ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ - ಭಾರತ ಸಾಧಿಮಣಿಮಂಜರಿ. ಮಕ್ಕಾಗಿ ಯತ್ನಿಸತೊಡಗಿದಳು. ಆಕೆಯ ದೂರದೃಷ್ಟಿ ಯೂ, ದೀರ್ಘಾಲೋಚನೆಯ ಸಮಯಸ್ಕೃತವೂ, ಸೂ ಕ್ಷಗಾತ್ರವೂ ಬಹಶಂಸನೀಯಗಳು, ಅಷ್ಟು ಚಿಕ್ಕವಯಸ್ಸಿನಲ್ಲಿ ಆಕೆಯ ಬುದ್ದಿ ವಿಶಾಲತೆಯನ್ನು ನೋಡ ಲಾಗಿ ಆತ್ಯ೦ತಾಶ್ವರ್ಯವನ್ನು ಹೊಂದಿ, ಆಕೆಯು ವ ಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ಬುದ್ದಿಯಲ್ಲಿ ಪೌಡಳೇ ಎಂದು ಹೇಳಬಹುದು. ತನ್ನ ರಾಜ್ಯದಲ್ಲೆಲ್ಲಾ ಹರಿಪೂ ರ್ಣನ್ಯಾಯವಿರಬೇಕೆಂದು ಆಕೆಯ ಕೋರಿಕೆ ಇತ್ತು. ದೀನದಕೆಗೆಬಂದ ತನ್ನ ರಾಜ್ಯವನ್ನು ಯಾವಪ್ರಕಾರದಲ್ಲಿ ಯಾದರೂ ಉನ್ನತಸ್ಥಿತಿಗೆ ತರಬೇಕೆಂದು ಮನಸ್ಸಿನಲ್ಲಿ ದೃಢವಾದ ಇಚ್ಛೆಯುಳ್ಳವಳಾದಳು. ರಾಜಪದತಿಯಂ ತೆಯೇ, ಸಂಸ್ಕರಣಗಳು ಹೇಗೋ ಹಾಗೆ ಮಾಡಬೇಕೆಂದು ರಾತ್ರಿ ಹಗಲೂ ಮನಸ್ಸಿನಲ್ಲಿ ಯೋಚಿಸುತಿದ್ದಳು. ಇತ ರರ ಕಣ್ಣಿನಿಂದ ನೋಡಿಸಲು ಅವಳಿಗೆ ಯಾವಾಗಲೂ ಇನ್ಮವಿರಲಿಲ್ಲ. ಅಂದರೆ ತರೆಯಾಗಿ, ತಾನು ಯೋಚಿ ಸದೆ ಇತರರುಹೇಳಿದಹಾಗೆ ನಡೆಯಲು ಅವಳು ಯಾವಾ ಗಲೂ ಸಮ್ಮತಿಸಿದವಳಲ್ಲ. ಮೆಕಾಲೆ ದೂರೆಯವರನ್ನು ತನ್ನ ಅಣ್ಣನಂತೆ ಭಾವಿಸಿದ್ದುದು ನಿಜವೇ. ನಂಬಿಕೆ ಯಾಗಿ ಅವನಿಂದ ಅನೇಕ ರಾಜಕಾರಗಳನ್ನು ಮಾಡಿ ಸಿದ್ದೂ ನಿಜವೇ, ಪ್ರತಿಸಂಗತಿಯನ್ನು ಕುರಿತೂ ಅವನ ಸಹಾಯವನ್ನು ಕೇಳುತ್ತಿದ್ದುದೂ ನಿಜವೆ. ಆದರೆ ಕಾ ರ್ಯವನ್ನು ಮಾಡುವಾಗೆಲ್ಯಾ ಇವಳು ತನ್ನ ಮನಸ್ಸಿನ ಲ್ಲಿ ಯೋಚಿಸಿದಪ್ರಕಾರವೇ ನಡೆಯುತ್ತಿದ್ದಳು.