ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಭಾರತ ಸಾಧೀಮಣಿಮಂಜರಿ. ಈ ತಿರುವಾಂಕೂರು ಸಂಸ್ಥಾನವು ನನಗೆ ಪ್ರಾಪ್ತಿಸುವು ದೆಂದು ಇದುವರೆಗೂ ನಾನು ಸ್ಪಷ್ಟ ದಲ್ಲಾದರೂ ನೆನಸಿದ ವಳಲ್ಲ. ಈಗ ಈ೭ರೇಚ್ಛೆಯಿಂದ ಪರಲೋಕವಾಸಿ ಯಾದ ನನ್ನ ಮಾವನಾದ ವಂಚಿನಾಲ ಮಹಾರಾಜರು ಕೇವಲ ಇಪ್ಪತ್ತೊಂಬತ್ತು ವರ್ಷ ಪ್ರಾಯದವರಾಗಿದ್ದರು. ಅವರ ಮಾವನವರು ಧರಿಸಿದ ಹಾಗೆ ರಾಜ ದಂಡವನ್ನು ಇವರೂ ಬಹುಕಾಲದವರೆಗೂ ಧರಿಸಬೇಕೆಂದು ಪದ್ಮನಾಭ ಸ್ವಾಮಿಯ ಆಜ್ಞೆಯಿಲ್ಲದೆ ಹೋಯಿತು. ಆ ಪದನಾಭ ಸ್ವಾಮಿಯ ಇಚ್ಛಾನುಸಾರವಾಗಿಯೇ ನನಗೆ ರಾಜ್ಯವು ಪ್ರಾಪ್ತವಾಗಿರುವುದು. ಆದ್ದರಿಂದ ಅವನ ಆಜ್ಞೆ ನನಗೆ ಶಿರಸಾವಂದ್ವು. ನಾನು ಸ್ವಾಮಿಯಾಜ್ಞೆ ಶಿರಸಾವಹಿಸು ವುದಕ್ಕೆ ಸಿದ್ಧಳಾಗಿರುವೆನು. ಆದರೂ ನಾನು ಅಬಲೆಯು. ಅದೂ ಅಲ್ಲದೆ ಅಲ್ಪವಯಸ್ಕಳು. ಇಂಥ ದೊಡ್ಡ ಕಾರಗಳ ಅನುಭವವು ನನಗೆ ಇಲ್ಲದಿರುವುದರಿಂದ ನಮ್ಮಲ್ಲಿ ಸ್ನೇಹ ಬೆ ಳೆಸಿದಾಗಿನಿಂದಲೂ ಈತಿರುವಾಂಕೂರು ರಾಜ್ಯವನ್ನು ಪಡೆ ದಮಕ್ಕಳ ಹಾಗೆ ಕಾಪಾಡಿಕೊಂಡು ಬಂದಂಥ ಆನರೆಬಲ ಈಂಡಿಯಾ ಕಂಪೆನಿಯವರ ವಿನು ನನಗೆ ಇಂತಹ ಸ್ಥಿತಿ ಗೆ ಬೇರೇ ಆಧಾರವೇ ಇಲ್ಲ. ಆದ್ದರಿಂದ, ಕರ್ನಲ್ ದೊರೆ ಯವರೆ ! ಇಂದಿನಿಂದ ನಿಮ್ಮನ್ನು ನಾನು ಸ್ವಂತ ಸಹೋ ದನ ಹಾಗೆ ಭಾವಿಸಿ, ರಾಜ್ಯದಲ್ಲಿ ಪ್ರತಿಯೊಂದು ಕಾರ ವನ್ನೂ ವಿಶ್ವಾಸ ಪೂರ್ವಕವಾಗಿ ನಿಮ್ಮ ಮೇಲೆಯೇ ಇರಿ ಸಿ, ಸರ್ವ ಭಾರವನ್ನೂ ಹಾಕುವೆನು. ಇದಕ್ಕಿಂತಲೂ ಅಧಿಕವಾಗಿ ಹೇಳಬೇಕಾದ್ದು ಏನೂ ಇಲ್ಲ. 27