ಪುಟ:ಭಾರತ ದರ್ಶನ.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೧೦

ಭಾರತ ದರ್ಶನ


ದೊಂದಿಗೆ ಸಂಧಿಸುವ ಬಿಂದು ” ನಿನ ಮೇಲೆ ನನ್ನ ಸಮತೋಲನೆ ನಿಲ್ಲಿಸುವುದಕ್ಕೂ ಪ್ರಯತ್ನ ಪಟ್ಟದೇನೆ.
ಈ ಐದು ತಿಂಗಳಲ್ಲಿ ಪ್ರಪಂಚದಲ್ಲಿ ಅನೇಕ ಮಹಾ ಘಟನೆಗಳಾಗಿವೆ. ಸೈನಿಕನ ಗೆಲುವಿನ ದೃಷ್ಟಿಯಿಂದ
ಯುದ್ದದ ಗತಿ ವಿಜಯೋತ್ಸವದ ಕಡೆ ಅತಿವೇಗದಿಂದ ಸಮಿಾಪಿಸಿದೆ. ನನ್ನ ತಾಯ್ಯಾಡಿನಲ್ಲಿ ಸಹ ದೂರದ
ನೋಟ ಮಾತ್ರ ದೊರೆತಿದ್ದರೂ ಅನೇಕ ಘಟನಾ ಪರಂಪರೆಗಳು ಆಗಿವೆ. ಅನೇಕ ಬಾರಿ ಅಲೆ ಅಲೆ
ಯಾಗಿ ಬಂದ ತಾತ್ಕಾಲಿಕ ಸಂಕಟಗಳ ಉಬ್ಬರವಿಳಿತಕ್ಕೆ ಸಿಕ್ಕು ಪಾರಾಗಿದ್ದೇನೆ. ಈ ಆಲೋಚನಾ
ಕಾರ್ಯದಲ್ಲಿ ಮಗ್ನನಾಗಿ, ನನ್ನ ಭಾವನೆಗಳಿಗೆ ಒಂದು ರೂಪು ಕೊಡುವ ಪ್ರಯತ್ನದಲ್ಲಿ ಇಂದಿನ ಭೀಷಣ
ಘಟನೆಗಳ ಮೊನೆಯಲುಗಿನಿಂದ ಸ್ವಲ್ಪ ದೂರ ಸರಿದು ಗತಕಾಲದ ಮತ್ತು ಭವಿಷ್ಯದ ವಿಶಾಲ ನೋಟದ
ಕಡೆ ತಿರುಗಿದ್ದೇನೆ.
ಆದರೆ ಈ ತಿರುಗಾಟಕ್ಕೂ ಒಂದು ಕೊನೆಬೇಕು. ಬೇರೆ ಯಾವ ಕಾರಣವಿಲ್ಲದಿದ್ದರೂ ಉಪೇಕ್ಷಿಸ
ಲಾಗದ ಒಂದು ವಾಸ್ತವಿಕ ಕಾರಣ ಇದೆ, ಬಹು ಪ್ರಯಾಸದಿಂದ ತರಿಸಿಕೊಂಡ ಕಾಗದ ಮುಗಿದು
ಹೋಗಿದೆ; ಹೆಚ್ಚು ಸಿಗುವಂತಿಲ್ಲ.
“ಭಾರತ ದರ್ಶನ” ಹೊಸದು ಏನು ನಾನು ಕಂಡಿರುವುದು ? ಭಾರತದ ಇಂದಿನ ಚಿತ್ರ ಮತ್ತು
ಹಿಂದಿನ ಬಹುಕಾಲದ ಚಿತ್ರವನ್ನು ನಾನು ಕಂಡುಹಿಡಿದು ತೋರಿಸುತ್ತೇನೆಂದು ಭಾವಿಸಿದ್ದು ಒಂದು ಎದೆ
ಗಾರಿಕೆ, ಭಾರತದ ನಲವತ್ತು ಕೋಟಿ ಜನ ಸ್ತ್ರೀ ಪುರುಷರೂ ಇಂದು ಬೇರೆ ಬೇರೆ, ಒಬ್ಬರಿಗೊಬ್ಬರಿಗೆ
ವ್ಯತ್ಯಾಸ, ಪ್ರತಿಯೊಬ್ಬರಿಗೂ ಒಂದೊಂದು ಪ್ರತ್ಯೇಕ ಭಾವನಾ ಮತ್ತು ಯೋಚನಾ ಪ್ರಪಂಚ ಜೀವನ.
ಈಗಲೇ ಹೀಗಿರುವಾಗ ಅಗಾಧ ಗತಕಾಲದ ಅಸಂಖ್ಯಾತ ಮಾನವಕೊಟಯ ಅಲೆಗಳ ಚಿತ್ರ ನನ್ನ
ಕಲ್ಪನೆಯ ಹಿಡಿತಕ್ಕೆ ಸಿಗುವುದೆಂತು ? ಆದರೂ ಯಾವುದೋ ಒಂದು ಅವ್ಯಕ್ತ ಶಕ್ತಿ ಅದನ್ನೆಲ್ಲ ಒಟ್ಟಿಗೆ
ಹೆಣೆದಿದೆ, ಇನ್ನೂ ಹೆಣೆಯುತ್ತಿದೆ. ಭೌಗೋಲಿಕ ಮತ್ತು ಆರ್ಥಿಕ ದೃಷ್ಟಿಯಿಂದ ಭಾರತ ಒಂದು, ಅದರ
ಸಂಸ್ಕೃತಿ ವೈವಿಧ್ಯದಲ್ಲಿ ಒಂದು ಐಕ್ಯತೆ ಇದೆ. ಅನೇಕ ವಿರೋಧಗಳ ಹೊರೆಯಾದರೂ ಯಾವುದೋ
ಅವ್ಯಕ್ತ ತಂತುಗಳು ಅವನ್ನು ಬಲವಾಗಿ ಬಿಗಿದು ಹಿಡಿದಿವೆ. ಮೇಲಿಂದ ಮೇಲೆ ಎಷ್ಟೋ ಆಘಾತಗಳು
ಬಂದು ಒದಗಿದ್ದರೂ ಭಾರತದ ಆತ್ಮ ಜಯಿಸಲು ಮಾತ್ರ ಯಾವುದಕ್ಕೂ ಸಾಧ್ಯವಾಗಿಲ್ಲ ; ಇಂದು
ಮದೋನ್ಮತ್ತ ವಿಜಯಶಾಲಿಯ ಕೈಯೊಳಗಿನ ಒಂದು ಆಟದ ಬೊಂಬೆಯಾದರೂ ಭಾರತವು ಇನ್ನೂ,
ಅಗತ್ಯವೂ ಅಜೇಯವೂ ಆಗಿ ಉಳಿದಿದೆ. ಪುರಾತನ ಕತೆಯಂತೆ ಯಾವುದೋ ಒಂದು ಕಂಡೂ
ಕಾಣದ ಗುಣ, ಒಂದು ಮೋಹಿನೀ ಶಕ್ತಿ ಭಾರತಕ್ಕೆ ಇರುವಂತೆ ಇದೆ. ಭಾರತವೆಂದರೆ ಒಂದು
ಕಲ್ಪನೆಯೂ ಹೌದು ಭಾವನೆಯೂ ಹೌದು, ಕನಸೂ ಹೌದು ದೃಶ್ಯವೂ ಹೌದು ; ಆದರೂ
ಅದು ಸತ್ಯ ವಾಸ್ತವ ಮತ್ತು ಸರ್ವ ವ್ಯಾಪಕ. ಕತ್ತಲೆಯ ಕೂಪಕ್ಕೆ ತಳ್ಳುವಂತೆ ತೋರುವ
ಕಾರ್ಗತ್ತಲು ಕವಿದ ಕಾಲು ದಾರಿಗಳ ಭೀಕರ ದೃಶ್ಯಗಳೂ ಇವೆ; ಹಗಲಿನ ಪೂರ್ಣತೆ ಮತ್ತು
ಶಾಖವೂ ಇದೆ. ಈ ವೃದ್ದ ಮಾ ತೆ ಯ ನ್ನು ಕಂಡರೆ ಒಂದೊಂದು ಬಾರಿ ನಾಚಿಕೆಯಿಂದ ತಲೆ
ತಗ್ಗಿಸುವಂತೆ ಬಹು ಅಸಹ್ಯವಾಗುತ್ತದೆ. ದುರಾಗ್ರಹ ಮತ್ತು ಮೊಂಡುತನ ತೋರುವುದಲ್ಲದೆ ಕೆಲವು
ವೇಳೆ ಹುಚ್ಚುತನ ಸಹ ತೋರುತ್ತಾಳೆ. ಆದರೆ ಆಕೆ ಬಹು ಪ್ರೇಮಮಯಿ. ಆಕೆಯ ಮಕ್ಕಳು ಎಲ್ಲಿಗೆ.
ಹೋಗಲಿ ಏನೆ ಆಗಲಿ ಆಕೆಯನ್ನು ಮಾತ್ರ ಯಾರೂ ಮರೆಯಲಾರರು. ಏಕೆಂದರೆ ಆಕೆಯ ಮಹೋನ್ನತಿ
ಅಥವ ಅವಗುಣ ಏನಿದ್ದರೂ ಅದಕ್ಕೆ ಅವರೇ ಕಾರಣರು. ಜೀವನಾಶಕ್ತಿ, ಆನಂದ ಮತ್ತು ಮುಗ್ಧತೆ
ಹೊರ ಸೂಸುತ್ತ, ಅಪಾರ ಜ್ಞಾನಾಂಬುಧಿಯನ್ನಳೆದ ಆಕೆಯ ಆ ಆಳವಾದ ಕಣ್ಣುಗಳಲ್ಲಿ ಆ ಗುಣಾವ
ಗುಣಗಳೆಲ್ಲ ಪ್ರತಿಬಿಂಬಿತ ಇವೆ. ಪ್ರತಿಯೊಬ್ಬ ವ್ಯಕ್ತಿಯೂ ಆಕೆಯನ್ನು ಕಂಡು ಮುಗ್ಧನಾಗಿದ್ದಾನೆ.
ಕಾರಣ ಬೇರೆ ಇರಬಹುದು ಅಥವ ಏನೂ ಇಲ್ಲದೆ ಇರಬಹುದು ; ಮತ್ತು ಆಕೆಯ ಬಹುಮುಖ ವ್ಯಕ್ತಿತ್ವದ
ಯಾವುದೋ ಒಂದು ಪ್ರತ್ಯೇಕ ಮುಖಕಂಡು ಇರಬಹುದು. ಯುಗ ಯುಗಾಂತರಗಳಿಂದ ಅನೇಕ ಮಹಾ
ಪುರುಷರು, ಸ್ತ್ರೀರತ್ನಗಳು ಆಕೆಯ ಗರ್ಭದಿಂದ ಅವತರಿಸಿ ಸನಾತನ ಸಂಪ್ರದಾಯ ಮುಂದುವರಿಸಿದ್ದಾರೆ.
ಮತ್ತು ಕಾಲಪರಿವರ್ತನೆಗೆ ತಕ್ಕಂತೆ ಆ ಸಂಪ್ರದಾಯಕ್ಕೆ ಹೊಸಸ್ವರೂಪ ಕೊಟ್ಟಿದ್ದಾರೆ. ಈ ಮಹಾ