ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಭಾರತ ಸಾಧಿಮಣಿಮುಂಜರಿ, ಧನವನ್ನು ಕೊಟ್ಟು ಕಳುಹಿಸಿ ರಾಶಿಯವರು ಮೆಕಾಲೆ ದೊರೆಯವರಿಗೆ ಹೀಗೆಂದು ಬರೆದರು. (( ನನಗೆ ಜೈ ಭಾತೃಸಮಾನರಾದ ಕರ್ನಲ್ ದೊರೆಯವರಿಗೆ ನೀವು ಎಲ್ಲಾ ಕೆಲಸವನ್ನೂ ದಕ್ಷತೆಯಿಂದ ಮಾಡುತ್ತಿರುವುದರಿಂ ದ ನಿಮಗೆ ದೇಶದ ಘನತೆಯ, ಸ್ಥಿತಿಯ ರೀತಿಯ, ರೂಢಿಯ, ಆಚಾರವೂ ಇವೆಲ್ಲವು ಸಂಪೂರ್ಣವಾಗಿ ತಿಳಿ ದು ಇರುವುವು. ಆದ್ದರಿಂದ ಅದನ್ನು ಕುರಿತು ನಾನು ನಿಮಗೆ ಬರೆಯುವುದನಾವಶ್ಯಕ. ನಮ್ಮ ಪೂರ್ವಿಕರು ಏರ್ಪಡಿಸಿದ ನಿಯಾಮಕಗಳನ್ನೂ, ಪದ್ಧತಿಗಳನ್ನು, ಆ ಚಾರಗಳನ್ನೂ ಅವರ ದಯಾಳುತ್ತಕ್ಕೆ ಉದ್ಯೋತಕವಾಗಿ ಯೂ ಪ್ರಜೆಗಳ ಹಿತಕ್ಕಾಗಿಯೂ, ದೇಶಕ್ಷೇಮಕ್ಕಾಗಿಯೂ ಏರ್ಪಡಿಸುವುದು ತರುವಾಯ ನೀವು ಪೂರ್ವದ ನಿಯಾ ಮಕ ಪ್ರಕಾರ ತಪ್ಪದೆ ರಾಜ್ಯವನ್ನು ನಡೆಸುವುದು. ಅದ ರಲ್ಲಿ ಹೆಚ್ಚು ಕಡಮೆಯೇನೂ ಇಲ್ಲದಿರಬೇಕೆಂದು ನಿಮಗೆ ನನ್ನ ಬಿನ್ನಹವು. ರಾಮೇಶ್ವರಕ್ಕೆ ಹೋಗುವ ಯಾತ್ರಿಕ ರಿಗೆ ಅನ್ನ ದಾನಾದಿಗಳೂ, ದಕ್ಷಿಣೆಯ ದೊರಕುವುದಿಲ್ಲ ವೆಂಬ ಮೊರೆಯು ನನ್ನ ಕಿವಿಗೆ ಸೋಕಿತು. ಆ ಸಂ-ತಿ ಯನ್ನು ನಿಮಗೆ ತಿಳಿಯಪಡಿಸುತ್ತೇನೆ. ಆದ್ದರಿಂದ ನೀವು ಈ ವಿಷಯವಾಗಿ ಬಂದೋಬಸ್ಸು ಮಾಡುವಿರೆಂದು ನಂಬು ವೆನು. ಮಹಾಸಿಂಗ ಕಿಲ್ಲೆದಾರನಿಗೂ ಕೂಡ ಬಂದೋ ಬಸ್ಸು ಮಾಡುವಹಾಗೆ ಆಜ್ಞೆಯನ್ನು ಮಾಡಿರುವೆನು. ಉತ್ತರ ಪ್ರತ್ಯುತ್ತರದಿಂದ ಯಾವ ಕೆಲಸವಾದರೂ ಜಾಗ ತೆಯಲ್ಲಿ ಆಗುವುದು. ಕರ್ನಲ್ ದೊರೆಯವರೂ ಈ ಮಾತು