ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಮಹಾರಾಣಿ ಲಕ್ಷಾಯಿ. ಅವಳು ದೇವಸ್ಥಾನದಲ್ಲಿದ್ದ ಅಧಿಕ ಸಂಚಯವನ್ನು ಸ್ವಾ ರ್G ಪರಮಾರ್ಥಗಳಿಗೆ ಉಪಯೋಗಿಸಲು, ನಿಶ್ಚಯಿಸಿದ ಳು. ಅದು ಹೇಗೆಂದರೆ ;-.ದೇವಸ್ಥಾನಗಳಿಂದ ಸಾಲ ತೆಗೆ ದುಕೊಂಡು ಋಣವಿಮುಕ್ಷರಾಗಿ ಮಾಡುವುದು ಸ್ವಾರ್ಥ ವು. ಸುಮ್ಮನೆ ಅಳುಕ್ಯಮಲೆ ಪಾಲಾಗುತ್ತಿದ್ದ ದೇವ ಸ್ಥಾನ ಗಳ ಧನಗಳಿಗೆ ಬಡ್ಡಿ ದೊರಕುವಂತೆ ಮಾಡುವುದೇ ಪರಮಾ ಣವು. ಹೀಗೆ ಯೋಚಿಸಿ ರಾಣಿಯವರು ಈ ಸಂ ಗತಿಯನ್ನು ಮೆಕಾಲೆದೊರೆಯವರಿಗೆ ತಿಳಿಯಪಡಿಸಿದರು. ಅವರು ರಾಶಿಯವರ ಯೋಚನಾಶಕ್ಕಿಯನ್ನು ಪ್ರಶಂಸಿಸಿ, ಸಮ್ಮತಿಸಿದರು. ಅದನ್ನು ಪ್ರಧಾನಿಗಳೂ ಸಮ್ಮತಿಸಿದ ನಂತರ, ತರೆಯಲ್ಲಿಯೇ ರಾಣಿಯು ಒಂದು ಸಭೆಯನ್ನು ಮಾಡಿದಳು. ಆ ಸಭೆಗೆ ದೇವಸ್ಥಾನಗಳ ಅಧಿಕಾರಿಗಳೆಲ್ಲ ರನ್ನು ಕರೆಸಿ, ಅವರಿಗೆ ತನ್ನ ಉದ್ದೇಶವನ್ನು ತಿಳು, ಅದರಮೇಲೆ ದೇವಸ್ಥಾನಗಳಿಗೂ ತನಗೂ ಉಂಟಾಗುವ ಲಾಭವನ್ನು ಸ್ಪಸ್ಮರಡಿಸಿದಳು, ಈ ಸಂಗತಿ ಯೆಲ್ಲವೂ ಅವರಿಗೆ ವಿಶದವಾದಮೇಲೆ, ಅವರೆಲ್ಲರೂ ರಾಣಿಯು ಹೇಳಿ ದಹಾಗೆ ನಡೆದುಕೊಳ್ಳಲು ಸಮ್ಮತಿಸಿದರು. ಇದರಮೇಲೆ ದೇವಸ್ಥಾನಗಳನ್ನು ಬಂದೋ ಬಸ್ಸು ಮಾಡುವುದಕ್ಕೆ ರೆಡಿರಾವ ಉರುನ್ ವೆಂಕಟರಾವ್ ಎಂಬುವನನ್ನು ಅಧಿ ಕಾರಿಯನ್ನಾಗಿ ರಾಣಿಯು ವಿರ್ಷಡಿಸಿದಳು. ಅವನು ಆ ಕೆಲಸವನ್ನು ಬಹಳ ಶ್ರದ್ದೆಯಿಂದ ಮಾಡುತ್ತಿದ್ದುದರಿಂದ ಕೆಲವು ದಿನಗಳಲ್ಲಿ ಸಂಸ್ಥಾನದ ಸಾಲವೆಲ್ಲವೂ ತೀ 6ತು.