು ಪ್ರೊಫೆಸರ್ ಆರ್ ಐನ್ ಸ್ಟೀನ್ ಹೇಳಿದ್ದಾನೆ. ಐವತ್ತು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಸಹ “ ಆಧುನಿಕ ವಿಜ್ಞಾನವು ನಿಜವಾದ ಧಾರ್ಮಿಕ ಮನೋ ಭಾವದ ಪ್ರತಿಸ್ವರೂಪ, ಏಕೆಂದರೆ ಪ್ರಾಮಾಣಿಕ ಪ್ರಯತ್ನದಿಂದ ಸತ್ಯವನ್ನರಿಯಲು ಪ್ರಯತ್ನ ಪಡುತ್ತಿದೆ” ಎಂದರು. ಇದರಲ್ಲೆಲ್ಲ ವಿಜ್ಞಾನದಲ್ಲಿ ಒಂದು ದೃಢವಾದ ನಂಬಿಕೆ ಇರುವಂತಿದೆ ; ಆದರೂ ಕೇವಲ ಧೈಯ ರಹಿತ ವಾಸ್ತವಿಕ ವಿಜ್ಞಾನ ಸಾಲದು ಎಂಬ ಜ್ಞಾನವೂ ಇದೆ. ಜೀವನ ಸೌಖ್ಯಕ್ಕೆ ಅಷ್ಟು ಉಪಕರಣ ಒದಗಿಸಿಕೊಟ್ಟ ವಿಜ್ಞಾನ ಜೀವನದಮೂಲ ಉದ್ದೇಶ ಅಲಕ್ಷೆಮಾಡಿತೇನು ? ವಾಸ್ತವಿಕ ಪ್ರಪಂಚಕ್ಕೂ ತಾತ್ವಿಕ ಪ್ರಪಂಚಕ್ಕೂ ಒಂದು ಸಾಮರಸ್ಯ ಕಲ್ಪಿಸುವ ಪ್ರಯತ್ನವಿದೆ. ಏಕೆಂದರೆ ವಾಸ್ತವಿಕ ಪ್ರಪಂಚ ಮಾನವನ ಆತ್ಮವನ್ನೇ ಹಿಸುಕುತ್ತಿದೆ ಎಂಬ ಅರಿವು ಹೆಚ್ಚುತ್ತಿದೆ. ಸನಾತನ ದಾರ್ಶನಿಕರ ಮನಸ್ಸನ್ನು ಸೆಳೆದ ಈ ಪ್ರಶ್ನೆ ಪುನಃ ಬೇರೊಂದು ರೂಪದಲ್ಲಿ ಬೇರೊಂದು ಸನ್ನಿವೇಶದಲ್ಲಿ ಉದ್ಭವಿಸಿದೆ. ಪ್ರಪಂಚದ ಈ ಅದ್ಭುತ ಜೀವನವನ್ನು ವ್ಯಕ್ತಿಯ ಅಂತರಾಷ್ಟ್ರೀಯ ಜೀವನದೊಂದಿಗೆ ಸರಿಹೊಂದಿಸುವುದೆಂತು ಎಂಬುದೇ ಮುಖ್ಯ ಪ್ರಶ್ನೆ, ವ್ಯಕ್ತಿಯ ದೇಹಕ್ಕೆ ಅಥವ ಇಡೀ ಸಮಾಜಕ್ಕೆ ಚಿಕಿತ್ಸೆ ಮಾಡಿದರೆ ಮಾತ್ರ ಸಾಲದೆಂದು ವೈದ್ಯ ಪ್ರವೀಣರು ಕಂಡುಕೊಂಡಿದಾರೆ. ಆಧುನಿಕ ಮನೋನಿದಾನ ಅರಿತ ವೈದ್ಯರನೇಕರು ಈಚೆಗೆ ಶಾರೀರಿಕ ವ್ಯಾಧಿಗಳಿಗೂ, ಕ್ರಿಯಾವ್ಯಾಧಿಗಳಿಗೂ ಮಾಡುತ್ತಿದ್ದ ವ್ಯತ್ಯಾಸ ಮರೆತು ಈಗ ಮಾನಸಿಕ ಕಾರಣಗಳಿಗೇ ಪ್ರಾಮುಖ್ಯತೆ ಕೊಡುತ್ತಿದ್ದಾರೆ. “ ರೋಗಚಿಕಿತ್ಸೆಗೆ ಇರುವ ದೊಡ್ಡ ನ್ಯೂನತೆ ಶರೀರ ರೋಗಗಳಿಗೆ, ಆತ್ಮ ರೋಗಗಳಿಗೆ ಬೇರೆ ಬೇರೆ ವೈದ್ಯರಿರುವುದು; ಆದರೆ ಎರಡೂ ಒಂದೇ, ಒಂದನ್ನು