ಪುಟ:ಭಾರತ ದರ್ಶನ.djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೦೮

ಭಾರತ ದರ್ಶನ

ಆದರೆ ಆ ಅಧಿಕಾರ ದೊರಕಿದ ಒಡನೆ ಅನೇಕ ಅಮೂಲ್ಯಗುಣಗಳೂ ಮಾಯವಾಗುತ್ತವೆ. ಉನ್ನತ
ಧೈಯಗಳ ಸ್ಥಾನದಲ್ಲಿ ರಾಜಕೀಯ ಮೋಸ ಮತ್ತು ಕಪಟಸಂಧಾನ, ನಿಷ್ಕಾಮ ಧೈರ್ಯದ ಬದಲು
ಜೇಡಿತನ ಮತ್ತು ಸ್ವಾರ್ಥ ತಾಂಡವಾಡುತ್ತವೆ. ತಿರುಳು ಬಿಟ್ಟು ಕರಟಕ್ಕೆ ಪ್ರಾಮುಖ್ಯತೆ ದೊರೆಯುತ್ತದೆ.
ಅಷ್ಟು ಶ್ರದ್ದೆಯಿಂದ ಸಂಪಾದಿಸಿದ ಅಧಿಕಾರಕ್ಕೆ ತನ್ನ ಉದ್ದೇಶ ಸಾಧಿಸಲು ಅಸಮರ್ಥವಾಗುತ್ತದೆ.
ಅಧಿಕಾರಕ್ಕೂ ಒಂದು ಮಿತಿ ಇದೆ ; ತನ್ನ ಮೇಲೆ ತಾನೇ ಶಕ್ತಿಯು ಹಿಂದೊದೆಯುತ್ತದೆ. ಅಧಿಕಾರ ಶಕ್ತಿ
ಗಳೆರಡೂ ಆತ್ಮನಾಶ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರತಿಯಾಗಿ ಆತ್ಮಶಕ್ತಿ ಇನ್ನೂ ಬಲಗೊಂಡು
ವಜ್ರದೇಹಿಯಾಗುತ್ತದೆ. “ಸೈನ್ಯದ ಮಹಾ ಸೇನಾನಾಯಕನನ್ನು ಸೆರೆ ಹಿಡಿಯಬಹುದು ; ಆದರೆ ಒಬ್ಬ
ಕನಿಷ್ಟ ಸೈನಿಕನ ಮನಸ್ಥೆರ್ಯ ಮಾತ್ರ ಸೆರೆಹಿಡಿಯಲು ಸಾಧ್ಯವಿಲ್ಲ” ಎಂದು ಕನ್ಫೂಷಿಯಸ್
ಹೇಳಿದ್ದಾನೆ.
ಜಾನ್ "ಸ್ಟು ಅರ್ಟ ಮಿಲ್ ತನ್ನ ಆತ್ಮಕಥೆಯಲ್ಲಿ ಎಲ್ಲಿಯವರೆಗೆ ಮಾನವನ ಭಾವನಾ ರೀತಿಗಳ
ಮೂಲರಚನೆಯಲ್ಲಿ ಮಹತ್ತರ ಪರಿವರ್ತನೆಯಾಗುವುದಿಲ್ಲವೋ ಅಲ್ಲಿಯವರೆಗೆ ಮಾನವನ ಸ್ಥಿತಿಗತಿಗಳಲ್ಲಿ
ಯಾವ ವಿಶೇಷ ಅಭಿವೃದ್ಧಿ ಯೂ ಸಾಧ್ಯವಿಲ್ಲವೆಂದು ಈಗ ಮನಗಂಡಿದ್ದೇನೆ” ಎಂದು ಹೇಳಿದ್ದಾನೆ. ಆದರೆ
ಭಾವನಾರೀತಿಗಳಲ್ಲಿ ಆ ಮೂಲ ಪರಿವರ್ತನೆ ಬರುವುದೇ ಸನ್ನಿವೇಶ ವ್ಯತ್ಯಾಸಗಳಿಂದ ಮತ್ತು ಜೀವನದ
ಅನಂತ ಹೋರಾಟದ ಹಿಂದಿನ ನೋವು ಮತ್ತು ಸಂಕಟದಿಂದ, ಆದ್ದರಿಂದ ಭಾವನಾರೀತಿ ಪರಿವರ್ತನೆಯ
ಪ್ರತ್ಯಕ್ಷ ಪ್ರಯತ್ನದ ಜೊತೆಗೆ ಯಾವ ಸನ್ನಿವೇಶದಲ್ಲಿ ಬೆಳೆದು ಪುಷ್ಟಿ ಪಡೆಯುತ್ತವೆಯೋ ಆ ಸನ್ನಿವೇಶದ
ಪರಿವರ್ತನೆಗೂ ಪ್ರಯತ್ನ ಮಾಡುವುದು ಅತ್ಯವಶ್ಯಕ. ಒಂದಕ್ಕೊಂದು ಅವಲಂಬಿತ ಮತ್ತು ಒಂದರ
ಮೇಲೊಂದು ಪ್ರಭಾವ ಬೀರುತ್ತವೆ. ಮಾನವನ ಮನಸ್ಸು ಅನಂತ ಮುಖಗಳಲ್ಲಿ ಓಡುತ್ತದೆ. ಪ್ರತಿಯೊಬ್ಬ
ವ್ಯಕ್ತಿಯೂ ತನ್ನ ದೃಷ್ಟಿಯಲ್ಲೇ ಸತ್ಯ ಕಂಡು, ಇನ್ನೊಂದು ವ್ಯಕ್ತಿಯ ಅಭಿಪ್ರಾಯ ಒಪ್ಪುವುದಿಲ್ಲ. ಘರ್ಷಣೆ
ಎಲ್ಲ ಈ ಅಭಿಪ್ರಾಯ ಭೇದದಿಂದ. ಈ ಘರ್ಷಣೆಯಿಂದಲೇ ಸತ್ಯಕ್ಕೆ ಹೆಚ್ಚು ಪೂರ್ಣತೆ ದೊರೆಯುವುದು.
ಏಕೆಂದರೆ ಸತ್ಯ ಬಹುಮುಖವಾದುದು ; ಯಾರೊಬ್ಬರ ವಿಶಿಷ್ಟ ಸ್ವತ್ತಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟಿರ
ಬೇಕು. ಕಾರ್ಯಾಚರಣೆಯ ಮಾರ್ಗವೂ ಅಷ್ಟೇ, ಭಿನ್ನ ಭಿನ್ನ ಜನರಿಗೆ ಭಿನ್ನ ಭಿನ್ನ ಸನ್ನಿವೇಶಗಳಲ್ಲಿ
ಭಿನ್ನ ಭಿನ್ನ ಮಾರ್ಗ ತೋರಬಹುದು. ಭಾರತ, ಚೀಣ ಮತ್ತು ಇತರ ರಾಷ್ಟ್ರಗಳು ತಮ್ಮದೇ ಜೀವನ
ರೀತಿಯ ವೈಶಿಷ್ಟ ಬೆಳೆಸಿಕೊಂಡು ಬಂದು ಅದಕ್ಕೊಂದು ಭದ್ರವಾದ ತಳಹದಿ ಕೊಟ್ಟರು. ತಮ್ಮ ಮಾರ್ಗ ಬಿಟ್ಟು ಬೇರೆ ಮಾರ್ಗ ಇಲ್ಲವೆಂದು ಭಾವಿಸಿದರು. ಈಗಲೂ ಅವರಲ್ಲಿ ಅನೇಕರ ಭಾವನೆ ಅದೇ
ರೀತಿ ಇದೆ. ಇಂದು ಯೂರೋಪ್ ಮತ್ತು ಅಮೆರಿಕ ಜನ ಪ್ರಪಂಚದ ಬಹು ಭಾಗ ಆಕ್ರಮಿಸಿರುವ
ಒಂದು ವಿಶಿಷ್ಟ ಜೀವನ ರೀತಿ ನಿರ್ಮಿಸಿಕೊಂಡಿದ್ದಾರೆ. ತಮಗೆ ಬೇರೆ ಮಾರ್ಗ ಇಲ್ಲವೇ ಇಲ್ಲವೆಂದು ಆ
ಜನರ ಭಾವನೆ. ಪ್ರಾಯಶಃ ಈ ಎರಡರಲ್ಲಿ ಯಾವುದನ್ನೂ ಇದು ಒಂದೇ ಮಾರ್ಗವೆಂದು ಹೇಳಲು ಸಾಧ್ಯ
ವಿಲ್ಲ. ಎರಡೂ, ಒಂದರಿಂದ ಇನ್ನೊಂದು ಸ್ವಲ್ಪ ಕಲಿಯುವುದು ಆವಶ್ಯವೆಂದು ತೋರುತ್ತದೆ, ಆದರೆ
ಚೀನಾ ಮತ್ತು ಭಾರತದಲ್ಲಿ ಜೀವನ ನಿಶ್ಚತನವಾಗಿ ಸ್ಥಗಿತವಾದುದರಿಂದಲೂ ಪಾಶ್ಚಾತ್ಯವು ಯುಗಧರ್ಮ
ಪ್ರತಿಬಿಂಬಿಸುವುದು ಮಾತ್ರವಲ್ಲದೆ, ಕಾರ್ಯಶೀಲವೂ, ಸದಾ ಪರಿವರ್ತಿತವೂ ಇರುವುದರಿಂದಲೂ ಮತ್ತು
ಆಗಾಗ ಆತ್ಮ ವಿನಾಶ ಮತ್ತು ಮಾನವ ಕೊಲೆ ಆದರೂ ಮೂಲತಃ ಅದು ಪ್ರಗತಿ ಪರವಿರುವುದರಿಂದಲೂ
ಭಾರತ ಮತ್ತು ಚೀನಾ ಪಾಶ್ಚಾತ್ಯರಿಂದ ಹೆಚ್ಚು ಕಲಿಯಬೇಕಾಗಿದೆ.
ಭಾರತದಲ್ಲಿ ಮತ್ತು ಪ್ರಾಯಶಃ ಇತರ ದೇಶಗಳಲ್ಲಿ ಆತ್ಮಪ್ರಶಂಸೆ ಮತ್ತು ಆತ್ಮನಿಂದೆಯ ಕಾಲ
ಒಂದರ ಮೇಲೊಂದು ತೆರೆತೆರೆಯಾಗಿ ಬಂದಿವೆ. ಎರಡೂ ಅನಿಷ್ಟ ಮತ್ತು ಅಯೋಗ್ಯ, ಭಾವೋದ್ರೇಕ
ಮತ್ತು ಭಾವಪರವಶತೆಯಿಂದ ಜೀವನ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ; ಆದರೆ ಧೈರ್ಯದಿಂದ ಮುಚ್ಚು
ಮರೆ ಇಲ್ಲದೆ ವಾಸ್ತವ ಪ್ರಪಂಚ ಎದುರಿಸುವುದರಿಂದ ಮಾತ್ರ ಸಾಧ್ಯ. ಜೀವನ ಸಮಸ್ಯೆಗಳಿಗೆ ಸಂಬಂಧ
ವಿಲ್ಲದ ಗೊತ್ತು ಗುರಿ ಇಲ್ಲದ ಭಾವಾವೇಶದ ಅನ್ವೇಷಣೆಯಲ್ಲಿ ಮಗ್ನರಾಗಿ ವ್ಯರ್ಥಕಾಲ ಕಳೆಯಲು ಆಗುವು
ದಿಲ್ಲ, ಏಕೆಂದರೆ ಕಾಲಚಕ್ರ ಸಮನಾಗಿ ಕಾಯದೆ ಉರುಳುತ್ತಲೇ ಇದೆ. ಮಾನವನ ಅಂತರಂಗ