ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷಮ್ಮಣ್ಣಿ. ಕೃಸರಾಜನ ಮೂರನೇ ಭಾರೈಯೇ ಪ್ರಸ್ತುತ ಕಥಾ ನಾಯಿಕೆಯು, ಈತನು ಸಿಂಹಾಸನಕ್ಕೆ ಮುಖ್ಯ ವಾರಸು ದಾರನಾದಮೇಲೆ,ಆತನ ದತ್ತು ತಾಯಿಯಾದ ದೇವಾಜಮ್ಮ ಣ್ಣಿಯವರು ತನ್ನ ಕುಮಾರನ ಹೆಸರಿನಲ್ಲಿ ತಾನೇ ರಾಜ್ಯ ವನ್ನು ನಡೆಸುವುದಕ್ಕೆ ಯತ್ನ ಮಾಡಿದಳು. ಆದರೆ ಮಹಾ ಯೋಧನಾದ ಹೈದರನು ಈ ಸಂಗತಿ ಯೆಲ್ಲವನ್ನೂ ತಿಳಿ ದು, ಅದಕ್ಕೆ ಕಾರಣನಾದ ಖಂಡೇರಾಯನನ್ನು ಬಂಧಿಸಿ ಪಂಜರದಲ್ಲಿ ಇಟ್ಟನು. ದಿನ ದಿನಕ್ಕೆ ಹೈದರನ ಅಧಿಕಾ ರವು ಅಧಿಕವಾಗುತ್ತಿರಲಾಗಿ, 1761ನೆ ಸಂವತ್ಸರದಲ್ಲಿ ಆ ತನು ಸರ್ವಾಧಿಕಾರಿಯಾಗಿ, ಕೃಹ್ಮರಾಜ ಒಡೆಯನನ್ನು ಒಂದು ಚದುರಂಗದ ರಾಜನಹಾಗೆ ಮಾಡಲು ಯತ್ನಿಸಿ ದನು, ಇಮ್ಮಡಿ ಕೃಸ್ಮರಾಜನು 1766ನೆ ಸಂವತ್ಸರ ದಲ್ಲಿ ಮೃತಿಹೊಂದಿದನು. ಅವನಿಗೆ ಮೃತ್ಯು ಸಮಯದಲ್ಲಿ ನಂಜರಾಜ, ಚಾಮರಾಜರೆಂಬ ಇಬ್ಬರು ಕುಮಾರರು ಇದ್ದರು. ಅವರು ರಾಜ್ಯ ಹದವಿಗೆ ಅರ್ಹರಾಗಿದ್ದರೂ, ನಾ ಮಮಾತ್ರ ರಾಜರನ್ನಾಗಿ ಮಾಡಿ, ಹೈದರನು ಎಷ್ಟುಮಾ ತ್ರವೂ ಅವರ ಅಧಿಕಾರವನ್ನು ಅವರಿಗೆ ಕೊಡದೆ, ತಾನೇ ರಾಜ್ಯಭಾರವನ್ನು ಮಾಡುತಿದ್ದನು. ನಂಜರಾಜನು ಮ ರಾಟೆ ಸರದಾರನಾದ ತ್ರಿಯಂಬಕರಾಯನ ಸಂಗಡ ಗು ಹ್ಯವಾಗಿ ರಾಜ್ಯವನ್ನು ಕುರಿತು ಆಲೋಚನೆ ಮಾಡುವ ನೆಂಬ ಸಂಗತಿಯನ್ನು ಕೇಳಿ, ಅವನನ್ನು, 1770ನೇ ಸಂವ ತೃರದಲ್ಲಿ ಕೊಂದುಹಾಕಿಸಿದನು, ಚಾಮರಾಜನೂ ಹೈದ ರನ ಬಾಧೆಯಿಂದಲೇ 1776ನೇ ಸಂವತ್ಸರದಲ್ಲಿ ಸ್ವರ್ಗಸ್ಯ ನಾದನು, ಈ ಪ್ರಕಾರ ಸಿಂಹಾಸನಾಧಿಪತಿಗಳಾಗುವು