ಪುಟ:ಭಾರತ ದರ್ಶನ.djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪುನಃ ಅಹಮದ್‌ನಗರದ ಕೋಟೆಯಲ್ಲಿ

೫೦೯

ಜೀವನದ ಮಹತ್ವ ಮರೆತು ಬಾಹ್ಯಾಡಂಬರದಲ್ಲೇ ಮಗ್ನರಾಗುವುದೂ ಒಳ್ಳೆಯದಲ್ಲ. ಎರಡಕ್ಕೂ ಒಂದು
ಸಮತೋಲನವಿರಬೇಕು. ಎರಡಕ್ಕೂ ಒಂದು ಸಾಮರಸ್ಯ ಕಲ್ಪಿಸಲು ಯತ್ನ ಮಾಡಬೇಕು." ಪ್ರಕೃತಿ
ಮನಸ್ಸುಗಳ ಐಕ್ಯತೆಯ ಜ್ಞಾನವಿದ್ದರೆ ಅದಕ್ಕಿಂತ ಹೆಚ್ಚು ಶ್ರೇಯಸ್ಕರವಾದುದು ಬೇರೆ ಇಲ್ಲ. ಮನಸ್ಸಿನ
ಜ್ಞಾನ ಹೆಚ್ಚಿದಂತೆ ತನ್ನ ಶಕ್ತಿಯ ಅರಿವೂ, ಪ್ರಕೃತಿ ನಿಯಮದ ಅರಿವೂ ಹೆಚ್ಚುತ್ತದೆ. ತನ್ನ ಶಕ್ತಿ
ಅಥವ ಬಲದ ಅರಿವು ಹೆಚ್ಚಿದಂತೆ ತನ್ನ ದಾರಿ ತಾನು ಕಂಡುಕೊಂಡು ತನ್ನ ನಿಯಮ ತಾನೇ ರಚಿಸಿ
ಕೊಳ್ಳಲು ಅನುಕೂಲವಾಗುತ್ತದೆ. ಪ್ರಕೃತಿ ನಿಯಮದ ಅರಿವು ಹೆಚ್ಚಿದಂತೆ ನಿಷ್ಟ್ರಯೋಜಕ ವಸ್ತುಗಳ
ಮೋಹ ತ್ಯಜಿಸುವುದೂ ಸುಲಭವಾಗುತ್ತದೆ ; ಇದೇ ಪೂರ್ಣಮಾರ್ಗ ” ಎಂದು ಹದಿನೇಳನೆಯ
ಶತಮಾನದ ಸ್ಪಿನೋಜ ಹೇಳಿದ್ದಾನೆ.
ನಮ್ಮ ವ್ಯಕ್ತಿಜೀವನಗಳಲ್ಲಿ ಸಹ ದೇಹಕ್ಕೂ ಆತ್ಮಕ್ಕೂ, ಪ್ರಕೃತಿಯ ಅಂಗವಾದ ಮನುಷ್ಯನಿಗೂ
ಸಮಾಜದ ಅಂಗವಾದ ಮನುಷ್ಯನಿಗೂ ಒಂದು ಸಮತೂಕ ಕಂಡುಕೊಳ್ಳಬೇಕು. “ ನಾವು ಪೂರ್ಣತೆ
ಪಡೆಯಬೇಕಾದರೆ ಸಿಂಹದ ದೇಹಶಕ್ತಿ ಇರಬೇಕು. ಆದರೆ ಮನಸ್ಸು ಸುಸಂಸ್ಕೃತವಿರಬೇಕು;
ಪ್ರಕೃತಿಯೊಂದಿಗೆ ನೈಸರ್ಗಿಕ ಜೀವನ ನಡೆಸುವ ಮಾನವ ಸಮಾಜದಲ್ಲಿ ಮಾನವೀಯತೆ ವ್ಯಕ್ತ ಪಡಿಸುವ
ಯೋಗ್ಯತೆ ಇರಬೇಕು” ಎಂದು ರವೀಂದ್ರನಾಥ ಠಾಕೂರರು ಹೇಳಿದ್ದಾರೆ. ಪೂರ್ಣತೆ ಒಂದು ಅಂತಿಮ
ಗುರಿ; ಆದ್ದರಿಂದ ಅದು ನಮಗೆ ಎಟುಕದ ವಸ್ತು, ನಮ್ಮ ಪಯಣ ಮಾತ್ರ ಸದಾ ಅದೇ ಕಡೆಗೆ ಇರಲಿ ;
ದಾರಿ ನಡೆದಷ್ಟೂ ಅದು ಹಿಂದೆ ಹೋಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಪರಸ್ಪರ ಸರಿಬೀಳದ,
ವಿರೋಧ ಪ್ರಕೃತಿಯ ಒಂದೊಂದೂ ಒಂದೊಂದು ದಾರಿಗೆಳೆಯುವ ಅನೇಕ ವ್ಯಕ್ತಿಗಳು ಕೆಲಸ ಮಾಡು
ತಿವೆ. ಜೀವನ ಪ್ರೇಮವಿದೆ, ಜೀವನ ನಿರಸನವಿದೆ, ಜೀವನಕಾರ್ಯ ಪುರಸ್ಕಾರವಿದೆ, ಅದರ ಬಹುಭಾಗದ
ತಿರಸ್ಕಾರವಿದೆ. ಈ ವಿರೋಧ ಪ್ರಕೃತಿಗಳಲ್ಲಿ ಸಮರಸತೆ ಕಲ್ಪಿಸುವುದು ಬಹುಕಷ್ಟ. ಒಂದು ಬಾರಿ ಒಂದು
ಇನ್ನೊಂದು ಬಾರಿ ಇನ್ನೊಂದು ಯಾಜಮಾನ್ಯ ನಡೆಸುತ್ತವೆ. ಅನೇಕ ವೇಳೆ

{

“ಬಾಳೊಂದು ಹಿರಿಯೊಗಟೆ
ಅರಿಯ ತುಸು ರಾಗ ಬಿಡು,
ಬಾಳು ತುಸು ರಾಗದಿ
ಲೀಲೆ ಜಾಲವ ನೋಡೆ ”

ಎಂದು ಲಾ ಓಜೆ ಹೇಳುತ್ತಾನೆ.
ನಮ್ಮ ತರ್ಕ ಮತ್ತು ಅರಿವಿನ ಆಳ ನಮ್ಮ ಜ್ಞಾನ ಮತ್ತು ಅನುಭವಭಾಂಡಾರ ಎಷ್ಟೇ ಅಪಾರ
ವಿದ್ದರೂ ನನಗೆ ತಿಳಿದಿರುವ ಜೀವನ ರಹಸ್ಯ ಅತ್ಯಲ್ಪ ; ಅದರ ಅಗಾಧ ಗೂಢನಿಯಮಗಳ ಊಹೆ
ಮಾತ್ರ ಸಾಧ್ಯ. ಆದರೆ ಅದರ ಸೌಂದರ್ಯೋಪಾಸನೆ ಸದಾ ಸಾಧ್ಯವಿದೆ, ಮತ್ತು ಕಲೆಯ ಮೂಲಕ ನಮ್ಮ
ಆಚರಣೆಯಲ್ಲಿ ಸೃಷ್ಟಿಯ ದೇವಸಮಾನ ಕಾರ್ಯ ತೋರಬಹುದು. ನಮ್ಮ ಜೀವನ ಸದಾ ತಪ್ಪು ಮಾಡುವ,
ಅತ್ಯಲ್ಪ, ಅನಿಶ್ಚಿತ ಕಾಲದ ದುರ್ಬಲ ಜೀವನವಾದರೂ, ಅಮರ ದೈವತ್ವದ ಸತ್ವ ಸ್ವಲ್ಪ ನಮ್ಮಲ್ಲಿದೆ
“ ನಾವು ಅಲ್ಪ ಮಾನವರು, ನಶ್ವರ ಜೀವಿಗಳು ಆದ್ದರಿಂದ ಮಾನವ ಸಹಜ ನಶ್ವರ ಭಾವನೆಗಳನ್ನೇ
ಯೋಚಿಸಿ ಎಂದು ಉಪದೇಶಿಸುವವರನ್ನು ನಂಬಬಾರದು. ಸಾಧ್ಯವಾದಷ್ಟು ಅಮರತ್ವ ಅನುಷ್ಠಾನ
ಮಾಡಬೇಕು. ನಮ್ಮ ಶ್ರೇಷ್ಠತೆಗೆ ಅನುಚಿತವಾದ ಯೋಗ್ಯ ಜೀವನ ನಡೆಸಲು ಸರ್ವ ಪ್ರಯತ್ನ ಮಾಡ
ಬೇಕು” ಎಂದು ಅರಿಸ್ಟಾಟಲ್ ಹೇಳಿದ್ದಾನೆ.

೧೬. ಉಪಸಂಹಾರ

ಈ ಗ್ರಂಥ ಆರಂಭಿಸಿ ಐದು ತಿಂಗಳಾಗುತ್ತ ಬಂದವು. ನನ್ನ ಮನೋಭಾವನೆಗಳ ಕಲಸುಮೇಲೋ
ಗರದ ಸಾವಿರ ಪುಟಗಳ ಈ ಹಸ್ತಪ್ರತಿ ಈಗ ಮುಗಿಸಿದ್ದೇನೆ. ಈ ಐದು ತಿಂಗಳಲ್ಲಿ ಬಹು ದೂರದ
ಪ್ರಾಚೀನ ಯುಗಕ್ಕೆ ಹೋಗಿದ್ದೇನೆ, ಭವಿಷ್ಯದೊಳಗೂ ಇಣಿಕಿ ನೋಡಿದ್ದೇನೆ. “ ಕಾಲವು ಅನಂತ