ಪುಟ:ಭಾರತ ದರ್ಶನ.djvu/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೫೧೧

ವ್ಯಕ್ತಿಗಳ ಶ್ರೇಣಿಯಲ್ಲಿ ಒಬ್ಬರಾದ ರವೀಂದ್ರನಾಥ ಠಾಕೂರರಿಗೆ ಆಧುನಿಕ ಯುಗದ ಕಾವು ಮತ್ತು ಆಸಕ್ತಿ ಪೂರ್ಣ ಇದ್ದವು; ಆದರೂ ಅವರ ನಿಲುವು ಎಲ್ಲ ಭಾರತದ ಪ್ರಾಚೀನತೆಯಲ್ಲಿ ; ಅವರ ಜೀವನವೇ ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಗಳ ಒಂದು ಸುಂದರ ಸಾಮರಸ್ಯ. “ನನ್ನ ಭಾರತಪ್ರೇಮ ಭೌಗೋಲಿಕ ಭಾರತದ ನನ್ನ ಪೂಜೆಯಿಂದ ಬಂದುದಲ್ಲ; ಭಾರತದಲ್ಲಿ ನಾನು ಜನ್ಮತಾಳಿದ್ದರಿಂದಲೂ ಅಲ್ಲ ; ಆದರೆ ಯುಗಯುಗಗಳ ಪ್ರಳಯಾಂತಕ ಸನ್ನಿವೇಶಗಳಲ್ಲಿ ಸಹ ಅದು ಮಹಾಜ್ಞಾನಿಗಳಾದ ಆರ್ಯ ಋಷಿಗಳ ದಿವ್ಯ ಅಮೃತವಾಣಿಯನ್ನು ಕಾಪಾಡಿಕೊಂಡು ಬಂದಿರುವುದರಿಂದ" ಎಂದು ರವೀಂದ್ರರು ಹೇಳಿದ್ದಾರೆ. ಅನೇಕರು ಅದೇ ರೀತಿ ಹೇಳಬಹುದು; ಇತರರು ತಮ್ಮ ಭಾರತಪ್ರೇಮಕ್ಕೆ ಬೇರೆ ಕಾರಣ ಕೊಡಬಹುದು.

ಹಿಂದೆ ಆಕೆಯನ್ನು ಮುಸುಕಿದ್ದ ಮೋಹ ಈಗ ಮಾಯವಾಗುವಂತೆ ಇದೆ. ಈಗ ಆಕೆ ಎಚ್ಚತ್ತು ಕಣ್ಣೆರೆದು ಸುತ್ತಲೂ ನೋಡುವಂತಿದೆ. ಆದರೆ ಎಷ್ಟೇ ಹೊಸರೂಪ ಧರಿಸಿದರೂ ಹೊಸರೂಪ ತಾಳಲೇಬೇಕು. ಆ ಹಳೆಯ ಮನಮೋಹಕಶಕ್ತಿ ಮಾತ್ರ ಇದ್ದೇ ಇರುತ್ತದೆ; ತನ್ನ ಜನರ ಹೃದಯ ಸೂರೆಗೊಳ್ಳುತ್ತಲೇ ಇರುತ್ತಾಳೆ. ಆಕೆಯ ಬಾಹ್ಯ ಅಲಂಕಾರ ಬೇರೆ ಆದರೂ ಆಕೆ ಮಾತ್ರ ಅದೇ ಪುರಾತನ ವ್ಯಕ್ತಿ; ಈ ಸೇಡಿನ ಮನೋಭಾವದ, ಕಠಿನ, ದುರಾಸೆಯ ಪ್ರಪಂಚದಲ್ಲಿ ಸತ್ಯ, ಸುಂದರ, ಶ್ರೇಷ್ಠ ವಸ್ತುಗಳು ಯಾವುದನ್ನೂ ಬಿಡದೆ ಬಾಳ್ವೆ ನಡೆಸಲು ಆಕೆಯ ಜ್ಞಾನಸಂಪತ್ತು ಸಹಾಯಕವಾಗುತ್ತದೆ.

ಪ್ರಪಂಚವು ಮಹತ್ಕಾರಗಳನ್ನೆನೋ ಸಾಧಿಸಿದೆ. ಆದರೂ ಮಾನವಪ್ರೇಮ ಮಾನವಪ್ರೇಮ, ಎಂದು ಎಷ್ಟು ಕೂಗಿದರೂ ಅದರ ತಳಹದಿ ಮಾತ್ರ ಮಾನವನ ಮಾನವೀಯತೆಯ ಗುಣಗಳಲ್ಲಿರದೆ ಹೆಚ್ಚಾಗಿ ದ್ವೇಷ ಮತ್ತು ಹಿಂಸೆಯಮೇಲೆ ನಿಂತಿದೆ. ಯುದ್ಧವು ಸತ್ಯ ಮತ್ತು ಮಾನವೀಯತೆಯ ನಕಾರ. ಕೆಲವು ವೇಳೆ ಯುದ್ಧ ಅನಿವಾರ್ಯವಾಗಬಹುದು. ಆದರೆ ಅದರ ಪರಿಣಾಮ ಊಹಿಸುವುದು ಸಹ ಅಸಾಧ್ಯ. ಮರಣ ಮಾತ್ರವಲ್ಲ, ಏಕೆಂದರೆ ಹುಟ್ಟಿದವನು ಸಾಯಲೇ ಬೇಕು ; ಆದರೆ, ಕ್ರಮೇಣ ಮುಂದೆ ಜನತೆಯ ಸಾಮಾನ್ಯ ಸ್ವಭಾವವಾಗುವ ದ್ವೇಷ ಮತ್ತು ಸುಳ್ಳಿನ ಸತತ ಮನಃಪೂರ್ವಕ ಅಪಪ್ರಚಾರ, ದ್ವೇಷ ಮತ್ತು ತಿರಸ್ಕಾರಗಳೇ ನಮ್ಮ ಜೀವನಮಾರ್ಗದ ದಿಗ್ಗರ್ಶಕಗಳಾದರೆ ಅದರಿಂದ ಒದಗುವ ಅಪಾಯ ಮತ್ತು ಹಾನಿ ಅಪಾರ. ಏಕೆಂದರೆ ಆ ಶಕ್ತಿ ವ್ಯಯವೆಲ್ಲ ದುವ್ರ್ರಯ ಮತ್ತು ಅದರಿಂದ ಮನಸ್ಸೇ ವಿಕಾರಹೊಂದಿ, ಕರಟಗಟ್ಟಿ ಸತ್ಯಕ್ಕೆ ಕುರುಡಾಗುತ್ತದೆ. ಭಾರತದಲ್ಲಿ ಈಗ ದ್ವೇಷಾಸೂಯೆಗಳು ಬೆಳೆದಿರುವುದು ತೀರ ವ್ಯಸನಕರ ; ಆದರೆ ಅದೆಲ್ಲ ಹಿಂದಿನ ಕರ್ಮಫಲ. ಇಂದಿಗೂ ಅದರಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಆತ್ಮಾಭಿಮಾನವುಳ್ಳ ಜನಾಂಗದ ಗೌರವಕ್ಕೆ ಮೇಲಿಂದ ಮೇಲೆ ಮಸಿಬಳಿಯುವ ಪ್ರಯತ್ನ ಮರೆಯಲು ಸಾಧ್ಯವಿಲ್ಲ. ಆದರೂ ಭಾರತೀಯರು ಬಹುಕಾಲ ದ್ವೇಷಸಾಧನೆ ಮಾಡುವವರಲ್ಲ, ಬಹುಬೇಗ ತಮ್ಮ ಉದಾರ ಸ್ವಭಾವ ತೋರುತ್ತಾರೆ.

ಸ್ವಾತಂತ್ರದ ಹೊಸ ದಿಗಂತಗಳನ್ನು ಕಂಡು ಭಾರತ ಪುನಃ ಚೇತರಿಸಿಕೊಳ್ಳುತ್ತದೆ. ಹಿಂದಿನ ನಿರಾಸೆ ಮತ್ತು ಅವಹೇಳನ ಎಲ್ಲ ಮರೆತು ಭವಿಷ್ಯದ ಭವ್ಯತೆಯಲ್ಲಿ ಮಗ್ನವಾಗುತ್ತದೆ. ತನ್ನ ನೆಲೆಯಲ್ಲಿ ತಾನು ಬೇರು ಬಿಟ್ಟರೂ ಇತರರಿಂದ ಕಲಿತು ಅವರೊಡನೆ ಸಹಕರಿಸಬೇಕೆಂಬ ಇಚ್ಛೆ ಮತ್ತು ಆತ್ಮ ವಿಶ್ವಾಸದಿಂದ ಮುಂದುವರಿಯುತ್ತದೆ. ಭಾರತವು ಇಂದು ಪೂರ್ವಾಚಾರಗಳ ಅಂಧಶ್ರದ್ಧೆ ಮತ್ತು ಪಾಶ್ಚಾತ್ಯ ಪದ್ದತಿಗಳ ಕುರುಡು ಅನುಕರಣಗಳ ಮಧ್ಯೆ ತೊನೆದಾಡುತ್ತಿದೆ. ಇವೆರಡರಲ್ಲೂ ಹರ್ಷವಾಗಲಿ, ಜೀವನ ವಾಗಲಿ, ಪ್ರಗತಿಯಾಗಲಿ ದೊರೆಯಲು ಸಾಧ್ಯವಿಲ್ಲ. ಮೇಲೆ ಹೆಪ್ಪುಗಟ್ಟಿರುವ ಕರಟ ಒಡೆದುಕೊಂಡು ಹೊರಬಿದ್ದು ಆಧುನಿಕ ಯುಗದ ಜೀವನ ಮತ್ತು ಕಾರ್ಯ ಚಟುವಟಿಕೆಗಳಲ್ಲಿ ಪೂರ್ಣ ಪಾತ್ರ ವಹಿಸಬೇಕು. ಕೇವಲ ಅನುಕರಣದಿಂದ ಯಾವ ಸಂಸ್ಕೃತಿ ಅರ್ಥ ಆತ್ಮ ಪ್ರಗತಿಸಾಧನೆ ಸಾಧ್ಯವಿಲ್ಲವೆಂದು ಸ್ಪಷ್ಟ ಅರಿಯಬೇಕು. ಜನ ಜೀವನದಿಂದ ಮತ್ತು ರಾಷ್ಟ್ರ ಜೀವನದಿಂದ ದೂರವಿರುವ ಕೆಲವರು ಮಾತ್ರ. ಅನುಕರಣದಿಂದ ತೃಪ್ತಿ ಹೊಂದಬಹುದು. ನಿಜವಾದ ಸಂಸ್ಕೃತಿಯು ಪ್ರಪಂಚದ ಎಲ್ಲ ಮೂಲೆಗಳಿಂದಲೂ ರಸಾಸ್ವಾದನೆ ಮಾಡುತ್ತದೆ. ಆದರೆ ತನ್ನ ವಿಶಾಲಜನತೆಯ ಆಧಾರದ ಮೇಲೆ ಸ್ವಂತ ಮನೆಯಲ್ಲಿ