ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ, ಇನ್ನು ಅನೇಕವಾಗಿ ಕೊಡಬಹುದು. ಈಗ ಮಲಬಾರು ದೇಶದೊಳಗಿನ ಒಂದು ಉದಾಹರಣೆಯನ್ನು ಕೊಡಲು ಯೋಚಿಸಿರುವೆವು. ಮಲಬಾರುದೇಶದಲ್ಲಿ ತಿರುವಾಂಕೂರು ಎಂಬುದಾ ಗಿಯ, ಕೊಡಿ ಎಂಬುದಾಗಿಯ, ಎರಡು ಸಂಸ್ಥಾನ ಗಳುಂಟು. ಅದರಲ್ಲಿ ತಿರುವಾಂಕೂರು ಎಂಬ ರಾಜ್ಯವು ಅತಿಸಾಚೀನಕಾಲದಿಂದಲೂ ದಾನ ಧರ್ಮದವಿಷಯದಲ್ಲಿ ವಿಖ್ಯಾತಿಯಂ ಹಗೆದು, ಸ್ಮವಾಗಿ ಒಪ್ಪುತ್ತಿರುವುದು. ಈ ದೇಶವನ್ನು ನಮ್ಮ ಕರ್ನಾಟಕದವರು ಮಳ ಯಾಳವೆಂದು ಹೇಳುವರು. ಇಲ್ಲಿ ಗಂಡಸರೇ ಇಲ್ಲವೆಂಬು ದಾಗಿಯ, ಎಲ್ಲರೂ ಹೆಂಗಸರೆ ಆಗಿರುವರೆಂಬದಾಗಿ ಯ, ಗಾಳಿಗೆ ಮಕ್ಕಳು ಸುಟ್ಟುವರೆಂಬದಾಗಿಯೂ ಕೆಲ ವರು ಕಥೆಗಳನ್ನು ಹೇಳುವರು. ಅವುಗಳೆಲ್ಲವೂ ನಿಜವಾದ ಸಂಗತಿಗಳಲ್ಲಿ. ಆದರೆ, ಅವರ ಆಚಾರ ವಿಚಾರಗಳಿಗೂ ನಮ್ಮ, ಆಚಾರ ವಿಚಾರಗಳಿಗೂ ಅನೇಕ ಭೇದಗಳುಂಟು. ಮುಖ್ಯವಾಗಿ... - ಆ ದೇಶದಲ್ಲಿ ನಮ್ಮ ದೇಶದಹಾಗೆ ಕಮಪ್ರಕಾರ ತಂದೆಯು ಸತ್ತು ಪುತ್ರನಿಗೆ ಇಲ್ಲದೆ ಸೋದರಳಿಯನಿಗೆ ಸಲ್ಲುವುದು, ಸೋದರಳಿಯನಿಲ್ಲದ ಪಕ್ಷದಲ್ಲಿ, ಸೋದರ ಸೂಸೆ ಆಕೆಯ ಸಂತತಿಗೂ ಸಲ್ಲ ,ದು, ಈ ಹ , ಕಾರ ಆ ಸಾ೦ತ್ರ ಕನ್ಯಾವಂಶಕ್ಕೆ ರಾಜೃ ದಹಕ್ಕು, ಪುತ್ರವಂಶಕ್ಕಿಲ್ಲ. ರಾಜಪುತ್ರಿಗೆ ೯-೧೦ ವಯಸ್ಸಾದೆ. ಡನೆಯೆ ತಾಳಿ ಕಟ್ಟುವುದೆಂಬ ಒಂದು ವಿವಾ ವಿಧಿಯ ನ್ನು ಮಾಡುವರು ಆಗ ವರನಿರುವುದಿಲ್ಲ. ಪುರೋಹಿತನೇ