ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಮಹಾರಾಣಿ ಭವಾನಿ, ೭೦೦ ಗೃಹಗಳನ್ನು ಕಟ್ಟಿಸಿ, ಅನಾಥರನ್ನು ಅದರೊಳಗಿ ಟೈು, ಅನ್ನವನ್ನಿಕ್ಕಿ, ಅವರ ಮರಣಾನಂತರ ಅವರ ಈ ತರ ಕ್ರಿಯಾದಿಗಳನ್ನು ಕೂಡ ಯಥಾವಿಧಿಯಾಗಿ ಮಾ ಡಿಸುತ್ತಿದ್ದಳು. ಪಂಚಕೋಶದ ಸುತ್ತಲೂ ಈಕೆಯ ಧ ರ್ಮಗೃಹಗಳು, ಭಾವಿಗಳು ಮೊದಲಾದುವನೇಕವುಂಟು. ಕಾಶೀಕ್ಷೇತ್ರದಲ್ಲಿ ಈಕೆಯ ಸಹಾಯದಿಂದ ನಾಲ್ಕು ಸಾವಿರ ಪ್ರಜೆಗಳು ಬದುಕುತ್ತಿದ್ದರು. ೨೩, ಈ ರಾಣಿಯು ಮನುಷ್ಯರಲ್ಲಿ ಮಾತ್ರವೇ, ಅಲ್ಲದೆ ಪಶು, ಪಕ್ಷಿ, ಕ್ರಿಮಿ, ಕೀಟಕಾದಿ ಸಮಸ್ತ ಪ್ರಾಣಿ ಗಳಲ್ಲಿಯೂ ಕರುಣೆ ಯಳವಳಾಗಿ ವರ್ತಿಸುತ್ತಿದ್ದಳು. ತ ರಾಜ್ಯದಲ್ಲಿ ಯಾವ ಕಡೆಯ ಗೋಮಹಿಷಾದಿಗಳ ವಧೆ ಮಾಡಕೂಡದೆಂದು ಆಸೆಯು ಆಜ್ಞೆ ಮಾಡಿದ್ದಳು. ಈ ನಿ ಬಂಧನೆಯನ್ನು ಉಲ್ಲಂಘಿಸಿದವರಿಗೆ ಮೈಾರವಾದ ಶಿಕ್ಷೆಯ ನ್ನು ವಿಧಿಸುತ್ತಿದ್ದಳು. ಹಕ್ಕಿಗಳಿಗೆ ಒಂದು ದೊಡ್ಡಿಯಲ್ಲಿ ಅನೇಕ ಧಾನ್ಯಗಳನ್ನು ಚೆಲ್ಲಿಸಿ, ಅದರ ಆಕೆಗೆ ಬರುವಂಥ ಚೆಲುವಾದ ಪಕ್ಷಿಗಳನ್ನು ನಿರ್ಮಾಣ ಮಾಡಿದ ಸರೇಶ್ವರ ನ ಅದ್ಭುತ ಶಕ್ತಿ ಪ್ರವಾದಿಗಳಿಗೆ ಆನಂದಪಡುತ್ತಿದ್ದಳು. ಇರುವೆಗಳಿಗೆ ಅಕ್ಕಿ ನುಚ್ಚುಗಳನ್ನೂ, ಕಪ್ಪೆಗಳಿಗೆ ರೊ ಟೀ ಚೂರುಗಳನ, ಮಾರ್ಜಾಲಗಳಿಗೆ ಹೀರಾನ್ನವೇ ಮೊದಲಾದ ಭಕ್ಷಗಳನ್ನೂ ಕೊಡಿಸಿ, ಅವುಗಳು ಭಕ್ತಿ ಸುವುದನ್ನು ನೋಡಿ, ಭವಾನಿಯ ಮನಸ್ಸು ಬಹಳ ಸಂ ತೋಷ ಪಡುತ್ತಿತ್ತು. ಹೀಗೆ ಇವಳ ಕರುಣಾಪೂರಿತ ವಾದ ಮನಸ್ಸು ಎಲ್ಲಾ ಪ್ರಾಣಿಗಳಲ್ಲಿಯೂ ಸಮಾನವಾಗಿ ಪ್ರವಹಿಸುತ್ತಿತ್ತು.