ಪುಟ:ಭಾರತ ದರ್ಶನ.djvu/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೧೨

ಭಾರತ ದರ್ಶನ

ಬೆಳೆಯಬೇಕು. ವಿದೇಶದ ಪ್ರತಿಮೆಗಳನ್ನೇ ಸದಾ ಯೋಚಿಸುತ್ತಿದ್ದರೆ ಕಲೆ ಮತ್ತು ಸಾಹಿತ್ಯ ನಿರ್ಜೀವವಾಗುತ್ತವೆ. ಸಂಸ್ಕೃತಿಯು ಅತಿಗಾಂಭೀರದ ಸಣ್ಣ ಗುಂಪಿನ ಸಂಕುಚಿತ ಸ್ವತ್ತಾಗಿರುವ ದಿನಗಳು ಕಳೆದು ಹೋದವು; ಈಗ ಎಲ್ಲವನ್ನೂ ಸಾಮಾನ್ಯ ಜನತೆಯ ದೃಷ್ಟಿಯಿಂದ ನೋಡಬೇಕಾಗಿದೆ. ಅವರ ಸಂಸ್ಕೃತಿಯು ಹಿಂದಿನ ಸಂಸ್ಕೃತಿ ಪರಂಪರೆಯ ವಿಕಾಸವಾಗಿ ಅವರ ಹೊಸ ಆಶೋತ್ತರಗಳನ್ನು ಮತ್ತು ರಚನಾತ್ಮಕ ದೃಷ್ಟಿಯನ್ನು ಪ್ರತಿಬಿಂಬಿಸಬೇಕು.

ಎಮರ್ಸನ್ ಯೂರೋಪಿನ ಸಂಸ್ಕೃತಿಯನ್ನು ಬಹಳ ಅನುಕರಿಸಬೇಡಿ, ಅವಲಂಬಿಸಬೇಡಿ ಎಂದು ಅಮೆರಿಕನರಿಗೆ ಒಂದು ನೂರು ವರ್ಷಗಳ ಹಿಂದೆಯೇ ಎಚ್ಚರಿಸಿದನು. ಹೊಸ ಜನಾಂಗವಾದ್ದರಿಂದ ತಮ್ಮ ಹಿಂದಿನ ಯೂರೋಪಿಯನ್ ಜೀವನದ ಕಡೆ ಹೆಚ್ಚು ನೋಡದೆ ತಮ್ಮ ಹೊಸ ದೇಶದ ಸಮೃದ್ಧ ಜೀವನದಿಂದ ಪ್ರೇರಣೆ ಪಡೆಯಲೆಂದು ಅವನ ಇಷ್ಟ, “ಇತರ ದೇಶಗಳ ಜ್ಞಾನಕ್ಕೆ ನಾವು ದಾಸರಾಗಿ, ಅವರಿಂದ ಶಿಕ್ಷಣ ಪಡೆಯುವ ಕಾಲ ಮುಗಿಯಿತು. ನಮ್ಮ ಸುತ್ತಲೂ ಹೊಸಬಾಳಿಗೆ ಜನ್ಮದಾತರಾಗುವ ಪೀಳಿಗೆಗಳಿಗೆ ಪರದೇಶಗಳ ಬೆಳೆಯಿಂದ ಎರವಲು ತಂದ ಜೀರ್ಣವಸ್ತುಗಳಿಂದ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಪ್ರಶಂಸನೀಯ ಸಂಭವಗಳು ಕಾರಗಳು ತಾವೇ ಉದ್ಭವಿಸುತ್ತವೆ ; ತಮ್ಮ ಪ್ರಶಂಸೆ ತಾವೇ ಹಾಡುತ್ತವೆ. ಯಾವ ಸಂಪ್ರದಾಯ ಅಥವ ಅಧಿಕಾರ ಬಂಧವೂ ಇಲ್ಲದ ರಚನಾತ್ಮಕ ನಡೆ, ನುಡಿ ಮತ್ತು ಕಾರ್ಯಗಳಿವೆ. ಮನಸ್ಸಿನ ಸದ್ಭಾವನೆ ಸಮದೃಷ್ಟಿ ಮತ್ತು ಸ್ವಯಂಸ್ಫೂರ್ತಿಯೇ ಅವುಗಳ ಪ್ರೇರಕಗಳು” ಎಂದು ಹೇಳಿದ್ದಾನೆ. ಪುನಃ ತನ್ನ ಈ ಆತ್ಮಾವಲಂಬನ” ಎಂಬ ಪ್ರಬಂಧದಲ್ಲಿ “ಆತ್ಮ ಸಂಸ್ಕಾರವಿಲ್ಲದ ವಿದ್ಯಾವಂತ ಅಮೆರಿಕನರು ಇಟಲಿ ಇಂಗ್ಲೆಂಡ್, ಈಜಿಪ್ಟ್ ದೇಶಗಳನ್ನೆ ಆದರ್ಶ ಇಟ್ಟುಕೊಂಡುಮೂಢಭಕ್ತಿಯಿಂದ ಅಲ್ಲಿಗೆ ಪ್ರವಾಸ ಹೋಗುತ್ತಿದಾರೆ. ಇಂಗ್ಲೆಂಡ್, ಇಟಲಿ, ಈಜಿಪ್ಟ್ವ ದೇಶಗಳಿಗೆ ಗೌರವತ೦ದವರು ಭೂಮಿಯ ಅಕ್ಷಾಂಶದಂತೆ ತಾವು ಇದ್ದಲ್ಲಿಯೇ ಇದ್ದು ಆ ಕಾರ್ಯ ಸಾಧಿಸಿದರು. ಪುಂಸತ್ವದ ಸಮಯದಲ್ಲಿ ನಮ್ಮ ಸ್ಥಾನವೇ ನಮ್ಮ ಕರ್ತವ್ಯ ಎಂಬ ಭಾವನೆ ಬರುತ್ತದೆ. ಆತ್ಮ ಪ್ರವಾಸಿಯಲ್ಲ; ಜ್ಞಾನಿಯ ಆವಾಸ ಸದಾ ತನ್ನ ಆಶ್ರಮದಲ್ಲಿ, ತನ್ನ ಅವಶ್ಯಕತೆ ಮತ್ತು ಕರ್ತವ್ಯ ನಿರ್ವಹಣೆಗೆ ಮನೆಯಿಂದ ಹೊರಗೆ ಅಥವ ವಿದೇಶಗಳಿಗೆ ಹೋದವೇಳೆ ಸಹ ಆತನು ತನ್ನ ಮನೆಯಲ್ಲಿದ್ದಂತೆಯೇ ಇರುತ್ತಾನೆ ; ಮತ್ತು ಜ್ಞಾನ ಮತ್ತು ಗುಣದ ಪ್ರಚಾರಕನಾಗಿ ಹೋಗಿದ್ದೇನೆಂದು ತನ್ನ ಮುಖಭಾವದಿಂದಲೇ ಜನರನ್ನು ತಿದ್ದುತ್ತಾನೆ. ಓಡುಗಳ್ಳ ಅಥವ ಗುಲಾಮನಂತೆ ಹೋಗುವುದಿಲ್ಲ” ಎಂದಿದ್ದಾನೆ. "ತನ್ನ ಕಾಲಮೇಲೆ ತಾನು ನಿಂತು, ಹೆಚ್ಚಿನದೇನೂ ಕಲಿಯಲಾರೆನೆಂದು, ಕಲೆ, ಜ್ಞಾನಾರ್ಜನೆ ಅಥವ ವಿಶಾಲ ದೃಷ್ಟಿಯಿಂದ ಪ್ರಪಂಚ ಪರಿಚಯಕ್ಕಾಗಿ ಪ್ರಪಂಚ ಪರ್ಯಟನ ಮಾಡುವುದಾದರೆ ನನ್ನ ಅಡ್ಡಿ ಇಲ್ಲ. ಆದರೆ ತನಗೆ ಇಲ್ಲಿ ದೊರೆಯದ ಮಹಾಪಾಂಡಿತ್ಯ ಏನೊ ಸಂಪಾದಿಸುತ್ತೇನೆಂದು ಹೋದರೆ, ಅಥವ ಕೇವಲ ಸಂತೋಷಕ್ಕಾಗಿ ಹೋದರೆ ತನ್ನನ್ನೇ ತಾನು ಮರೆತು ಹಳೆಯದರ ಜೊತೆಗೆ ತಾನೂ ಮುದಿಯಾಗಿ ತನ್ನ ಯೌವನದೃಷ್ಟಿ ಸಹ ಕಳೆದುಕೊಳ್ಳುತ್ತಾನೆ. ಥೀಬಸ್‌ನಲ್ಲಿ ಪಾಳ್ಮೆರಾದಲ್ಲಿ ಹಳೆಯ ಪಾಳು ಗೋಡೆಗಳ ಮಧ್ಯೆ ಅವನ ಇಚ್ಛೆ ಮತ್ತು ಮನಸೂ ಹಳೆಯದಾಗುತ್ತವೆ. ಪಾಳಿಗೆ ಪಾಳನ್ನು ಸೇರಿಸುತ್ತಾನೆ.

“ಪ್ರವಾಸದ ಈ ನಮ್ಮ ದುರಾಸೆ ನಮ್ಮ ಮಾನಸಿಕ ಕಾರ್ಯರಂಗವನ್ನೇ ಪೂರ್ಣ ಮುತ್ತಿರುವ ಒಂದು ಅಂತರಂಗ ರೋಗದ ಚಿಹ್ನೆ. . . . ಎಲ್ಲದರಲ್ಲೂ ಅನುಕರಣ ... ನಮ್ಮ ಮನೆ ಕಟ್ಟುವುದು ವಿದೇಶೀಯರ ಅಭಿರುಚಿಯಂತೆ; ನಮ್ಮ ಪೆಟ್ಟಿಗೆಗಳಲ್ಲೆಲ್ಲ ವಿದೇಶೀ ತೋಡಿಗೆಗಳು ; ಅಭಿಪ್ರಾಯ, ಅಭಿರುಚಿ ಮತ್ತು ಜ್ಞಾನ ಎಲ್ಲವೂ ಯಾವುದೋ ದೂರದ ಹಳೆಯ ವಸ್ತುವಿನ ಅನುಕರಣ, ಎಲ್ಲೆಲ್ಲಿ ಕಲಾಭಿವೃದ್ಧಿ ಯಾಗಿದೆಯೋ ಅದೆಲ್ಲ ಆತ್ಮ ಪ್ರೇರಿತ ಕಲಾವಿದನ ಮಾದರಿ ಮೊದಲು ತನ್ನ ಮನೋಮಂದಿರದಲ್ಲಿ ಆತ ನಿರ್ಮಿಸ ಹೊರಟ ವಸ್ತುವಿಗೆ ಮತ್ತು ಅನುಸರಿಸಬೇಕಾದ ನಿಯಮಗಳಿಗೆ ಆತನ ಭಾವನೆಗಳೇ ಆದರ್ಶ ... ನಿನ್ನನ್ನು ನೀನು ಅರಿತುಕೊ; ಅನುಕರಣ ಬೇಡ, ಒಂದು ತುಂಬುಜೀವನದ ವ್ಯವಸಾಯದಿಂದ ಸಂಗ್ರಹಿಸಿದ ಶಕ್ತಿಯಿಂದ ಪ್ರತಿಗಳಿಗೆ ನೀನು ಒಂದೊಂದು ಉತ್ತಮ ಕೃತಿ ಪ್ರದಾನ ಮಾಡಬಹುದು? ಎಂದು ಹೇಳಿದಾನೆ.