ಪುಟ:ಭಾರತ ದರ್ಶನ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಭಾರತ ದರ್ಶನ

ಗಳನ್ನೂ ಅದುಮಿ ಮಾನವ ಮನೋರಾಜ್ಯದ ಪ್ರಧಾನ ಶಕ್ತಿಯಾಗುತ್ತವೆ. ಅನೇಕ ವೇಳೆ ಅವೇ ಭಾವನೆಗಳನ್ನು ಉಪಯೋಗಿಸಿಕೊಂಡು ಉನ್ನತ ತ್ಯಾಗ ಮತ್ತು ಕಾರ್ಯೋನ್ಮುಖತೆಗೆ ಹುರಿದುಂಬಿ ಸಲು ಉದ್ದೇಶಪೂರ್ವಕ ಪ್ರಯತ್ನ ಸಹ ನಡೆಯುತ್ತದೆ. ಬಹುಮಟ್ಟಿಗೆ ಈ ಸಂಪ್ರದಾಯಗಳನ್ನು ಒಪ್ಪಲೇಬೇಕು ; ಆದರೆ ಹೊಸ ಸನ್ನಿವೇಶಗಳಿಗೆ, ಭಾವನೆಗಳಿಗೆ ಅನ್ವಯಿಸುವಂತೆ ಮಾರ್ಪಡಿಸ ಬೇಕು, ಹೊಂದಿಸಬೇಕು ; ಮತ್ತು ಹೊಸ ಸಂಪ್ರದಾಯಗಳನ್ನೂ ರೂಢಿಗೆ ತರಬೇಕು. ರಾಷ್ಟ್ರೀಯ ಭಾವನೆಯು ಗಾಢವೂ, ಬಲವತ್ತರವೂ ಆದುದು; ಭವಿಷ್ಯಕ್ಕೆ ಅರ್ಥವಿಲ್ಲದ ಕೇವಲ ಗತಕಾಲದ ವಸ್ತು ವಲ್ಲ; ಆದರೆ ಇಂದಿನ ಕೆಲವು ಅನಿವಾರ್ಯ ಸಂಗತಿಗಳ ಫಲವಾಗಿ ಇತರ ಧೈಯಗಳು-ಅಂತರ ರಾಷ್ಟ್ರೀಯ ಧೈಯ, ಜನತಾಶಕ್ತಿಯ ಧೈಯ, ಉದ್ಭವಿಸಿವೆ. ಪ್ರಪಂಚದಲ್ಲಿ ಒ೦ದು ಸಮದೃಷ್ಟಿ, ಆದಷ್ಟು ಕಡಮೆ ಸಂಘರ್ಷಣೆಗಳು ಇರಬೇಕಾದರೆ, ಈ ಎಲ್ಲ ಧೈಯಗಳ ಒಂದು ಸಮರಸ ಮಿಳನ ಅತ್ಯವಶ್ಯಕ. ಮಾನವ ಮನೋಧರ್ಮಕ್ಕೆ ಸದಾ ಪ್ರಿಯವಾದ ರಾಷ್ಟ್ರೀಯಭಾವನೆಗೆ ಪುರಸ್ಕಾರವಿರಬೇಕು, ಸ್ಥಾನವಿರಬೇಕು; ಆದರೆ ಅದರ ವ್ಯಾಪ್ತಿ ಕಿರಿದಾಗಿರ ಬೇಕು, ಮಿತವಾಗಿರಬೇಕು.

ಹೊಸ ಭಾವನೆಗಳಿಗೂ, ಅಂತರರಾಷ್ಟ್ರೀಯ ಶಕ್ತಿಗಳ ಪ್ರಬಲ ಪ್ರಭಾವಗಳಿಗೂ ಒಳಗಾದ ರಾಷ್ಟ ಗಳಲ್ಲಿ ರಾಷ್ಟ್ರೀಯ ಭಾವನೆ ಇನ್ನೂ ಬಲವಾಗಿ ಬೇಕಾಗಿರುವಾಗ ಭಾರತದ ಮನಸ್ಸಿನಮೇಲೆ ಇನ್ನಷ್ಟು ಪ್ರಭಾವ ಬೀರಲೇಬೇಕು, ನಮ್ಮ ರಾಷ್ಟ್ರೀಯ ಭಾವನೆ ನಮ್ಮ ದೌರ್ಬಲ್ಯದ ಸಂಕೇತ, ನಮ್ಮ ಸ್ವಾತಂತ್ರದ ಬೇಡಿಕೆಯು ಸಹ ಒಂದು ಸಂಕುಚಿತ ಭಾವನೆ ಎಂದು ಕೆಲವರ ಮತ. ನಾವು ಬ್ರಿಟಿಷ್ ಸಾಮ್ರಾಜ್ಯದಲ್ಲಿ, ಅಥವ ಬ್ರಿಟಿಷ್ ಪ್ರಜಾ ಪ್ರಭುತ್ವಗಳ ಕೂಟದಲ್ಲಿ ಕೆಳಮಟ್ಟದ ಪಾಲುಗಾರರಾಗಿದ್ದರೆ ಅದು ನಿಜವಾದ ಅಂತರರಾಷ್ಟ್ರೀಯತೆ ಎಂದು ಅವರ ಮತ. ಆದರೆ ಅವರ ಈ ವಿಚಿತ್ರ ಅ೦ತರ ರಾಷ್ಟ್ರೀಯತೆ ಸಂಕುಚಿತ ಬ್ರಿಟಿಷ್ ರಾಷ್ಟ್ರೀಯತೆಯ ಇನ್ನೊಂದು ರೂಪ, ವಿಸ್ತರಣ ಎಂದು ಅವರು ಮರೆಯುತ್ತಾರೆ. ಆಂಗ್ಲ ಭಾರತೀಯ ಐತಿಹಾಸಿಕ ಕಾರಣಗಳು ಆ ರೀತಿಯ ಒಂದು ಭಾವನೆಯು ನಮ್ಮ ಮನಸ್ಸಿನಲ್ಲಿ ಬೇರೂರಲು ಸಂಪೂರ್ಣ ಅವಕಾಶ ಕೊಡದೆ ಇದ್ದಾಗ್ಯೂ ಈ ಬಗೆಯ ಅ೦ತರ ರಾಷ್ಟ್ರೀಯತೆಯನ್ನು ನಾವು ಒಪ್ಪಲು ಅಸಾಧ್ಯ. ಆದರೂ ಇಂಡಿಯದ ಉಜ್ವಲ ರಾಷ್ಟ್ರೀಯ ಮನೋಭಾವನೆ ಎಷ್ಟೇ ಕಠಿನವಿದ್ದಾಗ್ಯೂ ನಿಜವಾದ ಅಂತರರಾಷ್ಟ್ರೀಯತೆಗೆ ಮನ್ನಣೆ ತೋರಿ ಸಹಕಾರ ನೀಡಿ, ರಾಷ್ಟ್ರೀಯ ಸ್ವಾತಂತ್ರ್ಯವನ್ನು ಸಹ ವಿಶ್ವಸಂಸ್ಥೆಗೆ ಸ್ವಲ್ಪ ಮಟ್ಟಿಗೆ ಅಧೀನ ಮಾಡಲು ಒಪ್ಪಿ ಇಂಡಿಯ ಇತರ ಜನಾಂಗಗಳಿಗಿಂತ ಎಷ್ಟೋ ಮುಂದುವರಿದಿದೆ.

೩. ಭಾರತದ ಶಕ್ತಿ ಮತ್ತು ದೌರ್ಬಲ್ಯ

ಭಾರತದ ಶಕ್ತಿ, ದೌರ್ಬಲ್ಯ ಮತ್ತು ಅವನತಿಗಳ ಮೂಲವನ್ನು ಕಂಡು ಹಿಡಿಯಲು ಬಹು ಹಿಂದೆ ಹೋಗಬೇಕು ಮತ್ತು ದಾರಿಯೂ ದುರ್ಗಮ. ಆದರೂ ಆ ಅವನತಿಯ ಇತ್ತೀಚಿನ ಕಾರಣ ಗಳು ಸ್ಪಷ್ಟ ಇವೆ. ಔದ್ಯೋಗಿಕ ಕುಶಲತೆಯಲ್ಲಿ ಭಾರತ ಹಿಂದೆ ಬಿದ್ದಿತು. ಅನೇಕ ವಿಷಯಗಳಲ್ಲಿ ಹಿಂದೆ ಇದ್ದ ಯೂರೋಪ್ ಔದ್ಯೋಗಿಕ ಪ್ರಗತಿಯಲ್ಲಿ ಮುಂದುವರಿಯಿತು. ಈ ಔದ್ಯೋಗಿಕ ಪ್ರಗತಿಯ ಹಿಂದೆ ವೈಜ್ಞಾನಿಕ ಮನೋಭಾವನೆ, ಉಕ್ಕೇರುವ ಜೀವನ, ಸಂಶೋಧನೆಯ ಸಾಹಸದ ಪಯಣಗಳ ಪ್ರಭಾವವಿತ್ತು. ನೂತನ ವೈಜ್ಞಾನಿಕ ನೈಪುಣ್ಯದಿಂದ ಪಶ್ಚಿಮ ಯೂರೋಪಿನ ದೇಶ ಗಳಿಗೆ ಸೈನಿಕಶಕ್ತಿ ಬಂದಿತು. ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿ ಪೌಲ್ಯಾತ್ಯ ರಾಷ್ಟ್ರಗಳ ಮೇಲೆ ಸ್ವಾಮ್ಯ ನಡೆಸಲು ಸುಲಭವಾಯಿತು, ಇದು ಭಾರತದ ಕಥೆ ಮಾತ್ರವಲ್ಲ ; ಎಲ್ಲ ಪೌರ್ವಾತ್ಯ ದೇಶಗಳ ಪಾಡು,

ಹಿಂದಣ ಕಾಲದಲ್ಲಿ ಭಾರತದಲ್ಲಿ ಸೂಕ್ಷಬುದ್ದಿ ಗಾಗಲಿ, ಔದ್ಯೋಗಿಕ ಕೌಶಲ್ಯಕ್ಕಾಗಲಿ ಕೊರತೆ ಇರಲಿಲ್ಲ. ಆದರೂ ಈ ರೀತಿ ಏಕೆ ಆಯಿತು ಎಂದು ಕಂಡು ಹಿಡಿಯುವುದು ಬಹಳ ಕಷ್ಟ. ಶತಮಾನ ಗಳಿಂದ ಈ ಕ್ಷೀಣತೆ ಕ್ರಮವಾಗಿ ಬೆಳೆಯುತ್ತಿರುವುದನ್ನು ಯಾರಾದರೂ ಕಾಣಬಹುದು. ಜೀವನ